ಕನ್ನಡ ನಾಡಿನ ಲೋಹಕಾರ್ಯಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕವು ಅನೇಕ ಉಪಕಲೆಗಳಿಗೆ ಮಾದರಿಯಾಗಿದೆ. ಪ್ರಪಂಚದ ಉಪಕಲೆಗಳಲ್ಲಿ ಲೋಹದ ಕಾರ್ಯಗಳೂ ಸೇರುತ್ತವೆ. ಕೌಶಲ್ಯತೆಯಿಂದ ಕೂಡಿರುವ ಅನೇಕ ಉಪಕಲೆಗಳು ಕನ್ನಡ ನಾಡಿನಲ್ಲಿ ಹೇರಳವಾಗಿರುವುವು. ಅಂದವಾದ ಚಿತ್ರಗಳಿಂದ ಕೂಡಿರುವ ನಾಣ್ಯಗಳೂ, ವಿವಿಧ ಮೂದ್ರೆಗಳೂ, ದಕ್ಷಿಣ ದೇಶದಲ್ಲಿ ವಿರಳವಾಗಿದ್ದರೂ ಕೂಡ ಹಿಂದೂ ಮಣಿಕಾರರ ಕೌಶಲ್ಯತೆ ಬಹಳ ಪ್ರಸಿದ್ದಿಯನ್ನು ಪಡೆದಿದ್ದಿತು. ಅತೀ ಕಠಿಣವಾದ ರತ್ನಗಳನ್ನು ಸುಲುಭವಾಗಿಯೂ, ವಿಶಿಷ್ಟ ಚಮತ್ಕಾರದಿಂದಲೂ ಇವರು ಕೊರೆದು ಇವುಗಳಿಂದ ಅಲಂಕರಿಸಲಾದ ಅತೀ ಸೂಕ್ಷ್ಮವಾದ ವಸ್ತು ವಿಶೇಶಗಳನ್ನು ಚಿತ್ರ ಕಲೆಗಳಿಂದ ತುಂಬಿ ಕಣ್ಣಿಗೆ ಕಟ್ಟುವ ಹಾಗೆ ಮಾಡುವುದರಲ್ಲಿ ಬಹಳ ನೈಪುಣ್ಯತೆಯನ್ನು ಹೊಂದಿದ್ದರು. ಲೋಹಗಳಿಂದ ಮಾಡಲ್ಪಟ್ಟ ಅನೇಕ ಪಾತ್ರೆ ಪದಾರ್ಥಗಲೂ ಕೂಡ ನಮ್ಮ ದೇಶದಲ್ಲಿ ಪುಷ್ಪವೇ ಮೊದಲಾದ ಚಿತ್ರಗಳಿಂದ ಮಡಲಾಗುತ್ತಿತ್ತು ಎಂದು ಹೇಳಬಹುದು. ಮರದ ಕೆತ್ತನೆಯ ಕೆಲಸದಲ್ಲಿಯೂ ಕೂಡ ಕನ್ನಡ ನಾಡು ಸುಪ್ರಸಿದ್ದವಾಗಿರುವುದು. ಮೈಸೂರಿನಲ್ಲಿ ಈಗಲೂ ಇಂತಹ ಚಿತ್ರ ಕೆಲಸಗಳನ್ನು ಶ್ರೇಷ್ಟ ಮರಗಳಲ್ಲಿ ಒಂದಾದ ಗಂಧದ ಮರದಿಂದ ಮಾಡಲಾಗುವುದು. ಈ ಚಿತ್ರಗಳು ಕೆಲಸಗಾರನ ಕೌಶಲ್ಯವನ್ನು ತೋರಿಸುವುದಲ್ಲದೆ ಆತನ ಪ್ರಕೃತಿ ಮೇಲಿನ ಪ್ರೀತಿ, ಅದರೊಟ್ಟಿಗಿನ ಭಾಂದವ್ಯತೆ, ಮನೋರಂಜಕವಾದ ಕಲ್ಪನಾ ಶಕ್ತಿ ಮತ್ತು ವಿನ್ಯಾಸ ಚತುರತೆಯನ್ನು ನಿರೂಪಿಸುತ್ತವೆ.

ಚೈತನ್ಯದಿಂದಲೂ ಅಲಂಕಾರಗಳಿಂದಲೂ ತುಂಬಿದ ಪ್ರತಿಮೆಗಳನ್ನೂ ಮತ್ತು ಮೃಗ-ಪಕ್ಷಿಗಳನ್ನೂ ಕನ್ನಡ ನಾಡಿನ ದೇವಾಲಯಗಳ ಮರದ ರಥಗಳಲ್ಲಿ ನೋಡಬಹುದು. ಮೈಸೂರು ಅರಮನೆಯಲ್ಲಿರುವ ಗಂಧದ ಮರದ ಕಪಾಟವೊಂದರ ಮೇಲೆ ಕೆತ್ತಲ್ಪಟ್ಟಿರುವ ಕೃಷ್ಣ ಗೋಪಿಕೆಯರ ಮರದ ಪ್ರತಿಮೆಗಳು ಬಹಳ ಚಮತ್ಕಾರದಿಂದ ಮಾಡಲ್ಪಟ್ಟು ಪ್ರೇಕ್ಷಕರನ್ನು ಮೂಕ ವಿಸ್ಮಿತರನ್ನಗಿಸುವುದರಲ್ಲಿ ಅಚ್ಚರಿಯೇನಿಲ್ಲ. ಆಧುನಿಕ ಶಿಲ್ಪಿ ಹಿಂದಿನ ಕಾಲದಂತೆಯೇ ಬಹಳ ಸ್ವಾರಸ್ಯವಾಗಿ ಮರದಲ್ಲಿ ಚಿತ್ರ ಕೆಲಸಗಳನ್ನು ಮಾಡುತ್ತಿರುವನು. ಮರದಲ್ಲಿ ಮಾತ್ರವಲ್ಲದೆ ದಂತದಲ್ಲಿಯೂ ಇದೇ ತೆರನಾದ ಕಲಾ ಕೌಶಲಯುಕ್ತವಾದ ವಸ್ತು ವಿಶೇಷಗಳನ್ನು ಮಾಡುತ್ತಿದ್ದ. ಇಂತಹ ವಿಶೇಷ ಕಲಾಕೃತಿಗಳನ್ನು ಮೈಸೂರಿನಲ್ಲಿಯೂ ಹಾಗೂ ತಿರುವಾಂಕಾರಿನಲ್ಲಿಯೂ ಮಡುತ್ತಿದ್ದುದಾಗಿ ಸರ್. ಜಾರ್ಜಾವಾಟ್ ಎಂಬ ಕಲಾ ರಸಿಕನು ಬಹಳವಾಗಿ ಪ್ರಶಂಸಿರುವನು. ಈ ಚಿತ್ರಗಳೆಲ್ಲವೂ ಚಾಲುಕ್ಯ ಹಾಗೂ ಹೊಯ್ಸಳರ ದೇವಸ್ಥಾನಗಳಲ್ಲಿ ಕಂಡು ಬರುವ ಶಿಲಾಶಿಲ್ಪವನ್ನು ಹೋಲುತ್ತವೆ.ಹೊಯ್ಸಳರ ಕಾಲದಲ್ಲಿ ಶಿಲಾಶಿಲ್ಪ ಹೇಗೆ ಶೋಭಿಸುತ್ತಿತ್ತೋ ಹಾಗೆಯೇ ಲೋಹ ಶಿಲ್ಪವೂ ಕೂಡ ಪ್ರಖ್ಯಾತಿಯುಕ್ತವಾಗಿದ್ದಿತ್ತೆಂದು ದೊರೆತಿರುವ ಹಲವಾರು ಪ್ರತಿಮೆ ಮೊದಲಾದವುಗಳಿಂದ ಗೊತ್ತಾಗುತ್ತದೆ. ಬೇಲೂರು ದೇವಾಲಯಕ್ಕೆ ಕುಮಾರ ಲಕ್ಷ್ಮೀಧರ ದಂಡನಾಯಕನು ತೀರ್ಥವನ್ನು ಇಡಲೋಸುಗ ಕೊಟ್ಟ ಪಂಚಲೋಹದ ಮೂಕ್ಕಾಲು ಮಣೆಯೊಂದು ನಯನ ಮನೋಹರವಾದ ಕಮಲ ಪುಷ್ಪಗಳ ಸಾಲಿನಿಂದಲೂ ಹಂಸ ಮತ್ತು ಗಂಡಭೇರುಂಡ ಪಕ್ಷಿಗಳಿಂದಲೂ ಅಂದವಾಗಿ ಪ್ರಸರಿಸಿರುವ ಬಳ್ಳಿಗಳಿಂದಲೂ ಸಂಗೀತ ಮತ್ತು ನರ್ತನಗಳಲ್ಲಿ ತೊಡಗಿರುವ ಸ್ತ್ರೀ, ಪುರುಷ ವಿಗ್ರಹಗಳಿಂದಲೂ ಅಲಂಕೃತವಾಗಿ ಅದರ ಮೂರು ಕಾಲುಗಳು ಗಂಟಾಕೃತಿಯಲ್ಲಿ ಮಡಲಾಗಿರುವುವು ಎಂಬುವುದನ್ನು ನೋಡಿದಾಗ ಕನ್ನಡ ನಾಡಿನ ಲೋಹಕಾರ್ಯವು ಎಷ್ಟೊಂದು ವಿಶಿಷ್ಟವದುದ್ದೆಂದು ತಿಳಿಯಬಹುದು. ಈ ಮುಕ್ಕಾಲು ಮಣೆಯ ಚಮತ್ಕಾರ ಕೌಶಲ ಆಶ್ಚರ್ಯವಾದುದ್ದೆಂದು ಹೇಳಿದರೆ ತಪ್ಪಾಗಲಾರದು.

ವಿಜಯನಗರದವರ ಕಾಲದ ಲೋಹದ ಪ್ರತಿಮೆಗಳೂ ಕೂಡ ಬಹಳ ಚೆನ್ನಾಗಿ ಮಾಡಲಾಗುತ್ತಿದ್ದವೆಂದು ಕರ್ನಾಟಕ ದೇವಾಲಯಗಳಲ್ಲಿರುವ ಅನೇಕ ಉತ್ಸವ ವಿಗ್ರಹಗಳ ಆಧಾರದಿಂದ ನಾವು ಹೇಳಬಹುದು. ಇನ್ನು ಮೈಸೂರು ಅರಸರ ಕಾಲದ ವಿಗ್ರಹಗಳೂ ಇದೇ ಪ್ರಕಾರವಾಗಿ ಮಾಡಲ್ಪಟ್ಟಿರುವುವು ಎಂದು ಹೇಳಬಹುದು. ಈಗಿನ ಕಾಲದಲ್ಲೂ ಲೋಹ ಪ್ರತಿಮೆಗಳನ್ನೂ ಅಂದವಾಗಿ ಮಾಡುವಂತಹ ಶಿಲ್ಪಿಗಳು ಕನ್ನಡ ನಾಡಿನಲ್ಲಿ ಇರುವರು. ಈಗ ಅಣ್ಣಾಮಲೈನಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ ಇರುವ ಕಲಾ ಚಾತುರ್ಯವುಳ್ಳ ನಟರಾಜ ವಿಗ್ರಹವು ಮೈಸೂರಿನ ಶಿಲ್ಪಿಯಿಂದ ಮಾಡಲ್ಪಟ್ಟಿದ್ದು.

ಲೋಹದಿಂದ ಮಾಡಲ್ಪಡುವ ಪ್ರತಿಮಾ ಶಿಲ್ಪಿಗಳ ಕಲೆಯೊಂದಿಗೆ ಜನರು ಧರಿಸುವ ಅನೇಕ ವಿಧವಾದ ಚಿನ್ನ ಬೆಳ್ಳಿಗಳಿಂದ ಮಾಡಲ್ಪಟ್ಟ ಆಭರಣಗಳನ್ನು ನಾವು ಕನ್ನಡ ನಾಡಿನ ಲೋಹಕಲೆಗಳಿಗೆ ಸೇರಿಸಬಹುದಾಗಿದೆ. ಈ ಆಭರಣಗಳಲ್ಲಿ ಸಾಮಾನ್ಯವಾಗಿ ಎಲ್ಲರಲ್ಲಿಯೂ ರೂಢಿಯಲ್ಲಿರುವಂತೆ ಓಲೆ, ಜಡೆ ಬಿಲ್ಲೆ, ಪದಕ, ಅಡ್ಡಿಕೆ, ವಂಕಿ, ನಾಗಮುರಿ, ರುಳಿ, ಕಾಲುಗೆಜ್ಜೆ, ಉಡುದಾರ, ತಾಯತ, ಬಾವಲಿ, ಉಡ್ಯಾಣ ಇತ್ಯಾದಿ. ಪ್ರಸಿದ್ದವಾದ ದೇವಾಲಯಗಳಲ್ಲಿ ಮತ್ತು ಮಹಾರಾಜರುಗಳ ಅರಮನೆಗಳಲ್ಲಿಯೂ ಬಹಳ ಬೆಲೆ ಬಾಳುವ ಮತ್ತು ಮನೋಹರವಾಗಿ ಮಾಡಲ್ಪಟ್ಟ ರತ್ನ ಖಚಿತವಾದ ಆಭರಣಗಳು ಇರುವುವು. ಇಂತಹ ರತ್ನ ಖ್ಚಿತವಾದ ಆಭರಣಗಳಲ್ಲಿ ಕಿರೀಟಗಳನ್ನೂ ವಿವಿಧ ಮುಡಿಗಳನ್ನೂ ಸೇರಿಸಬಹುದು.

ಕರ್ನಾಟಕದ ಅನೇಕ ಉದ್ಯಮ ಕಲೆಗಳು ಕೂಡಾ ಗಮನ ಸೆಳೆಯುವಂತಹವು. ಈ ಕಲೆಗಳಲ್ಲಿ ಲೋಹ ಕೆಲಸ, ಮರಗೆಲಸ, ಕಂಚಿನ ಕೆಲಸ ಮೊದಲಾದವು ಮುಖ್ಯವಾದವು. ಹಿತ್ತಾಳೆ, ತಾಮ್ರ ಪದಾರ್ಥಗಳು ಹಾಸನ, ತುಮಕೂರು, ಮಂಡ್ಯ ಜಿಲ್ಲೆಗಳಲ್ಲಿ ವಿಶೇಷವಾಗಿ ಮಾಡಲ್ಪಡುತ್ತಿರುವುವು. ಶ್ರವಣಬೆಳಗೊಳದಲ್ಲಿ ಈ ಲೋಹಗಳಿಂದ ಅನೇಕ ಪಾತ್ರೆಗಳನ್ನು ಮಾಡುವರು. ಹಿತ್ತಾಳೆಯಿಂದ ದೀಪಸ್ತಂಭ, ಪ್ರತಿಮೆ ಮೊದಲಾದವನ್ನು ಮಾಡುತ್ತಾರೆ. ಬೆಂಗಳೂರಿನಲ್ಲಿ ತಯಾರಾಗುವ ಅಂದವಾದ ರತ್ನ್ಳಗಂಬಳಿಗಳೂ, ಮೊಣಕಾಲ್ಮೂರು ಮುಂತಾದ ಕಡೆಗಳಲ್ಲಿ ತಯಾರಿಸಲ್ಪಡುವ ರೇಷ್ಮೆ ಬಟ್ಟೆಗಳು ಕಲಾ ಕೌಶಲದಿಂದ ಮಾಡಲ್ಪಟ್ಟು ಪ್ರಸಿದ್ದಿ ಹೊಂದಿವೆ. ಶ್ರವಣಬೆಳಗೊಳದಲ್ಲಿ ಈ ಲೋಹಗಳಿಂದ ಅನೇಕ ಪಾತ್ರೆಗಳನ್ನು ಮಾಡುವರು. ಹಿತ್ತಾಳೆಯಿಂದ ದೀಪಸ್ತಂಭ, ಪ್ರತಿಮೆ ಮೊದಲಾದವನ್ನು ಮಾಡುತ್ತಾರೆ. ಬೆಂಗಳೂರಿನಲ್ಲಿ ತಯಾರಾಗುವ ಅಂದವಾದ ರತ್ನ್ಳಗಂಬಳಿಗಳೂ, ಮೊಣಕಾಲ್ಮೂರು ಮುಂತಾದ ಕಡೆಗಳಲ್ಲಿ ತಯಾರಿಸಲ್ಪಡುವ ರೇಷ್ಮೆ ಬಟ್ಟೆಗಳು ಕಲಾ ಕೌಶಲದಿಂದ ಮಾಡಲ್ಪಟ್ಟು ಪ್ರಸಿದ್ದಿ ಹೊಂದಿವೆ. ಬಟ್ಟೆಗಳಿಗೆ ಸೊಬಗಿನ ರಂಗುಗಳನ್ನು ಹಾಕುವ ಉದ್ಯಮಕಲೆಯೂ ಕೂಡ ದೇಶದ ಅನೇಕ ಭಾಗಗಳಲ್ಲಿ ಹೆಸರನ್ನು ಪಡೆದಿರುವುದು. ಚಿನ್ನದ ಸಹಾಯದಿಂದ ಮಾಡಿದ ವಿವಿಧ ಬಗೆಯ ಪುಷ್ಪ ಮೊದಲಾದ ಚಿತ್ರಗಳನ್ನೊಳಗೊಂಡ ಕಾಗದಗಳನ್ನು ಅರಮನೆಗಳು ಮೊದಲಾದ ಮೂದಲಾದ ಕಟ್ಟಡಗಳ ಒಳಭಾಗಗಳ ಗೋಡೆಗಳ ಮೇಲೂ ಅಚ್ಚಾಧನಗಳ ಮೇಲೂ ಹಚ್ಚಿ ಪ್ರಕಾಶಮಾನವಾಗಿ ಮಾಡುವ ಕಲೆಯೊಂದನ್ನು ಶ್ರೀರಂಗಪಟ್ಟಣ, ಮೈಸೂರು, ಚೆನ್ನಪಟ್ಟಣ ಮೊದಲಾದ ಸ್ಥಳಗಳಲ್ಲಿ ನೋಡಬಹುದು. ಮರಗಳಲ್ಲಿ ಮಂಚ, ಕುರ್ಚಿ ಮೊದಲಾದ ಗೃಹೋಪಕರಣ ವಸ್ತುಗಳನ್ನು ಅತೀ ನಾಜೂಕಾಗಿ ಬೆಂಗಳೂರು, ಮೈಸೂರು ಮುಂತಾದ ಪಟ್ಟಣಗಳಲ್ಲಿ ಮಾಡುವರು. ಇತ್ತೀಚೆಗೆ ಬೆತ್ತದಿಂದ ತಯಾರಿಸಲ್ಪಟ್ಟ ವಸ್ತುಗಳು ರೂಢಿಗೆ ಬಂದು ಬಹಳ ಕೌಶಲ್ಯದಿಂದ ಮಾಡಲ್ಪಡುವ ನಾನಾ ಬಗೆಯ ಬಣ್ಣಗಳಿಂದ ಶೋಭಿಸುವ ಮರದ ಆಟದ ಸಾಮಾನುಗಳನ್ನು ಈ ಬಗೆಗೆ ಸೇರಿಸಬಹುದು. ಈ ಕೆಲಸವನ್ನು ಮಾಡುವವರು ಮರದಲ್ಲಿ ಪಕ್ಷಿ, ಹಣ್ಣು, ಮೊದಲಾದ ಪದಾರ್ಥಗಳನ್ನು ಬಹಳ ಚಮತ್ಕಾರದಿಂದ ಮಾಡುವರು. ಉದ್ಯಮ ಕಲೆಯಾದೆ ಶಿಲ್ಪ ಕೆತ್ತನೆಯಲ್ಲಿ ಚನ್ನಪಟ್ಟಣ ಮೊದಲಾದ ಸ್ಥಳಗಳು ಪ್ರಸಿದ್ಧಿಯನ್ನು ಪಡೆದಿವೆ. ಕನ್ನಡ ನಾಡಿನ ಸ್ತ್ರೀಯರು ಕೈಗೆ ಧರಿಸುವ ನಾನಾ ತರಹ ಗಾಜಿನ ಬಳೆಗಳು ಅಂದವಾಗಿಯೂ ಬೇರೆ ಬೇರೆ ಬಣ್ಣಗಳಿಂದ ಕೂಡಿರುತ್ತವೆ.