ವಿಷಯಕ್ಕೆ ಹೋಗು

ಕಪಿಲ ಜಲಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಪಿಲ ಜಲಪಾತವು ಕುಷ್ಟಗಿ ತಾಲೂಕಿನ ಹನುಮಸಾಗರ ದಿಂದ ಸುಮಾರು ೮ ಕಿ.ಮೀ ದೂರ ಇರುವ ಕಬ್ಬರಗಿ ಎಂಬ ಗ್ರಾಮದಿಂದ ಸುಮಾರು ೩ ಕಿ. ಮೀ ಇದೆ. ಗ್ರಾಮದಿಂದ ಸುಮಾರು ೧.೫ ಕಿ. ಮೀ ದೂರದವರೆಗು ಸ್ವಂತ ವಾಹನಗಳಲ್ಲಿ ಪ್ರಯಾಣಿಸಬಹುದು. ನಂತರ ಕಾಲ್ನಡಿಗೆಯಲ್ಲಿ ೧.೫ ಕಿ. ಮೀ ದೂರ ಕ್ರಮಿಸಿ ಜಲಪಾತವನ್ನು ತಲುಪಬಹುದು. ಈ ಜಲಪಾತವು ಸುಮಾರು ೨೦ ಅಡಿ ಎತ್ತರವಿದ್ದು ಬಹಳ ಸುಂದರವಾಗಿದೆ. ಇದು ಒಂದು ಮಳೆಗಾಲದ ಜಲಪಾತವಾಗಿದೆ.