ವಿಷಯಕ್ಕೆ ಹೋಗು

ಕಣಜ (ಜಾಲತಾಣ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಣಜ
ಜಾಲತಾಣದ ವಿಳಾಸkanaja.karnataka.gov.in
ಘೋಷಣೆಅಂತರಜಾಲ ಕನ್ನಡ ಜ್ಞಾನಕೋಶ
ವಾಣಿಜ್ಯ ತಾಣಅಲ್ಲ
ತಾಣದ ಪ್ರಕಾರಅಂತರಜಾಲ ಜ್ಞಾನಕೋಶ
ಲಭ್ಯವಿರುವ ಭಾಷೆಕನ್ನಡ
ವಿಷಯದ ಪರವಾನಗಿಹಕ್ಕುಸ್ವಾಮ್ಯಕ್ಕೊಳಪಟ್ಟಿದೆ
ಒಡೆಯಕರ್ನಾಟಕ ಸರಕಾರ
ಪ್ರಾರಂಭಿಸಿದ್ದುಡಿಸೆಂಬರ್ ೫, ೨೦೦೯
ಸಧ್ಯದ ಸ್ಥಿತಿಆನ್‍ಲೈನ್

ಕಣಜ ಎಂಬುದು ಒಂದು ಅಂತರಜಾಲಾಧಾರಿತ ಕನ್ನಡ ಜ್ಞಾನಕೋಶ. ಇದು ಕರ್ನಾಟಕ ಸರಕಾರದ ಒಡೆತನಕ್ಕೆ ಒಳಪಟ್ಟಿದೆ.

ಇತಿಹಾಸ

[ಬದಲಾಯಿಸಿ]
  • ಕರ್ನಾಟಕ ಸರಕಾರವು ೨೦೦೯ರ ಡಿಸೆಂಬರ್ ೫ ರಂದು ಕಣಜ ಎಂಬ ಅಂತರಜಾಲ ಕನ್ನಡ ಜ್ಞಾನಕೋಶ ಎಂಬ ಅಂತರಜಾಲ ತಾಣವನ್ನು ಹುಟ್ಟು ಹಾಕಿತು[]. ಕಣಜ ಜಾಲತಾಣ Archived 2021-04-26 ವೇಬ್ಯಾಕ್ ಮೆಷಿನ್ ನಲ್ಲಿ.ವನ್ನು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗವು ಕನ್ನಡ ಅಭಿವೃದ್ಧಿ ಪ್ರಾಧಿಕಾರ Archived 2015-04-28 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಕಾರದೊಂದಿಗೆ ಈ ಯೋಜನೆಯನ್ನು ಪರಿಕಲ್ಪಿಸಿ, ರೂಪಿಸಿದ್ದು ಇಂಟರ್ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ, ಬೆಂಗಳೂರು (ಐಐಐಟಿ-ಬಿ) ಇವರು.
  • ಕಣಜ ಎಂಬ ಅಂತರಜಾಲ ಕನ್ನಡ ಜ್ಞಾನಕೋಶದಲ್ಲಿ ಬರೆದ ಲೇಖನಗಳನ್ನು ಬೇರೆ ಯಾರಾದರೂ ತಿದ್ದಪಡಿ ಮಾಡುವುದಾಗಲೀ ಅಥವಾ ಮತ್ತಷ್ಟು ವಿಷಯಗಳನ್ನು ಸೇರಿಸಿ ಲೇಖನವನ್ನು ವಿಸ್ತಾರಗೊಳಿಸುವುದಾಗಲಿ ಸಾಧ್ಯವಿಲ್ಲ.

ಉದ್ದೇಶ

[ಬದಲಾಯಿಸಿ]

ಕನ್ನಡದಲ್ಲಿ ಮಾಹಿತಿಯ ಬಹುದೊಡ್ಡ ಆಕರವಾಗಬೇಕು ಎಂಬ ಉದ್ದೇಶದಿಂದ ಇದನ್ನು ಹುಟ್ಟುಹಾಕಲಾಯಿತು. ಜ್ಞಾನಸಮಾಜ ಸೃಷ್ಟಿಯು ಕರ್ನಾಟಕ ಜ್ಞಾನ ಆಯೋಗದ ಉದ್ದೇಶವಾಗಿದೆ. ಈ ಉದ್ದೇಶಕ್ಕೆ ಅನುಗುಣವಾಗಿ ಕಣಜ ಎಂಬ ಕನ್ನಡ ಜ್ಞಾನಕೋಶವನ್ನು ತಯಾರಿಸಲಾಯಿತು. ಬೇರೆ ಬೇರೆ ಆಕರಗಳಿಂದ ಮಾಹಿತಿಯನ್ನು ಪಡೆದು ಕಣಜದಲ್ಲಿ ಪ್ರಕಟಿಸಲಾಗುತ್ತಿದೆ. ಕಣಜದಲ್ಲಿ ಪಠ್ಯ ಮಾತ್ರವಲ್ಲದೆ, ಧ್ವನಿ ಮತ್ತು ಚಲನಚಿತ್ರದ ತುಣುಕಗಳನ್ನೂ ಸೇರಿಸಲಾಗುತ್ತಿದೆ.

ಕಣಜದಲ್ಲಿ ಕನ್ನಡ ಭಾಷೆಯ ಶ್ರೀಮಂತ ಪರಂಪರೆಯನ್ನು ಪ್ರತಿನಿಧಿಸುವ ಹಳೆಯ ಕಾವ್ಯಗಳಿಂದ ಹಿಡಿದು ಆಧುನಿಕ ಸಾಹಿತ್ಯದ ತನಕ ಬಹುತೇಕ ಕೃತಿಗಳು ಇವೆ. ಉದಾಹರಣೆಗೆ ಕವಿರಾಜಮಾರ್ಗ, ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ, ಇತ್ಯಾದಿ. ಆಧುನಿಕ ಕಾಲದ ವಿಜ್ಞಾನ ಸಾಹಿತ್ಯವೂ ಕಣಜದಲ್ಲಿ ಅಡಕವಾಗಿದೆ. ಕಣಜದಲ್ಲಿ ಇರುವ ಮಾಹಿತಿಗಳು ಭಾಷೆ, ಸಾಹಿತ್ಯ, ವಿಜ್ಞಾನ, ವಿಜ್ಞಾನಿ, ಸಂಶೋಧನೆ, ಕೃಷಿ, ರೈತರ ಅನುಭವ, ಕನ್ನಡದ ಖ್ಯಾತನಾಮರು, ಸಾಧಕರು, ಇತ್ಯಾದಿ ವಿಭಾಗಗಳಲ್ಲಿ ಇವೆ. ವಿದ್ಯಾರ್ಥಿಗಳಿಗೆ ಲೇಖನ ಬರೆಯುವ ಸ್ಪರ್ಧೆಯ ಮೂಲಕ ವೂ ಕಣಜವು ಲೇಖನಗಳನ್ನು ಪಡೆದಿದೆ[].

ಕಣಜದಲ್ಲಿ ಮಾಹಿತಿ ಸಂಗ್ರಹ ಹೇಗೆ ನಡೆಯುತ್ತದೆ

[ಬದಲಾಯಿಸಿ]
  • ವಿವಿಧ ವಿಶ್ವವಿದ್ಯಾಲಯಗಳು, ಅಧ್ಯಯನ ಸಂಸ್ಥೆಗಳನ್ನು ವಿನಂತಿಸಿಕೊಂಡು ಈಗಾಗಲೇ ಸಿದ್ಧಪಡಿಸಿದ ಮಾಹಿತಿಗಳನ್ನು ಇಂದಿನ ಅಗತ್ಯಕ್ಕೆ ತಕ್ಕಂತೆ ಸಂಗ್ರಹಿಸಿ ಪ್ರಕಟಿಸಲಾಗುವುದು. ಇದಕ್ಕಾಗಿ ಸೂಕ್ತ ಸಾಂಸ್ಥಿಕ ಒಪ್ಪಂದಗಳನ್ನು ಮಾಡಿಕೊಳ್ಳಲಾಗುವುದು.
  • ವಿವಿಧ ಸಾಹಿತಿಗಳು, ಲೇಖಕರು, ಪತ್ರಕರ್ತರು ಬರೆದ ಮಾಹಿತಿಪೂರ್ಣ ಲೇಖನಗಳನ್ನು ಅವರ ಸಮ್ಮತಿ ಪಡೆದು ಪ್ರಕಟಿಸಲಾಗುವುದು.
  • ಪ್ರಸಕ್ತ ಕಾಲಮಾನಕ್ಕೆ ಬೇಕಾದ ಸಂಗತಿಗಳ ಬಗ್ಗೆ ಕನ್ನಡದಲ್ಲಿ ಲೇಖನಗಳನ್ನು ಬರೆಸಿ ಪ್ರಕಟಿಸಲಾಗುವುದು. ಸ್ವಾತಂತ್ರ ಲೇಖನಗಳಲ್ಲದೆ ಅನುವಾದಿತ ಕೃತಿಗಳನ್ನೂ ಸಂಗ್ರಹಿಸಲಾಗುವುದು.
  • ಸಾರ್ವಜನಿಕರು ಜಾಲತಾಣದಲ್ಲೇ ತಮ್ಮ ಲೇಖನಗಳನ್ನು, ಪ್ರತಿಕ್ರಿಯೆಗಳನ್ನು ಬರೆಯುವುದಕ್ಕೆ ಸಾಧನಗಳನ್ನು ಒದಗಿಸಿ ಸಾರ್ವಜನಿಕ ಭಾಗಿತ್ವವನ್ನು ಹೆಚ್ಚಿಸಲಾಗುವುದು.
  • ಐತಿಹಾಸಿಕ ಮತ್ತು ಅಧ್ಯಯನದ ಮಹತ್ವವನ್ನು ಹೊಂದಿರುವ, ಕನ್ನಡ ಸಂಸ್ಕೃತಿ – ಪರಂಪರೆಯನ್ನು ಬಿಂಬಿಸುವ ಎಲ್ಲ ಬಹುಮಾಧ್ಯಮ ಮಾಹಿತಿಗಳನ್ನು ಸಂಗ್ರಹಿಸಲಾಗುವುದು.
  • ಜಗತ್ತಿನ ಆಗುಹೋಗುಗಳನ್ನು ಗಮನಿಸುತ್ತಿರುವ ಆಸಕ್ತರಿಂದ ವಿಷಯ ವಸ್ತುಗಳನ್ನು ಕನ್ನಡ ಭಾಷೆಯಲ್ಲಿ ನಿರೂಪಿಸಿ ಪ್ರಕಟಿಸುವುದು

ಕಣಜದ ಸಂಪಾದನಾ ಕಾರ್ಯ

[ಬದಲಾಯಿಸಿ]

ಯಾವುದೇ ವಿಷಯದ ತಜ್ಞರಾಗಿದ್ದರೆ `ಕಣಜ’ದ ಸಂಪಾದಕೀಯ ತಂಡದಲ್ಲಿ, ಬರಹಗಾರರ ತಂಡದಲ್ಲಿ ಒಬ್ಬರಾಗಿ ಸೇವೆ ನೀಡಲು ಅವಕಾಶವಿರುತ್ತದೆ.ಕಣಜ’ಕ್ಕೆ ಬರುವ ಲೇಖನಗಳನ್ನು ಕಣಜದ ಬರವಣಿಗೆಯ ಶಿಷ್ಟತೆಗೆ ಅನುಗುಣವಾಗಿ ಸಂಪಾದಿಸುವ ಕೆಲಸದಲ್ಲೂ ನೀವು ಭಾಗವಹಿಸಲು ಅವಕಾಶ ನೀಡಲಾಗುತ್ತದೆ .

ಇಷ್ಟ ಅನ್ನಿಸಿದ್ದನ್ನೆಲ್ಲ ಬರೆದು ಕಳಿಸಬಹುದೆ

[ಬದಲಾಯಿಸಿ]

ಬರಹವು ಆದಷ್ಟೂ ವಸ್ತುನಿಷ್ಠರಾಗಿರಬೇಕೇ ಹೊರತು ಯಾವುದೋ ಒಂದು ಪ್ರತಿಪಾದನೆಯನ್ನು ಪರ-ವಿರೋಧವಾಗಿ ಮಂಡಿಸುವ ದಾಖಲೆಯ ರೀತಿ ಇರಬಾರದು. ಅಲ್ಲದೆ ಯಾವುದೇ ಮತ – ಜಾತಿ – ಪಂಥ – ಲಿಂಗಗಳ ಕುರಿತ ಭಾವನಾತ್ಮಕ ಸಂಗತಿಗಳನ್ನು ಹೊಂದಿರಬಾರದು. ಒಟ್ಟಿನಲ್ಲಿ ಬರಹವು ನಿರ್ಲಿಪ್ತವಾಗಬೇಕು ಎಂದಲ್ಲ; ಆಲಿಪ್ತವಾಗಿರಬೇಕು. ವೈಚಾರಿಕ ಬರೆಹಗಳಿಷ್ಟೇ ಆದ್ಯತೆ ನೀಡಲಾಗುತ್ತದೆ.

ಹಸ್ತಾಂತರ

[ಬದಲಾಯಿಸಿ]

ಜೂನ್ ೨೦೧೫ರಿಂದ ಕಣಜ ಜಾಲತಾಣದ ಉಸ್ತುವಾರಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯದ್ದಾಗಿರುತ್ತದೆ[],

ಬಾಹ್ಯ ಸಂಪರ್ಕ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2017-04-22. Retrieved 2015-05-18.
  2. http://kannada.oneindia.com/news/2012/01/30/districts-unicode-kambar-takes-task-karnataka-govt-aid0038.html
  3. http://www.prajavani.net/columns/ಅನುದಾನದಿಂದ-ತುಂಬಿಸಲಾಗದ-ಕನ್ನಡದ-‘ಕಣಜ’