ವಿಷಯಕ್ಕೆ ಹೋಗು

ಕನ್ನಡದ ಪ್ರಥಮ ನಾಟಕೋದಯ ದಿನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡದ ಪ್ರಥಮ ನಾಟಕೋದಯ ದಿನ - ಇದನ್ನು ನವೆಂಬರ್ 14 ರಂದು ಆಚರಿಸಲಾಗುತ್ತದೆ. 1877 ರ ನವಂಬರ್ 14 ರಂದು ಕನ್ನಡದ ಸ್ವತಂತ್ರ ನಾಟಕವಾದ 'ಉಷಾಹರಣ'ದ ಪ್ರದರ್ಶನಗೊಂಡು ದರ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.

ಐತಿಹಾಸಿಕ ಹಿನ್ನೆಲೆ

[ಬದಲಾಯಿಸಿ]

ಬ್ರಿಟಿಷ್ ಆಡಳಿತದಲ್ಲಿ ಉತ್ತರ ಕರ್ನಾಟಕ ಮುಂಬೈ ಪ್ರೆಸಿಡೆನ್ಸಿ ಆಡಳಿತಕ್ಕೆ ಒಳಪಟ್ಟಾಗ ಕನ್ನಡ ಸಂಸ್ಕೃತಿ, ಶಿಕ್ಷಣ, ನಾಟಕ, ಇತರ ರಂಗಗಳು ಮರಾಠಿಮಯವಾಗಿದ್ದವು. ಕನ್ನಡ ಭಾಷೆ ಮತ್ತು ರಂಗಭೂಮಿ ನಿರ್ಲಕ್ಷ್ಯಕ್ಕೆ ಒಳಗಾಗಬಹುದು ಎಂಬ ಆತಂಕ ಎದುರಾದಾಗ ಶಾಂತಕವಿ ಎಂಬ ಕಾವ್ಯನಾಮದ ಶ್ರೀ ಸಕ್ಕರಿ ಬಾಳಾಚಾರ್ಯರು ಅದರ ಉಳಿವಿಗೆ ನಾಟಕಗಳ ಮೂಲಕ ಕನ್ನಡಿಗರನ್ನು ಜಾಗೃತಗೊಳಿಸಿದರು. ಕನ್ನಡದಲ್ಲಿ ಸ್ವತಂತ್ರ ನಾಟಕ ರಚನೆಗೆ ಮುಂದಾಗಿ 'ಉಷಾಹರಣ' ಬರೆದರು. ಇದು 1877ರ ನವೆಂಬರ್ 14ರಂದು ಪ್ರದರ್ಶನಗೊಂಡ ದಿನವನ್ನೇ ಕನ್ನಡದ ಪ್ರಥಮ ನಾಟಕೋದಯ ದಿನ ಎಂದು ಆಚರಿಸಲಾಗುತ್ತದೆ.