ವಿಷಯಕ್ಕೆ ಹೋಗು

ಓರ್ಛಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(ಮೇಲಿನಿಂದ ಪ್ರದಕ್ಷಿಣಾಕಾರವಾಗಿ) ಚತುರ್ಭುಜ್ ದೇವಾಲಯ, ಜಹಾಂಗೀರ್ ಮೆಹೆಲ್, ರಾಜಾ ಮೆಹೆಲ್, ಲಕ್ಷ್ಮಿ ದೇವಾಲಯ ಓರ್ಛಾ (ಅಥವಾ ಊರ್ಛಾ) ಭಾರತದ ಮಧ್ಯ ಪ್ರದೇಶ ರಾಜ್ಯದ ನಿವಾರಿ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ. ಈ ಪಟ್ಟಣವನ್ನು ೧೫೦೧ರ ನಂತರದ ಸ್ವಲ್ಪ ಸಮಯದಲ್ಲಿ ರುದ್ರ ಪ್ರತಾಪ್ ಸಿಂಗ್ ಇದೇ ಹೆಸರಿನ ಪೂರ್ವದ ದೇಶೀ ರಾಜ್ಯದ ಮುಖ್ಯಸ್ಥಳವಾಗಿ ಸ್ಥಾಪಿಸಿದನು. ಇದು ಭಾರತದ ಬುಂದೇಲ್ ಖಂಡ್ ಪ್ರದೇಶದಲ್ಲಿನ ಮಧ್ಯ ಮತ್ತು ಉತ್ತರ ಭಾಗಗಳನ್ನು ಒಳಗೊಂಡಿತ್ತು.[] ಓರ್ಛಾ ಬೇತ್ವಾ ನದಿಯ ದಡದಲ್ಲಿ, ಉತ್ತರ ಪ್ರದೇಶದ ಝಾನ್ಸಿಯಿಂದ ೧೫ ಕಿ.ಮಿ. ದೂರದಲ್ಲಿ ಸ್ಥಿತವಾಗಿದೆ.[]

ಪ್ರವಾಸಿಗರ ಆಸಕ್ತಿಯ ಸ್ಥಳಗಳು

[ಬದಲಾಯಿಸಿ]
ಜಹಾಂಗೀರ್ ಮೆಹೆಲ್‍ನಿಂದ ರಾಜಾ ಮೆಹೆಲ್‍ನ ನೋಟ. ರಾಮ್ ರಾಜ ದೇವಾಲಯ ಮತ್ತು ಚತುರ್ಭುಜ್ ದೇವಾಲಯಗಳು ಹಿನ್ನೆಲೆಯಲ್ಲಿವೆ.
ಓರ್ಛಾದಲ್ಲಿನ ಚತುರ್ಭುಜ್ ದೇವಾಲಯವು ಹಿಂದೂ ದೇವಾಲಯಗಳ ಪೈಕಿ ಅತ್ಯಂತ ಎತ್ತರದ ವಿಮಾನಗಳಲ್ಲಿ ಒಂದನ್ನು ಹೊಂದಿದ್ದಕ್ಕೆ ಗುರುತಿಸಲ್ಪಟ್ಟಿದೆ. ಇದರ ವಿಮಾನವು ೩೪೪ ಅಡಿ ಎತ್ತರವಿದೆ.

ಉಲ್ಲೇಖಗಳು

[ಬದಲಾಯಿಸಿ]
  1.  Chisholm, Hugh, ed. (1911). "Orchha" . Encyclopædia Britannica. Vol. 20 (11th ed.). Cambridge University Press. p. 170. {{cite encyclopedia}}: Cite has empty unknown parameters: |separator= and |HIDE_PARAMETER= (help)
  2. "Orchha". niwari district ] website. Archived from the original on 2019-07-18. Retrieved 2020-08-09.

ಹೊರಗಿನ ಕೊಂಡಿಗಳು

[ಬದಲಾಯಿಸಿ]
ಚಿತ್ರಗಳು
"https://kn.wikipedia.org/w/index.php?title=ಓರ್ಛಾ&oldid=1184386" ಇಂದ ಪಡೆಯಲ್ಪಟ್ಟಿದೆ