ಕಚಿನ್
Kachin State ကချင်ပြည်နယ် | |
---|---|
![]() Location of Kachin State in Myanmar | |
Country | ![]() |
Region | Northern |
Capital | Myitkyina |
ಸರ್ಕಾರ | |
• Chief Minister | La John Ngan Hsai[೧] (USDP) |
• Legislature | Kachin State Hluttaw |
ಕ್ಷೇತ್ರಫಲ | |
• ಒಟ್ಟು | ೮೯,೦೪೧.೮ km೨ (೩೪,೩೭೯.೨ sq mi) |
ಜನಸಂಖ್ಯೆ | |
• ಒಟ್ಟು | ೧,೬೮೯,೪೪೧ |
• ಸಾಂದ್ರತೆ | ೧೯/km೨ (೪೯/sq mi) |
Demographics | |
• Ethnicities | Kachin, Bamar, Shan, Naga, Chinese, Indians, Gurkha, |
• Religions | Theravada Buddhism, Christianity |
ಸಮಯ ವಲಯ | ಯುಟಿಸಿ+06:30 (MST) |
ಕಚಿನ್ : ಮಯನ್ಮಾರಿನ ಈಶಾನ್ಯ ಭಾಗದಲ್ಲಿರುವ ರಾಜ್ಯ. 1947ರ ಸಂವಿಧಾನಕ್ಕನುಗುಣವಾಗಿ ಏರ್ಪಟ್ಟಿತು. ವಾಯವ್ಯಕ್ಕೆ ಭಾರತ, ಉತ್ತರಕ್ಕೆ ಟಿಬೆಟ್, ಪೂರ್ವಕ್ಕೆ ಚೀನ ಇದರ ಮೇರೆಗಳು. ಬ್ರಿಟಿಷ್ ಬರ್ಮದ ಜಿಲ್ಲೆಗಳಾಗಿದ್ದ ಭಾಮೊ ಮತ್ತು ಮ್ಯಿಚೀನಾಗಳೂ ಉತ್ತರದ ಪುಟಾ-ಒ ಜಿಲ್ಲೆಯೂ ಈ ರಾಜ್ಯಕ್ಕೆ ಸೇರಿವೆ. ಇರಾವಾಡಿ ನದಿಯ ಮೇಲ್ದಂಡೆಯ ಮೇಲಿರುವ ಮ್ಯಿಚೀನಾ ಇದರ ರಾಜಧಾನಿ. ಇದೊಂದು ರೈಲ್ವೆನಿಲ್ದಾಣ. ಭಾಮೊ ಮತ್ತು ಮೋಗೌಂಗ್ ಇತರ ಪಟ್ಟಣಗಳು. ಇಲ್ಲಿಯ ಪರ್ವತಸೀಮೆಯಲ್ಲಿ ವಾಸವಾಗಿರುವ ಜನ ಕಚಿನರು. ರೈಲುಮಾರ್ಗದ ಪ್ರದೇಶದಲ್ಲೂ ದಕ್ಷಿಣದ ಕಣಿವೆಗಳಲ್ಲೂ ಇರುವವರು ಷಾನ್ ಮತ್ತು ಬರ್ಮೀಯರು. ಈ ಜಿಲ್ಲೆಯ ಉತ್ತರ ಗಡಿಸೀಮೆಯ ವಿಚಾರವಾಗಿ ಮಯನ್ಮಾರಿಗೂ ಚೀನಕ್ಕೂ ನಡುವೆ 1960ರ ದಶಕದ ಆದಿಕಾಲದ ವರೆಗೂ ವ್ಯಾಜ್ಯವಿತ್ತು. ಈ ಜಿಲ್ಲೆಯ ಪ್ರತಿನಿಧಿಯಾಗಿ ಕೇಂದ್ರ ಸರ್ಕಾರದಲ್ಲಿ ಒಬ್ಬ ಮಂತ್ರಿಯಿದ್ದಾನೆ. ಸು. 7,00,000 ಜನಸಂಖ್ಯೆಯಿದೆ.
ಉಲ್ಲೇಖಗಳು[ಬದಲಾಯಿಸಿ]
- ↑ "Division and State Administrations". Alternative Asean Network on Burma. 8 July 2011. Archived from the original on 25 ಡಿಸೆಂಬರ್ 2018. Retrieved 21 August 2011.
- ↑ Census Report. The 2014 Myanmar Population and Housing Census. Vol. 2. Naypyitaw: Ministry of Immigration and Population. May 2015. p. 17.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: