ಕಂಕಣ ಗ್ರಹಣ

ವಿಕಿಪೀಡಿಯ ಇಂದ
Jump to navigation Jump to search


Total solar eclipse
A total solar eclipse occurs where the moon completely covers the sun's disk, as seen in this 1999 solar eclipse. Solar prominences can be seen along the limb (in red) as well as extensive coronal filaments.
Annular solar eclipsePartial solar eclipse
An ಕಂಕಣಗ್ರಹಣ (ಎಡ) occurs when the moon is too far away to completely cover the sun's disk (May 20, 2012). During a partial solar eclipse (right) the moon blocks only part of the sun's disk, changing the appearance of the sun, but otherwise can go unnoticed (October 23, 2014).


ಕಂಕಣಗ್ರಹಣ : ಸೂರ್ಯಗ್ರಹಣದಲ್ಲಿ ಚಂದ್ರಬಿಂಬ ಸೂರ್ಯಬಿಂಬದ ಅಂಚನ್ನು ಮಾತ್ರ ತೆರಪು ಬಿಟ್ಟು ಉಳಿದ ಮಧ್ಯ ಭಾಗವನ್ನು ನಮ್ಮ ದೃಷ್ಟಿಯಿಂದ ಮರೆಮಾಡುವ ಒಂದು ವಿಶೇಷ ಪರಿಸ್ಥಿತಿ (ಆನ್ನುಲರ್ ಎಕ್ಲಿಪ್ಸ್‌), ಸೂರ್ಯಗ್ರಹಣದ ವೇಳೆ ಚಂದ್ರನ ಕಪ್ಪು ಬಿಂಬವನ್ನು ಆವರಿಸಿದ ಸೂರ್ಯಬಿಂಬವು ಬಳೆಯಂತೆ ಪ್ರಜ್ವಲಿಸುತ್ತದೆ. ಸೂರ್ಯಬಿಂಬದ ಹೊಳೆವ ಭಾಗ ಒಂದು ಬಳೆಯಂತೆ ಕಾಣುವುದರಿಂದ ಈ ಹೆಸರು ಬಂದಿದೆ. ಚಂದ್ರ ಗ್ರಹಣದಲ್ಲಿ ಕಂಕಣಗ್ರಹಣ ಸಂಭವಿಸುವುದಿಲ್ಲ.

ಸೂರ್ಯಚಂದ್ರರ ಗಾತ್ರದಲ್ಲಿನ ತೀವ್ರವ್ಯತ್ಯಾಸ ಸೂರ್ಯ-ಭೂಮಿ ದೂರದ ಅಗಾಧತೆ ಹಾಗೂ ಚಂದ್ರ-ಭೂಮಿ ಸಾಮೀಪ್ಯ ಈ ಕಾರಣಗಳಿಂದ ಅಪುರ್ವವಾಗಿ ಭೂಮಿಯ ಮೇಲಣ ಕೆಲವು ಪ್ರದೇಶಗಳಲ್ಲಿ ಕಂಕಣ ಗ್ರಹಣ ಕೇವಲ ಕೆಲವು ನಿಮಿಷಗಳ ಕಾಲ ಕಾಣಿಸಿಕೊಳ್ಳುವುದುಂಟು. ಯಾವುದೇ ಪ್ರದೇಶದಲ್ಲಿ ಸೂರ್ಯಗ್ರಹಣ ದರ್ಶನವೇ ಒಂದು ಅಪೂರ್ವ ಘಟನೆ. ಅದರಲ್ಲೂ ಕಂಕಣಗ್ರಹಣ ತೀರ ವಿರಳ.

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: