ವಿಷಯಕ್ಕೆ ಹೋಗು

ಕಣಜ (ಕೀಟ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಣಜವು ಈ ಜಾತಿಯ ಸುಸಾಮಾಜಿಕ ಕೀಟಗಳಲ್ಲಿ ಅತ್ಯಂತ ದೊಡ್ಡದು. ಕೆಲವು ಪ್ರಜಾತಿಗಳು ಉದ್ದದಲ್ಲಿ ೫.೫ ಸೆ.ಮಿವರೆಗೆ ಮುಟ್ಟಬಲ್ಲವು. ತುಲನಾತ್ಮಕವಾಗಿ ತಲೆಯ ದೊಡ್ಡ ಮೇಲಂಚು ಮತ್ತು ಸೊಂಟದ ಸ್ವಲ್ಪ ಹಿಂದಿರುವ ಹೊಟ್ಟೆಯ ದುಂಡನೆಯ ಭಾಗದಿಂದ ಈ ಜಾತಿಯ ಕೀಟಗಳಿಂದ ಕಣಜವನ್ನು ವ್ಯತ್ಯಾಸಮಾಡಬಹುದು. ಬಹುತೇಕ ಪ್ರಜಾತಿಗಳು ಕೇವಲ ಏಷ್ಯಾದ ಉಷ್ಣವಲಯಗಳಲ್ಲಿ ಕಾಣಿಸುತ್ತವೆ, ಆದರೆ ಯೂರೋಪಿಯನ್ ಕಣಜವು ಯೂರೋಪ್, ರಷ್ಯಾ, ಉತ್ತರ ಅಮೇರಿಕಾ ಮತ್ತು ಈಶಾನ್ಯ ಏಷ್ಯಾದಾದ್ಯಂತ ವ್ಯಾಪಕವಾಗಿ ಹರಡಿದೆ.

ಇತರ ಸಂಘಜೀವಿ ಕೀಟಗಳಂತೆ, ಕಣಜಗಳು ಕಾಗದದಂಥ ಮೆದು ಪದಾರ್ಥವನ್ನು ಮಾಡಲು ಕಟ್ಟಿಗೆಯನ್ನು ಅಗಿದು ಸಾಮುದಾಯಿಕ ಗೂಡುಗಳನ್ನು ಕಟ್ಟುತ್ತವೆ. ಪ್ರತಿ ಗೂಡು ಒಂದು ರಾಣಿಕಣಜವನ್ನು ಹೊಂದಿರುತ್ತದೆ. ರಾಣಿಕಣಜವು ಮೊಟ್ಟೆಗಳನ್ನು ಇಡುತ್ತದೆ ಮತ್ತು ಇದನ್ನು ಕೆಲಸಗಾರ್ತಿ ಕಣಜಗಳು ಶುಶ್ರೂಷೆ ಮಾಡುತ್ತವೆ. ಕೆಲಸಗಾರ್ತಿ ಕಣಜಗಳು ಆನುವಂಶಿಕವಾಗಿ ಹೆಣ್ಣಾದರೂ ಫಲವತ್ತಾದ ಮೊಟ್ಟೆಗಳನ್ನು ಇಡಲಾರವು. ಬಹುತೇಕ ಪ್ರಜಾತಿಗಳು ಮರಗಳು ಮತ್ತು ಪೊದೆಗಳಲ್ಲಿ ಕಾಣುವಂಥ ಗೂಡುಗಳನ್ನು ಕಟ್ಟುತ್ತವೆ, ಆದರೆ ಕೆಲವು ತಮ್ಮ ಗೂಡುಗಳನ್ನು ನೆಲದ ಕೆಳಗೆ ಅಥವಾ ಇತರ ಕುಳಿಗಳಲ್ಲಿ ಕಟ್ಟುತ್ತವೆ. ಉಷ್ಣವಲಯಗಳಲ್ಲಿ, ಈ ಗೂಡುಗಳು ವರ್ಷವಿಡೀ ಬಾಳಿಕೆ ಬರಬಹುದು, ಆದರೆ ಸಮಶೀತೋಷ್ಣ ಪ್ರದೇಶಗಳಲ್ಲಿ, ಗೂಡು ಚಳಿಗಾಲದ ಅವಧಿಯಲ್ಲಿ ನಾಶವಾಗುತ್ತದೆ, ಮತ್ತು ಒಬ್ಬಂಟಿ ರಾಣಿಕಣಜಗಳು ವಸಂತದವರೆಗೆ ಎಲೆ ಕಸ ಅಥವಾ ಇತರ ರಕ್ಷಣಾತ್ಮಕ ವಸ್ತುವಿನಲ್ಲಿ ಚಳಿನಿದ್ದೆಮಾಡುತ್ತವೆ.

ಕಣಜಗಳನ್ನು ಹಲವುವೇಳೆ ಹಾನಿಕಾರಕ ಕೀಟಗಳೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಇವು ಬೆದರಿಕೆಯುಂಟಾದಾಗ, ತಮ್ಮ ಗೂಡುಕಟ್ಟುವ ಸ್ಥಳಗಳನ್ನು ಆಕ್ರಮಣಕಾರಿಯಾಗಿ ರಕ್ಷಿಸಿಕೊಳ್ಳುತ್ತವೆ. ಯೂರೋಪಿಯನ್ ಹಾರ್ನೆಟ್ ಇದಕ್ಕೆ ಅಪವಾಗಿದೆ ಮತ್ತು ಇದು ಅದರ ಗೂಡಿಗೆ ಹತ್ತಿರವಿರುವವರ ಮೇಲೆ ಕೂಡ ಅಪರೂಪವಾಗಿ ದಾಳಿ ಮಾಡುತ್ತದೆ. ಆದರೆ, ಇತರ ಪ್ರಜಾತಿಗಳೊಂದಿಗೆ ಗೌರವದಿಂದ ವ್ಯವಹರಿಸಬೇಕು ಏಕೆಂದರೆ ಅವುಗಳ ಕೊಂಡಿಗಳು ಜೇನುಹುಳುಗಳ ಕೊಂಡಿಗಳಿಗಿಂತ ಹೆಚ್ಚು ಅಪಾಯಕಾರಿಯಾಗಿರಬಹುದು.[] ಕಣಜಗಳು ತಮ್ಮ ಕೊಂಡಿಗಳನ್ನು ಬೇಟೆಯನ್ನು ಕೊಲ್ಲಲು ಮತ್ತು ಗೂಡುಗಳನ್ನು ರಕ್ಷಿಸಿಕೊಳ್ಳಲು ಬಳಸುತ್ತವೆ. ಕಣಜಗಳ ಕೊಂಡಿಗಳು ಮಾನವರಿಗೆ ಹೆಚ್ಚು ನೋವುಂಟುಮಾಡುತ್ತವೆ ಏಕೆಂದರೆ ಕಣಜದ ವಿಷವು ಬಹಳ ಪ್ರಮಾಣದಲ್ಲಿ ಅಸಿಟೈಲ್‍ಕೋಲಿನ್ ಅನ್ನು ಹೊಂದಿರುತ್ತದೆ. ಒಂದು ಪ್ರತ್ಯೇಕ ಕಣಜವು ಮತ್ತೆಮತ್ತೆ ಕುಟುಕಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. Vetter, Richard S.; Visscher, P. Kirk; Camazine, Scott (1999). "Mass Envenomations by Honey Bees and Wasps" (PDF). Western Journal of Medicine. 170 (4): 223–227. PMC 1305553. PMID 10344177. Retrieved 10 March 2016.


"https://kn.wikipedia.org/w/index.php?title=ಕಣಜ_(ಕೀಟ)&oldid=908378" ಇಂದ ಪಡೆಯಲ್ಪಟ್ಟಿದೆ