ಕಂಬನ್, ಗುಯೋಮುನ್ಡೂರ್

ವಿಕಿಪೀಡಿಯ ಇಂದ
Jump to navigation Jump to search

ಕಂಬನ್, ಗುಯೋಮುನ್ಡೂರ್ : 1888-1945. ಐಸ್ಲೆಂಡ್ ದೇಶದ ಕಾದಂಬರಿಕಾರ ಹಾಗೂ ನಾಟಕಕಾರ. ಐಸ್ಲೆಂಡಿನ ಲಿಟ್ಲ್‌ಬಂiÀÄರ್ನಲ್ಲಿ ಜನಿಸಿದ. ಬಾಲ್ಯವಿದ್ಯಾಭ್ಯಾಸದ ಅನಂತರ ಡೆನ್ಮಾರ್ಕಿನಲ್ಲಿ ನೆಲೆಸಿ, ಡೇನಿಷ್ ಭಾಷೆಯಲ್ಲಿ ಕೃತಿಗಳನ್ನು ರಚಿಸಿದ. ನಾಟಕಗಳಲ್ಲಿ ಸಮಾಜದ ರೀತಿನೀತಿಗಳನ್ನು ಟೀಕಿಸಿದರೂ ವಿಶಾಲಹೃದಯಿ ಯೆನಿಸಿದ್ದ. ಪ್ರಾಚೀನ ಸಾಗಾಗಳಲ್ಲಿ ಆತನಿಗಿರುವ ಉತ್ಕಟ ಪ್ರೇಮವನ್ನು ಅವನ ಕಾದಂಬರಿ ಗಳಾದ ದಿ ವರ್ಜಿನ್ ಆಫ್ ಸ್ಕಾಲ್ ಹೋಲ್ಟ್‌ ಮತ್ತು ಐ ಸಿ ಎ ವಂಡ್ರಸ್ ಲ್ಯಾಂಡ್ಗಳಲ್ಲಿ ಕಾಣಬಹುದು. ಎರಡನೆಯ ಮಹಾಯುದ್ಧವಾದ ಮೇಲೆ ಡೇನಿಷ್ ಪ್ರೇಮಿಗಳು ಆತನನ್ನು ನಾಟ್ವೀ ಪಕ್ಷದವನೆಂದು ತಪ್ಪು ತಿಳಿದು ಕೊಂದರು. (ಟಿ.ನಿ.ಎಸ್.)

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: