ವಿಷಯಕ್ಕೆ ಹೋಗು

ಓಬುಡಿ ಆಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಓಬುಡಿ ಆಟ
Genre(s)ಹೊರಾಂಗಣ ಆಟ
ಆಟಗಾರರುಇಬ್ಬರಿಕ್ಕಿಂತ ಜಾಸ್ತಿ ಜನ ಈ ಆಟವನ್ನು ಆಡಬಹುದು
ವಯಸ್ಸಿನ ವ್ಯಾಪ್ತಿ3+
ಆಟದ ಸಮಯ< 60 min

ಓಬುಡಿ ಆಟ:ಕಂಬಳದಲ್ಲಿ ಕೋಣಗಳನ್ನು ಓಡಿಸುವಾಗ ಕೋಣಗಳಿಗೆ ಪ್ರೋತ್ಸಾಹಿಸಲು ಓಬುಡಿ ಎಂದು ಹೇಳುತ್ತಾರೆ. ಈ ಮಾತನ್ನು ಅನುಕರಿಸಿ ಆಡುವುದರಿಂದ ಈ ಆಟವನ್ನು ಓಬುಡಿ ಆಟ ಎಂದು ಕರೆಯುತ್ತಾರೆ. ಈ ಆಟವನ್ನು ಮೂರು ಅಥವಾ ಹೆಚ್ಚಿನ ಜನರು ಆಡಬಹುದು. []

ಆಟವಾಡಲು ಬೇಕಾಗುವ ವಸ್ತುಗಳು

[ಬದಲಾಯಿಸಿ]
  • ಕಂಬಳದಲ್ಲಿ ಬಳಸುವ ಬೆತ್ತ

ಆಟ ಆಡುವುದು ಹೇಗೆ?

[ಬದಲಾಯಿಸಿ]

ಈ ಆಟದಲ್ಲಿ ಮೂರಕ್ಕಿಂತ ಹೆಚ್ಚು ಮಕ್ಕಳಿದ್ದರೆ, ಎರಡು ಮಕ್ಕಳ ಜೋಡಿ ಕೋಣಗಳ ಪಾತ್ರವನ್ನು ಉಳಿದ ಒಬ್ಬರು ಕೋಣವನ್ನು ಓಡಿಸುವವನ ಪಾತ್ರವನ್ನು ನಿರ್ವಹಿಸುತ್ತಾರೆ. ಹೀಗಾಗಿ, ಕೋಣದ ಪಾತ್ರದಲ್ಲಿರುವ ವ್ಯಕ್ತಿಯು ಎರಡೂ ಕೈಗಳನ್ನು ನೆಲದ ಮೇಲೆ ಇರಿಸುವ ಮೂಲಕ ಕೋಣವನ್ನು ಅನುಕರಿಸುತ್ತಾರೆ. ಕೋಣವನ್ನು ಓಡಿಸುವವನು, ಇಬ್ಬರ ಎರಡು ಅಂಗಿಯನ್ನು ಮೇಲಕ್ಕೆ ಹಿಡಿದು ಅವರನ್ನು ಕೋಣಗಳ ಓಡಿಸುತ್ತಾ ಓಬುಡಿ ಎಂದು ಹೇಳುತ್ತಾನೆ. .[]

ಆಟ ಆಡಲು ಕಾರಣ

[ಬದಲಾಯಿಸಿ]

ತುಳುನಾಡಿನಲ್ಲಿ ಸಾಮಾನ್ಯವಾಗಿ ಈ ಆಟವನ್ನು ಸ್ಪರ್ಧೆಯ ರೂಪದಲ್ಲಿ ಮಾಡುವದರಿಂದ ಮಕ್ಕಳು ಇದರ ಅನುಕರಣೆ ಮಾಡಿ ಈ ಆಟವನ್ನು ಆಡುತ್ತಾರೆ. ಈ ಆಟದಲ್ಲಿ ಕೋಣಗಳನ್ನು ಮುಂದೋಡಿಸುವಾಗ ಓಬುಡಿ ಎಂದು ಹೇಳುವುದರಿಂದ ಈ ಆಟವನ್ನು ಓಬುಡಿ ಆಟ ಎಂದು ಹೇಳುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. "ಓಬುಡಿ ಆಟ". Retrieved 8 July 2024.
  2. Thulunadina Janapada Atagalu (PDF). Shetty, Gananatha. Retrieved 8 July 2024.