ಕರಡು:ಕೆ.ಮಂಜುನಾಥಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆ. ಮಂಜುನಾಥಯ್ಯ
ಕೇಶವಯ್ಯ ಮಂಜುನಾಥಯ್ಯ,ಅಭಿಯಂತ,ವಾಗ್ಮಿ,ಕನ್ನಡ ತಾಯಿಯ ಪರಿಚಾರಕ,
Born
ಹಂದ್ರಾಳು, ೨೧ ಮಾರ್ಚ್, ೧೯೪೦
Nationalityಭಾರತೀಯ.
EducationA.M.I.E; (Mechanical)
Occupation(s)(BARC) ಬಿ.ಎ.ಆರ್.ಸಿ. ಸಂಶೋಧನಾಲಯದಲ್ಲಿ ದುಡಿದು ನಿವೃತ್ತರಾದರು. ತಮ್ಮದೇ ಸ್ವಂತ ಕಂಪೆನಿಯೊಂದನ್ನು ಬೆಂಗಳೂರಿನಲ್ಲಿ ನಡೆಸುತ್ತಿದ್ದರು. ಈಗ, ಮುಂಬಯಿನ ಎನ್.ಕೆ.ಇ.ಎಸ್. ಸಂಸ್ಥೆಯಯ ಆಡಳಿತ ವಿಷಯಗಳಲ್ಲಿ ಸಲಹೆ,ಮತ್ತು ಪ್ರಮುಖ ನಿರ್ವಹಣೆಯ ಕೆಲಸಗಳಲ್ಲಿ ತಮ್ಮ ಬಹುಮೂಲ್ಯ ಸಮಯವನ್ನು ಮುಡಿಪಾಗಿಟ್ಟಿದ್ದಾರೆ. 'ಮೈಸೂರ್ ಅಸೋಸಿಯೇಷನ್' ನ ಲಲಿತಕಲಾವಿಭಾಗದಲ್ಲಿ ತಮ್ಮ ಯೋಗದಾನಮಾಡುತ್ತಿದ್ದಾರೆ.
Known forಕನ್ನಡದ ಅತಿ ಸಮರ್ಥ ಪರಿಚಾರಕರು. ಒಳ್ಳೆಯ ವಾಗ್ಮಿ, ಸಂಘಟಕ, ಮತ್ತು ಕಲಾವಿದ. ನಾಟಕಗಳಲ್ಲಿ ಅತ್ಯುತ್ತಮವಾಗಿ ಅಭಿನಯಿಸುತ್ತಾರೆ. 'ಬೆಳ್ಳಿಬಯಲು' ನಾಟಕದಲ್ಲಿ ಅವರ ಪಾತ್ರ ಜನರಿಗೆ ಒಪ್ಪಿಗೆಯಾಯಿತು.
Website(SVIMS) SirM Visvesvaraya Institute of Management Studies & Research

ಕೆ.ಮಂಜುನಾಥಯ್ಯ,ನೆಂದು ಸ್ನೇಹಿತರಿಗೆಲ್ಲಾ ಪರಿಚಿತರಾದ ಕೇಶವಯ್ಯ ಮಂಜುನಾಥ್,ಮುಂಬಯಿನ, 'ಬಿ.ಎ.ಆರ್.ಸಿ'(BARC) ಯಲ್ಲಿ ಒಬ್ಬ ಇಂಜಿನಿಯರ್ ಆಗಿ, ಹಲವು ವರ್ಷ ದುಡಿದು ಸ್ವಇಚ್ಛೆಯಿಂದ ನಿವೃತ್ತರಾದರು. ಬೆಂಗಳೂರಿನಲ್ಲಿ ತಮ್ಮದೇ ಆದ ಸ್ವಂತ ಉದ್ಯೋಗವನ್ನು ಸ್ಥಾಪಿಸಿಕೊಂಡು ಕೆಲಸಮಾಡುತ್ತಿದ್ದರು.

ಮೈಸೂರ್ ಅಸೋಸಿಯೇಷನ್ ಮುಂಬಯಿ ನ ಹಿರಿಯಸದಸ್ಯರಾದ ಮಂಜುನಾಥ್, ಮುಂಬಯಿನಲ್ಲೇ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿದರು. ಈಗ ಅವರು, ಮೈಸೂರ್ ಅಸೋಸಿಯೇಷನ್ ನ ಸಂಪನ್ಮೂಲ ವ್ಯಕ್ತಿಗಳಲ್ಲೊಬ್ಬರಾಗಿ ದುಡಿಯುತ್ತಿದ್ದಾರೆ. ಮಂಜುನಾಥ್, ಅಸೋಸಿಯೇಷನ್ ನ ಕಾರ್ಯಕ್ರಮಗಳ ಆಯೋಜನೆ, ನಂತರ ಸಂಯೋಜನೆ, ಮೊದಲಾದ ನಿರ್ವಾಹಕ ಕಾರ್ಯಗಳನ್ನು ಸಮರ್ಪಕವಾಗಿ ನಡೆಸಿಕೊಂಡು ಬಂದಿದ್ದಾರೆ. ಭಾರತೀಯ ಸಂಸ್ಕೃತಿ, ಕಲೆ, ನೃತ್ಯ ಮುಂತಾದವುಗಳಲ್ಲಿ ಅತೀವ ಆಸಕ್ತಿ ಹೊಂದಿದ್ದಾರೆ. ಕನ್ನಡ ರಂಗಭೂಮಿಯಲ್ಲಿ ಒಬ್ಬ ನಟನಾಗಿ ಪಾಲ್ಗೊಂಡು ಅತ್ಯುತ್ತಮ ಹಾಗೂ ಅತಿ ಮಹತ್ವದ ಯೋಗದಾನಮಾಡಿದ್ದಾರೆ. 'ವಡಾಲದ ನ್ಯಾಶನಲ್ ಕನ್ನಡ ಎಜ್ಯುಕೇಶನ್ ಸೊಸೈಟಿ' ಯ ಆಡಳಿತ ವಿಷಯಗಳಲ್ಲಿ ಸಲಹೆ,ಮತ್ತು ಪ್ರಮುಖ ನಿರ್ವಹಣೆಯ ಕೆಲಸಗಳನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ.[೧] ಈಗಿನ ಎಸ್.ವಿ.ಐ.ಎಮ್.ಎಸ್.ಕಾಲೇಜಿನ ಪ್ರಮುಖ ಸಲಹೆಗಾರ,ಮತ್ತು ನಿರ್ವಾಹಕರಾಗಿದುಡಿಯುತ್ತಿದ್ದಾರೆ.[೨]

ಜನನ,ಮನೆತನ[ಬದಲಾಯಿಸಿ]

ಮಂಜುನಾಥರು, ಕೇಶವಯ್ಯ, ಹಾಗೂ ಗೌರಮ್ಮ ದಂಪತಿಗಳ ಪ್ರೀತಿಯ ಮಗನಾಗಿ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ 'ಹಂದ್ರಾಳು ಗ್ರಾಮ'ದಲ್ಲಿ [೩] ೨೧, ಮಾರ್ಚ್, ೧೯೪೦ ಜನಿಸಿದರು. ೩ ಗಂಡು ಒಂದು ಹೆಣ್ಣುಮಗುವಿದ್ದ ಪರಿವಾರದಲ್ಲಿ ಕೊನೆಯವರು. ತಂದೆಯವರು ರೆವಿನ್ಯೂ ಇಲಾಖೆಯಲ್ಲಿ ಕೆಲಸದಲ್ಲಿದ್ದರು. ಹಳೆ ಮೈಸೂರಿನ ತರೀಕೆರೆ-ಸಂಕೇತಿ ವೈದಿಕ ಪರಂಪರೆಯ ಮನೆಯ ವಾತಾವರಣ. ತಾಯಿಯವರು ಸಂಪ್ರದಾಯದ ಹಾಡಿನ ಹುತ್ತವೆಂದು ಪ್ರಸಿದ್ಧಿಯಾಗಿದ್ದರು. ಮನೆಯಲ್ಲಿ ಜರುಗುವ ಪ್ರತಿ ವಿಧಿಗಳಿಗೂ ಸರಿಹೊಂದುವ ಹಾಡುಗಳನ್ನು ಕೇವಲ ಜ್ಞಾಪಕಶಕ್ತಿಯ ಸಹಾಯದಿಂದಲೇ ಹಾಡುತ್ತಿದ್ದರು.

ವಿದ್ಯಾಭ್ಯಾಸ[ಬದಲಾಯಿಸಿ]

ಮಂಜುನಾಥ ಹಂದ್ರಾಳುವಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಡಿದರು.'ಹಳ್ಳಿ ಮೈಸೂರ್'ನಲ್ಲಿ ಮಾಧ್ಯಮಿಕ ಶಾಲಾಭ್ಯಾಸ ನಡೆಯಿತು. ಪ್ರೌಢಶಾಲೆಯ ವಿದ್ಯಾಭ್ಯಾಸವನ್ನು ಮತ್ತು ಇಂಟರ್ ಮೀಡಿಯೆಟ್ ಪರೀಕ್ಷೆಗಳನ್ನು ಹಾಸನದ ಸರ್ಕಾರೀ ಇಂಟರ್ಮೀಡಿಯೆಟ್ ಕಾಲೇಜಿನಲ್ಲಿ ಮುಗಿಸಿದರು. ಮನೆಯಲ್ಲಿ ಆರ್ಥಿಕ ಅನುಕೂಲಗಳ ಕೊರತೆಯಿಂದ ಅಂಚೆ ವ್ಯವಸ್ಥೆಯಿಂದ,

  • ಎ.ಎಮ್.ಐ.ಇ (ಮೆಕ್ಯಾನಿಕಲ್) ಪದವಿ ಗಳಿಸಿದರು.
  • ಬಿ.ಎ (ಎಕೊನೊಮಿಕ್ಸ್) ದೆಹಲಿ ವಿಶ್ವವಿದ್ಯಾಲಯದಿಂದ)
  • ಎಂ.ಎ.(ಸಂಸ್ಕೃತ)ಮೈಸೂರು ವಿಶ್ವವಿದ್ಯಾಲಯದಿಂದ
  • ಡಿಪ್ಲೊಮಾ ಇನ್ ಸಿಸ್ಟಮ್ ಮ್ಯಾನೇಜ್ಮೆಂಟ್ ಪದವಿಯನ್ನು ಮುಂಬಯಿ ವೀಶ್ವವಿದ್ಯಾಲಯದ ಜಮ್ನಾಲಾಲ್ ಬಜಾಜ್ ಕಾಲೇಜಿನಿಂದ ಪಡೆದರು.

೧೯೫೯-೬೦ ರಲ್ಲಿ ವಿದ್ಯಾಭ್ಯಾಸ ಮುಗಿದಂತೆ,

  • 'ಗುಲ್ಬರ್ಗಾ ಇಂಜಿನಿಯರಿಂಗ್ ಕಾಲೇಜಜ್' ನಲ್ಲಿ ಉಪನ್ಯಾಸಕರಾಗಿ ಕೆಲಸಮಾಡಿದರು.
  • ಮಹಾರಾಷ್ಟ್ರ ಸರಕಾರದ ಪಿ.ಡಬ್ಲ್ಯೂ.ಡಿ ಇಲಾಖೆಯಲ್ಲಿ 'ಕೊಯ್ನಾ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್' ನಲ್ಲಿ ಒಂದೂವರೆವರ್ಷ ಕೆಲಸಮಾಡಿದರು.
  • ಪುಣೆಯಲ್ಲಿ ಅತಿವೃಷ್ಠಿಯಾಗಿ ಪ್ರವಾಹ ಬಂದ ವರ್ಷದಲ್ಲಿ ಜೂನಿಯರ್ ಇಂಜಿನಿಯರ್ ಆಗಿ,ಪಬ್ಲಿಕ್ ಹೆಲ್ತ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸಕ್ಕೆ ಸೇರಿದರು.

ಅವರ ಆಸಕ್ತಿಗಳು[ಬದಲಾಯಿಸಿ]

  • Engineering, Planning ,
  • Business Adminstration,
  • ಅಧ್ಯಾತ್ಮ ವಿದ್ಯೆ,
  • ಸಂಗೀತ, ಥಿಯೇಟರ್,ಮತ್ತು ವೇದಾಧ್ಯಯನ.

ಮುಂಬಯಿನಲ್ಲಿ[ಬದಲಾಯಿಸಿ]

ಮುಂಬಯಿಗೆ ಬರುವ ಮೊದಲು,'ಕೊಯ್ನಾ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್' ನಲ್ಲಿ ಕೆಲಸಮಾಡಿದರು. ಪುಣೆಯಿಂದ ಮುಂಬಯಿಮಹಾನಗರಕ್ಕೆ ಬಂದು 'ಭಾಭಾ ಅಟೋಮಿಕ್ ರಿಸರ್ಚ್ ಸೆಂಟರ್ ನಲ್ಲಿ ಜೂನಿಯರ್ ಸೈಂಟಿಫಿಕ್ ಆಫೀಸರ್ ಆಗಿ ಸೇರಿಕೊಂಡರು.ಆ ಸಂಸ್ಥೆಯಲ್ಲಿ ೨೦ ವರ್ಷ ದುಡಿದು ಸ್ವಂತ ಇಚ್ಛೆಯಿಂದ ರಾಜೀನಾಮೆ ಕೊಟ್ಟರು. ಮೊದಲಿನಿಂದಲೂ ಸ್ವಂತವಾಗಿ ಏನಾದರೂ ಮಾಡುವ ಕನಸಿನಮಂಜುನಾಥಯ್ಯನವರು, ಮುಂಬಯಿನ ಜಮನ್ಲಾಲ್ ಬಜಾಜ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಝ್ಮೆಂಟ್ ನಿಂದ ಪದವಿಗಳಿಸಿದರು. “Quantum Technologies” for High Vacuum Technics', ಎಂಬ ಹೆಸರಿನ ತಮ್ಮ ಸ್ವಂತ ಕಂಪೆನಿಯೊಂದನ್ನು ಹುಟ್ಟುಹಾಕಿ, ನಡೆಸಿದರು. ಅನೇಕ ಪರಿಕರಗಳನ್ನು ತಯಾರು ಮಾಡುತ್ತಿದ್ದರು. ಶಾಲೆ-ಕಾಲೇಜುಗಳಿಗೆ ಬಹಳ ಬೇಡಿಕೆಯಿದ್ದ ಈ ಉಪಯುಕ್ತವಾದ ಪರಿಕರಗಳು ಚೆನ್ನಾಗಿ ಮಾರುಕಟ್ಟೆಯನ್ನು ಹೊಂದಿದ್ದವು. ಮುಂದೆ ಮಂಜುನಾಥರು ಮುಂದೆ, Information Technolgy Marketing Firm “Quantums”, for Computer Hardwares, ಎಂಬ ಕಂಪೆನಿಯನ್ನು ತೆರೆದರು. ಇಂಡೋ ಥರ್ಮಾ ಇನ್ಸ್ಟ್ರುಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಯನ್ನು ಸ್ಥಾಪಿಸಿದರು. ಭಾರತೀಯ ರೈಲ್ವೆಗೆ ಬೇಕಾದ ವೀಲ್ಸ್ ಮತ್ತು ಆಕ್ಸಿಲ್ ಗಳಿಗೆ ಸರಿಹೊಂದಿಸುವ ಬಿಡಿ ಭಾಗಗಳ ತಯಾರಿಕೆ ಬಹಳ ಜನಪ್ರಿಯವಾಯಿತು.

ಮೈಸೂರು ಅಸೋಸಿಯೇಷನ್,ಮುಂಬಯಿ[ಬದಲಾಯಿಸಿ]

ಮುಂಬಯಿಯ ಹಿರಿಯ ಕನ್ನಡ ಸಂಸ್ಥೆಯಾದ ಮೈಸೂರು ಅಸೋಸಿಯೇಷನ್ ನ ಲಲಿತಕಲಾವಿಭಾಗದಲ್ಲಿ ಸೇರಿ ತಮ್ಮ ಯೋಗದಾನ ಮಾಡುತ್ತಿದ್ದಾರೆ. ಮೈಸೂರು ಅಸೋಸಿಯೇಷನ್ ನ ಅಧಿಕಾರದ ವ್ಯಾಪ್ತಿಯಲ್ಲಿದ್ದ ಮತ್ತೊಂದು ವಿದ್ಯಾಸಂಸ್ಥೆ, 'ದಿ ನ್ಯಾಷನಲ್ ಕನ್ನಡ ಎಜ್ಯುಕೇಶನ್ ಸೊಸೈಟಿ ಸಂಸ್ಥೆ'ಯ ಏಳಿಗೆಗಾಗಿ, ಶ್ರೀ.ಸುಬ್ರಮಣಿ. ಡಾ.ಬಿ.ಆರ್.ಮಂಜುನಾಥ್, ಮೊದಲಾದ ಗೆಳೆಯರ ಜೊತೆ ಸೇರಿ ಪ್ರಗತಿಪರ ಕಾರ್ಯಕ್ರಮಗಳನ್ನು ರೂಪಿಸಿ ಸೊಸೈಟಿಯ ಸರ್ವತೋಮುಖ ಅಭಿವೃದ್ಧಿಯಲ್ಲಿ ತಮ್ಮ ಸಹಯೋಗ ನೀಡಿದರು. ಶ್ರೀ.ಸುಬ್ರಮಣಿಯವರ ಅಕಾಲ ನಿಧನದ ಬಳಿಕ, ತಮ್ಮ ಜೀವನದ ಬಹುಭಾಗ ಸಮಯವನ್ನು ನ್ಯಾಷನಲ್ ಕನ್ನಡ ಎಜ್ಯುಕೇಶನ್ ಸಂಸ್ಥೆಯ ಕಾರ್ಯಾಚರಣೆಗಳಿಗಾಗಿ ವಿನಿಯೋಗಿಸುತ್ತಿದ್ದಾರೆ.

'ಮುಂಬಯಿ ನಾಟಕಗಳು, ಬೆಂಗಳೂರಿನಲ್ಲಿ ಪ್ರದರ್ಶನ ಕಂಡವು'[ಬದಲಾಯಿಸಿ]

'ಮೈಸೂರ್ ಅಸೋಸಿಯೇಷನ್, ಮುಂಬಯಿ'ನ 'ಹಿರಿಯ ಅಜೀವ ಸದಸ್ಯ'ರಾದ ಮಂಜುನಾಥ್ ರವರು, ತಮ್ಮಂತೆ ಆಸಕ್ತರ ಗುಂಪೊಂದನ್ನು ಕಟ್ಟಿಕೊಂಡು ಕನ್ನಡ ರಂಗಮಂಚವನ್ನು ಸಂಮೃದ್ಧಿಗೊಳಿಸಲು ಶ್ರಮಿಸುತ್ತಿದ್ದಾರೆ. 'ಮುಂಬಯಿನ ನಾಟಕ ತಂಡಗಳನ್ನು ಬೆಂಗಳೂರಿಗೆ ಕರೆದೊಯ್ದು, ಅಲ್ಲಿ ನಾಟಕವಾಡಿಸಿದರು.' ಮುಂಬಯಿನಗರದಲ್ಲಿ ಜರುಗುವ ಮಹತ್ವದ ಕನ್ನಡ ಕಾರ್ಯಕ್ರಮಗಳಿಗೆ ಸಮಯ ಹೊಂದಿಸಿಕೊಂಡು ಬೆಂಗಳೂರಿನಿಂದ ಹೊರಟುಬರುವ, ಹಾಗೂ ಸಮಯಕ್ಕೆ ಮೊದಲೇ ಹಾಜರಿರುತ್ತಾರೆ.'ಮೈಸೂರ್ ಅಸೋಸಿಯೇಷನ್' ಬೆಳವಣಿಗೆಗಳನ್ನು ಅಧಿಕೃತವಾಗಿ ಮಾಹಿತಿಕೊಟ್ಟು ವಿವರಿಸಬಲ್ಲ ಕೆಲವೇ ವ್ಯಕ್ತಿಗಳಲ್ಲಿ ಅತಿ ಪ್ರಮುಖರು.

ಒಳ್ಳೆಯ ಕಾರ್ಯಕ್ರಮ ಆಯೋಜಕರು[ಬದಲಾಯಿಸಿ]

ಮುಂಬಯಿವಿಶ್ವವಿದ್ಯಾಲಯ ಮತ್ತು ಮೈಸೂರ್ ಅಸೋಸಿಯೇಷನ್, ಮುಂಬಯಿ ಜಂಟಿಯಾಗಿ ಆಯೋಜಿಸಿದ ವಾರ್ಷಿಕ ದತ್ತಿ ಉಪನ್ಯಾಸ ಮಾಲೆಯ ಆಹ್ವಾನಿತ ಭಾಷಣಕಾರರಾಗಿ ೨೦೧೩ ರಲ್ಲಿ ಡಾ.ಎಚ್ಚೆಸ್ವಿಯವರು ಬೆಂಗಳೂರಿನಿಂದ ಬಂದಿದ್ದಾಗ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ನಿರೂಪಿಸಿದವರಲ್ಲಿ ಕೆ. ಮಂಜುನಾಥಯ್ಯ, ಡಾ. ಜಿ. ಎನ್. ಉಪಾಧ್ಯ, ಹಾಗೂ ಡಾ. ಬಿ. ಆರ್. ಮಂಜುನಾಥ್ ಪ್ರಮುಖರು.

ಬೆಂಗಳೂರಿನಲ್ಲಿ ನಾಟಕ ಪ್ರದರ್ಶನ[ಬದಲಾಯಿಸಿ]

’ಬೆಂಗಳೂರು ಕಲಾಪ್ರೇಮಿ ಫೌಂಡೇಶನ್’ ಹಾಗೂ ’ಮುಂಬಯಿನ ಮೈಸೂರ್ ಅಸೋಸಿಯೇಷನ್’ ಹಮ್ಮಿಕೊಂಡ ’೩ ದಿನಗಳ ಕನ್ನಡ ನಾಟಕೋತ್ಸವ ಕಾರ್ಯಕ್ರಮ’ ಬೆಂಗಳೂರಿನ ರಸಿಕರನ್ನು ರಂಜಿಸಿತು. (ಜೂನ್,೧,೨,೩) ಜೂನ್ ೧ ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ’ಬೆಳ್ಳಿಬೈಲು ನಾಟಕ ಪ್ರದರ್ಶನ ನಡೆಯಿತು.' ಹಣವಂತವ್ಯಕ್ತಿಯೊಬ್ಬ ತಾನೊಬ್ಬ ಪ್ರತಿಷ್ಠಿತವ್ಯಕ್ತಿಯೆಂದು ಸೋಗುಹಾಕಿಕೊಂಡು ಸಮಾಜದಲ್ಲಿ ತನ್ನ ಪ್ರಯೋಜನಕ್ಕಾಗಿ ಬಡಜನರ ಪ್ರಾಣತೆಗೆಯಲೂ ಹೇಸದ ವ್ಯಕ್ತಿಯೊಬ್ಬ ಜೀವನಚಿತ್ರಣವಾಗಿತ್ತು. ಜೂನ್ ೨ ರಂದು, 'ಮಲ್ಲೇಶ್ವರದ ಸೇವಾಸದನ ಸಭಾಂಗಣ'ದಲ್ಲಿ ’ಸಾಕಾರ’ ವೆಂಬ ಸಂಗೀತ ನಾಟಕ ಪ್ರದರ್ಶನ ನಡೆಯಿತು. ಇಬ್ಬರು ಗೆಳೆಯರು; ಒಬ್ಬ ಬಡವ, ಮತ್ತೊಬ್ಬ ಶ್ರೀಮಂತ. ಪಂಢರಾಪುರಕ್ಕೆ ವಿಠಲನ ದರ್ಶಕಾಂಕ್ಷಿಗಳಾಗಿ ಹೋಗುತ್ತಾರೆ. ದೇವರು ಎಲ್ಲರ ಹೃದಯದಲ್ಲಿ ನೆಲೆಸಿದ್ದಾನೆ. ನಮ್ಮೊಳಗೆ ಕೆದಕಿ ನೋಡಿದಾಗ ಅದು ಅರಿವಾಗುವುದು; ಬೇರೆಲ್ಲಿಯೂ ಅರಸುತ್ತಾ ಹೋಗುವ ಅವಶ್ಯಕತೆ ಇಲ್ಲ.ಎನ್ನುವ ಸಂದೇಶ ಸಿಗುವ ನಾಟಕಕ್ಕೆ ಸಮಯೋಚಿತವಾಗಿ ಅಳವಡಿಸಿದ್ದ ದಾಸರ ಕೀರ್ತನೆಗಳು ನಾಟಕಕ್ಕೆ ಮೆರುಗನ್ನು ಕೊಟ್ಟಿತ್ತು.ನಾಟಕದ ಬಳಿಕ, ಹೆಸರಾಂತ ನಾಟಕ ವಿಮರ್ಶಕ, ವೈ.ವಿ. ಗುಂಡೂರಾವ್ ರವರಿಂದ ನವಿರಾದ ಹಾಸ್ಯ ಕಾರ್ಯಕ್ರಮವಿತ್ತು. ಜೂನ್ ೩ ರಂದು 'ಎಚ್.ಎನ್.ಕಲಾಕ್ಷೇತ್ರ'ದಲ್ಲಿ 'ಅಂತರಂಗ ಏರ್ಪಡಿಸಿದ್ದ ವ್ಯವಸ್ಥೆಯಲ್ಲಿ 'ಬೆಳ್ಳಿಬೈಲು ನಾಟಕವನ್ನು ಮತ್ತೊಮ್ಮೆ ಪ್ರದರ್ಶಿಸಲಾಯಿತು. ಈಗ ತಿಳಿಸಿದ ೩ ಪ್ರಾಯೋಗಿಕ ನಾಟಕಗಳನ್ನು 'ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ' ಪ್ರಾಯೋಜಿಸಿತ್ತು. ಈ ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ರಂಗಸಜ್ಜಿಕೆ, ಬೆಳಕು,ನೇಪಥ್ಯದ ನೆರವುಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದವರು,ಡಾ.ಬಿ.ಆರ್.ಮಂಜುನಾಥ್,ಕೆ.ಮಂಜುನಾಥಯ್ಯ, ಹಾಗೂ ಮತ್ತಿತರ ಸಹ-ಕಲಾವಿದರು ಈ ನಾಟಕಗಳಲ್ಲಿ ಪಾತ್ರವಹಿಸಿ ಅವುಗಳ ಯಶಸ್ಸಿಗೆ ಕಾರಣರಾದರು. ಮಂಜುನಾಥಯ್ಯನವರು ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿ ಎಲ್ಲ ಸ್ಥರಗಳಲ್ಲೂ ತಮ್ಮಯೋಗದಾನ ಮಾಡುತ್ತಿದ್ದಾರೆ. ಮೈಸೂರ್ ಅಸೋಸಿಯೇಷನ್ ಮುಂಬಯಿ ಸಂಸ್ಥೆಯ ೯೦ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.[೪]

ಡಾ.ಬಿ.ಆರ್.ಅಂಬೇಡಕರ್ ಜನ್ಮ ಶತಾಬ್ದಿಯ ಆಚರಣೆ[ಬದಲಾಯಿಸಿ]

ಡಾ.ಬಾಬಾ ಸಾಹೇಬ್ ಅಂಬೇಡಕರ್ ರ,೧೨೫ ನೇ ಜನ್ಮಶತಾಬ್ದಿಯ ಸಮಾರಂಭವನ್ನು[೫] ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಆಯೋಜಿಸಲಾಯಿತು.

ಮೈಸೂರು ಅಸೋಸಿಯೇಷನ್ ನ ೯೦ ವರ್ಷದ ಜಯಂತಿ[ಬದಲಾಯಿಸಿ]

ಮೈಸೂರು ಅಸೋಸಿಯೇಷನ್, ಮುಂಬಯಿ ಮಹಾನಗರದ ಹಿರಿಯ ಪ್ರತಿಷ್ಠಿತ ಕನ್ನಡ ಸಾಂಸ್ಕೃತಿಕ ಸಂಘಗಳಲ್ಲೊಂದಾಗಿದ್ದು ೯೦ ವರ್ಷಗಳ ಸೇವೆಸಲ್ಲಿಸಿದೆ. ಇದನ್ನು ಸಾಕಾರಮಾಡಿದ ಹಿರಿಯ ಸದಸ್ಯರು, ಹಾಗೂ ಇಂದಿನ ಸದಸ್ಯರುಗಳನ್ನೂ ಗೌರವಿಸಿ, ಅವರ ಮಹತ್ತರ ಕೊಡುಗೆಗಳನ್ನು ನೆನೆಯುವ ಕಾರ್ಯಕ್ರಮದಲ್ಲಿ ಕೆ. ಮಂಜುನಾಥಯ್ಯನವರು, ಮತ್ತು ಡಾ.ಬಿ.ಆರ್.ಮಂಜುನಾಥ್, ಶ್ರೀಮತಿ ಕಮಲ ಕಾಂತರಾಜ್ (ಅಸೋಸಿಯೇಷನ್ ನ ಈಗಿನ ಅಧ್ಯಕ್ಷೆ), ಸಕ್ರಿಯವಾಗಿ ಪಾಲ್ಗೊಂಡಿದ್ದರು.[೬]

"ವರ್ಷ ೨೦೨೨ ರ, ಶ್ರೀರಂಗ ರಂಗೋತ್ಸವ ನಾಟಕ ಪ್ರದರ್ಶನ ಮುಂಬಯಿನಲ್ಲಿ"[ಬದಲಾಯಿಸಿ]

ಮೈಸೂರು ಅಸೋಸಿಯೇಷನ್, ಮುಂಬಯಿ ಸಂಸ್ಥೆ, ಒಂದು ಹಿಂದಿ ನಾಟಕ, "ಮೈ ಬಾಲಗಂಗಾಧರ್ ತಿಲಕ್ ಹೂ", ಎನ್ನುವ ನಾಟಕವನ್ನು ೪, ಮೇ, ೨೦೨೨ ರಂದು ಪ್ರದರ್ಶಿಸಿತ್ತು. [೭]

ಉಲ್ಲೇಖನಗಳು[ಬದಲಾಯಿಸಿ]

  1. ಕಾರ್ಯಕಾರಿ ಸಮಿತಿ ಸದಸ್ಯ್ರರು
  2. "Shri.K. Manjunathaiah, (Trustee & Mentor SVIMS) ". Archived from the original on 2016-08-11. Retrieved 2016-07-29.
  3. ಹಂದ್ರಾಳು
  4. Kannadiga world, ಮೈಸೂರು ಅಸೋಸಿಯೇಷನ್ನಿನ ೯೦ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು
  5. latestnewsproductions.com, aturday, 13 August 2016, ಸಂವಿಧಾನ ಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರ್೧೨೫ನೇ ಜಯಂತಿ ವರ್ಷಾಚರಣಾ ಕಾರ್ಯಕ್ರಮ[ಶಾಶ್ವತವಾಗಿ ಮಡಿದ ಕೊಂಡಿ]
  6. 'Ever young at 91',ನೇಸರು,ವಿಶೇಷ ಸಂಚಿಕೆ,ಆಪ್ರಿಲ್,೨೦೧೬
  7. ಮೈಸೂರು ಅಸೋಸಿಯೇಷನ್, ಮುಂಬಯಿನಲ್ಲಿ ಶ್ರೀರಂಗ ರಂಗೋತ್ಸವ ನಾಟಕ ಪ್ರದರ್ಶನದ ನಂತರ ನಿರ್ದೇಶಕಿ ಉಷಾದೇಸಾಯಿ,ಕೆ.ಮಂಜುನಾಥಯ್ಯನವರ ಜತೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಅಸೋಸಿಯೇಷನ್ ಕಾರ್ಯದರ್ಶಿ,ಡಾ.ಗಣಪತಿ ಶಂಕರಲಿಂಗ ಉಪಸ್ಥಿತರಾಗಿದ್ದಾರೆ.