ಕಗ್ಗಲಿ

ವಿಕಿಪೀಡಿಯ ಇಂದ
Jump to navigation Jump to search
ಕಗ್ಗಲಿ
Acacia catechu - Köhler–s Medizinal-Pflanzen-003.jpg
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: Plantae
(unranked): Angiosperms
(unranked): Eudicots
(unranked): Rosids
ಗಣ: Fabales
ಕುಟುಂಬ: Fabaceae (or Leguminosae)
ಕುಲ: Senegalia
ಪ್ರಭೇದ: S. catechu
ದ್ವಿಪದ ಹೆಸರು
Senegalia catechu
(L.f.) P.J.H.Hurter & Mabb.
varieties
  • Senegalia catechu var. catechu (L.f.) P.J.H.Hurter & Mabb.
  • Senegalia catechu var. sundra (L.f.) Willd.[೧]
Acacia-catechu-range-map2.png
Range of Senegalia catechu
ಸಮಾನಾರ್ಥಕಗಳು[೨]

ಕಗ್ಗಲಿ ಸುಮಾರು ೫೦ ಆಡಿಗಳಷ್ಟು ಎತ್ತರಕ್ಕೆ ಬೆಳೆಯುವ ಮರ.

ವೈಜ್ಞಾನಿಕ ಹೆಸರು[ಬದಲಾಯಿಸಿ]

ಲೆಗ್ಯುಮಿನೋಸೀ ಕುಟುಂಬದ ಮಿಮೋಸೀ ಉಪಕುಟುಂಬಕ್ಕೆ ಸೇರಿದ ಅಕೇಸಿಯ ಕ್ಯಾಟಿಚೂ ಎಂಬ ಪ್ರಭೇದದ ಮರ. ಇದಕ್ಕೆ ಕಚ್ಮರ ಎಂಬ ವಾಣಿಜ್ಯನಾಮವೂ ಉಂಟು. ತಮಿಳಿನಲ್ಲಿ ಇದನ್ನು ಕರಂಗಲಿ ಎನ್ನುತ್ತಾರೆ. ಇದಕ್ಕೆ ಖದಿರ ಎಂಬ ಹೆಸರೂ ಇದೆ[೩].

ಲಕ್ಷಣಗಳು[ಬದಲಾಯಿಸಿ]

ಇದು ಅತಿಯಾಗಿ ತೇವವುಳ್ಳ ಪ್ರದೇಶಗಳನ್ನು ಬಿಟ್ಟು ನಾನಾ ತರಹೆಯ ನೆಲಗಳಲ್ಲಿ ಸಾಧಾರಣವಾಗಿ ತೋಪುಗಳಾಗಿ ಬೆಳೆಯುತ್ತದೆ. ಬಿಸಿಲಿದ್ದಷ್ಟೂ ಈ ಗಿಡ ಚೆನ್ನಾಗಿ ಬೆಳೆಯುತ್ತದೆ. ಮರ ಮಧ್ಯ ಪ್ರಮಾಣದ್ದು. ಕೊಂಬೆಗಳಲ್ಲಿ ಬಗ್ಗಿದ ಮೊನಚಾದ ಮುಳ್ಳುಗಳಿವೆ. ತೊಗಟೆ ಬೂದುಗಪ್ಪು, ಮಂದ. ಬಿಸಿಲುಕಾಲದಲ್ಲಿ ಕೆಲಕಾಲ ಎಲೆ ಉದುರಿ. ಮೇ ತಿಂಗಳ ಸುಮಾರಿಗೆ ಹೊಸ ಚಿಗುರು ಬಂದು ಅದರೊಂದಿಗೇ ಬಿಳಿಯ ಹೂಗೊಂಚಲು ಮೂಡುತ್ತವೆ. ಕಾಯಿಗಳು ಡಿಸೆಂಬರಿನಲ್ಲಿ ಮಾಗುತ್ತವೆ. ಕಡಿದಾಗ ಸಾಧಾರಣವಾಗಿ ಮತ್ತೆ ಚಿಗುರುವುದು. ಬೇರುಸಸಿಗಳು ಕಂಡುಬರುತ್ತವೆ. ಬುಡದ ತೊಗಟೆಯನ್ನು ಮುಳ್ಳುಹಂದಿಗಳು ಕಡಿದು ಅನೇಕ ಗಿಡಗಳನ್ನು ಹಾಳು ಮಾಡುತ್ತವೆ. ಸ್ವಾಭಾವಿಕ ಪುನರುತ್ಪತ್ತಿ ಮೆಕ್ಕಲು ಮಣ್ಣಿನ ನದೀಪಾತ್ರಗಳಲ್ಲಿ ವಿಶೇಷ. ಬೀಜಗಳನ್ನು ಬಿತ್ತಿಯೂ ಮರಗಳನ್ನು ಬೆಳೆಸಬಹುದು.

ಉಪಯೋಗಗಳು[ಬದಲಾಯಿಸಿ]

ಇದರಿಂದ ದೊರಕುವ ಮುಖ್ಯ ಉತ್ಪನ್ನ ತಾಂಬೂಲದೊಂದಿಗೆ ಉಪಯೋಗಿಸುವ ಕಾಚು (ನೋಡಿ- ಕಾಚು). ಇದರ ಚೌಬೀನೆ ಬಹುಗಟ್ಟಿಯಾಗಿದ್ದು ನೇಗಿಲು, ದೋಣಿಗಳ ಅಡಿಗಟ್ಟು, ಆಯುಧಗಳ ಹಿಡಿ-ಇವುಗಳಿಗೆ ಉಪಯುಕ್ತವಾಗಿದೆ.

ಔಷಧೀಯ ಗುಣಗಳು[ಬದಲಾಯಿಸಿ]

Senegalia catechu flowers

ಸಾಂಪ್ರದಾಯಿಕ ಔಷಧಗಳಲ್ಲಿ ಇದರ ತೊಗಟೆ ಮತ್ತು ಒಳಗಿನ ಮರ ಉಪಯೋಗವಾಗುತ್ತದೆ.[೪]ಆಯುರ್ವೇದದಲ್ಲೂ ಇದರ ಉಪಯೋಗವಿದೆ.[೫]

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. hear.org
  2. International Legume Database & Information Service (ILDIS)
  3. http://www.frlht.org/rasayana/node/82
  4. "Plant Details". envis.frlht.org. Retrieved 2014-10-04. 
  5. Frawley, D.; Ranade, S. (2001). Ayurveda, Nature's Medicine. Lotus. p. 322. ISBN 9780914955955. Retrieved 2014-10-04. 

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Media related to Senegalia catechu at Wikimedia Commons Data related to Acacia catechu at Wikispecies

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕಗ್ಗಲಿ&oldid=712240" ಇಂದ ಪಡೆಯಲ್ಪಟ್ಟಿದೆ