ವಿಷಯಕ್ಕೆ ಹೋಗು

ಕಟಾರ್‌ಮಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೂರ್ಯ ದೇವಾಲಯ, ಕಟಾರ್‌ಮಲ್
ಕಟಾರ್‌ಮಲ್ ಸೂರ್ಯ ದೇವಾಲಯ ಸಂಕೀರ್ಣ

ಕಟಾರ್‌ಮಲ್ ಭಾರತದ ಉತ್ತರಾಖಂಡ ರಾಜ್ಯದ ಅಲ್ಮೋರಾ ಜಿಲ್ಲೆಯ ಕುಮಾವ್ಞು ವಿಭಾಗದಲ್ಲಿರುವ ಒಂದು ದೂರದ ಹಳ್ಳಿ.

ಸೂರ್ಯ ದೇವಾಲಯ

[ಬದಲಾಯಿಸಿ]

ಕಟಾರ್‌ಮ‌‌ಲ್ ತುಲನಾತ್ಮಕವಾಗಿ ಅಪರೂಪದ ಸೂರ್ಯ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಇದನ್ನು ಕ್ರಿ.ಶ. 9 ನೇ ಶತಮಾನದಲ್ಲಿ ಕತ್ಯೂರಿ ರಾಜರು ನಿರ್ಮಿಸಿದರು. [] ಒಬ್ಬ ಕತ್ಯೂರಿ ರಾಜನಾದ ಕಟಾರ್‌ಮಲ್ಲಾ ಈ ದೇವಾಲಯವನ್ನು ನಿರ್ಮಿಸಿದನು. ಇದು ಸೂರ್ಯನ ಮುಖ್ಯ ದೇವತೆಯ (ಇದನ್ನು ಬುರ್ಹಾದಿತಾ ಅಥವಾ ವೃದ್ಧಾಧಿತ್ಯ ಎಂದು ಕರೆಯಲಾಗುತ್ತದೆ) ಸುತ್ತ 44 ಸಣ್ಣ ದೇವಾಲಯಗಳನ್ನು ಹೊಂದಿದೆ.[] ಶಿವ-ಪಾರ್ವತಿ ಮತ್ತು ಲಕ್ಷ್ಮಿ-ನಾರಾಯಣರಂತಹ ಇತರ ದೇವತೆಗಳನ್ನೂ ಈ ದೇವಾಲಯ ಸಂಕೀರ್ಣದಲ್ಲಿ ಸ್ಥಾಪಿಸಲಾಗಿದೆ. 10 ನೇ ಶತಮಾನದ ಒಂದು ವಿಗ್ರಹವನ್ನು ಕಳವು ಮಾಡಿದ ನಂತರ ಕೆತ್ತಿದ ಮರದ ಬಾಗಿಲುಗಳು ಮತ್ತು ಫಲಕಗಳನ್ನು ದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ಸಾಗಿಸಲಾಯಿತು. ಗೋಡೆಗಳು ಮತ್ತು ಫಲಕಗಳ ಮೇಲೆ ಇತರ ಕೆತ್ತನೆಗಳನ್ನು ಹೊಂದಿರುವ ಈ ದೇವಾಲಯವನ್ನು 1958 ರ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳು ಹಾಗೂ ಅವಶೇಷಗಳ ಕಾಯ್ದೆಯಡಿಯಲ್ಲಿ ರಾಷ್ಟ್ರೀಯ ಪ್ರಾಮುಖ್ಯದ ಸ್ಮಾರಕವೆಂದು ಘೋಷಿಸಲಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. Sajwan, Venita (17 August 2002). "A lesser-known sun temple at Katarmal". The Tribune. Retrieved 8 July 2013.
  2. "Katarmal Sun temple,Almora". Nainital Tourism. Retrieved 9 July 2013.