ವಿಷಯಕ್ಕೆ ಹೋಗು

ಕಂಪ್ಯೂಟರ್ ಗ್ರಾಫಿಕ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ರೇಖೆಗಳು ಹಾಗೂ ವಿವಿಧ ವರ್ಣಗಳ ಬಳಕೆಯಿಂದ ಇಂದು ಕಂಪ್ಯೂಟರ್ ನಲ್ಲಿ ರಂಗುರಂಗಿನ ಚಿತ್ರಗಳನ್ನು ಹಾಗೂ ವಿವಿಧ ದೃಶ್ಯಗಳನ್ನು ಮೂಡಿಸಬಹುದು ಈ ದೃಶ್ಯಗಳನ್ನು ಹಾಗೂ ಸ್ಥಿರ ಚಿತ್ರಗಳನ್ನು ಪಠ್ಯ ವಿವರಗಳೊಂದಿಗೆ ಕಂಪ್ಯೂಟರ್ ನಲ್ಲಿ ಅಳವಡಿಸುವ ಸೌಲಭ್ಯವಿದೆ.ದ‌‌‌‌‌‌ರ್ಶಕದಲ್ಲಿ ಮೂಡುವ ಅಕ್ಷರಗಳು ಅಥವಾ ಚಿತ್ರಗಳು ಹಲವಾರು ಬಿಂದುಗಳನ್ನೊಳಗೊಂಡಿರುತ್ತವೆ.ಈ ಬಿಂದುಗಳನ್ನು ಪಿಕ್ಸೆಲ್ ಎಂದು ಕರೆಯುತ್ತಾರೆ.ದರ್ಶಕದ ಉದ್ದ ಹಾಗೂ ಅಗಲಕ್ಕೂ ಇರುವ ಈ ಪಿಕ್ಸೆಲ್ ಗಳ ಒಂದು ಅಥವಾ ಸೊನ್ನೆಯಾಗಿರುತ್ತದೆ.ಈ ಮೌಲ್ಯವು ಒಂದಾಗಿದ್ದರೆ ದರ್ಶಕದ ಮೇಲೆ ಒಂದು ಚುಕ್ಕೆಯು ಮೂಡುತ್ತದೆ.ಅಕ್ಷರಗಳು ಅಥವಾ ಚಿತ್ರಗಳನ್ನು ದರ್ಶಕದ ಮೇಲೆ ಮೂಡಿಸಲು ಸೊನ್ನೆ ಅಥವಾ ಒಂದು ಮೌಲ್ಯದ ಪಿಕ್ಸೆಲ್ ಗಳನ್ನು ಬಳಸಲಾಗುತ್ತದೆ. ಗ್ರಾಫಿಕ್ಸ್ ನ ಮಟ್ಟ ಮೂಲತಹ ದ‌‌‌‌‌‌ರ್ಶಕವನ್ನು ಹಾಗೂ ಸಂಗ್ರಹ ಸಾಮರ್ಥ್ಯ ವನ್ನು ಅವಲಂಬಿಸಿರುತ್ತದೆ . ಸಾಮಾನ್ಯ ಮಟ್ಟದ ಗ್ರಾಫಿಕ್ಸ್ ಅಕ್ಷರಗಳನ್ನು ಪ್ರದರ್ಶಿಸಲು ,ಉನ್ನತ ಮಟ್ಟದ ಗ್ರಾಫಿಕ್ಸ್ ಕಂಪ್ಯೂ೦ಟರ್ ಆಧಾರಿತ ತಾಂತ್ರಿಕ ವಿನ್ಯಾಸ ರಚಿಸಲು ಹಾಗೂ ಕಾರ್ಟೂನ್ ಚಿತ್ರಗಳನ್ನು ತಯಾರಿಸಲು ಸಹ ಬಳಸಲಾಗುತ್ತದೆ. ಉತ್ತಮ ಮಟ್ಟದ ಗ್ರಾಫಿಕ್ಸ್ ವ್ಯವಸ್ಥೆಗಿಂತ ಬಹುಪಾಲು ಹೆಚ್ಚಾಗಿರುತ್ತದೆ. ಗ್ರಾಫಿಕ್ಸ್ ನಲ್ಲಿ ಹಿನ್ನಲೆ ಹಾಗೂ ವಿವಿಧ ಭಾಗಗಳನ್ನು ಇಚ್ಚಿಸಿದ ವರ್ಣಗಳೊಂದಿಗೆ ದರ್ಶಕದಲ್ಲಿ ಮೂಡಿಸಬಹುದು.ಕಂಪ್ಯೂ೦ಟರ್ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಬಳಸಿ ಇಂದು ನವರಸ ಬರಿತ ಕಾರ್ಟೂನ್ ಚಿತ್ರಗಳನ್ನು ವಿಶ್ವಾದ್ಯಂತ ತಯಾರಿಸಲಾಗುತ್ತಿದೆ.ಈ ತಂತ್ರಜ್ಞಾನವನ್ನು ಅಳವಡಿಸಿದ ಜಾಹಿರಾತುಗಳನ್ನು ಇಂದು ನಾವು ದೂರದರ್ಶನದಲ್ಲಿ ನೋಡುತ್ತಿದ್ದೇವೆ.