ವಿಷಯಕ್ಕೆ ಹೋಗು

ಕಪುರ್ಥಾಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Kapurthala
ਕਪੂਰਥਲਾ
Jagatjit Club, Kapurthala
Jagatjit Club, Kapurthala
Country India
StatePunjab
DistrictKapurthala
Founded byRana Kapur
Area
 • Total೯೦೯.೦೯ km (೩೫೧�೦೦ sq mi)
Elevation
೨೨೫ m (೭೩೮ ft)
Population
 (2011)
 • Total೧,೦೧,೬೫೪
 • Density೧೧೦/km (೨೯೦/sq mi)
Languages
 • OfficialPunjabi
Time zoneUTC+5:30 (IST)
PIN
144 601
Telephone code01822
Vehicle registrationPB 09

ಅರಮನೆ ಮತ್ತು ಉದ್ಯಾನಗಳ ನಗರಿ ಕಪುರ್ಥಾಲಾ(ಪಂಜಾಬಿ:ਕਪੂਰਥਲਾ), ಕಪುರ್ಥಾಲಾ ಜಿಲ್ಲೆಯ ಆಡಳಿತ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತದೆ. ಜೈಸಲ್ಮೇರ್ ನ ರಜಪೂತ್ ಘರಾನಾ ವಂಶಸ್ಥ ರಾಣಾ ಕಪೂರ್ 11 ನೇ ಶತಮಾನದಲ್ಲಿ ಈ ಸ್ಥಳವನ್ನು ರಚಿಸಿದ ಮೇಲೆ ಇದಕ್ಕೆ ಕಪುರ್ಥಾಲಾ ಎಂಬ ಹೆಸರು ಬಂದಿತು. ಇಲ್ಲಿನ ಸಂಪದ್ಭರಿತ ಇತಿಹಾಸ ಮತ್ತು ಅಮೋಘವಾದ ಸಂಸ್ಕೃತಿ ಖಂಡಿತವಾಗಿಯೂ ಪ್ರವಾಸಿಗನೊಬ್ಬನ ಗಮನ ಸೆಳೆಯುತ್ತದೆ.

ಕಪುರ್ಥಾಲಾದ ಪ್ರವಾಸಿ ತಾಣಗಳು

[ಬದಲಾಯಿಸಿ]
Kapurthala flag

ಕಪುರ್ಥಲಾ ಜಿಲ್ಲೆ ಹಲವು ಆಕರ್ಷಣೆಗಳನ್ನು ತನ್ನೊಳಗಿಟ್ಟುಕೊಂಡು ಇತಿಹಾಸ ಮತ್ತು ಸಂಸ್ಕ್ರತಿಯ ವರ್ಣನೀಯ ದರ್ಶನ ಮಾಡಿಸುತ್ತದೆ. ಪಂಚ ಮಂದಿರ, ಕಂಜಲಿ ವೆಟ್ ಲ್ಯಾಂಡ್ಸ್ ಮತ್ತು ಜಗತಜಿತ್ ಅರಮನೆ(ಅತ್ಯಂತ ವಿಶೇಷವಾದ ವಾಸ್ತುಶೈಲಿಯ ಪ್ರಾಕಾರ)ಗುರುದ್ವಾರ್ ಬೀರ್ ಸಾಹೇಬ್ ಮತ್ತು ಪುಷ್ಪಾ ಗುಜ್ರಾಲ್ ವಿಜ್ಞಾನ ನಗರ ಮುಂತಾದವುಗಳನ್ನು ಇಲ್ಲಿ ಭೇಟಿ ಮಾಡಬಹುದು.[]

ಕಪುರ್ಥಾಲಾದಿಂದ ಅತ್ಯಂತ ಕಡಿಮೆ ದೂರದಲ್ಲಿ ಹಲವು ನಗರಗಳು ಮತ್ತು ಪಟ್ಟಣಗಳನ್ನು ಪ್ರವಾಸಿಗರು ದರ್ಶಿಸಬಹುದು. ಪಂಜಾಬಿನಲ್ಲಿಯೇ ಅತ್ಯಂತ ಪ್ರಸಿದ್ದ ಪ್ರವಾಸಿ ತಾಣವಾದ ಜಲಂದರ್ ನಗರ ಕಪುರ್ಥಾಲಾದಿಂದ ಕೇವಲ 21ಕಿಮೀ ದೂರದಲ್ಲಿದೆ. ಅಮೃತಸರ್, ಹೋಶಿಯಾರ್ ಪುರ, ಗುರುದಾಸಪುರ, ಫಿರೋಝ್ಪುರ ಮತ್ತು ನವಾನಶಹರ್ ಗಳು ಪ್ರವಾಸಿಗರು ಭೇಟಿ ಮಾಡಬಹುದಾದ ಇನ್ನುಳಿದ ಪ್ರದೇಶಗಳು.[]

ಹೋಳಿ, ದಿವಾಲಿ, ಲೋಹ್ರಿ ಮತ್ತು ಹಲವಾರು ಹಬ್ಬಗಳನ್ನು ಸಂತಸ ಸಡಗರದಿಂದ ಆಚರಿಸಲಾಗುತ್ತದೆ. ಬೈಸಾಖಿ- ಅಂದರೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬರುವ ವೈಶಾಖ- ಪ್ರತಿ ವರ್ಷ ಏಪ್ರಿಲ್ 13 ರಂದು ಆಚರಿಸಲಾಗುವ ಕಪುರ್ಥಾಲಾದ ಪ್ರಮುಖ ಹಬ್ಬ. ಬೈಸಾಖಿ ಹಬ್ಬ ಕಷ್ಟದ ದಿನಗಳ ಸಂಕೇತ. ಿದರ ಜೊತೆಗೆ ಹಲವಾರು ಫ್ರೆಂಚ್ ಮತ್ತು ಇಂಡೋ ಸಾರ್ಸೆನಿಕ್ ವಾಸ್ತುಶೈಲಿಯ ರಚನೆಗಳು ಕಪರ್ಥಾಲಾ ಪ್ರವಾಸೋದ್ಯಮದ ಒಳನೋಟವನ್ನು ತೋರಿಸುತ್ತವೆ. ಪ್ರಶಸ್ತ ಸಮಯ

ಕಪುರ್ಥಾಲಾವನ್ನು ಭೇಟಿ ಮಾಡಲು ಅಕ್ಟೋಬರ್ ನಿಂದ ಮಾರ್ಚ್ ಪ್ರಶಸ್ತ ಸಮಯ. ಈ ಸಮಯದಲ್ಲಿ ಪ್ರವಾಸಿಗರು ಕೇವಲ ವಾತಾವರಣವನ್ನು ಇಷ್ಟಪಡುವುದರ ಜೊತೆಗೆ ಹಬ್ಬದ ಸಮಯವನ್ನೂ ಇಷ್ಟಪಡುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2021-01-28. Retrieved 2021-08-09.
  2. "Urban Agglomerations/Cities having population 1 lakh and above" (PDF). Provisional Population Totals, Census of India 2011. Retrieved 2012-07-07.