ಕಮಲೇಶ್ವರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ಕಮಲೇಶ್ವರ್'

'ಕಮಲೇಶ್ವರ್',[೧]'ಭಾರತೀಯ ದೂರದರ್ಶನ'ದ ಶುರುವಿನದಿನಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರಸ್ತುತಪಡಿಸುತ್ತಿದ್ದ ಸುಪ್ರಸಿದ್ಧ ಹಿಂದಿ ಸಾಹಿತ್ಯಕಾರ, ಅಂಕಣಕಾರ, ಒಳ್ಳೆಯ ಮಾತುಗಾರ.

ಕಮಲೇಶ್ವರ್ ರವರ ವ್ಯಕ್ತಿತ್ವ[ಬದಲಾಯಿಸಿ]

ಚಿತ್ರ:Kamaleshwar.jpg
ಸುಪ್ರಸಿದ್ಧ ಹಿಂದಿ ಪತ್ರಿಕೆ, ’ಸಾರಿಕಾ’ ಲಾಂಛನಮಾಡಿದ ಸಂದರ್ಭದಲ್ಲಿ

ಬದುಕಿನುದ್ದಕ್ಕೂ 'ಶೋಷಣೆ', 'ದಬ್ಬಾಳಿಕೆ' ವಿರುದ್ಧ 'ಬಂಡಾಯವೆದ್ದ ಸಾಹಿತಿ', ಕಮಲೇಶ್ವರ್. ರವರು, ಅಲಹಾಬಾದ್ ನಲ್ಲಿ ಜನಿಸಿದರು.[೨] ಶ್ರೀಮತಿ ಇಂದಿರಾಗಾಂಧಿ ಕುಟುಂಬಕ್ಕೆ ತೀರ ಹತ್ತಿರವಾಗಿದ್ದವರು. ಕಮಲೇಶ್ವರ ರವರ ತಂದೆ, ಹಿಂದಿ ಚಿತ್ರರಂಗದ ಸಾಹಿತಿ. ಹಣ, ಹೆಸರು, ಮಾಡಿದವರು. 'ಟೈಮ್ಸ್ ಆಫ್ ಇಂಡಿಯ ಸಮೂಹದ ಮೌಲಿಕ ಕಥಾ ಪತ್ರಿಕೆ', ’ಸಾರಿಕಾ' ಪತ್ರಿಕೆಯ ಸಂಪಾದಕರು’. ಬಹುಚರ್ಚಿತವ್ಯಕ್ತಿಯಾಗಿದ್ದರು. ಮುಂಬಯಿ ದೂರದರ್ಶನ ಪ್ರಸಾರಮಾಡುತ್ತಿದ್ದ ’ಪರಿಕ್ರಮ’ ಕಾರ್ಯಕ್ರಮಕ್ಕಾಗಿ ಅಂದಿನ ದಿನಗಳಲ್ಲಿ ’ಟೆಲಿವಿಶನ್ ವೀಕ್ಷಕರು’ ಬೇಗ-ಬೇಗ ಮನೆ ಸೇರುತ್ತಿದ್ದರು. ಸರಳ ಸಜ್ಜನಿಕೆಯ ಮೂರ್ತಿಯಂತಿದ್ದ ’ಕಮಲೇಶ್ವರ್’ ಪ್ರಸ್ತುತಪಡಿಸುವ ವಿಷಯಗಳು ಅಪ್ರತಿಮವಾಗಿರುತ್ತಿದ್ದವು. ಆಗ ’ಇಂದಿರಾಜಿ’ಯವರು, ಪ್ರಧಾನ ಮಂತ್ರಿಯಾಗಿದ್ದರು. ಶ್ರೀ. ಕಮಲೇಶ್ವರ್ ರವರು, ಸನ್,(೧೯೮೦-೮೨), ರಲ್ಲಿ, ಪ್ರಸಾರಭಾರತಿಗೆ ’ಅತಿರಿಕ್ತ ಡೈರೆಕ್ಟರ್ ಜನರಲ್’ ಆಗಿ ನೇಮಿಸಲ್ಪಟ್ಟರು. ಆ ಸಮಯದಲ್ಲಿ ಕೇವಲ ೨೪ ತಾಸಿನ ಸಮಯದಲ್ಲಿ, ದೇಶದಾದ್ಯಂತ, ಟೆಲಿವಿಶನ್ ಸಂಪರ್ಕಸಾಧನೆಯಾಯಿತು. ಆದರೆ ಎಲ್ಲರ ನಿರೀಕ್ಷಣೆಯಂತೆ 'ಕಮಲೇಶ್ವರ್' ಅಲ್ಲಿ ತಮ್ಮ ವೃತ್ತಿಯನ್ನು ಮುಂದುವರೆಸದೆ, ಕೇವಲ ಮೂರೇ ತಿಂಗಳಲ್ಲಿ ತಮ್ಮ 'ರಾಜೀನಾಮೆ ಪತ್ರ' ಕೊಟ್ಟು ಹೊರಬಂದರು. ಪ್ರಧಾನಿ ಇಂದಿರಾ ಗಾಂಧಿಯವರನ್ನು ತಮ್ಮ ಸಮಕ್ಷಮ ನಡೆಸಿದ 'ಸಂವಾದ'ದಲ್ಲಿ ಆಕೆಗೆ ಮುಜುಗುರವಾಗುವಂತಹ ಹಲವಾರು ಪ್ರಶ್ನೆಗಳನ್ನು ಕೇಳಿ ಗೊಂದಲಕ್ಕೀಡುಮಾಡಿದರೆಂಬ ಆಪಾದನೆಯ ಮೇರೆಗೆ ತಾವೇ ರಾಜೀನಾಮೆ ಸಲ್ಲಿಸಿದರು. ಇಂದಿರಾಜಿಯವರು ಕೋಪದಿಂದ, "ಕಮಲೇಶ್ವರ್ ರನ್ನು ದೂರಮಾಡಿ," ಎಂದರು.

'ಹಿಂದಿ ಚಲನಚಿತ್ರ'ಗಳಿಗೆ 'ಪಟಕಥೆ' ಬರೆಯಲಾರಂಬ[ಬದಲಾಯಿಸಿ]

ಹೀಗೆ ಸರ್ಕಾರಿ ನೌಕರಿಯಿಂದ ಹೊರಗಾದ ಕಮಲೇಶ್ವರ್ ಇಂದಿರಾಜಿಯವರ ಜೀವನವನ್ನೇ ಒಂದು ಉದಾಹರಣೆಯಾಗಿಟ್ಟುಕೊಂದು, ಬಹುಚರ್ಚಿತ ಹಿಂದಿ ಚಿತ್ರ, ’ಆಂಧಿಯಾನ್' ನಿರ್ಮಿಸಿದರು. ಅದರಲ್ಲಿ 'ಸುಚಿತ್ರಾ ಸೇನ್', ನಾಯಕಿ, ಹಾಗೂ ಪ್ರಮುಖ ಪಾತ್ರಧಾರಿ. ಕಮಲೇಶ್ವರ್ ಆಗಿನಕಾಲದ ಪ್ರಖ್ಯಾತ ಚಿತ್ರನಿರ್ಮಾಪಕರಿಗೆಲ್ಲಾ ’ಪಟ್ ಕಥಾ’ ಬರೆದುಕೊಡುತ್ತಿದ್ದರು. ಅವರಲ್ಲಿ ಮುಖ್ಯರಾದವರು. ಶ್ರೀ ಬಿ. ಆರ್. ಛೋಪ್ರ, ಶಕ್ತಿಸಾಮಂತಾ, ದುಲಾಲ್ ಗುಹಾ, ಸಾವನ್ ಕುಮಾರ್, ಲೇಖ್ ಟಂಡನ್, ವಿಜಯಾನಂದ್, ರಂತಹ ಚಿತ್ರರಂಗದಲ್ಲಿ ಮಂಚೂಣಿಯಲ್ಲಿದ್ದ ನಿರ್ಮಾಪಕ ನಿರ್ದೇಶಕರಿಗೆ, ಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ, ಬರೆದುಕೊಡುತ್ತಿದರು. ಕಮಲೇಶ್ವರ ರವರಿಗೆ ಸಾಹಿತ್ಯದ ಮೇಲಿನ ಪ್ರೀತಿ ಅಪರಿಮಿತವಾಗಿತ್ತು. ಹೀಗಾಗಿ ಅವರು ಬರೆದ ಕಥಾಸಂಭಾಷಣೆಗಳು ಅಧ್ಭುತವಾಗಿರುತ್ತಿದ್ದವು. ಹೀಗೆ ಅವರಿಗೆ ಹಿಂದಿ ಚಿತ್ರಗಳಿಗೆ ಕಥಾಸಂಭಷಣೆಯನ್ನು ಬರೆದುಕೊಡುವ ಬೇಡಿಕೆಯ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಕೆಲವು ಪ್ರಮುಖವಾದ ಚಿತ್ರಗಳು ಹೀಗಿವೆ :

 • 'ಆಂಧಿಯಾನ್'
 • 'ಮೌಸಮ್'
 • 'ಅಮ್ಮ'
 • 'ಅಮಾನುಷ್'
 • 'ಛೋಟಿಸಿ ಬಾತ್'
 • 'ಸ್ವಾಮಿ'
 • 'ಸಿನೆಮ ಸಿನೆಮಾ'
 • 'ದೂಸ್ರಾ ಆದ್ಮಿ'
 • 'ಶಾರದಾ'
 • 'ಸೌತೆನ್'
 • 'ಪತಿ ಪತ್ನಿ ಔರ್ ಓ'
 • 'ರಾಮ್ ಬಲರಾಮ್'
 • 'ಬದ್ನಾಮ್ ಬಸ್ತಿ'

‍‍* 'ಡಾಕ್ ಬಂಗ್ಲಾ'

 • 'ಫಿರ್ ಭಿ'
 • 'ಉಸ್ಕಿ ರೋಟಿ'
 • 'ದರಾರ್'

ಮೊದಲಾದ ಹಲವಾರು ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ, 'ಜ್ಯುಬಿಲಿ' ಆಚರಿಸಿವೆ.

’ಸಾರಿಕಾ’ ಸಂಪಾದಕತ್ವಕ್ಕೆ ಸ್ಥಾನಕ್ಕೆ ರಾಜೀನಾಮೆ[ಬದಲಾಯಿಸಿ]

ತಾವು ಬರೆಯುತ್ತಿದ್ದ ಪತ್ರಿಕೆಯ 'ಆಡಳಿತಮಂಡಳಿಯ ಧೋರಣೆ'ಯನ್ನು ಪ್ರತಿಭಟಿಸಿ ’ಸಾರಿಕಾ’ ಸಂಪಾದಕತ್ವಕ್ಕೆ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ೧೯೮೨ ನೆಲೆದಿಂದ ಸೂರಿನವರೆಗೆ ನಿಂತಿದ್ದ ಕಪಾಟುಗಳ ತುಂಬಾ ಅಚ್ಚುಕಟ್ಟಾಗಿ ಜೋಡಿಸಿಟ್ಟ ಪುಸ್ತಕಗಳು. ನೆಲದ ಹಾಸಿನಮೇಲೆ ಚೆಲ್ಲಾಪಿಲ್ಲಿಯಾಗಿ ಹರಡಿದ ಲೇಖನ ಸಾಮಗ್ರಿ ಹಸ್ತಪ್ರತಿಗಳು, ಕಪಾಟಿನ ಕೆಳಬಾಗಿಲು ತೆರೆದರೆ, ಸಾಲಾಗಿ ಜೋಡಿಸಿಟ್ಟ ಶಿವಾಸ್ ರೀಗಲ್, ಜಾನಿವಾಕರ್ ಬಾಟಲ್ ಗಳಲ್ಲಿ ’ಸ್ಟೇಟ್ ಎಕ್ಸ್ ಪ್ರೆಸ್’ ಸಿಗರೇಟ್ ಪ್ಯಾಕ್ ಗಳು,'ಟ್ರೇ' ಗಳಲ್ಲಿ ಗ್ಲಾಸ್ ತುಂಬಾ ಮಂಜುಗೆಡ್ಡೆಗಳು ತುಂಬಿದ ಪಾತ್ರೆ. ಪತ್ನಿ, 'ಗಾಯತ್ರಿ' ಪದವೀಧರೆ, ಮತ್ತು ಸಾಹಿತ್ಯಾಸಕ್ತೆ,

’ಆವಾಮಿ ರಂಗಮಂಚ’ದ ಸ್ಥಾಪನೆ[ಬದಲಾಯಿಸಿ]

ಅನೇಕ ಚಲನಚಿತ್ರೋತ್ಸವಗಳನ್ನು ಹುಟ್ಟುಹಾಕಿದರು. ತಮ್ಮ ’ಆವಾಮಿ ರಂಗಮಂಚ’ದಲ್ಲಿ, ಕಫನ್, ಪ್ರೊಹಿತ್, ಸೌಮನ್ ಚಾರ್ಲಿ ನಾಟಕಗಳು ಬೆಳಕು ಕಂಡವು.

ಟೆಲೆವಿಶನ್ ವಲಯದಲ್ಲಿ ಯೋಗದಾನ[ಬದಲಾಯಿಸಿ]

ಸನ್ ೧೯೭೦ ರಲ್ಲಿ ’ಚೊಚ್ಚಲ ಟೆಲಿವಿಶನ್ ಚಿತ್ರ’ ’ಜಮುನಾ ಬಝಾರ್’ ನಿರ್ಮಾಣ. ದೆಹಲಿಯ ಯಮುನಾನದಿಯ ಹತ್ತಿರ. 'ಟೆಲಿವಿಶನ್ ಶೋ'ಗಳಿಗೆ ’ಪಟ್ಕಥಾ’ ಬರೆದುಕೊಡಲು ಶುರುಮಾಡಿದರು. 'ಚಂದ್ರಕಾಂತ', 'ಆಕಾಶ್ ಗಂಗ', 'ಯುಗ್', ಮತ್ತು ’'ಬೇತಲ್ ಪಾಚಿಸಿ'’, ಮೊದಲಾದ ಸಾಹಿತ್ಯ ಸಂಬಂಧಿ ಕೃತಿಗಳನ್ನು ಆಧಾರವಾಗಿಟ್ಟುಕೊಂಡು, ೧೦ 'ಧಾರಾವಾಹಿ'ಗಳನ್ನು ರಚಿಸಿದರು.

’ದರ್ಪಣ್’ ಮತ್ತು ಏಕ್ ಕಹಾನಿ, ದೂರದರ್ಶನದಲ್ಲಿ ಒಂದು 'ಸುಪ್ರಸಿದ್ಧ ಟಾಕ್ ಶೋ' ಪ್ರಸ್ತುತಪಡಿಸಿದರು. ’ಪರಿಕ್ರಮ’, ಶುರುವಾಯಿತು. ವಾರ ಸಾಹಿತ್ಯ ’ಪತ್ರಿಕ’, ಮತ್ತು, ಹಲವಾರು ಟೆಲಿವಿಶನ್ ಕಾರ್ಯಕ್ರಮಗಳನ್ನು ನಿರ್ಮಿಸಿ, ನಿರ್ದೇಶಿಸಿದರು. (Programes and investigative documentaries on social and political issues for Doordarshan).

 • ಸನ್, ೨೦೦೩ ರಲ್ಲಿ 'ಸಾಹಿತ್ಯ ಅಕಾಡೆಮಿ ಪ್ರಶಸ್ತಿ', 'ಸನ್,೧೯೪೭ ರ ಭಾರತದ ಬಟವಾರದ ಬಗ್ಗೆ ಕುರಿತ ಪುಸ್ತಕಕ್ಕಾಗಿ',
 • ’ಕಿತ್ನೆ ಪಾಕಿಸ್ತಾನ್’ (How Many Pakistans), ದೇಶದೇಶಗಳು ಹೇಗೆ ತಮ್ಮ ಗಡಿವಿವಾದಗಳನ್ನು ಹರಿಗುಕೊಳ್ಳುವ ಬಗ್ಗೆ, ಇತಿಹಾಸ ಮಾತು ರಾಜಕೀಯ ಕಾರಣಗಳು, ಸಾಕ್ಷಿಯಾಗಿ ಉಳಿದಿವೆ.
 • ೨೦೦೫ ರಲ್ಲಿ 'ಪದ್ಮ ಭೂಷಣ ಪ್ರಶಸ್ತಿ' ಪ್ರದಾನಮಾಡಲಾಯಿತು.

ಕೃತಿ ರಚನೆ[ಬದಲಾಯಿಸಿ]

 • 'ಚಿಕ್ಕ ಕಥೆಗಳ ಸಂಗ್ರಹ,' (ಇಂಗ್ಲೀಷ್ ಭಾಷೆಯಲ್ಲಿ ರಚಿಸಿದ),
 • "Not Flowers of Henna", 2007 ರಲ್ಲಿ

ಮರಣ[ಬದಲಾಯಿಸಿ]

ಕೆಲವು ವರ್ಷಗಳಿಂದ ಅನಾರೋಗ್ಯದಿಂದ ನರಳುತ್ತಿದ್ದ ಕಮಲೇಶ್ವರರು, ಜನವರಿ, ೨೭ ೨೦೦೭ ರಲ್ಲಿ 'ಫರೀದಾಬಾದ್' ನಲ್ಲಿ, 'ಹೃದಯಾಘಾತ'ದಿಂದ ಮೃತರಾದರು. ಅವರ ಪುಸ್ತಕಗಳು ಸಾರ್ವಜನಿಕರಿಗೆ ಬಿಡುಗಡೆಯಾದವು.

ಉಲ್ಲೇಖಗಳು[ಬದಲಾಯಿಸಿ]

 1. ' ಕಮಲೇಶ್ವರ್ ರವರ ವ್ಯಕ್ತಿತ್ವ'
 2. ಇಂಗ್ಲೀಷ್ ವಿಕಿಪೀಡಿಯ, ಕಮಲೇಶ್ವರ್