ಬಳೆ
ಬಳೆ ಎಂದರೆ ವೃತ್ತಾಕಾರವಾದ ಒಂದು ವಸ್ತು. ಸಾಮಾನ್ಯವಾಗಿ ಹೆಂಗಸರು ತಮ್ಮ ಕೈಗಳಿಗೆ ಧರಿಸುತ್ತಾರೆ. ಬಳೆಗಳು ಸಣ್ಣಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರೂ ಧರಿಸುತ್ತಾರೆ. ಘಳಘಳ ಸದ್ದು ಮಾಡುತ್ತಾ ಎಲ್ಲರನ್ನು ತನ್ನತ್ತ ಸೆಳೆಯುವ ವಿಶಿಷ್ಟ ಗುಣ ಇದ್ದಕ್ಕಿದೆ.[೧]
ಬಳೆಗಳ ವಿಧಗಳು
[ಬದಲಾಯಿಸಿ]- ಗಾಜಿನ ಬಳೆಗಳು-ಮಣ್ಣಿನ ಬಳೆಗಳು
- ರಬ್ಬರ್ ಬಳೆಗಳು
- ಅಲ್ಯೂಮಿನಿಯಮ್ ಬಳೆಗಳು
- ಪ್ಲಾಸ್ಟಿಕ್ ಬಳೆಗಳು
- ಚಿನ್ನದ ಬಳೆಗಳು
- ಬೆಳ್ಳಿಯ ಬಳೆಗಳು
- ಇತರ ಲೋಹದ ಬಳೆಗಳು
ಗಾಜಿನ ಬಳೆಗಳು ಅಥವಾ ಮಣ್ಣಿನ ಬಳೆಗಳು:
[ಬದಲಾಯಿಸಿ]ಗಾಜಿನ ಬಳೆಗಳು ಅಥವಾ ಮಣ್ಣಿನ ಬಳೆಗಳು:ವಿವಿಧ ಬಣ್ಣಗಳಿಂದ ಕೂಡಿದ್ದು ಬಡವರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರು ಇದನ್ನು ಇಷ್ಟಪಡುತ್ತಾರೆ. ಅದರಲ್ಲಿಯೂ ಕೆಂಪು ಮತ್ತು ಹಸಿರು ಬಣ್ಣದ ಬಳೆಗಳು ಮುತೈದೆಯರ ಲಕ್ಷಣವಾಗಿದೆ.ಮಣ್ಣಿನ ಬಳೆಗಳು ಹೆಚ್ಚು ದಪ್ಪಗಿದ್ದು ವಿವಿಧ ಬಣ್ಣಗಳಿಂದ ಆಕಷಕವಾಗಿ ಕಾಣುತ್ತದೆ.
ಪ್ಲಾಸ್ಟಿಕ್ ಬಳೆಗಳು:
[ಬದಲಾಯಿಸಿ]ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳೆಗಳು ಹೊಸ ಜನಾಂಗದ ಯುವತಿಯರನ್ನು ಹೆಚ್ಚು ಸೆಳೆಯುತ್ತದೆ. ಹೆಚ್ಚು ಬಾಳಿಕೆ ಬರುವ ಈ ಬಳೆಗಳು ಬೇರೆ ಬೇರೆ ಗಾತ್ರ ಮತ್ತು ಆಕಾರಗಳಲ್ಲಿಯೂ ದೊರೆಯುತ್ತದೆ.
ಚಿನ್ನದ ಬಳೆಗಳು:
[ಬದಲಾಯಿಸಿ]ಹೆಚ್ಚಾಗಿ ಇದನ್ನು ಶ್ರೀಮಂತರು ಮಾತ್ರ ಧರಿಸುತ್ತಾರೆ.ಮದುವೆ ಮುಂತಾದ ಸಮಾರಂಭಗಳಲ್ಲಿ ಇದು ಹೆಚ್ಚು ಪ್ರಾಶಸ್ತ್ಯವನ್ನು ಹೊಂದಿದೆ.
ಬೆಳ್ಳಿಯ ಬಳೆಗಳು:
[ಬದಲಾಯಿಸಿ]ಇದನ್ನು ಬಳಸುವುದು ಬಲು ವಿರಳ. ಆದರೂ ಬೆಳ್ಳಿಯ ಬಳೆಗೆ ಚಿನ್ನದ ಲೇಪನವನ್ನು ಹಾಕಿ ಬಳಸುವುದು ಇದೆ.
ಇತರ ಲೋಹದ ಬಳೆಗಳು:
[ಬದಲಾಯಿಸಿ]ಲೋಹಗಳಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಹೊರತು ಪಡಿಸಿ ಇತರ ಲೋಹಗಳನ್ನು ಬಳಸುತ್ತಾರೆ. ಇವುಗಳಿಗೆ ಚಿನ್ನ ಅಥವಾ ಬೆಳ್ಳಿಯ ಲೇಪನ ನೀಡಿ ಹೊಳೆಯುವ ಹಾಗೆ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ "ಒನ್ ಗ್ರಾಂ ಗೋಲ್ಡ್" (one gram gold ornaments)[೨] ಹೆಚ್ಚು ಪ್ರಚಲಿತದಲ್ಲಿದೆ.