ಒಗ್ಗಟ್ಟು
ಒಗ್ಗಟ್ಟು ಎಂದರೆ ಆಸಕ್ತಿಗಳು, ಧ್ಯೇಯಗಳು, ಮಾನದಂಡಗಳು, ಮತ್ತು ಸಹಾನುಭೂತಿಗಳ ಐಕಮತ್ಯಗಳನ್ನು ಉತ್ಪತ್ತಿ ಮಾಡುವ ಅಥವಾ ಅವುಗಳನ್ನು ಆಧರಿಸಿರುವ ಐಕಮತ್ಯ (ಉದಾಹರಣೆಗೆ ಗುಂಪಿನ ಅಥವಾ ವರ್ಗದ). ಅದು ಜನರನ್ನು ಒಟ್ಟಾಗಿ ಒಬ್ಬರಂತೆ ಬಂಧಿಸುವ ಸಮಾಜದಲ್ಲಿನ ಬಂಧಗಳನ್ನು ಸೂಚಿಸುತ್ತದೆ. ಈ ಪದವನ್ನು ಸಾಮಾನ್ಯವಾಗಿ ಸಮಾಜಶಾಸ್ತ್ರ ಮತ್ತು ಇತರ ಸಮಾಜ ವಿಜ್ಞಾನಗಳು ಜೊತೆಗೆ ತತ್ತ್ವಶಾಸ್ತ್ರದಲ್ಲಿ ಅಥವಾ ಕ್ಯಾಥೊಲಿಕ್ ಸಾಮಾಜಿಕ ಬೋಧನೆಯಲ್ಲಿ ಬಳಸಲಾಗುತ್ತದೆ.[೧] ಜೊತೆಗೆ, ಒಗ್ಗಟ್ಟು ಕ್ರಿಶ್ಚಿಯನ್ ಪ್ರಜಾಪ್ರಭುತ್ವ ರಾಜಕೀಯ ಸಿದ್ಧಾಂತದಲ್ಲಿ ಮೂಲ ಪರಿಕಲ್ಪನೆಯಾಗಿದೆ.
ಯಾವುದು ಒಗ್ಗಟ್ಟಿನ ತಳಹದಿಯನ್ನು ರೂಪಿಸುತ್ತದೆ ಎಂಬುದು ಸಮಾಜಗಳ ನಡುವೆ ಬದಲಾಗುತ್ತದೆ. ಸರಳ ಸಮಾಜಗಳಲ್ಲಿ ಅದು ಮುಖ್ಯವಾಗಿ ಬಾಂಧವ್ಯ ಮತ್ತು ಹಂಚಿಕೊಂಡ ಮೌಲ್ಯಗಳ ಮೇಲೆ ಆಧಾರಿತವಾಗಿರಬಹುದು. ಹೆಚ್ಚು ಸಂಕೀರ್ಣ ಸಮಾಜಗಳಲ್ಲಿ ಸಾಮಾಜಿಕ ಒಗ್ಗಟ್ಟಿನ ಭಾವಕ್ಕೆ ಯಾವುದು ಕೊಡುಗೆ ನೀಡುತ್ತದೆ ಎಂಬುದಕ್ಕೆ ವಿವಿಧ ಸಿದ್ಧಾಂತಗಳಿವೆ. ಪ್ರತಿ ವರ್ಷದ ಡಿಸೆಂಬರ್ ೨೦ ಅಂತರರಾಷ್ಟ್ರೀಯ ಒಗ್ಗಟ್ಟು ದಿನವಾಗಿದೆ ಮತ್ತು ಇದನ್ನು ಒಂದು ಅಂತರರಾಷ್ಟ್ರೀಯ ಆಚರಣೆಯಾಗಿ ಗುರುತಿಸಲಾಗಿದೆ.
ಸಮಾಜಶಾಸ್ತ್ರಜ್ಞ ಡರ್ಕ್‌ಹೈಮ್‍ರ ಪ್ರಕಾರ, ಸಾಮಾಜಿಕ ಒಗ್ಗಟ್ಟಿನ ಪ್ರಕಾರಗಳು ಸಮಾಜದ ಪ್ರಕಾರಗಳೊಂದಿಗೆ ಪರಸ್ಪರ ಸಂಬಂಧಿಸಿವೆ. ದ ಡಿವಿಜ಼ನ್ ಆಫ಼್ ಲೇಬರ್ ಇನ್ ಸೊಸೈಟಿಯಲ್ಲಿ ಡರ್ಕ್‌ಹೈಮ್ ತಮ್ಮ ಸಮಾಜಗಳ ಅಭಿವೃದ್ಧಿಯ ಸಿದ್ಧಾಂತದ ಭಾಗವಾಗಿ ಯಾಂತ್ರಿಕ ಮತ್ತು ಜೈವಿಕ ಒಗ್ಗಟ್ಟು ಪದಗಳನ್ನು ಪರಿಚಯಿಸಿದರು. ಯಾಂತ್ರಿಕ ಒಗ್ಗಟ್ಟನ್ನು ವ್ಯಕ್ತಪಡಿಸುವ ಸಮಾಜದಲ್ಲಿ, ಅದರ ಅಂಟಿಕೆ ಮತ್ತು ಏಕೀಕರಣವು ವ್ಯಕ್ತಿಗಳ ಏಕರೂಪತೆಯಿಂದ ಬರುತ್ತದೆ—ಜನರಿಗೆ ಹೋಲಿಕೆಯ ಕೆಲಸ, ಶೈಕ್ಷಣಿಕ ಹಾಗೂ ಧಾರ್ಮಿಕ ತರಬೇತಿ, ಮತ್ತು ಜೀವನಶೈಲಿಯ ಮೂಲಕ ಕೂಡಿದ್ದೇವೆಂದು ಅನಿಸುತ್ತದೆ. ಯಾಂತ್ರಿಕ ಒಗ್ಗಟ್ಟು ಸಾಮಾನ್ಯವಾಗಿ "ಸಾಂಪ್ರದಾಯಿಕ" ಮತ್ತು ಸಣ್ಣ ಪ್ರಮಾಣದ ಸಮಾಜಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಹೆಚ್ಚು ಸರಳ ಸಮಾಜಗಳಲ್ಲಿ (ಉದಾ. ಬುಡಕಟ್ಟು), ಒಗ್ಗಟ್ಟು ಸಾಮಾನ್ಯವಾಗಿ ಕುಟುಂಬ ಜಾಲಗಳ ರಕ್ತಸಂಬಂಧದ ಬಂಧಗಳ ಮೇಲೆ ಆಧಾರಿತವಾಗಿರುತ್ತದೆ. ಜೈವಿಕ ಒಗ್ಗಟ್ಟು ಕೆಲಸದ ಪ್ರಾವೀಣ್ಯ ಮತ್ತು ಜನರ ನಡುವಿನ ಪೂರಕತೆಗಳಿಂದ ಏಳುವ ಪರಸ್ಪರಾವಲಂಬನೆಯಿಂದ ಬರುತ್ತದೆ—ಇದು "ಆಧುನಿಕ" ಮತ್ತು "ಔದ್ಯೋಗಿಕ" ಸಮಾಜಗಳಲ್ಲಿ ಉಂಟಾಗುವ ಒಂದು ಬೆಳವಣಿಗೆಯಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Adamiak, Stanisław; Chojnacka, Ewa; Walczak, Damian (1 December 2013). "Social Security in Poland – cultural, historical and economical issues". Copernican Journal of Finance & Accounting. 2 (2): 11–26. doi:10.12775/cjfa.2013.013. Retrieved 19 March 2018 – via wydawnictwoumk.pl.