ಕನಕಚಂದ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಕನಕಚಂದ್ರ : ಒಬ್ಬ ಜೈನಯತಿ. ಕಾಲ ಸು. 1300. ಕೊಂಡ ಕುಂದಾಚಾರ್ಯನ ಮೋಕ್ಷಪ್ರಾಭೃತ ಅಥವಾ ಸಹಜಾತಪ್ರಕಾಶ ಎಂಬ ಗ್ರಂಥಕ್ಕೆ ಕನ್ನಡ ವ್ಯಾಖ್ಯಾನ ಬರೆದಿದ್ದಾನೆ. ಇವನೊಬ್ಬ ಕವಿಯೂ ಇರಬಹುದೆಂದು ತೋರುತ್ತದೆ. ಇವನ ಯಾವ ಸ್ವತಂತ್ರ ಕಾವ್ಯಗಳೂ ಇದುವರೆಗೆ ಸಿಕ್ಕಿಲ್ಲ. ಈತ ಬರೆದ ವ್ಯಾಖ್ಯಾನ ಗ್ರಂಥ ಮೂಡಬಿದಿರೆಯ ಜೈನಮಠದ ಪುಸ್ತಕಭಂಡಾರದಲ್ಲಿದೆ.

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: