ಕಚಾರಿ ಬಾಷೆ
ಭಾಷೆಯ ವಿವರ
[ಬದಲಾಯಿಸಿ]ಕಚಾರಿ- ಬೋಡೋ-ಕಚಾರಿ ಎನ್ನುವುದು ಒಂದು ಗುಂಪಿನ ಹೆಸರು. ಈ ಜನಾಂಗದವರು ಹೆಚ್ಚಾಗಿ ಈಶಾನ್ಯ ಭಾರತ ರಾಜ್ಯವಾದ ಅಸ್ಸಾಂನಲ್ಲಿ ವಾಸಿಸುತ್ತಿದ್ದಾರೆ. [೧]ಕಚಾರಿ ಎಂಬುದು ಇವರು ಪ್ರತಿನಿತ್ಯ ಬಳಸುವ ಭಾಷೆಯಾಗಿದೆ. ಇಲ್ಲಿ ವಯಸ್ಕ ಭಾಷಿಕರು ವಾಸಿಸುತ್ತಿರುವಾಗ, ಅನೇಕ ಮಕ್ಕಳು ಕಚಾರಿಯನ್ನು ತಮ್ಮ ಪ್ರಾಥಮಿಕ ಭಾಷೆಯಾಗಿ ಕಲಿಯುವುದು ಕಡಿಮೆ. ಬದಲಾಗಿ ವಿಶಾಲವಾದ ಅಸ್ಸಾಮೀಸ್ ಮತ್ತು ಬಂಗಾಳಿ ಮಾತನಾಡುವ ಸಮುದಾಯಗಳಿಗೆ ಸೇರಿಕೊಳ್ಳುತ್ತಾರೆ.೧೯೯೭ರಲ್ಲಿ ೬೦,೦೦೦ಕ್ಕಿಂತ ಕಡಿಮೆ ಭಾಷಿಕರನ್ನು ದಾಖಲು ಮಾಡಲಾಗಿದೆ.ಭೌಗೋಳಿಕ ಪ್ರಸರಣ ಹಂಚಿಕೆಯಲ್ಲಿ ತಿಳಿಸುವುದೇನೆಂದರೆ ಕಚಾರಿ ಭಾಷೆಯನ್ನು ಮೊತ್ತದ ೧೬ ಹಳ್ಳಿಗಳಲ್ಲಿ ಮಾತನಾಡುತ್ತಾರೆ ಎಂಬುದು.ಈ ಭಾಷೆ ಭಾರತದ ಎಂಟನೇ ನಿಗದಿತ ಭಾರತೀಯ ಭಾಷೆಯಾಗಿ ೨೦೦೪ರಲ್ಲಿ ಗುರುತಿಸಲ್ಪಟ್ಟಿದೆ.ಬಾಷೆಯ ಅರ್ಥವನ್ನು ಸೂಚಿಸಲು ಸಂಯುಕ್ತ ಪದಗಳ ಅನೇಕ ರೀತಿಯ ನಿದರ್ಶನಗಳನ್ನು ಬಳಸಲಾಗುತ್ತದೆ.ಉದಾಹರಣೆಗೆ 'ಹುಡುಗ' ಎಂಬ ಪದವು ನಿಜವಾಗಿಯೂ ಗಂಡು ಮತ್ತು ಮಗುಗಾಗಿ ಕಚಾರಿ ಪದಗಳ ಸಂಯೋಜನೆಯಾಗಿದೆ.ಕಚಾರಿ ಪಾಲಿಸಿಂತೆಟಿಕ್ಸ್ ಅಲ್ಲದಿದ್ದರೂ, ಅದರ ಕ್ರಿಯಾಪದಗಳು ಅದರ ಅರ್ಥವನ್ನು ಬದಲಾಯಿಸಲು ವಿವರನಾತ್ಮಕ ಕ್ರಿಯವಿಶೇಷಣಗಳು ಕಾರ್ಯನಿರ್ವಹಿಸುತ್ತವೆ.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಪರ್ಯಾಯ ಹೆಸರುಗಳು
[ಬದಲಾಯಿಸಿ]- ಕ್ಯಾಚಾರಿ
- ಬಾರಾ
- ಹಿಲ್ ಕಚಾರಿ
- ಬೊರೊ
- ಬಯಲು ಕಚಾರಿ
ವ್ಯಾಕರಣ
[ಬದಲಾಯಿಸಿ]ಕಚಾರಿ ಭಾಷೆಯು ಹದಿಮೂರು ವ್ಯಂಜನಗಳು ಹಾಗೂ ಮೂರು ಪಠ್ಯೇತರಗಳನ್ನೊಳಗೊಂತೆ ರಚನೆಯಾಗಿದೆ.