ಒಡೆಸ್ಸ (ಯು.ಎಸ್.ಎ)
ಒಡೆಸ್ಸ (ಯು.ಎಸ್.ಎ) | |
---|---|
Coordinates: 31°51′48″N 102°21′56″W / 31.86333°N 102.36556°W | |
State | Texas |
Counties | Ector, Midland |
Named for | Odesa (historically also spelled "Odessa"), Ukraine |
Government | |
• Type | Council-Manager |
• City Council | Mayor Javier Joven Mark Matta Steven P. Thompson Detra White Tom Sprawls Mari Willis |
• City Manager | Michael Marrero |
• At-Large | Denise Swanner |
Area | |
• Total | ೫೧.೩೬ sq mi (೧೩೩.೦೨ km2) |
• Land | ೫೧.೦೮ sq mi (೧೩೨.೨೯ km2) |
• Water | ೦.೨೮ sq mi (೦.೭೨ km2) |
Elevation | ೨,೯೦೦ ft (೮೮೪ m) |
Population (2020) | |
• Total | ೧,೧೪,೪೨೮ |
• Density | ೨,೪೧೪.೬೨/sq mi (೯೩೨.೨೯/km2) |
Time zone | UTC−6 (CST) |
• Summer (DST) | UTC−5 (CDT) |
ZIP Codes | 79760–79769 |
Area code | 432 |
FIPS code | 48-53388[೨] |
GNIS feature ID | 1343067[೩] |
Website | www |
ಒಡೆಸ್ಸ (ಯು.ಎಸ್.ಎ) ಅಮೆರಿಕ ಸಂಯುಕ್ತ ಸಂಸ್ಥಾನದ ಪಶ್ಚಿಮ ಟೆಕ್ಸಾಸಿನಲ್ಲಿರುವ ಒಂದು ನಗರ. ಎಕ್ಟರ್ ಕೌಂಟಿಯ ಆಡಳಿತ ಕೇಂದ್ರ.
ಸ್ಥಾಪನೆ
[ಬದಲಾಯಿಸಿ]1884ರಲ್ಲಿ ಟೆಕ್ಸಾಸ್ ಮತ್ತು ಪೆಸಿಫಿಕ್ ರೈಲ್ವೆಯಿಂದ ಇದು ಸ್ಥಾಪಿತವಾಯಿತು. ಈ ನಗರದ ನಿವೇಶನಕ್ಕೆ ಒಡೆಸ್ಸ ಎಂದು ನಾಮಕರಣ ಮಾಡಿದವರು (1881) ರಷ್ಯನ್ನರು. ರೈಲು ರಸ್ತೆ ನಿರ್ಮಾಣಕ್ಕಾಗಿ ಅವರು ಇಲ್ಲಿಗೆ ಬಂದಿದ್ದಾಗ ಈ ಪ್ರದೇಶ ರಷ್ಯದಲ್ಲಿ ತಮ್ಮ ಸ್ಥಳವಾದ ಒಡೆಸ್ಸವನ್ನೇ ಹೋಲುತ್ತಿದ್ದುದರಿಂದ ಇದಕ್ಕೆ ಆ ಹೆಸರನ್ನೇ ಇಟ್ಟರು. ಅಮೆರಿಕ ಸಂಯುಕ್ತಸಂಸ್ಥಾನದ ಅತ್ಯಂತ ದೊಡ್ಡ ಉಲ್ಕಾಪಾತದ ಕುಳಿಗಳಲ್ಲೊಂದು ಈ ನಗರದ ಬಳಿ ಇದೆ. ಅದರ ವ್ಯಾಸ 600 ಅಡಿ, ಆಳ 150 ಅಡಿ.
ವ್ಯಾಪಾರ-ವಹಿವಾಟು
[ಬದಲಾಯಿಸಿ]ಇದು ಮುಖ್ಯ ವ್ಯಾಪಾರಕೇಂದ್ರ, ಉಣ್ಣೆ, ಪೆಟ್ರೋಲಿಯಂ ಮತ್ತು ದನಕರುಗಳನ್ನು ಹೆಚ್ಚಾಗಿ ನಿರ್ಯಾತ ಮಾಡಲಾಗುತ್ತದೆ. ರಾಸಾಯನಿಕ ವಸ್ತು, ಹಬೆಪಾತ್ರೆ, ಉಪಕರಣ ಪೆಟ್ಟಿಗೆ, ಅಣಿಕಟ್ಟು, ಸೀಸ, ಹಂಚು-ಇವು ಇಲ್ಲಿ ತಯಾರಾಗುವ ಮುಖ್ಯ ವಸ್ತುಗಳು. ಕಬ್ಬಿಣದ ಕಾರ್ಖಾನೆಯೂ ತೈಲಶುದ್ಧೀಕರಣ ಕೇಂದ್ರವೂ ಇವೆ. 1944ರಲ್ಲಿ ಒಂದು ದೊಡ್ಡ ತೈಲಶುದ್ಧೀಕರಣ ಕೇಂದ್ರವನ್ನು ಇಲ್ಲಿ ಸ್ಥಾಪಿಸಲಾಯಿತು.
ಆಡಳಿತ
[ಬದಲಾಯಿಸಿ]ಸಭಾ-ವ್ಯವಸ್ಥಾಪಕ ಪದ್ಧತಿಯಲ್ಲಿ (ಕೌನ್ಸಿಲ್ ಮ್ಯಾನೇಜರ್) ಈ ನಗರದ ಆಡಳಿತ ನಡೆಯುತ್ತದೆ. ಸಭಾಸದಸ್ಯರನ್ನು ಎರಡು ವರ್ಷಗಳಿಗೊಂದು ಸಾರಿ ಆಯ್ಕೆ ಮಾಡಲಾಗುತ್ತದೆ. ನೀರು ಸರಬರಾಯಿ ಮತ್ತು ನಗರ ನೈರ್ಮಲ್ಯದ ಹೊಣೆ ಪುರಸಭೆಯದು. ಇಲ್ಲಿ ಎರಡು ದೊಡ್ಡ ಆರೋಗ್ಯಕೇಂದ್ರಗಳಿವೆ.
ಬೆಳವಣಿಗೆ
[ಬದಲಾಯಿಸಿ]1920ರ ದಶಕದ ಉತ್ತರಾರ್ಧದಲ್ಲಿ ಇಲ್ಲಿ ತೈಲನಿಕ್ಷೇಪ ಪತ್ತೆಯಾದ ಮೇಲೆ ಒಡಸ್ಸ ಶೀಘ್ರವಾಗಿ ಬೆಳೆಯುತ್ತಿದೆ. 1930ರಲ್ಲಿ ಕೇವಲ 3,000 ಇದ್ದ ಜನಸಂಖ್ಯೆ ತೊಂಬತ್ತು ವರ್ಷಗಳಲ್ಲಿ (೨೦೨೦)೧,೧೪,೪೨೮ ಕ್ಕೆ ಏರಿದೆ. ಅತ್ಯಧಿಕ ತೈಲನಿಕ್ಷೇಪವಿರುವ ಪರ್ಮಿಯನ್ ಕೊಳ್ಳದ ಭೌಗೋಳಿಕ ಕೇಂದ್ರದಲ್ಲಿ ಇರುವುದರಿಂದ ಇದು ಪೆಟ್ರೋಲಿಯಂ ಕೈಗಾರಿಕೆಯ ಮುಖ್ಯ ವಿತರಣ ಮತ್ತು ಸೇವಾ ಸ್ಥಳವಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "2019 U.S. Gazetteer Files". United States Census Bureau. Retrieved August 7, 2020.
- ↑ "U.S. Census website". United States Census Bureau. Retrieved 2008-01-31.
- ↑ "US Board on Geographic Names". United States Geological Survey. 2007-10-25. Retrieved 2008-01-31.