ವಿಷಯಕ್ಕೆ ಹೋಗು

ಕಂಪನಕಾರಿ (ವೈಬ್ರೇಟರ್)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಂಪನಕಾರಿ ಅಥವಾ ವೈಬ್ರೇಟರ್ ಕಂಪನಗಳನ್ನು ಉಂಟುಮಾಡುವ ಒಂದು ಯಂತ್ರ. ಹೆಚ್ಚಾಗಿ ಕಂಪನವನ್ನು ವಿದ್ಯುತ್ ಮೂಟಾರಿನ ಮೂಲಕ ಉತ್ಪಾದಿಸಲಾಗುತ್ತದೆ. ವೈಬ್ರೇಟರ್‌ಗಳಲ್ಲಿ ಹಲವು ಬಗೆಗಳಿವೆ. ಸಾವಾನ್ಯವಾಗಿ ಅವು ಮೊಬೈಲ್ ಫೋನು, ಪೇಜರ್, ಲೈಂಗಿಕ ಆಟಿಕೆಗಳು, ವಿಡಿಯೋ ಗೇಮ್ ಇತ್ಯಾದಿ ಸಲಕರಣೆಗಳ ಒಂದು ಭಾಗವಾಗಿರುತ್ತದೆ.

ಸಲಕರಣೆಯಾಗಿ ವೈಬ್ರೇಟರ್[ಬದಲಾಯಿಸಿ]

ಮೊಬೈಲ್ ಫೋನ್ ಅಥವಾ ಪೇಜರ್‌ನಲ್ಲಿರುವ ಒಂದು ಸಲಕರಣೆಯು ವೈಬ್ರೇಟಿಂಗ್ ಅಲರ್ಟ್ ಕಳುಹಿಸಿದಾಗ ಅದು ಕಂಪಿಸುತ್ತದೆ. ಹಲವು ಹಳೆಯ ವಿದ್ಯುತ್ ರಹಿತ ಬಾಗಿಲು ಗಂಟೆಗಳು ಕೂಡ ಸಪ್ಪಳ ಮಾಡಲು ಒಂದು ಕಂಪನಕಾರಿಯನ್ನು ಹೊಂದಿರುತ್ತದೆ. ಹಚ್ಚೆ ಯಂತ್ರದಲ್ಲಿ ಸೂಜಿಯನ್ನು ಕಂಪಿಸುವ ಸಲಕರಣೆ ಇರುತ್ತದೆ.

ಕೈಗಾರಿಕಾ ವೈಬ್ರೇಟರ್[ಬದಲಾಯಿಸಿ]

ಹಲವು ಕೈಗಾರಿಕೆಗಳಲ್ಲಿ ವೈಬ್ರೇಟರ್‌ಗಳ ಬಳಕೆಯಾಗುತ್ತದೆ. ಬೌಲ್ ಫೀಡರ್, ವೈಬ್ರೇಟರಿ ಫೀಡರ್ ಮತ್ತು ಹಾಪರ್‌ಗಳನ್ನು ಆಹಾರ ಪ್ಯಾಕೇಜಿಂಗ್, ಔಷಧ ತಯಾರಿಕೆ ಹಾಗೂ ರಾಸಾಯನಿಯ ಕೈಗಾರಿಕೆಗಳಾಲ್ಲಿ ದೊಡ್ಡ ಮತ್ತು ಸಣ್ಣ ಸಾಧನಗಳನ್ನು ಬೇರ್ಪಡಿಸಲು ಬಳಸಲಾಗುತ್ತದೆ.

ಕಾಂಕ್ರೀಟ್ ವೈಬ್ರೇಟರ್[ಬದಲಾಯಿಸಿ]

ಕಾಂಕ್ರೀಟನ್ನು ಪೆಟ್ಟಿಸಲು ಉಪಯೋಗಿಸುವ ಸಾಧನ (ವೈಬ್ರೇಟರ್), ಕಾಂಕ್ರೀಟಿನ ಮೇಲ್ಭಾಗದಲ್ಲಿ, ಒಳಭಾಗದಲ್ಲಿ ಮತ್ತು ಸುತ್ತಲೂ ಉಪಯೋಗಿಸಲು ಮೂರು ಬಗೆಯ ಕಂಪಕ ಯಂತ್ರಗಳಿವೆ. ಇವನ್ನು ಉಪಯೋಗಿಸುವುದರಿಂದ ಕಾಂಕ್ರೀಟಿನ ಬಲ ಮತ್ತು ಘನಸಾಂದ್ರತೆ ಹೆಚ್ಚುತ್ತವೆ. ಚಿಕ್ಕಪುಟ್ಟ ಕೆಲಸಗಳಿಗೂ ದೊಡ್ಡ ಕೆಲಸಗಳಾದ ನೀರಾವರಿ ಕಟ್ಟಡದ ಮತ್ತು ಸೇತುವೆ ಕಟ್ಟಡಗಳಲ್ಲೂ ಇವನ್ನು ಬಳಸುತ್ತಾರೆ. ಆದರೆ ಈ ಯಂತ್ರಗಳ ಬೆಲೆ ಹೆಚ್ಚು ಇರುವುದರಿಂದ ಕಾಂಕ್ರೀಟಿಗೆ ಬೀಳುವ ವೆಚ್ಚ ಹೆಚ್ಚು.

ಕಾಂಕ್ರೀಟನ್ನು ಕಟ್ಟಡದ ಕೆಲಸಗಳಲ್ಲಿ ಸುರಿದ ಕೂಡಲೆ ಕಂಪಕಾರಿಯನ್ನು ಮಧ್ಯದಲ್ಲಿ ಇಟ್ಟಾಗ ಕಾಂಕ್ರೀಟು ಕಂಪನಗಳ ಪ್ರಭಾವಕ್ಕೆ ಒಳಪಟ್ಟು ಚೆನ್ನಾಗಿ ಅಡಕವಾಗುತ್ತದೆ. ಕಾಂಕ್ರೀಟನ್ನು ರಸ್ತೆ ಕೆಲಸಗಳಲ್ಲಿ ಉಪಯೋಗಿಸಿದಾಗ ಕಂಪನಕಾರಿಗಳು ಮೇಲ್ಭಾಗದಿಂದ ಕಾಂಕ್ರೀಟನ್ನು ಗಟ್ಟಿಸುತ್ತವೆ.

ಉಲ್ಲೇಖಗಳು[ಬದಲಾಯಿಸಿ]

ಹೊರಗಿನ ಸಂಪರ್ಕ[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: