ಒಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಇಟ್ಟಿಗೆಯ ಒಲೆ
ಕಟ್ಟಿಗೆಯನ್ನು ಸುಡುವ ಕಬ್ಬಿಣದ ಒಲೆ

ಒಲೆಯು ಆಹಾರವನ್ನು ಬೇಯಿಸುವ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಲಾದ ಒಂದು ಅಡುಗೆಮನೆಯ ಸಲಕರಣೆ. ಬೇಯಿಸುವ ಪ್ರಕ್ರಿಯೆಗೆ ಒಲೆಗಳು ನೇರ ಶಾಖದ ಅನ್ವಯದ ಮೇಲೆ ಅವಲಂಬಿಸುತ್ತವೆ ಮತ್ತು ಇವು ಬೇಕಿಂಗ್‍ಗಾಗಿ ಬಳಸಲಾದ ಗೂಡೊಲೆಗಳನ್ನು ಕೂಡ ಹೊಂದಿರಬಹುದು. "ಕಟ್ಟಿಗೆಯ ಒಲೆಗಳು" ಶಾಖ ಉತ್ಪಾದಿಸಲು ಕಟ್ಟಿಗೆ ಅಥವಾ ಇದ್ದಿಲಿನ ಸುಡುವಿಕೆಯನ್ನು ಬಳಸುತ್ತವೆ; "ಅನಿಲ ಒಲೆಗಳು" ಅನಿಲದಿಂದ ಶಾಖವನ್ನು ಉತ್ಪಾದಿಸುತ್ತವೆ; ಮತ್ತು "ವಿದ್ಯುತ್ ಒಲೆಗಳು" ವಿದ್ಯುಚ್ಛಕ್ತಿಯನ್ನು ಬಳಸುತ್ತವೆ. ಅನೇಕ ಅಡಿಗೆ ಮೇಲ್ಮೈಗಳನ್ನು ಹೊಂದಿರುವ ಒಲೆಯನ್ನು ರೇಂಜ್ ಎಂದು ಕರೆಯಲಾಗುತ್ತದೆ.[೧]

ಇಂಧನವನ್ನು ದಹಿಸುವ ಒಲೆಯು ಅತ್ಯಂತ ಮೂಲಭೂತ ವಿನ್ಯಾಸವಾಗಿದೆ. ವಿಶ್ವದಲ್ಲಿನ ಸರಿಸುಮಾರು ಅರ್ಧದಷ್ಟು ಜನ (ಮುಖ್ಯವಾಗಿ ಅಭಿವೃದ್ಧಿಹೊಂದುತ್ತಿರುವ ವಿಶ್ವದಲ್ಲಿ) ತಮ್ಮ ಆಹಾರವನ್ನು ಬೇಯಿಸಿಕೊಳ್ಳಲು ಜೀವರಾಶಿ (ಕಟ್ಟಿಗೆ, ಇದ್ದಿಲು, ಬೆಳೆ ಅವಶೇಷಗಳು, ಮತ್ತು ಸೆಗಣಿ) ಮತ್ತು ಕಲ್ಲಿದ್ದಲನ್ನು ಮೂಲಭೂತ ಒಲೆಗಳಲ್ಲಿ ಅಥವಾ ತೆರೆದ ಬೆಂಕಿಯಲ್ಲಿ ದಹಿಸುತ್ತಾರೆ. ಅಲ್ಲಿ ಬಳಕೆಗಾಗಿ ಹೆಚ್ಚು ಇಂಧನ ಸಮರ್ಥ ಮತ್ತು ಪರಿಸರ ಸಮರ್ಥ ಜೀವರಾಶಿ ಒಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಆಧುನಿಕ ಒಲೆಗಳು ಆಹಾರವನ್ನು ಬಿಸಿಮಾಡಲು ಪರ್ಯಾಯ ವಿಧಾನಗಳನ್ನು ಬಳಸಬಹುದು. ಪಾಶ್ಚಾತ್ಯ ದೇಶಗಳಲ್ಲಿ ಇಂದು ನೈಸರ್ಗಿಕ ಅನಿಲ ಮತ್ತು ವಿದ್ಯುತ್ ಒಲೆಗಳು ಅತ್ಯಂತ ಸಾಮಾನ್ಯವಾಗಿವೆ. ಎರಡೂ ಸಮಾನವಾಗಿ ಪರಿಣಾಮಕಾರಿ ಮತ್ತು ಸುರಕ್ಷಿತವಾಗಿವೆ, ಮತ್ತು ಇವೆರಡರ ನಡುವಿನ ಆಯ್ಕೆಯು ಹೆಚ್ಚಾಗಿ ವೈಯಕ್ತಿಕ ಒಲವು ಮತ್ತು ಪೂರ್ವ ಅಸ್ತಿತ್ವದಲ್ಲಿರುವ ಉಪಯುಕ್ತತಾ ಹೊರಗುಂಡಿಗಳ ವಿಷಯವಾಗಿದೆ: ಒಂದು ಮನೆಯು ಅನಿಲ ಪೂರೈಕೆಯನ್ನು ಹೊಂದಿಲ್ಲದಿದ್ದರೆ, ಕೇವಲ ಒಂದು ಅನಿಲ ಒಲೆಯನ್ನು ಉಪಯೋಗಿಸಲು ಅನಿಲ ಪೂರೈಕೆಯನ್ನು ಜೋಡಿಸುವುದು ದುಬಾರಿ ಸಾಹಸವಾಗಿದೆ. ವಿಶೇಷವಾಗಿ, ವೃತ್ತಿಪರ ಬಾಣಸಿಗರು ಹಲವುವೇಳೆ ಅನಿಲ ಒಲೆಗಳನ್ನು ಇಷ್ಟಪಡುತ್ತಾರೆ, ಏಕೆಂದರೆ ಇವು ಶಾಖವನ್ನು ಹೆಚ್ಚು ಉತ್ತಮವಾಗಿ ಮತ್ತು ಹೆಚ್ಚು ಕ್ಷಿಪ್ರವಾಗಿ ನಿಯಂತ್ರಿಸಲು ಅನುಮತಿಸುತ್ತವೆ. ಮತ್ತೊಂದೆಡೆ, ಕೆಲವು ಬಾಣಸಿಗರು ಹಲವುವೇಳೆ ವಿದ್ಯುತ್ ಒಲೆಗಳನ್ನು ಇಷ್ಟಪಡುತ್ತಾರೆ ಏಕೆಂದರೆ ಅವು ಆಹಾರವನ್ನು ಹೆಚ್ಚು ಸಮವಾಗಿ ಬಿಸಿಮಾಡುವ ಸಾಧ್ಯತೆಯಿರುತ್ತದೆ. ಇಂದಿನ ಪ್ರಮುಖ ಬ್ರ್ಯಾಂಡ್‍ಗಳು ಅನಿಲ ಮತ್ತು ವಿದ್ಯುತ್ ಒಲೆಗಳು ಎರಡನ್ನೂ ಒದಗಿಸುತ್ತವೆ, ಮತ್ತು ಅನಿಲ ಒಲೆ ಹಾಗೂ ವಿದ್ಯುತ್ ಗೂಡೊಲೆಯನ್ನು ಒಗ್ಗೂಡಿಸುವ ಉಭಯ ಇಂಧನ ರೇಂಜ್‍ಗಳನ್ನು ಕೂಡ ಒದಗಿಸಬಹುದು.

ಉಲ್ಲೇಖಗಳು[ಬದಲಾಯಿಸಿ]

  1. "Definition of stove - appliance, cookery and building". Oxford University Press. Retrieved 28 March 2012.
"https://kn.wikipedia.org/w/index.php?title=ಒಲೆ&oldid=863186" ಇಂದ ಪಡೆಯಲ್ಪಟ್ಟಿದೆ