ವಿಷಯಕ್ಕೆ ಹೋಗು

ಕನ್ಯಾರ್ಕಾಲಿ ನೃತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಟಕಾಳಿ ನೃತ್ಯ
ಇರಾಟಕುಡನ್ ಪುರಟ್ಟು ಶೈಲಿಯ ನೃತ್ಯ

ಕನ್ಯಾರ್ಕಾಲಿ ಎಂಬುದು ಕೇರಳದ ಅಲತೂರ್ ಹಾಗೂ ಪಾಲಕ್ಕಾಡ್ ಜಿಲ್ಲೆಯ ಚಿತ್ತೂರು ತಾಲ್ಲೂಕಿನ ಹಳ್ಳಿಗಳ ದೇವಾಲಯಗಳಲ್ಲಿ ಪ್ರದರ್ಶನಗೊಳ್ಳುವ ಜಾನಪದ ನೃತ್ಯವಾಗಿದೆ. ಈ ನೃತ್ಯವು ಗ್ರಾಮಗಳಲ್ಲಿ ನಡೆಯುವ ವಿಶು ಆಚರಣೆಯ ಒಂದು ಭಾಗವಾಗಿದೆ ಮತ್ತು ನೃತ್ಯವನ್ನು ಸಾಮಾನ್ಯವಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಸಲಾಗುತ್ತದೆ.[೧]

ನೃತ್ಯ[ಬದಲಾಯಿಸಿ]

ನೃತ್ಯವನ್ನು ರಾತ್ರಿಯಲ್ಲಿ ಪ್ರಾರಂಭಿಸಿ ಮತ್ತು ಮುಂಜಾನೆ ಕೊನೆಗೊಳಿಸಲಾಗುತ್ತದೆ. ಕೆಲವು ಹಳ್ಳಿಗಳಲ್ಲಿ ಇದನ್ನು ಮೂರು ರಾತ್ರಿ ನಡೆಸಲಾಗುತ್ತದೆ. ದೇವಾಲಯಗಳಲ್ಲಿ ಪುರುಷ ಸಮುದಾಯದಿಂದ ವಟಕಾಳಿ[೨] ಎಂಬ ಒಂದು ಲಯಬದ್ಧ ವೃತ್ತಾಕಾರದ ನೃತ್ಯದ ಮೂಲಕ ಆರಂಭಗೊಳ್ಳುತ್ತದೆ. ವಟಕಾಳಿಯನ್ನು ಹಲವರು 'ಪುರಟು'[೩](ಅಂದರೆ ನಗೆನಾಟಕ)ಎಂದು ಅನುಸರಿಸುತ್ತಾರೆ. ಪುರಟುಗೆ ನಿಜವಾದ ಸ್ವರೂಪವಿಲ್ಲ ಮತ್ತು ಪ್ರತಿಯೊಂದು ಪುರಟುವು ಸುಮಾರು ಒಂದು ಗಂಟೆಯವರೆಗೆ ಇರುತ್ತದೆ. ಕೇರಳ,ತಮಿಳುನಾಡಿನ ವಿವಿಧ ಜಾತಿಗಳು ಮತ್ತು ಬುಡಕಟ್ಟು ಜನಾಂಗದ ಜೀವನ ಹಾಗೂ ಸಾಮಾಜಿಕ ಸಂಪ್ರದಾಯಗಳನ್ನು ಈ ನೃತ್ಯವು ಚಿತ್ರಿಸುತ್ತದೆ. ಪುರಟು ವೈವಿಧ್ಯಮಯ ಜಾತಿಗಳು ಮತ್ತು ಬುಡಕಟ್ಟುಗಳನ್ನು ಚಿತ್ರಿಸುವುದರಿಂದ,ವೇಷಭೂಷಣಗಳು,ನೃತ್ಯ ಮತ್ತು ಹಾಡುಗಳ ಶೈಲಿಯನ್ನು ಸಹ ವಿಭಿನ್ನ ರೀತಿಯಲ್ಲಿ ಚಿತ್ರಿಸುತ್ತದೆ. ನೃತ್ಯವು ನಿಧಾನ ಮತ್ತು ಲಯಬದ್ಧವಾದ ಚಲನೆಯನ್ನು ಹೊಂದಿದೆ. ಕೆಲವು ಪುರಟುಗಳು ಹಾಸ್ಯದಿಂದ ಕೂಡಿರುತ್ತವೆ. ನೃತ್ಯವನ್ನು ಪೆಂಡಾಲ್ ಎಂಬ ಚದರ ಹಂತದಲ್ಲಿ ಕೂಡ ನಡೆಸಲಾಗುತ್ತದೆ. ಪೆಂಡಾಲ್ ದೇವಾಲಯದ ಮುಂದೆ ಅಥವಾ ಅದರ ಆವರಣದಲ್ಲಿದೆ. ಇದರ ಮಧ್ಯದಲ್ಲಿ ಬೆಳಗಿದ ದೀಪವನ್ನು ಇಡಲಾಗಿದೆ. ಒಂಬತ್ತು ಕಂಬಗಳನ್ನು ಬೆಂಬಲಿಸುವ ಮೇಲ್ಛಾವಣಿಯು ಇಲ್ಲಿ ಒಳಗೊಂಡಿದೆ. ಗಾಯಕರು ವೇದಿಕೆಯ ಕೇಂದ್ರ ಸ್ಥಾನವನ್ನು ಆಕ್ರಮಿಸುತ್ತಾರೆ. ನರ್ತಕರು ವೃತ್ತಾಕಾರದ ಭಾಗದಲ್ಲಿ ನೃತ್ಯ ಮಾಡುತ್ತಾರೆ. ಹಾಡುಗಳು ಮಲಯಾಳಂ,ತಮಿಳು ಭಾಷೆಯಲ್ಲಿ ರಚಿತವಾಗಿದೆ. ಇದರ ಜೊತೆ ಎಲತಲಮ್,ಚೆಂಡೆ,ಮದ್ದಲೆ,ವಾದ್ಯಗಳನ್ನು ಉಪಯೋಗಿಸುತ್ತಾರೆ.[೪]

ಭಾಗವಹಿಸುವವರು[ಬದಲಾಯಿಸಿ]

ಪುರುಷರು ಮುಖ್ಯವಾಗಿ ಈ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಮಹಿಳೆಯರು ಮಾತನಾಡುವ ರೀತಿ ಹಾಗೂ ಅವರ ದೇಹ ಭಾಷೆಯನ್ನು ಅನುಕರಿಸಿ ಪುರುಷರು ಈ ನೃತ್ಯವನ್ನು ಮಾಡುತ್ತಾರೆ.[೫]

ಉಲ್ಲೇಖಗಳು[ಬದಲಾಯಿಸಿ]

  1. http://www.keralaculture.org/kaniyarkali/16
  2. https://wn.com/vatakali_tamilnadu_folk_song
  3. https://www.india9.com/i9show/Purattu-39499.htm
  4. https://www.justkerala.in/culture/kerala-dance-forms/kanyarkali
  5. https://www.revolvy.com/page/Kanyarkali