ಔತಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಾಬರ್‍ನಿಗಾಗಿ ಔತಣ

ಔತಣ ಎಂದರೆ ದೊಡ್ಡ ಊಟ ಅಥವಾ ಭಾರಿ ಸವಿಯೂಟ. ಇದರಲ್ಲಿ ಪ್ರಧಾನ ತಿನಿಸು/ಖಾದ್ಯಗಳು ಮತ್ತು ಸಿಹಿತಿಂಡಿಗಳು ಇರುತ್ತವೆ, ಮತ್ತು ಹಲವುವೇಳೆ ಯಥೇಷ್ಟವಾಗಿ ವೈನ್ ಅಥವಾ ಬಿಯರ್‍ನಂತಹ ಮದ್ಯಗಳನ್ನು ಬಡಿಸಲಾಗುತ್ತದೆ. ಔತಣವು ಸಾಮಾನ್ಯವಾಗಿ ಧರ್ಮಾರ್ಥ ಕೂಟ, ಸಮಾರಂಭ, ಅಥವಾ ಆಚರಣೆಯಂತಹ ಉದ್ದೇಶವನ್ನು ನೆರವೇರಿಸುತ್ತದೆ. ಹಲವುವೇಳೆ ಇದರ ಮೊದಲು ಅಥವಾ ಆಮೇಲೆ ಒಬ್ಬ ವ್ಯಕ್ತಿಯ ಗೌರವಾರ್ಥ ಭಾಷಣಗಳಿರುತ್ತವೆ.

ಬಹುತೇಕ ಔತಣಗಳಲ್ಲಿ, ಸಭೆಯನ್ನು ದುಂಡು ಮೇಜುಗಳಲ್ಲಿ ಕೂರಿಸಲಾಗುತ್ತದೆ. ಪ್ರತಿ ಮೇಜಿಗೆ ಸುಮಾರು ೮-೧೦ ಜನರಿರುತ್ತಾರೆ.

ಒಟ್ಟಾರೆ, ಔತಣ ಯಾವಾಗ ಆರಂಭವಾಯಿತು ಎಂಬುದರ ಬಗ್ಗೆ ಪುರಾತತ್ವ ಚರ್ಚೆ ಮುಂದುವರೆದಿದೆ. ಪುಷ್ಕಳ ಆಹಾರದಿಂದ ಔತಣಗಳು ಸಾಮಾಜಿಕ ಹಾಗೂ ರಾಜಕೀಯ ಸಂಬಂಧಗಳಾಗಿ ಪರಿವರ್ತನೆಗೊಳ್ಳುವ ಮತ್ತು ತಮ್ಮ ಸಂಪತ್ತನ್ನು ಪ್ರದರ್ಶಿಸುವ ಸ್ಪರ್ಧೆಯಾಗುವ ಕಾರಣದಿಂದ ಔತಣಗಳು ಮುಖ್ಯ ಕಾರ್ಯಕ್ರಮಗಳಾಗಿದ್ದವು ಎಂದು ಒಬ್ಬ ಪುರಾತತ್ವಶಾಸ್ತ್ರಜ್ಞ ವಾದಿಸುತ್ತಾರೆ. ಈ ಔತಣಗಳ ಅವಧಿಯಲ್ಲಿ, ದುಬಾರಿ ಆಹಾರಗಳನ್ನು ಅತಿಥಿಗಳಿಗೆ ಬಡಿಸಲಾಗುತ್ತಿತ್ತು. ಈ ದುಬಾರಿ ವಸ್ತುಗಳು ಯಾವುವು ಎಂದು ಈಗಲೂ ಚರ್ಚೆ ಮುಂದುವರೆದಿದೆ. ಮಾಂಸ ಹಾಗೂ ಅಕ್ಕಿ ಈ ದುಬಾರಿ ವಸ್ತುಗಳಲ್ಲಿ ಸೇರಿರಬಹುದು.

ಔತಣದ ಕಲ್ಪನೆ ಪುರಾತನವಾದದ್ದು. ೧೬ನೇ ಶತಮಾನದಲ್ಲಿ, ಔತಣವು ನಮ್ಮ ಆಧುನಿಕ ಗ್ರಹಿಕೆಗಿಂತ ಬಹಳ ಭಿನ್ನವಾಗಿತ್ತು. ಊಟದ ನಂತರ, ಮೇಜನ್ನು ಒಪ್ಪಮಾಡುತ್ತಿರುವಾಗ ಅತಿಥಿಗಳು ನಿಂತುಕೊಂಡು ಸಿಹಿ ವೈನ್‍ನ್ನು ಕುಡಿಯುತ್ತಿದ್ದರು. ೧೬ನೇ ಶತಮಾನದ ಅವಧಿಯಲ್ಲಿ, ಮೇಜನ್ನು ಒಪ್ಪಮಾಡುತ್ತಿರುವಾಗ ಮತ್ತು ಮನೋರಂಜನೆಗಾಗಿ ಕೋಣೆಯನ್ನು ಸಿದ್ಧಪಡಿಸುತ್ತಿರುವಾಗ ಅತಿಥಿಗಳು ಅಲ್ಲಿ ನಿಂತುಕೊಳ್ಳದೆ ದಿವಾನಖಾನೆ ಅಥವಾ ಔತಣಕೋಣೆಗೆ ಹೋಗುತ್ತಿದ್ದರು.

ಔತಣದ ಕಲ್ಪನೆ ಬೆಳೆದಂತೆ, ಅದು ದಿನದ ಯಾವ ಸಮಯದಲ್ಲಾದರೂ ನಡೆಯಬಹುದಿತ್ತು. ಔತಣ ಕೋಣೆಗಳು ಮನೆಯಿಂದ ಮನೆಗೆ ಬಹಳ ಬದಲಾಗುತ್ತಿದ್ದವು, ಆದರೆ ಸಾಮಾನ್ಯವಾಗಿ ನಿಕಟ ಪ್ರಮಾಣದಲ್ಲಿರುತ್ತಿದ್ದವು, ಉದ್ಯಾನ ಕೋಣೆಯಲ್ಲಿ ಅಥವಾ ಮನೆಯ ಒಳಗೆ.

ಇಂದು, ಔತಣಗಳು ತರಬೇರಿ ಅವಧಿಗಳಿಂದ ಹಿಡಿದು ವಿಧ್ಯುಕ್ತ ವ್ಯವಹಾರ ಉಟಗಳವರೆಗೆ ಅನೇಕ ಉದ್ದೇಶಗಳನ್ನು ನೆರವೇರಿಸುತ್ತವೆ. ವ್ಯವಹಾರ ಔತಣಗಳು ಉದ್ಯಮಿಗಳು ಮತ್ತು ಅವರ ಜತೆಗಾರರ ನಡುವೆ ಬಂಧಗಳನ್ನು ಬಲಪಡಿಸುವ ಒಂದು ಜನಪ್ರಿಯ ರೀತಿಯಾಗಿವೆ. ಒಂದು ಶೈಕ್ಷಣಿಕ ಸಮ್ಮೇಳನದ ಅಂತ್ಯದಲ್ಲಿ ಔತಣವನ್ನು ಆಯೋಜಿಸುವುದು ಸಾಮಾನ್ಯವಾಗಿದೆ.

"https://kn.wikipedia.org/w/index.php?title=ಔತಣ&oldid=960483" ಇಂದ ಪಡೆಯಲ್ಪಟ್ಟಿದೆ