ವಿಷಯಕ್ಕೆ ಹೋಗು

ಕಚ್ಚುವುದು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕಡಿತ ಇಂದ ಪುನರ್ನಿರ್ದೇಶಿತ)

ಕಚ್ಚುವುದು ಅನೇಕ ಪ್ರಾಣಿಗಳಲ್ಲಿ ಕಂಡುಬರುವ ದವಡೆಯ ತೆರೆಯುವಿಕೆ ಮತ್ತು ಮುಚ್ಚುವಿಕೆಯನ್ನು ಒಳಗೊಂಡಿರುವ ಒಂದು ಸಾಮಾನ್ಯ ವರ್ತನೆಯಾಗಿದೆ. ಈ ವರ್ತನೆಯು ಸರೀಸೃಪಗಳು, ಸಸ್ತನಿಗಳು, ಮೀನುಗಳು, ಮತ್ತು ಉಭಯಚರಗಳಲ್ಲಿ ಕಂಡುಬರುತ್ತದೆ. ಸಂಧಿಪದಿಗಳು ಕೂಡ ಕಚ್ಚಬಲ್ಲವು. ಕಚ್ಚುವುದು ಒಂದು ದೈಹಿಕ ಕ್ರಿಯೆ, ಒಂದು ಆಕ್ರಮಣ. ಆದರೆ ಒಂದು ಪ್ರಾಣಿಯಲ್ಲಿ ಇದು ಸಾಮಾನ್ಯ ವರ್ತನೆ ಅಥವಾ ಪ್ರತಿಕ್ರಿಯೆಯಾಗಿದೆ, ಅದು ತಿನ್ನುವಾಗ, ವಸ್ತುಗಳನ್ನು ಎತ್ತಿ ಸಾಗಿಸುವಾಗ, ತನ್ನ ಮರಿಗಳಿಗೆ ಆಹಾರವನ್ನು ಮೃದುವಾಗಿಸಿ ಸಿದ್ಧಪಡಿಸುವಾಗ, ತನ್ನ ಶರೀರದ ಮೇಲ್ಮೈಯಿಂದ ಬಾಹ್ಯ ಪರೋಪಜೀವಿಗಳನ್ನು ತೆಗೆಯುವಾಗ, ತನ್ನ ತುಪ್ಪಳ ಅಥವಾ ಕೂದಲಿಗೆ ಅಂಟಿಕೊಂಡ ಸಸ್ಯ ಬೀಜಗಳನ್ನು ತೆಗೆಯುವಾಗ, ತನ್ನನ್ನು ತಾನು ಕೆರೆದುಕೊಳ್ಳುವಾಗ, ಮತ್ತು ಇತರ ಪ್ರಾಣಿಗಳನ್ನು ಅಂದಗೊಳಿಸುವಾಗ ಮತ್ತು ರಕ್ಷಣೆಗಾಗಿ. ಪ್ರಾಣಿ ಕಡಿತಗಳು ಹಲವುವೇಳೆ ಗಂಭೀರ ಸೋಂಕುಗಳು ಮತ್ತು ಸಾವನ್ನು ಉಂಟುಮಾಡುತ್ತವೆ.[] ನಾಯಿ ಕಡಿತಗಳು ಸಾಮಾನ್ಯವಾಗಿವೆ, ಮತ್ತು ಅತ್ಯಂತ ಹೆಚ್ಚಾಗಿ ಮಕ್ಕಳು ಕಚ್ಚಿಸಿಕೊಳ್ಳುತ್ತಾರೆ ಮತ್ತು ಮುಖವು ಅತ್ಯಂತ ಸಾಮಾನ್ಯ ಕಚ್ಚುವ ಸ್ಥಳವಾಗಿರುತ್ತದೆ.

೩೦ ತಿಂಗಳು ಅಥವಾ ಹೆಚ್ಚು ಕಿರಿಯ ಮಾನವ ಮಕ್ಕಳಿಗೂ ಕಚ್ಚುವುದು ಒಂದು ವಯಸ್ಸಿಗೆ ಸೂಕ್ತವಾದ ವರ್ತನೆ ಮತ್ತು ಪ್ರತಿಕ್ರಿಯೆಯಾಗಿದೆ. ವ್ಯತಿರಿಕ್ತವಾಗಿ, ಈ ವಯಸ್ಸಿಗಿಂತ ಹೆಚ್ಚಿನ ಮಕ್ಕಳಿಗೆ ಕಚ್ಚುವುದು ಸೂಕ್ತವಾಗಿಲ್ಲ ಮತ್ತು ತಮ್ಮ ಅಗತ್ಯಗಳು ಹಾಗೂ ಅರುಚಿಗಳನ್ನು ವಿವರಿಸಲು ಮೌಖಿಕ ಕೌಶಲಗಳನ್ನು ಹೊಂದಿರಬೇಕೆಂದು ನಿರೀಕ್ಷಿಸಲಾಗುತ್ತದೆ. ಪುನರ್ನಿರ್ದೇಶನ, ಪರಿಸರವನ್ನು ಬದಲಾಯಿಸುವುದು ಮತ್ತು ಕಚ್ಚುವುದಕ್ಕೆ ಕೋಪ ಮತ್ತು ಹತಾಶೆಯನ್ನು ವ್ಯಕ್ತಪಡಿಸುವ ಸೂಕ್ತ ರೀತಿಗಳ ಬಗ್ಗೆ ಮಾತಾಡುವ ಮೂಲಕ ಪ್ರತಿಕ್ರಿಯಿಸುವುದನ್ನು ಒಳಗೊಂಡಂತೆ ಅನೇಕ ವಿಧಾನಗಳಿಂದ ಕಚ್ಚುವುದನ್ನು ತಡೆಯಬಹುದು. ರೂಢಿಯಾಗಿ ಕಚ್ಚುವ ಶಾಲಾ ವಯಸ್ಸಿನ ಮಕ್ಕಳಿಗೆ, ಅಂದರೆ ೩೦ ತಿಂಗಳಿಗಿಂತ ಹೆಚ್ಚಿನ ವಯಸ್ಸಿನವರಿಗೆ ವೃತ್ತಿಪರ ನೆರವಿನ ಅಗತ್ಯವಿರಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. Cherry, James (2014). Feigin and Cherry's textbook of pediatric infectious diseases – Animal and Human Bites, Morven S. Edwards. Philadelphia, PA: Elsevier/Saunders. ISBN 978-1-4557-1177-2; Access provided by the University of Pittsburgh{{cite book}}: CS1 maint: postscript (link)