ವಿಷಯಕ್ಕೆ ಹೋಗು

ಕನ್ನಾಟ್ ಪ್ಲೇಸ್, ನವದೆಹಲಿ

Coordinates: 28°37′58″N 77°13′11″E / 28.63278°N 77.21972°E / 28.63278; 77.21972
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

28°37′58″N 77°13′11″E / 28.63278°N 77.21972°E / 28.63278; 77.21972

ಕನ್ನಾಟ್ ಪ್ಲೇಸ್ (ಹಿಂದಿ: कनॉट प्लेस, ಪಂಜಾಬಿ: ਕਨਾਟ ਪਲੇਸ) (ಅಧಿಕೃತವಾಗಿ ರಾಜೀವ್ ಚೌಕ್ ) ದೆಹಲಿಯ ಅತೀ ದೊಡ್ಡ ಆರ್ಥಿಕ ಮತ್ತು ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿದೆ. ಇದನ್ನು ಸಾಮಾನ್ಯವಾಗಿ CP ಎಂದು ಸಂಕ್ಷೇಪವಾಗಿ ಕರೆಯಲಾಗುತ್ತದೆ ಹಾಗು ಅನೇಕ ಭಾರತೀಯ ಸಂಸ್ಥೆಗಳ ಪ್ರಧಾನಕಾರ್ಯಸ್ಥಾನಗಳಿಗೆ ನೆಲೆಯಾಗಿದೆ. ನಗರದ ಪಾರಂಪರಿಕ ರಚನೆಗಳ ನಡುವೆ ಅದರ ಪರಿಸರವು ಹೆಮ್ಮೆಯ ಸ್ಥಾನವನ್ನು ಪಡೆದಿದೆ. ಇದು ಲುಟೆಯೇನ್ಸ್ ದೆಹಲಿಯ ಮಹೋನ್ನತ ಸ್ಥಳವಾಗಿ ಅಭಿವೃದ್ಧಿಪಡಿಸಲಾಯಿತು ಹಾಗು ಕೇಂದ್ರ ವಾಣಿಜ್ಯ ಜಿಲ್ಲೆಯ ವೈಲಕ್ಷ್ಯಣ್ಯ ಹೊಂದಿದೆ. ಡ್ಯೂಕ್ ಆಫ್ ಕನ್ನಾಟ್ ಹೆಸರನ್ನು ಹೊಂದಿರುವ ಇದರ ನಿರ್ಮಾಣ ಕಾರ್ಯ 1929ರಲ್ಲಿ ಆರಂಭವಾಗಿ 1933ರಲ್ಲಿ ಅಂತ್ಯಗೊಂಡಿತು. ಇದಕ್ಕೆ ಭಾರತದ ಪ್ರಧಾನಮಂತ್ರಿ ದಿವಂಗತ ರಾಜೀವ್ ಗಾಂಧಿ ಹೆಸರಿನಲ್ಲಿ ರಾಜೀವ್ ಚೌಕ್ ಎಂದು ಮರುನಾಮಕರಣ ಮಾಡಲಾಯಿತು. [೧] ಇಂದಿನ ಕನ್ನಾಟ್ ಪ್ಲೇಸ್ ದೆಹಲಿಯ ಜೀವತುಂಬಿದ ವಾಣಿಜ್ಯ ಜಿಲ್ಲೆಗಳಲ್ಲಿ ಒಂದೆನಿಸಿದೆ. ಆದರೆ ಅಭಿವೃದ್ಧಿಯೊಂದಿಗೆ ಕೆಲವು ಸಮಸ್ಯೆಗಳೂ ಉದ್ಭವಿಸಿದೆ. ಆಸ್ತಿ ಹಕ್ಕುಗಳನ್ನು ಕುರಿತ ವಿವಾದಗಳು,ಒತ್ತುವರಿಗಳು,ಅಪಾಯಕಾರಿ ಬೆಳವಣಿಗೆ, ಅನಧಿಕೃತ ನಿರ್ಮಾಣ, ಸಂಚಾರ ದಟ್ಟಣೆ ಮತ್ತಿತರ ಸಮಸ್ಯೆಗಳು ಉದ್ಭವಿಸಿವೆ.

ನಗರ ರಚನೆ

[ಬದಲಾಯಿಸಿ]
ಭೂಗತ ಅಂಗಡಿ ಸಂಕೀರ್ಣದ ಪ್ರವೇಶದ್ವಾರ,ಪಾಲಿಕಾ ಬಜಾರ್, ಕನ್ನಾಟ್‌ಪ್ಲೇಸ್, ನವದೆಹಲಿ
ಜೀವನ್ ಭಾರತಿ,, LIC ಕಟ್ಟಡ, ಕನ್ನಾಟ್ ಪ್ಲೇಸ್, ಹೊರ ವೃತ್ತ.

ರಾಬರ್ಟ್ ಟಾರ್ ರಸೆಲ್, ಭಾರತ ಸರ್ಕಾರದ ಮುಖ್ಯ ವಿನ್ಯಾಸಕಾರ 1932ರಲ್ಲಿ ಕನ್ನಾಟ್ ಪ್ಲೇಸ್‌ನ್ನು W.H. ನಿಕೋಲಾಸ್ ಅವರ ರೂಪರೇಖೆಯ ಆಧಾರದ ಮೇಲೆ ವಿನ್ಯಾಸಗೊಳಿಸಿದ. (1913–1917ರವರೆಗೆ ಸಮಿತಿಯ ವಿನ್ಯಾಸಕ).

ದೆಹಲಿಯ ಯಾವುದೇ ನಕ್ಷೆಯಲ್ಲಿ ಈ ಪ್ರದೇಶವನ್ನು ತಕ್ಷಣವೇ ಗುರುತಿಸಬಹುದಾಗಿದೆ. ಮಧ್ಯದಲ್ಲಿ ದೊಡ್ಡ ವೃತ್ತದೊಂದಿಗೆ ಎಲ್ಲ ದಿಕ್ಕುಗಳಿಗೂ ಚಕ್ರದ ಅರೆಗಳಂತೆ ರೇಡಿಯಲ್(ತ್ರಿಜ್ಯ)ರಸ್ತೆಗಳು ಹರಡಿವೆ.
ಕನ್ನಾಟ್ ಒಳ ವೃತ್ತದಿಂದ 8 ಪ್ರತ್ಯೇಕ ರಸ್ತೆಗಳು ಹೊರಡುತ್ತವೆ. ಇವನ್ನು ಪಾರ್ಲಿಮೆಂಟ್ ಬೀದಿ ಮತ್ತು 1ರಿಂದ 7ರವರೆಗೆ ರೇಡಿಯಲ್ ರಸ್ತೆಗಳು ಎಂದು ಹೆಸರಿಸಲಾಗಿದೆ. ಹೊರ ವರ್ತುಲ ಕನ್ನಾಟ್ ಸರ್ಕಸ್‌ನಿಂದ 12 ವಿವಿಧ ರಸ್ತೆಗಳು ಹೊರಡುತ್ತವೆ. ಇವುಗಳಲ್ಲಿ ಅತ್ಯಂತ ಪ್ರಸಿದ್ಧ ಜನಪಥ್, ಇದು ರೇಡಿಯಲ್ ರಸ್ತೆ 1ರ ವಿಸ್ತರಣೆಯಾಗಿದೆ. ಇದು ತಾರ್ಕಿಕವಾಗಿ ಯೋಜಿತ ಪ್ರದೇಶವಾಗಿದ್ದು, ಭಾರತದ ಮೊದಲ ಭೂಗತ ಮಾರುಕಟ್ಟೆ-ಪಾಲಿಕಾ ಬಜಾರ್(ಮುನ್ಸಿಪಲ್ ಮಾರ್ಕೆಟ್)ಗೆ ನೆಲೆಯಾಗಿದೆ. ಇದು ನಗರಪಾಲಿಕೆ ಯ ಹೆಸರನ್ನು ಪಡೆದುಕೊಂಡಿದೆ.

ಕನ್ನಾಟ್ ಪ್ಲೇಸ್‌ನ ಜಾರ್ಜಿಯನ್ ವಿನ್ಯಾಸವು ಇಂಗ್ಲೆಂಡ್ ಬಾತ್‌ನ ರಾಯಲ್ ಕ್ರೆಸೆಂಟ್ ಮಾದರಿಯಲ್ಲಿದೆ.

ಕನ್ನಾಟ್‌ಪ್ಲೇಸ್‌ನ ಕೇಂದ್ರ ಉದ್ಯಾನವು ದೀರ್ಘಕಾಲದಿಂದ ಸಾಂಸ್ಕೃತಿಕ ಚಟುವಟಿಕೆಗಳ ಸ್ಥಳವಾಗಿದೆ. ಉದ್ಯಾನದ ಕೆಳಗೆ ದೆಹಲಿ ಮೆಟ್ರೋ ಸ್ಟೇಷನ್ ನಿರ್ಮಾಣದ ನಂತರ 2005 -2006ರಲ್ಲಿ ಅದನ್ನು ಪುನರ್ನಿಮಿಸಲಾಯಿತು. ರಾಜೀವ್ ಚೌಕ್ ನಿಲ್ದಾಣವು ಮೆಟ್ರೊದ ಎಲ್ಲೊ ಮತ್ತು ಬ್ಲೂ ಮಾರ್ಗಗಳು ಕೂಡುವ ಸ್ಥಳವಾಗಿದ್ದು, ರೈಲ್ವೆ ಜಾಲದಲ್ಲಿ ಅತೀ ದೊಡ್ಡ ಮತ್ತು ದಟ್ಟಣೆಯ ನಿಲ್ದಾಣಗಳಲ್ಲಿ ಒಂದಾಗಿದೆ.

ಕನ್ನಾಟ್ ಪ್ಲೇಸ್ ಪ್ರತೀ ಸಂಸ್ಕೃತಿ ಮತ್ತು ಸಮುದಾಯದ ವಿವಿಧ ರೆಸ್ಟೊರೆಂಟ್‌ಗಳಿಗೆ ಪ್ರಖ್ಯಾತವಾಗಿದೆ. ಯಾವುದೇ ಸಮುದಾಯದ ವ್ಯಕ್ತಿ ಅವನ/ಅವಳ ಸ್ವಂತ ನಾಡಿನ ಆಹಾರಗಳ ರುಚಿಯನ್ನು ಸವಿಯಬಹುದು.

ದೆಹಲಿ ಸ್ಫೋಟಗಳು

[ಬದಲಾಯಿಸಿ]

13 ಸೆಪ್ಟೆಂಬರ್ 2008ರ ದೆಹಲಿ ಬಾಂಬ್ ದಾಳಿಗಳಲ್ಲಿ ಸೇರಿದ ಐದು ಭಯೋತ್ಪಾದನೆ ದಾಳಿಗಳ ಪೈಕಿ ಎರಡು ದಾಳಿಗಳಿಗೆ ಕನ್ನಾಟ್‌ಪ್ಲೇಸ್ ಸ್ಥಳ ಗುರಿಯಾಗಿತ್ತು.[]

ಈ ದಾಳಿಗಳಲ್ಲಿ 10 ಜನರು ಗಾಯಗೊಂಡರು. ಕನ್ನಾಟ್ ಪ್ಲೇಸ್ ಸುತ್ತಮುತ್ತಲಿನ ಕಸದತೊಟ್ಟಿಗಳಲ್ಲಿ ಬಾಂಬ್‌ಗಳು ಸ್ಫೋಟಿಸಿವೆ ಎಂದು ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಕನ್ನಾಟ್ ಪ್ಲೇಸ್ ಬಳಿಯ ಸೆಂಟ್ರಲ್ ಪಾರ್ಕ್‌ನಲ್ಲಿ ಕೂಡ ಒಂದು ಬಾಂಬ್ ಸ್ಫೋಟಿಸಿದೆ. ದೆಹಲಿಯಲ್ಲಿ ಸ್ಫೋಟಿಸದಿರುವ ಎರಡು ಬಾಂಬ್‌ಗಳನ್ನು ಆಡಳಿತವರ್ಗ ಪತ್ತೆಹಚ್ಚಿದೆ. ಒಂದು ಬಾಂಬನ್ನು ಕನ್ನಾಟ್‌ಪ್ಲೇಸ್‌ನ ರೀಗಲ್ ಸಿನಿಮಾ ಸಂಕೀರ್ಣದಲ್ಲಿ ಇರಿಸಲಾಗಿತ್ತು.[] ಬಾಂಬ್ ಸ್ಫೋಟಗಳಿಗೆ ಪ್ರತಿಕ್ರಿಯಿಸಿ, ಭದ್ರತಾ ಕಾರಣಗಳಿಗಾಗಿ ಆ ಪ್ರದೇಶದ ಎಲ್ಲ ಕಸದತೊಟ್ಟಿಗಳನ್ನು ತೆಗೆದುಹಾಕಲಾಯಿತು.

ಮರುಅಭಿವೃದ್ಧಿ ಯೋಜನೆಗಳು

[ಬದಲಾಯಿಸಿ]
ಬ್ರಿಟಿಷ್ ಯುಗದ ರೀಗಲ್ ಸಿನೆಮಾ, ಕನ್ನಾಟ್ ಪ್ಲೇಸ್,ನವದೆಹಲಿ

2000ನೇ ದಶಕದ ಕೊನೆಯಲ್ಲಿ, ಕನ್ನಾಟ್‌ಪ್ಲೇಸ್ ತನ್ನ ಮುಂಚಿನ ವೈಭವವನ್ನು ಕಳೆದುಕೊಂಡಿದ್ದರೂ, ಮಾರುಕಟ್ಟೆಯ ಮೋಡಿ ಜನರನ್ನು ಇಂದಿಗೂ ಸೆಳೆಯುತ್ತಿದೆ. ಪಾರಂಪರಿಕ ಯೋಜನೆಗೆ ಮರಳುವ ಭಾಗವಾಗಿ, ನವದೆಹಲಿ ನಗರಸಭೆ(NDMC)ಯು ದೆಹಲಿಯ ಹೆಮ್ಮೆಯ ಸ್ಥಳದ ನವೀಕರಣ ಮತ್ತು ಪುನರಭಿವೃದ್ಧಿಗೆ ಯೋಜನೆಯೊಂದನ್ನು ಸಿದ್ಧಪಡಿಸಿದೆ. ಪಾರಂಪರಿಕ ಸೂಕ್ಷ್ಮ ನಾಮಫಲಕ(ಚಿಹ್ನೆ)ಗಳಿಗೆ ಅವಕಾಶ ನೀಡುವುದು,ರಸ್ತೆಗಳ ಸುಧಾರಣೆ ಕೈಗೆತ್ತಿಕೊಳ್ಳುವುದು, ಒಳಚರಂಡಿ ವ್ಯವಸ್ಥೆ,ಜಲ ಪೂರೈಕೆ ಮತ್ತು ಉಪನಿಲ್ದಾಣಗಳು ಮುಂತಾದವು, ಸಂಚಾರ ನಿರ್ವಹಣೆ ಯೋಜನೆಯ ಅಭಿವೃದ್ಧಿ, ಸೂಕ್ತ ವಾಹನ ನಿಲುಗಡೆ ಸ್ಥಳ ಸೇರಿದಂತೆ ಬೀದಿಯಲ್ಲಿ ಅಳವಡಿಸುವ ಉಪಕರಣಗಳಿಗೆ ಅವಕಾಶ ನೀಡುವುದು, ನಡೆದಾರಿಗಳು ಯೋಜನೆಯಲ್ಲಿ ಸೇರಿವೆ ಹಾಗು ಎಲ್ಲ ಕಟ್ಟಡಗಳ ರಚನೆಯ ಸ್ಥಿರತೆ ವೃದ್ಧಿ ಮತ್ತು ಭೂಕಂಪ ನಿರೋಧಕ್ಕೆ ಮರುಮಾರ್ಪಾಡು ಕೂಡ ಸೇರಿವೆ. SPA, RITES, CMCCC, NTPAC ಮುಂತಾದ ವಿವಿಧ ಪ್ರಖ್ಯಾತ ಸಂಸ್ಥೆಗಳು ಕೈಗೊಂಡ ಅಧ್ಯಯನದ ಆಧಾರದ ಮೇಲೆ ಇವೆಲ್ಲ ಭಾಗಗಳನ್ನು ಗುರುತಿಸಲಾಗಿದೆ. ಈ ಯೋಜನೆಯ ಭಾಗವಾಗಿ ಪ್ರಸಕ್ತ ನವೀಕರಣ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಹೊರ ವೃತ್ತದಲ್ಲಿರುವ ಅನೇಕ ಅಂಗಡಿಗಳು ಅವುಗಳ ಹವಾನಿಯಂತ್ರಿತ ವ್ಯವಸ್ಥೆಯನ್ನು ಕಳೆದುಕೊಂಡಿವೆ.

ಇದನ್ನು ಸಹ ನೋಡಿ

[ಬದಲಾಯಿಸಿ]

ದೆಹಲಿ ಮಹಾನಗರಪಾಲಿಕೆ ಪ್ರದೇಶದಲ್ಲಿ ಇತರ ವಾಣಿಜ್ಯ ಕೇಂದ್ರಗಳು:

  • ಜಾನಕ್‌ಪುರಿ ಜಿಲ್ಲಾ ಕೇಂದ್ರ
  • ನೆಹರೂ ಪ್ಲೇಸ್
  • ಭಿಕಾಜಿ ಕಾಮಾ ಪ್ಲೇಸ್
  • ರಾಜೇಂದ್ರ ಪ್ಲೇಸ್
  • ಶಿವಾಜಿ ಪ್ಲೇಸ್
  • ಗುಡಗಾಂವ್
  • NOIDA

ಐತಿಹಾಸಿಕ ಕೂಡ ನೋಡಿ

[ಬದಲಾಯಿಸಿ]
  • ಅಗ್ರಸೇನ್ ಕಿ ಬಾವೋಲಿ, ಕನ್ನಾಟ್ ಪ್ಲೇಸ್
  • ದಿ ಇಂಪೀರಿಯಲ್,ನವದೆಹಲಿ

ಚಿತ್ರಗಳ ಗ್ಯಾಲರಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Henry Chu (September 14, 2008). "At least 18 killed in series of blasts in Indian capital". Los Angeles Times. Retrieved 2009-01-14.
  2. Bruce Loudon (September 15, 2008). "Hunt for Delhi bomb suspects". The Australian. Retrieved 2009-01-14.