ಕಂಬರ್ಲೆಂಡ್ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಂಬರ್ಲೆಂಡ್ ನದಿ : ದಕ್ಷಿಣ ಕಂಬರ್ಲೆಂಡ್ ಪ್ರಸ್ಥಭೂಮಿಯ ಕಂಬರ್ಲೆಂಡ್ ಪರ್ವತಪ್ರದೇಶದಲ್ಲಿ ಹುಟ್ಟಿ ಕೆಂಟಕಿ ಮತ್ತು ಟೆನೆಸೀಗಳಲ್ಲಿ ಹರಿದು 1100 ಕಿಮೀ ದೂರ ಕ್ರಮಿಸಿ ಒಹಿಯೊ ನದಿಯನ್ನು ಸೇರುತ್ತದೆ. ಬೇಸಗೆಯಲ್ಲಿ ಇದರ ಪ್ರವಾಹ ಕಡಿಮೆ. ಇದು ಮಳೆಗಾಲದಲ್ಲಿ ತುಂಬಿ, ಅನಾಹುತಕಾರಿಯಾಗಿ ಹರಿಯುತ್ತದೆ. ಈ ನದಿಯ ಮತ್ತು ಇದರ ಉಪನದಿಗಳ ಮೇಲೆ ಅನೇಕ ಕಟ್ಟೆಗಳನ್ನು ಕಟ್ಟಿ ನೌಕಾಯಾನಕ್ಕೂ ವಿದ್ಯುದುತ್ಪಾದನೆಗೂ ಸೌಲಭ್ಯ ಕಲ್ಪಿಸಲಾಗಿದೆ.

ಮೂರು ಜಲ ಮೂಲಗಳಿಂದ ರೂಪುಗೊಂಡಿರುವ ಈ ನದಿ ಜಲಪಾತ ಮತ್ತು ಕಂದರವನ್ನು ರೂಪಿಸುತ್ತದೆ. ವಿಟ್ಲೆಕೌಂಟಿಯಲ್ಲಿ 19 ಮೀ (63 ಅಡಿ) ಎತ್ತರದಿಂದ ಧುಮುಕಿ ಜಲಪಾತವನ್ನು ಸೃಷ್ಟಿಸಿದೆ. ಅಲ್ಲೊಂದು ರಾಷ್ಟ್ರೀಯ ಉದ್ಯಾನವಿದೆ (ಕೆಂಟಕಿ). ಇದಕ್ಕೂ ಮುಂಚೆ ಕಂಬರ್ಲೆಂಡ್ ಪ್ರಸ್ಥಭೂಮಿ ನಡುವೆ ಹರಿಯುತ್ತ 90-120 ಎತ್ತರದ ಪ್ರಪಾತವುಳ್ಳ ಕಂದರವನ್ನು ನಿರ್ಮಿಸಿದೆ. ಲಾರೆಲ್, ರಾಕ್ ಕ್ಯಾಸಲ್, ದಕ್ಷಿಣ ಫೋರ್ಕ್ (ಕೆಂಟಕಿ), ಬಜೆ, ಕಾನೆಫೋರ್ಕ್, ಹಾರ್ಪೆತ್ ಮತ್ತು ರೆಡ್ (ಟೆನಿಸ್ಸಿ) ಎಂಬುವು ಮುಖ್ಯ ಉಪನದಿಗಳು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: