ಒಪ್ಪೋ ಫೈಂಡ್ ಎಕ್ಸ್ ೫

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಪ್ಪೋ ಫೈಂಡ್ ಎಕ್ಸ್ ೫ ಸರಣಿಯು ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಪೋನ್‍ಗಳಾಗಿದ್ದು, ಒಪ್ಪೋ ನಿಂದ ತಯಾರಿಸಲ್ಪಟ್ಟಿದೆ. ಇದು ಫೈಂಡ್ ಎಕ್ಸ್ ೩ ಸರಣಿಯ ನಂತರದ್ದಾಗಿದೆ. ಈ ಪೋನ್‍ಗಳನ್ನು ಫೆಬ್ರವರಿ ೨೪ ರಂದು ಬಿಡುಗಡೆಮಾಡಲಾಯಿತು.[೧][೨]

ಒಪ್ಪೋ ಫೈಂಡ್ ಎಕ್ಸ್ ೫

ವಿನ್ಯಾಸ[ಬದಲಾಯಿಸಿ]

ಫೈಂಡ್ ಎಕ್ಸ್ ೫ ಮತ್ತು ಫೈಂಡ್ ಎಕ್ಸ್ ೫ ಪ್ರೋ ಫ್ರೇಮ್ಗಾಗಿ ಅಲ್ಯೂಮಿನಿಯಂ ಅನ್ನು ಬಳಸುತ್ತಾರೆ, ಆದರೆ ಡಿಸ್‍ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‍ನಿಂದ ರಕ್ಷಿಸಲ್ಪಟ್ಟದೆ, ಇದು ಅಂಚುಗಳ ಸುತ್ತಲೂ ಬಾಗಿರುತ್ತದೆ. ಫೈಂಡ್ ಎಕ್ಸ್ ೫ ಪ್ರೋವಿನ ಹಿಂಭಾಗದ ಪ್ಯಾನಲ್ ಅನ್ನು ಸೆರಾಮಿಕ್‍ನಿಂದ ಮತ್ತು ಫೈಂಡ್ ಎಕ್ಸ್ ೫ ಅನ್ನು ಗಾಜಿನಿಂದ ತಯಾರಿಸಿಸಲಾಗಿದೆ. ಬಾಹ್ಯಾರೇಖೆಯ ಕ್ಯಾಮೆರಾ ಮುಂಚಾಚಿರುವಿಕೆ ಮೂರು ಹಿಂಬದಿಯ ಕ್ಯಾಮೆರಾಗಳು ಮತ್ತು ಡ್ಯುಯಲ್-ಎಲ್ಇಡಿಫ್ಲ್ಯಾಸ್ ಅನ್ನು ಹೊಂದಿದೆ. ಫೈಂಡ್ ಎಕ್ಸ್ ೫ ಪ್ರೋ ಫೋನ್ ಫೈಂಡ್ ಎಕ್ಸ್ ೫ ಗಿಂತ ಭಿನ್ನವಾಗಿ ಐಪಿ೬೮ ನೀರಿನ ಪ್ರತಿರೋಧವನ್ನು ಹೊಂದಿದೆ. ಬಣ್ಣ ಆಯ್ಕೆಗಳು ಕ್ರಮವಾಗಿ ಗ್ಲೇಜ಼್ ಕಪ್ಪು ಮತ್ತು ಸೆರಾಮಿಕ್‍ ಬಿಳಿ, ಕಪ್ಪು ಮತ್ತು ಬಿಳಿ.

ವಿಶೇಷಣಗಳು[ಬದಲಾಯಿಸಿ]

ಹಾರ್ಡ್‌ವೇರ್[ಬದಲಾಯಿಸಿ]

ಫೈಂಡ್ ಎಕ್ಸ್ ೫ ಮತ್ತು ಫೈಂಡ್ ಎಕ್ಸ್ ೫ ಪ್ರೋ ಕ್ರಮವಾಗಿ ಸ್ನಾಪ್‍ಡ್ರಾಗನ್ ೮೮೮ ಮತ್ತು ಸ್ನಾಪ್‍ಡ್ರಾಗನ್ ೮ ಜನರಲ್ ೧ ಪ್ರೊಸೆಸರ್‌ಗಳನ್ನು ಬಳಸಲಾಗಿದೆ. ಎರಡು ಸಾಧನಗಳು ಯು.ಎಫ್.ಎಸ್‌ ೩೧ ಅನ್ನು ವಿಸ್ತರಿಸಬಹುದಾದ ಸಂಗ್ರಹಣೆಯೊಂದಿಗೆ ನೀಡಲಾಗಿದೆ. [೩] ಫೈಂಡ್ ಎಕ್ಸ್ ೫ ೮ಜಿಬಿ ಅಥವಾ ೧೨ಜಿಬಿ ಆರ್.ಎ.ಎಮ್. ನೊಂದಿಗೆ ಜೋಡಿಸಲಾಗಿದೆ. ಫೈಂಡ್ ಎಕ್ಸ್ ೫ ಮತ್ತು ಫೈಂಡ್ ಎಕ್ಸ್ ೫ ಪ್ರೋ ಬ್ಯಾಟರಿ ಸಾಮರ್ಥ್ಯ ಕ್ರಮವಾಗಿ ೪೮೦೦ ಮೆಗಾಹರ್ಟ್ಜ್ ಮತ್ತು ೫೦೦೦ ಮೆಗಾಹರ್ಟ್ಜ್ ಆಗಿದೆ. ಫಾಸ್ಟ್ ಚಾಜ್ಂಗ್ ೮೦ ವೋಲ್ಟ್ ಮತ್ತು ವೈರ್ ಲೆಸ್ ಚಾಜ್ಂಗ್ ೩೦ ವೋಲ್ಟ್ ಮತ್ತು ೫೦ ವೋಲ್ಟ್ ನಿಂದ ಬೆಂಬಲಿತವಾಗಿದೆ.

ಕ್ಯಾಮರಾ[ಬದಲಾಯಿಸಿ]

ಫೈಂಡ್ ಎಕ್ಸ್ ೫ ಮತ್ತು ಫೈಂಡ್ ಎಕ್ಸ್ ೫ ಪ್ರೋ ಸಿಲಿಕಾನ್ ಎಕ್ಸ್ ಇಮೇಜ್ ಪ್ರೊಸೆಸಿಂಗ್ ಸಿಪಿಯುನಿಂದ ಒಂದೇ ರೀತಿಯ ಕ್ಯಾಮರಾ ಹಾರ್ಡ್‌ವೇರ್ ಅನ್ನು ಹೊಂದಿದೆ. ಇದು ಸ್ಥಳೀಯ ೧೦ಬಿಟ್ ಕಲರ್ ಕ್ಯಾಪ್ಚರ್ ಅನ್ನು ಒಳಗೊಂಡಿದೆ.

ಸಾಫ್ಟ್‌ವೇರ್[ಬದಲಾಯಿಸಿ]

ಅಂಡ್ರಾಯ್ಡ್ ೧೨ ಅನ್ನು ಆಧರಿಸಿದ ಕಲರ್ ಒಎಸ್೧೨೧ ನಲ್ಲಿ ಫೈಂಡ್ ಎಕ್ಸ್ ೫ ಮತ್ತು ಫೈಂಡ್ ಎಕ್ಸ್ ೫ ಪ್ರೋ ರನ್ ಆಗುತ್ತದೆ.

ಉಲ್ಲೇಖ[ಬದಲಾಯಿಸಿ]

  1. https://www.techadvisor.com/article/745362/oppo-find-x5-everything-you-need-to-know.html
  2. https://m.gsmarena.com/oppo_introduces_iceskin_cooling_case_for_find_x5_pro-news-53706.php
  3. https://www.gsmarena.com/oppo_find_x5-11378.php