ಕಾಡಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕಜ್ಜಲ ಇಂದ ಪುನರ್ನಿರ್ದೇಶಿತ)
ತಾಯಿ ತನ್ನ ಮಗನಿಗೆ ಕಾಡಿಗೆ ಹಚ್ಚುತ್ತಿರುವುದು

ಕಾಡಿಗೆ ಸಾಂಪ್ರದಾಯಿಕವಾಗಿ ಸ್ಟಿಬ್ನೈಟ್ಅನ್ನು ರುಬ್ಬಿ ತಯಾರಿಸಲಾದ ಒಂದು ಪ್ರಾಚೀನ ನೇತ್ರ ಪ್ರಸಾಧನ. ಅದನ್ನು ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ, ಆಫ್ರಿಕಾದ ಕೊಂಬು ಮತ್ತು ಪಶ್ಚಿಮ ಆಫ್ರಿಕಾದ ಭಾಗಗಳಲ್ಲಿ ಬಾಹ್ಯರೇಖೆ ಬರೆಯಲು ಮತ್ತು ರೆಪ್ಪೆಗಳನ್ನು ಕಪ್ಪಾಗಿಸಲು ನಯನರೇಖೆ ಪ್ರಸಾಧನವಾಗಿ ಹಾಗೂ ರೆಪ್ಪೆಗೂದಲುಗಳಿಗೆ ಮಸ್ಕಾರಾ ಆಗಿ ವ್ಯಾಪಕವಾಗಿ ಬಳಸಲಾಗುತ್ತದೆ[೧]. ಅದನ್ನು ಹೆಚ್ಚಾಗಿ ಮಹಿಳೆಯರು ಹಚ್ಚಿಕೊಳ್ಳುತ್ತಾರೆ, ಆದರೆ ಕೆಲವು ಪುರುಷರು ಮತ್ತು ಮಕ್ಕಳು ಕೂಡ ಹಚ್ಚಿಕೊಳ್ಳುತ್ತಾರೆ.

ಕಾಡಿಗೆಯನ್ನು ಪ್ರಸಾಧನವಾಗಿ ಭಾರತದಲ್ಲಿ ದೀರ್ಘಕಾಲದಿಂದ ಬಳಸಲಾಗುತ್ತಿದೆ. ಜೊತೆಗೆ, ತಾಯಂದಿರು ಅವುಗಳ ಜನನದ ಕೆಲವೇ ದಿನಗಳಲ್ಲಿ ಶಿಶುಗಳಿಗೆ ಕಾಡಿಗೆ ಹಚ್ಚುತ್ತಿದ್ದರು.

ಭಾರತದ ಅನೇಕ ಭಾಗಗಳಲ್ಲಿ, ವಿಶೇಷವಾಗಿ ದಕ್ಷಿಣ ಭಾರತದಲ್ಲಿ, ಅದೂ ಕರ್ನಾಟಕದಲ್ಲಿ, ಮನೆಯ ಹೆಂಗಸರು ಕಾಡಿಗೆಯನ್ನು ತಯಾರಿಸುತ್ತಾರೆ. ಸ್ಥಳೀಯ ಸಂಪ್ರದಾಯವು ಕಾಡಿಗೆಯನ್ನು ಕಣ್ಣುಗಳಿಗೆ ಬಹಳ ಉತ್ತಮ ಶೀತಕವೆಂದು ಪರಿಗಣಿಸುತ್ತದೆ ಮತ್ತು ಅದು ಬಿಸಿಲಿನಿಂದ ಕಣ್ಣನ್ನು ರಕ್ಷಿಸುತ್ತದೆಂದು ನಂಬುತ್ತದೆ.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಕಾಡಿಗೆ&oldid=737321" ಇಂದ ಪಡೆಯಲ್ಪಟ್ಟಿದೆ