ಕಮಲಾ ದೇವಿ
ಗೋಚರ
ವಾಘೇಲ ಮನೆತನಕ್ಕೆ ಸೇರಿದ ಗುಜರಾತಿನ ರಾಜನಾದ ಎರಡನೆಯ ಕರ್ಣದೇವನ[೧] ರಾಣಿ. ಅಲ್ಲಾವುದ್ದೀನ್ ಖಿಲ್ಜಿ ದೆಹಲಿ ಸುಲ್ತಾನನಾದ ಅನಂತರ ಗುಜರಾತ್ ರಾಜ್ಯವನ್ನು ವಶಪಡಿಸಿಕೊಳ್ಳಲು ತನ್ನ ತಮ್ಮನಾದ ನ¸óÀರತ್ಖಾನ್ ಮತ್ತು ಉಲಫ್ ಖಾನರ ಮುಖಂಡತ್ವದಲ್ಲಿ 1298ರಲ್ಲಿ ಸೈನ್ಯವನ್ನು ಕಳುಹಿಸಿದ.
ಜೀವನ
[ಬದಲಾಯಿಸಿ]ಯುದ್ಧದಲ್ಲಿ ಕರ್ಣದೇವ ಸೋತು ತನ್ನ ನಾಲ್ಕು ವರ್ಷದ ಪುತ್ರಿ ದೇವಲದೇವಿಯೊಡನೆ ದೇವಗಿರಿಗೆ ಓಡಿಹೋದ. ಕರ್ಣದೇವನ ರಾಣಿಯಾದ ಕಮಲಾದೇವಿ ಶತ್ರುಗಳ ಕೈಗೆ ಸಿಕ್ಕಿಬಿದ್ದಳು. ಅವಳನ್ನು ದೆಹಲಿಗೆ ಕರೆದುಕೊಂಡು ಹೋಗಲಾಯಿತು.
ಮಧುವೆ
[ಬದಲಾಯಿಸಿ]ಅಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಆಕೆಯನ್ನು ತನ್ನ ಪ್ರೀತಿಯ ಮಡದಿಯಾಗಿ[೨] ಮಾಡಿಕೊಂಡ. ಅಲ್ಲಾವುದ್ದೀನ್ ಮುಂದೆ ಮಲ್ಲಿಕ್ ಕಾಫರನ ನೇತೃತ್ವದಲ್ಲಿ ದಕ್ಷಿಣ ಭಾರತದ ದಂಡಯಾತ್ರೆಗೆ ಸೈನ್ಯ ಕಳುಹಿಸಿದಾಗ, ಕಮಲಾದೇವಿ ದೇವಗಿರಿಯಲ್ಲಿದ್ದ ತನ್ನ ಪುತ್ರಿ ದೇವಲದೇವಿಯನ್ನು ದೆಹಲಿಗೆ ತರುವಂತೆ ಕೇಳಿಕೊಂಡಳು. ಕಾಫರ್ ದೇವಗಿರಿಯ ಯಾದವರನ್ನು ಸೋಲಿಸಿ ದೇವಲದೇವಿಯನ್ನು ಪಡೆದು ದೆಹಲಿಗೆ ತಂದು ಕಮಲಾದೇವಿಗೆ ಒಪ್ಪಿಸಿದ.