ಕನ್ವಾಲ್ವುಲಸ್
ಕಲ್ವಾಲ್ವುಲೇಸೀ ಕುಟುಂಬಕ್ಕೆ ಸೇರಿದ ಬಳ್ಳಿಯಂಥ ಏಕವಾರ್ಷಿಕ ಅಥವಾ ಬಹುವಾರ್ಷಿಕ ಸಸ್ಯಜಾತಿ.
ಪ್ರಬೇಧಗಳು
[ಬದಲಾಯಿಸಿ]ಸುಂದರವಾದ ಹೂಬಿಡುವ ಈ ಜಾತಿಯಲ್ಲಿ ಅನೇಕ ಪ್ರಬೇಧಗಳಿವೆ. ಇವು ಉಷ್ಣ ಹಾಗೂ ಸಮಶೀತೋಷ್ಣವಲಯ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತವೆ. ಕೆಲವನ್ನು ತೋಟಗಳಲ್ಲಿ ಅಲಂಕಾರಕ್ಕಾಗಿ ಬೆಳಸುತ್ತಾರೆ. ಬಳ್ಳಿಯಂತೆ ನೆಲದ ಮೇಲೆ ಹರಡಿಕೊಂಡು ಅಥವಾ ಯಾವುದಾದರೂ ಆಸರೆಯನ್ನು ಹಬ್ಬಿ ಬೆಳೆಯುವುದೂ ಸರಳವಾದ ಅಥವಾ ಹಾಲೆಗಳುಳ್ಳ ಬಾಣದ ಮೊನೆಯಂಥ ಅಥವಾ ಹೃದಯದಾಕಾರದ ಎಲೆಗಳೂ ಸಾಧಾರಣವಾಗಿ ಎಲೆಗಳ ಕಂಕುಳಲ್ಲಿ ಒಂದೊಂದೇ ಹೂವಿರುವುದೂ ಹೂದಳ ಗಂಟೆಯಾಕಾರದ್ದೊ ಆಲಿಕೆಯಾಕಾರದ್ದೊ ಆಗಿರುವುದೂ ಈ ಗಿಡದ ಮುಖ್ಯ ಲಕ್ಷಣಗಳು. ಹೂಗಳು ನೀಲಿ ಅಥವಾ ಊದಾ ಬಣ್ಣಕ್ಕಿದ್ದು ಅವುಗಳ ಕೇಂದ್ರಭಾಗ ಬಿಳಿ ಅಥವಾ ಹಳದಿ ಬಣ್ಣದ್ದಾಗಿರುತ್ತದೆ. ತೋಟಗಾರಿಕೆ ಪ್ರಾಮುಖ್ಯವನ್ನು ಪಡೆದಿರುವ ಪ್ರಭೇದಗಳು ಇವು. [೧]
ಕ.ಮೇಜಸ್ ಮತ್ತು ಕ.ಮೈನರ್ ಅಥವಾ ಕ. ಟ್ರೈಕಲರ್. ಇವುಗಳಲ್ಲಿ ಮೊದಲನೆಯದು ಮನೆಗಳ ಮೇಲೆ ಮತ್ತು ಅಲಂಕಾರದ ತಂತಿಗಳ ಮೇಲೆ ಹಬ್ಬಿಸುವುದಕ್ಕೆ ಯೋಗ್ಯವಾದ ಬಳ್ಳಿ. ಪ್ರತಿನಿತ್ಯ ಯಥೇಚ್ಚವಾಗಿ ಹೂಬಿಡುತ್ತದೆ. ಹೂಗಳು ಮುಂಜಾನೆ ಅರಳಿ ಮಧ್ಯಾಹ್ನ ಮುಚ್ಚಿಕೊಳ್ಳುತ್ತವೆಯಾದ್ದರಿಂದ ಈ ಗಿಡವನ್ನು ಮಾರ್ನಿಂಗ್ ಗ್ಲೋರಿ ಎಂದು ಕರೆಯುವುದುಂಟು. ಕ.ಮೈನರ್ ಎಂಬುದು ಚಿಕ್ಕದಾದ ವಾರ್ಷಿಕ ಬಳ್ಳಿ. ಬುಟ್ಟಿಗಳಲ್ಲೊ ಅಂಚುಗಳಲ್ಲೊ ಸುಲಭವಾಗಿ ಬೆಳೆಯಬುಹುದು. ಎರಡೂ ಬಗೆಗಳನ್ನು ಬೀಜದ ಮುಖಾಂತರ ವೃದ್ಧಿಸುತ್ತಾರೆ. ಬೀಜಗಳನ್ನು ಬೇಸಿಗೆಕಾಲ ಬಿಟ್ಟು ಇನ್ನಾವ ಕಾಲದಲ್ಲಾದರೂ ಬಿತ್ತಬಹುದು.
ಉಲ್ಲೇಖ
[ಬದಲಾಯಿಸಿ]