ಒಣಕಟ್ಟೆ
ಒಣಕಟ್ಟೆ ಹಡಗು ಕಟ್ಟುವ ಮತ್ತು ದುರಸ್ತಿಪಡಿಸುವ ಕೇಂದ್ರಗಳಲ್ಲಿರುವ ಬೋಗುಣಿಯಂಥ ಪ್ರದೇಶ (ಗ್ರೇವಿಂಗ್ ಡಾಕ್). ಇದರಲ್ಲಿ ನೀರನ್ನು ಒಳಕ್ಕೆ ಬಿಡಲು ಮತ್ತು ಹೊರಕ್ಕೆ ತಳ್ಳಲು ತಕ್ಕ ಬಾಗಿಲುಗಳ ಏರ್ಪಾಡುಗಳಿವೆ. ಹಡಗು ಇದರೊಳಗೆ ಪ್ರವೇಶಿಸಿದ ತರುವಾಯ ನೀರನ್ನು ಹೊರತಳ್ಳಲಾಗುವುದು. ಆಗ ಹಡಗು ತಳದಲ್ಲಿನ ದಿಮ್ಮಿಗಳ ಮೇಲೆ ನಿಲ್ಲುತ್ತದೆ. ಮುಂದೆ ದುರಸ್ತಿ ಮುಂತಾದ ಕ್ರಿಯೆಗಳನ್ನು ನೆರವೇರಿಸುವುದು ಸುಲಭ. ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ಒಣಕಟ್ಟೆಯನ್ನು 1831ರಲ್ಲಿ ಇಂಗ್ಲೆಂಡಿನ ಸೌಥಾಂಪ್ಟನಿನಲ್ಲಿ ಕಟ್ಟಿದರು. ಈ ಕಟ್ಟೆಯಲ್ಲಿ 364 ಮೀ ಉದ್ದವೂ 1,00,000 ಟನ್ನುಗಳ ತೂಕವೂ ಇರುವ ಹಡಗುಗಳನ್ನು ನಿಲ್ಲಿಸಬಹುದು.
ವಿಧಗಳು
[ಬದಲಾಯಿಸಿ]ಹಡಗು ಕಟ್ಟೆಗಳಲ್ಲಿ ಬೇರೆ ಎರಡು ಮಾದರಿಯವು ಇವೆ. ಮೊದಲನೆಯದು ತುಂಬು ಕಟ್ಟೆ (ವೆಟ್ ಡಾಕ್). ಇದರಲ್ಲಿ ಹೆಚ್ಚು ಉಬ್ಬರದ ಮಟ್ಟಕ್ಕೆ ನೀರನ್ನು ಯಾವಾಗಲೂ ಇಟ್ಟಿರುತ್ತಾರೆ. ಎರಡನೆಯದು ತೇಲು ಕಟ್ಟೆ (ಫ್ಲೋಟಿಂಗ್ ಡಾಕ್). ಗೋಡೆಗಳೂ ಒಳಗಿನಿಂದ ನೀರನ್ನು ಪಂಪುಗಳಿಂದ ಎತ್ತಲು ಅನುಕೂಲತೆಗಳೂ ಇರುವ ತೇಲು ಕಟ್ಟಡವಿದು. ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ತೇಲು ಕಟ್ಟೆಗಳು ಇಂಗ್ಲೆಂಡಿನ ಥೇಮ್ಸ್ ನದಿಯ ಮೇಲೆ ಇವೆ.
ಉಲ್ಲೇಖಗಳು
[ಬದಲಾಯಿಸಿ]ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Encyclopædia Britannica, dry-dock
- Carnival Liberty Cruise Ship in Dry Dock in Freeport, Grand Bahamas
- "Docks's Life". All about floating docks of shipbuilding firm "Almaz". St.-Petersburg. Russia.