ಓಂದಾಸ ಕಣ್ಣಂಗಾರ್

ವಿಕಿಪೀಡಿಯ ಇಂದ
Jump to navigation Jump to search
'ಓಂದಾಸ ಕಣ್ಣಂಗಾರ್'
Omdas 3.JPG
'ಓಂದಾಸ ಕಣ್ಣಂಗಾರ್'
Born
'ಓಂದಾಸ'
Known forಮುಂಬಯಿ ಕರ್ನಾಟಕ ಸಂಘದ ಪತ್ರಿಕೆ, 'ಸ್ನೇಹಸಂಬಂಧ' ದ ಸಂಪಾದಕರಾಗಿದ್ದರು. ಒಳ್ಳೆಯ ಸಂಘಟಕ, ಕನ್ನಡ ಪರಿಚಾರಕ, ’ವಿಶ್ವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ' ಸಿಂಗಪುರದ ಕನ್ನಡ ಸಂಘ', ಮತ್ತು ಮಂಗಳೂರಿನ ’ಹೃದಯವಾಹಿನಿ ಪತ್ರಿಕೆ', ಹಾಗೂ 'ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ'ಯ ಜಂಟಿ ಆಯೋಜನೆಯಲ್ಲಿ ಪ್ರದಾನಿಸಲಾಯಿತು. ಸಂಸ್ಥೆಗಳ ಜೊತೆ ಸಂಪರ್ಕ : * ಕಣ್ಣಂಗಾರ್ ವಿದ್ಯಾ ಪ್ರಚಾರಕ್ ಸಭಾ, ಮುಂಬಯಿ' * 'ತುಳು ವೆಲ್ಫೇರ್ ಅಸೋಸಿಯೇಷನ್,ಡೊಂಬಿವಲಿ' * 'ಮೊಗವೀರ ಯುವಕ ಸಂಘ' ಮುಂಬಯಿ, * 'ಯಕ್ಷ ಕಲಾಭಿಮಾನಿಗಳ ಬಳಗ,ಮುಂಬಯಿ' * 'ಚಾರ್ಕೋಪ್ ಕನ್ನಡಿಗರ ಬಳಗ', ಮುಂಬಯಿ, * 'ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ' ಮೊದಲಾದ ಸಂಘ-ಸಂಸ್ಥೆಗಳು. * 'ಹೆಜಮಾಡಿಯ ವೀರ ಮಾರುತಿ ವ್ಯಾಯಾಮ ಶಾಲೆ'ಯ, 'ಮುಂಬಯಿ ಸಮಿತಿಯ ಅಧ್ಯಕ್ಷ'ರಾಗಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ.

'ಓಂದಾಸ ಕಣ್ಣಂಗಾರ್'[೧] ರವರು, 'ಕರ್ನಾಟಕ ಸಂಘ', ಮುಂಬಯಿನಲ್ಲಿ ಕನ್ನಡವನ್ನು ಕಟ್ಟುವ ಕಾರ್ಯವನ್ನು ಸುಮಾರು ಎರಡೂವರೆ ದಶಕದಿಂದ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ’ಪ್ರಯೋಗ ರಂಗ ತಂಡ’ದ ಮೂಲಕ ಅವರು ೮೦ ರದಶಕದ ಆರಂಭದಲ್ಲಿ 'ಮುಂಬಯಿನ ಕನ್ನಡ ಸಾಂಸ್ಕೃತಿಕ ಲೋಕ'ದಲ್ಲಿ ಕ್ರಿಯಾಶೀಲರಾಗಿ, 'ಸಮಿತಿಯ ಸದಸ್ಯ'ರಾಗಿ, 'ಪದಾಧಿಕಾರಿ'ಯಾಗಿ, ಮಹತ್ತರ ಕಾರ್ಯಗಳನ್ನು ಸಂಘಟಿಸುವಲ್ಲಿ ಯಶಸ್ವಿಯಾಗಿದ್ದಾರೆ. 'ಓಂದಾಸರು', ಕರ್ನಾಟಕ ಸಂಘದ ಕಾರ್ಯದರ್ಶಿಯಾದ ಅವಧಿಯಲ್ಲೇ ಸಂಘಕ್ಕೆ, 'ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಲಭಿಸಿತು. ತನ್ನ ’ಅಮೃತ ಮಹೋತ್ಸವವ’ನ್ನು ಕರ್ನಾಟಕ ಸಂಘವು, ಅನೇಕ ನಗರಗಳಲ್ಲಿ ಉಪನಗರಗಳ ಸಂಘ-ಸಂಸ್ಥೆಗಳೊಂದಿಗೆ ಆಚರಿಸಿದೆ.[೨]

'ಸ್ನೇಹ ಸಂಬಂಧ ಪತ್ರಿಕೆ', ಕರ್ನಾಟಕ ಸಂಘದ ಮಾಸಪತ್ರಿಕೆ[ಬದಲಾಯಿಸಿ]

'ಸ್ನೇಹ ಸಂಬಂಧ ಪತ್ರಿಕೆ', ಸಂಘದ ಮುಖಪತ್ರಿಕೆ, ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಅವರ ಸಿನೆಮಾ ಲೇಖನಗಳು, ಕಥೆಗಳಿಗೆ, ಪ್ರಶಸ್ತಿಗಳು ಲಭಿಸಿವೆ. ಉದಯವಾಣಿಯ ವರ್ಷದ ಪುಸ್ತಕ ಸಮೀಕ್ಷೆಯಲ್ಲಿ ಉತ್ತಮ ಕಥಾ ಸಂಕಲನವಾಗಿ ಆಯ್ಕೆಯಾಗಿದೆ. ’ದಂಗೆ’ ಅವರ ಚೊಚ್ಚಲ ಕಥಾ ಸಂಕಲನ. ಈ ಪುಸ್ತಕಕ್ಕೆ ೨೦೦೬ ರಲ್ಲಿಕಾಸರಗೋಡಿನ ಕರಾವಳಿ ಪ್ರತಿಷ್ಠಾನದ ಸುವರ್ಣ ಕರ್ನಾಟಕ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಹೊರನಾಡಿನಲ್ಲಿ ಹವ್ಯಾಸಿ ರಂಗಭೂಮಿಯ ಸಂಘಟನೆಗಾಗಿ, 'ಕರ್ನಾಟಕ ನಾಟಕ ಅಕಾಡೆಮಿ'ಯ,'ಸುವರ್ಣ ಕರ್ನಾಟಕ ಗೌರವ ಪ್ರಶಸ್ತಿ'ಗೆ ಪಾತ್ರರಾಗಿದ್ದಾರೆ. 'ಬೆಂಗಳೂರಿನ, ’ಜ್ಞಾನ ಮಂದಾರ’ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಅಕಾಡಮಿಯ ನಿರ್ದೇಶಕ' ರಾಗಿ 'ಸಮಾಜ ಸೇವೆ'ಯನ್ನು ಮಾಡುತ್ತಿದ್ದಾರೆ. ಓಂದಾಸರ ಸಿದ್ಧಿ-ಸಾಧನೆಗಳನ್ನು ಗಣನೆಗೆ ತೆಗೆದುಕೊಂಡು ಅವರಿಗೆ ಈಗಾಗಲೇ ಗೌರವ ಸೂಚಿಸಿದ ಸಂಸ್ಥೆಗಳು, ಕೆಳಗೆ ನಮೂದಿಸಿದಂತಿವೆ.[೩]

 • 'ಕಲಾರಂಗ ಬೆಳಗಾಂವಿ'
 • 'ಕಣ್ಣಂಗಾರ್ ವಿದ್ಯಾ ಪ್ರಚಾರಕ್ ಸಭಾ, ಮುಂಬಯಿ'
 • 'ತುಳು ವೆಲ್ಫೇರ್ ಅಸೋಸಿಯೇಷನ್,ಡೊಂಬಿವಲಿ'
 • 'ಮೊಗವೀರ ಯುವಕ ಸಂಘ' ಮುಂಬಯಿ,
 • 'ಯಕ್ಷ ಕಲಾಭಿಮಾನಿಗಳ ಬಳಗ,ಮುಂಬಯಿ'
 • 'ಚಾರ್ಕೋಪ್ ಕನ್ನಡಿಗರ ಬಳಗ', ಮುಂಬಯಿ,
 • 'ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ' ಮೊದಲಾದ ಸಂಘ-ಸಂಸ್ಥೆಗಳು.
 • 'ಹೆಜಮಾಡಿಯ ವೀರ ಮಾರುತಿ ವ್ಯಾಯಾಮ ಶಾಲೆ'ಯ, 'ಮುಂಬಯಿ ಸಮಿತಿಯ ಅಧ್ಯಕ್ಷ'ರಾಗಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ.[೪]
'ವಿಶ್ವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕೃತರಾದ, ಓಂದಾಸ ಕಣ್ಣಂಗಾರ್'

ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

'ಸಿಂಗಪುರದಲ್ಲಿ ಲಭ್ಯವಾದ, 'ವಿಶ್ವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ' 'ಮುಂಬಯಿನಗರದ ಕತೆಗಾರ', 'ಸಂಘಟಕ','ಓಂದಾಸ ಕಣ್ಣಂಗಾರ್'[೫] ರವರು ಕನ್ನಡ ನಾಡು, ನುಡಿಗಾಗಿ ಸಲ್ಲಿಸುತ್ತಿರುವ ಅನುಪಮ ಸೇವೆಗಾಗಿ ’ವಿಶ್ವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ' ಲಭಿಸಿದೆ. 'ಸಿಂಗಪುರದ ಕನ್ನಡ ಸಂಘ', ಮತ್ತು ಮಂಗಳೂರಿನ ’ಹೃದಯವಾಹಿನಿ ಪತ್ರಿಕೆ', ಹಾಗೂ 'ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ'ಯ ಜಂಟಿ ಆಯೋಜನೆಯಲ್ಲಿ ನವೆಂಬರ್, ೨೭ ಮತ್ತು ೨೮ ರಂದು ಎರಡುದಿನಗಳ ಕಾಲ ’ಸಿಂಗಪುರದ ಪಾಲಿಟೆಕ್ನಿಕ್ ಕನ್ವೆನ್ಷನ್ ಸೆಂಟರ್ ಸಭಾಗೃಹ’ದಲ್ಲಿ ’೭ನೇ, ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ’ ನಡೆಯಿತು. ಹೊರನಾಡಿನಲ್ಲಿ ಕನ್ನಡ ನಾಡು-ನುಡಿಗಾಗಿ ಸಲ್ಲಿಸಿದ ಅನುಪಮ ಸೇವೆಗಳನ್ನುಗುರುತಿಸಿ,ಮುಂಬಯಿನ ಸುಪ್ರಸಿದ್ಧ ಕನ್ನಡದ ಕವಿ, 'ಓಂದಾಸ ಕಣ್ಣಂಗಾರ್' [೬] ರವರಿಗೆ ಪ್ರಶಸ್ತಿ ಪ್ರದಾನಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ’ಡಾ.ಬರಗೂರು ರಾಮಚಂದ್ರಪ್ಪ'ನವರು ವಹಿಸಿದ್ದರು. ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಚಿವ, 'ಗೋವಿಂದ ಎಮ್.ಕಾರಜೋಳ,' ಸಿಂಗಪುರದ ಕನ್ನಡ ಸಂಘದ ಅಧ್ಯಕ್ಷ, 'ಡಾ. ವಿಜಯಕುಮಾರ್,' ಕರ್ನಾಟಕದ ಕನ್ನಡ ಅಭಿವೃದ್ಧಿಪ್ರಾಧಿಕಾರದ ಅಧ್ಯಕ್ಷ, 'ಮುಖ್ಯಮಂತ್ರಿ ಚಂದೃ', ಮಂಗಳೂರಿನ ಹೃದಯ ವಾಹಿನಿಪತ್ರಿಕೆಯ ಸಂಪಾದಕ, 'ಕೆ.ಪಿ.ಮಂಜುನಾಥಸಾಗರ್', ಪ್ರಶಸ್ತಿ ಪ್ರದಾನ ಸಮಯದಲ್ಲಿ ಹಾಜರಿದ್ದರು.[೭]

 • ನವೆಂಬರ್,೨,೨೦೧೪ ರಂದು, 'ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್' ನ, 'ಗಿರಿಜಾ ಪಯ್ಯಡೆ ಸಭಾಗೃಹ'ದಲ್ಲಿ 'ಓಂದಾಸ್ ಕಣ್ಣಂಗಾರ್' ರವರಿಗೆ ಶಾಲು,ಸ್ಮರಣಿಕೆ,ಪುಷ್ಪಗುಚ್ಛಗಳನ್ನಿತ್ತು ವೇದಿಕೆಯ ಗಣ್ಯರು ಸನ್ಮಾನಿಸಿದರು.

ಉಲ್ಲೇಖಗಳು[ಬದಲಾಯಿಸಿ]

 1. http://www.daijiworld.com/news/news_disp.asp?n_id=134058
 2. ಉಡುಪಿ ಟುಡೆ.ಕಾಂ,Mumbai: 'Sadanand Suvarna Cultural Pratishtahn’s Karantotsav–2013'
 3. http://www.newskarnataka.com/news/content/gulf/Srinivas-Jokattes-20th-Book-Kalagarbakke-Patalagaradi-Released-in-Metro
 4. http://www.mangalorean.com/printarticle.php?arttype=localnews&newsid=380435
 5. http://www.udayavanienglish.com/news/347977L14-Mumbai--Yakshagana-Festival--Yaksha-Sandesha--by-Karnataka-Sangh.html
 6. http://canaranews.com/Prathiba%20Puraskara-2013%20organised%20by%20Kannangaru%20Vidhya%20Prajaraka%20Sangha.html#.UyUqMT-SySo
 7. ಕನ್ನಡ ವೀಡಿಯೊ