ಕಂಚುಪ್ರಾಂತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕಂಚುಪ್ರಾಂತಿ
Macaranga gigantea - mahang gajah.JPG
ವೈಜ್ಞಾನಿಕ ವರ್ಗೀಕರಣ
Kingdom: plantae
Division: ಹೂಬಿಡುವ ಸಸ್ಯ
Class: ಮ್ಯಾಗ್ನೋಲಿಯೋಪ್ಸಿಡ
Order: ಯೂಫೋರ್ಬೆಯಾಲ್ಸ್
Family: ಯುಫೋರ್ಬೇಯೇಸಿ
Subfamily: ಅಕಾಲಿಫೋಯಿಡೇಸಿ(Acalyphoideae)
Tribe: ಅಕಾಲಿಫೇಸಿ(Acalypheae)
Subtribe: ಮಾಕರಂಗಿನೇ(Macaranginae)
Genus: ಮಾಕರಂಗ
Thouars
Species

ಮಾಕರಂಗ ಪೆಲ್ಟೇಟ

ಕಂಚುಪ್ರಾಂತಿ(ಚಂದಕಲ,ಬಟ್ಲಚಂದ್ರಿಕೆ,ಉಪ್ಪಿಗೆ)ಮುಂತಾದ ಹೆಸರಿನಿಂದ ಕರೆಯಲ್ಪಡುವ ಸಣ್ಣ ಪ್ರಮಾಣದ ನಿತ್ಯಹರಿದ್ವರ್ಣದ ಮರ. ಪಶ್ಚಿಮಘಟ್ಟ ಪ್ರದೇಶದಲ್ಲಿ ಹೇರಳವಾಗಿ ಕಂಡು ಬರುತ್ತದೆ.

ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ಇದು ಯುಫೋರ್ಬೇಯೇಸಿ(Ephoriaceae)ಕುಟುಂಬಕ್ಕೆ ಸೇರಿದ್ದು,ಮಾಕರಂಗ ಪೆಲ್ಟಟಾ(Macaranga Peltata)ಎಂದು ಸಸ್ಯಶಾಸ್ತ್ರೀಯ ಹೆಸರು.ತುಳು ಬಾಷೆಯಲ್ಲಿ 'ಉಪ್ಪಳಿಗೆ'ಎಂದು ಹೆಸರಿದೆ.

ಕಂಚುಪ್ರಾಂತಿ (ಪಶ್ಚಿಮಘಟ್ಟ)

ಸಸ್ಯದ ಗುಣಲಕ್ಷಣಗಳು[ಬದಲಾಯಿಸಿ]

ಸಣ್ಣ ಪ್ರಮಾಣದ ನಿತ್ಯಹರಿದ್ವರ್ಣದ ಮರ.ಗುರಾಣಿಯಂತಹ ದೊಡ್ಡ ಎಲೆಗಳು.ತ್ವರಿತ ಬೆಳವಣಿಗೆ ಇದೆ.ಸುಲಭವಾಗಿ ಪುನರುತ್ಪತ್ತಿ ಆಗುತ್ತದೆ.ದಾರುವು ಮೃದುವಾಗಿರುತ್ತದೆ.

ಉಪಯೋಗಗಳು[ಬದಲಾಯಿಸಿ]

ಈ ಮರದಿಂದ ರಾಳ ತೆಗೆಯಬಹುದಾಗಿದೆ.ಕಾಗದಕ್ಕೆ ಗಂಜಿ ಕೊಡಲು,ಮುದ್ರೆಗಳಿಗೆ ಉಪಯೋಗವಾಗುತ್ತದೆ.ಇದನ್ನು ಫರಂಗಿಹುಣ್ಣಿಗೆ ಔಷಧವಾಗಿ ಉಪಯೋಗಿಸುವ ಕುರಿತು ಉಲ್ಲೇಖವಿದೆ.

ಅಧಾರ ಗ್ರಂಥಗಳು[ಬದಲಾಯಿಸಿ]

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ