ಐ.ಎನ್.ಎಸ್ ಜಲಾಶ್ವ
ಗೋಚರ
೨೦೦೭ ರಲ್ಲಿ ಜಲಾಶ್ವ ನೌಕೆ | |
ವೃತ್ತಿಜೀವನ (ಭಾರತ) | |
---|---|
ನಿರ್ಮಾಣಾರಂಭ: | ೮ ಆಗಸ್ಟ್, ೧೯೬೬ |
ಬಿಡುಗಡೆ: | ೩ ಆಗಸ್ಟ್, ೧೯೬೮ |
ಪಡೆದಿದ್ದು: | ೧೭ ಜನವರಿ, ೨೦೦೭ |
ಧ್ಯೇಯ: | "The fearless pioneers" |
ವಿಧಿ: | ಭಾರತೀಯ ನೌಕಾ ಸೇನೆಯ ಸೇವೆಯಲ್ಲಿದೆ |
ಸಾಮಾನ್ಯ ವಿವರಗಳು | |
ವರ್ಗ ಮತ್ತು ನಮೂನೆ: | ಆಸ್ಟಿನ್ ವರ್ಗದ ಉಭಯ ಸಾರಿಗೆ ನೌಕೆ |
ಉದ್ದ: | 173.7 meters (570 feet) overall, 167 meters (548 feet) waterline |
ಬೀಮ್: | 30.4 meters (100 feet) extreme, 25.6 meters (84 feet) waterline |
ನೋದನ: | Two boilers, two steam turbines, two shafts; 24,000 shp |
ಸಾಮರ್ಥ್ಯ: | 900-1000 troops |
ಪೂರಕ: | ೨೮ ಮೇಲಾಧಿಕಾರಿಗಳು, ೪೮೦ ಸಿಬ್ಬಂದಿಗಳು, ೧೪೩೬ ಕಿರುನೌಕೆಗಳು |
ಹೊತ್ತೊಯ್ಯುವ ವಿಮಾನಗಳು: | ೬ ಯು.ಹೆಚ್-೩ ಸೀ ಕಿಂಗ್ (ಕಡಲರಾಜ) ಹೆಲಿಕಾಪ್ಟರ್'ಗಳು |
ಟಿಪ್ಪಣಿ: | ನೌಕೆಯ ಕೆಳ ವಿಭಾಗದಲ್ಲಿ ಕಿರುದೋಣಿಗಳ ವ್ಯವಸ್ಥೆಯಿದೆ. |
ಪ್ರಸ್ತುತ ಭಾರತೀಯ ನೌಕಾ ಸೇನೆಯ ಸೇವೆಯಲ್ಲಿರುವ ಐ.ಎನ್.ಎಸ್ ಜಲಾಶ್ವ ನೌಕೆಯು ಮೊದಲು ಯು.ಎಸ್.ಎಸ್ ಟ್ರೆಂಟಾನ್ ಎಂದು ಕರೆಯಲ್ಪಡುತ್ತಿತ್ತು. ಈ ನೌಕೆಯನ್ನು ಭಾರತವು ೪೮ ಮಿಲಿಯನ್ ಯು.ಎಸ್. ಡಾಲರ್'ಗಳಿಗೆ ಅಮೇರಿಕಾದಿಂದ ಖರೀದಿಸಿತು. ೨೦೦೭ರಲ್ಲಿ ಕಾರ್ಯಾರಂಭಿಸಿದ ಇದು ಭಾರತೀಯ ನೌಕಾ ಸೇನೆಯ ಎರಡನೆಯ ಬೃಹತ್ ನೌಕೆಯಾಗಿದೆ(ಐ.ಎನ್.ಎಸ್ ವಿರಾಟ್'ನ ನಂತರ). ವಿಶಾಖಪಟ್ಟಣದ ನೌಕಾ ನೆಲೆಗೆ ೧೨ ಸಪ್ಟಂಬರ್, ೨೦೦೭ರಂದು ಆಗಮಿಸಿದ ಇದು ಭಾರತೀಯ ನೌಕಾ ಸೇನೆಯ ಪೂರ್ವ ಅಂಗಕ್ಕೆ ಸೇರಿಸಲ್ಪಟ್ಟಿತು.