ಓರ್ಛಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Chaturbhuj Temple, Orchha.jpg
Facade of Jahangir Mahal.jpg
Lakshmi Temple, Orchha.jpg
Courtyard inside Raj Mahal.jpg

(ಮೇಲಿನಿಂದ ಪ್ರದಕ್ಷಿಣಾಕಾರವಾಗಿ) ಚತುರ್ಭುಜ್ ದೇವಾಲಯ, ಜಹಾಂಗೀರ್ ಮೆಹೆಲ್, ರಾಜಾ ಮೆಹೆಲ್, ಲಕ್ಷ್ಮಿ ದೇವಾಲಯ ಓರ್ಛಾ (ಅಥವಾ ಊರ್ಛಾ) ಭಾರತದ ಮಧ್ಯ ಪ್ರದೇಶ ರಾಜ್ಯದ ನಿವಾರಿ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ. ಈ ಪಟ್ಟಣವನ್ನು ೧೫೦೧ರ ನಂತರದ ಸ್ವಲ್ಪ ಸಮಯದಲ್ಲಿ ರುದ್ರ ಪ್ರತಾಪ್ ಸಿಂಗ್ ಇದೇ ಹೆಸರಿನ ಪೂರ್ವದ ದೇಶೀ ರಾಜ್ಯದ ಮುಖ್ಯಸ್ಥಳವಾಗಿ ಸ್ಥಾಪಿಸಿದನು. ಇದು ಭಾರತದ ಬುಂದೇಲ್ ಖಂಡ್ ಪ್ರದೇಶದಲ್ಲಿನ ಮಧ್ಯ ಮತ್ತು ಉತ್ತರ ಭಾಗಗಳನ್ನು ಒಳಗೊಂಡಿತ್ತು.[೧] ಓರ್ಛಾ ಬೇತ್ವಾ ನದಿಯ ದಡದಲ್ಲಿ, ಉತ್ತರ ಪ್ರದೇಶದ ಝಾನ್ಸಿಯಿಂದ ೧೫ ಕಿ.ಮಿ. ದೂರದಲ್ಲಿ ಸ್ಥಿತವಾಗಿದೆ.[೨]

ಪ್ರವಾಸಿಗರ ಆಸಕ್ತಿಯ ಸ್ಥಳಗಳು[ಬದಲಾಯಿಸಿ]

ಜಹಾಂಗೀರ್ ಮೆಹೆಲ್‍ನಿಂದ ರಾಜಾ ಮೆಹೆಲ್‍ನ ನೋಟ. ರಾಮ್ ರಾಜ ದೇವಾಲಯ ಮತ್ತು ಚತುರ್ಭುಜ್ ದೇವಾಲಯಗಳು ಹಿನ್ನೆಲೆಯಲ್ಲಿವೆ.
ಓರ್ಛಾದಲ್ಲಿನ ಚತುರ್ಭುಜ್ ದೇವಾಲಯವು ಹಿಂದೂ ದೇವಾಲಯಗಳ ಪೈಕಿ ಅತ್ಯಂತ ಎತ್ತರದ ವಿಮಾನಗಳಲ್ಲಿ ಒಂದನ್ನು ಹೊಂದಿದ್ದಕ್ಕೆ ಗುರುತಿಸಲ್ಪಟ್ಟಿದೆ. ಇದರ ವಿಮಾನವು ೩೪೪ ಅಡಿ ಎತ್ತರವಿದೆ.

ಉಲ್ಲೇಖಗಳು[ಬದಲಾಯಿಸಿ]

  1.  Chisholm, Hugh, ed. (1911). "Orchha" . Encyclopædia Britannica. Vol. 20 (11th ed.). Cambridge University Press. p. 170. {{cite encyclopedia}}: Cite has empty unknown parameters: |separator= and |HIDE_PARAMETER= (help)
  2. "Orchha". niwari district ] website. Archived from the original on 2019-07-18. Retrieved 2020-08-09.

ಹೊರಗಿನ ಕೊಂಡಿಗಳು[ಬದಲಾಯಿಸಿ]

ಚಿತ್ರಗಳು
"https://kn.wikipedia.org/w/index.php?title=ಓರ್ಛಾ&oldid=1063143" ಇಂದ ಪಡೆಯಲ್ಪಟ್ಟಿದೆ