ವಿಷಯಕ್ಕೆ ಹೋಗು

ಓಮ್‍ಮೀಟರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸದೃಶಿ ಓಮ್‍ಮೀಟರ್

ವಿದ್ಯುದ್ರೋಧವನ್ನು ಅಳೆಯುವ ಸಾಧನ ಓಮ್‍ಮೀಟರ್. ಅಳೆಯಬೇಕಾದ ರೋಧದೊಂದಿಗೆ ಶ್ರೇಣಿಯಲ್ಲಿ ಮತ್ತು ಸಮಾಂತರವಾಗಿ ಜೋಡಿಸಿ ರೋಧ ಅಳೆಯಲು ತಕ್ಕುದಾದ ರೀತಿಯಲ್ಲಿ ಯುಕ್ತ ಮಾರ್ಪಾಟು ಮಾಡಿದ ಗ್ಯಾಲ್ವನೊಮೀಟರ್‌ಗಳು ಇವು. ಸಮಾಂತರವಾಗಿ ಜೋಡಿಸಬೇಕಾದ ಓಮ್‌ಮೀಟರ್‌ನ ಮೂಲಕ ಹರಿಯುವ ವಿದ್ಯುತ್ಪ್ರವಾಹ ಅಳೆಯಬೇಕಾದ ರೋಧಕ್ಕೆ ಅನುಲೋಮಾನುಪಾತೀಯವಾಗಿಯೂ ಶ್ರೇಣಿಯಲ್ಲಿ ಜೋಡಿಸಬೇಕಾದ್ದರಲ್ಲಿ ವಿಲೋಮಾನುಪಾತೀಯವಾಗಿಯೂ ಇರುವುದು. ಉಚ್ಚರೋಧಗಳನ್ನು ಅಳೆಯಲು ಬಳಸುವ ಮಾಪಕಕ್ಕೆ ‘ಮೆಗೋಮ್‌ಮೀಟರ್ ಅಥವಾ ಮೆಗ್ಗರ್’ ಎಂದು ಹೆಸರು. ಪ್ರಯೋಗಾಲಯಗಳಲ್ಲಿ ವ್ಹೀಟ್‌ಸ್ಟನ್ ಸೇತು ಎಂಬ ಮಂಡಲದ ಬಳಕೆ ಇದೆ.

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: