ವಿಷಯಕ್ಕೆ ಹೋಗು

ಐಸೊಪೋಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಐಸೊಪೋಡ
Temporal range: Latest Carboniferous to present 300–0 Ma
Eurydice pulchra, a carnivorous isopod found on sandy shores
Scientific classification e
Unrecognized taxon (fix): Isopoda
Suborders

ಐಸೊಪೋಡ: ಸಂಧಿಪದಿಗಳ ವಂಶದ ಕ್ರಸ್ಟೇಸಿಯ ವರ್ಗದ ಮೆಲಕೊಸ್ಟ್ರೆಕ ಉಪವರ್ಗದ ಪೆರಕ್ಯಾರಿಡ ಗಣಕ್ಕೆ ಸೇರಿದ ಒಂದು ಉಪಗಣ.

ಈ ಪ್ರಾಣಿಗಳಲ್ಲಿ ಮುಂಭಾಗದಲ್ಲಿ ಶಿರಸ್ತ್ರಾಣವಾಗಲೀ ಕಣ್ಣುಗಳಿಗೆ ತೊಟ್ಟಾಗಲೀ (ಹಿಡಿ) ಇಲ್ಲ. ಎದೆಯ ಭಾಗದ ಉಪಾಂಗಗಳಿಗೆ ಎಕ್ಸೊಪೊಡೈಟುಗಳೂ ಇಲ್ಲ. ಮೊದಲನೆಯ ಜೊತೆ ಮ್ಯಾಕ್ಸಿಲ್ಲಿಪೀಡುಗಳಾಗಿ ಮಾರ್ಪಟ್ಟಿವೆ. ಮಿಕ್ಕವೆಲ್ಲವೂ ಒಂದೇ ತೆರನಾಗಿವೆ. ಪ್ಲಿಯೊಪಾಡುಗಳು ಉಸಿರಾಟದ ಅಂಗಗಳಾಗಿ ಮಾರ್ಪಟ್ಟಿವೆ. ಯೂರೊಪಾಡುಗಳು ಬಾಲದ ಈಜುರೆಕ್ಕೆಯೊಡನೆ ಭಾಗವಹಿಸುವುದಿಲ್ಲ. ಲಿಗಿಯ, ಆರ್ಮಡಿಲ್ಲಿಡಿಯಂ, ಎಸೆಲ್ಲಸ್ ಮತ್ತು ಐಡೊಟಿಯ-ಇವು ಮುಖ್ಯ ಉದಾಹರಣೆಗಳು.

The woodlouse Oniscus asellus
showing the head with eyes and antennae, carapace and relatively uniform limbs

ಲಿಗಿಯ ಎಂಬುದು ಕಡಲಜೀವಿ. ಸರ್ವಭಕ್ಷಕ ಜೀವಿಯಾದರೂ ಮುಖ್ಯವಾಗಿ ಫ್ಯೂಕಸನ್ನು ತಿನ್ನುತ್ತದೆ. ದೇಹ ಸಾಮಾನ್ಯವಾಗಿ ಚಪ್ಪಟೆಯಾಗಿ ಅಂಡಾಕಾರವಾಗಿದೆ. ತೊಟ್ಟಿಲ್ಲದ ಎರಡು ದೊಡ್ಡ ಕಣ್ಣುಗಳಿವೆ. ಎರಡು ಜೊತೆ ಕುಡಿಮೀಸೆಗಳಲ್ಲಿ ಒಂದು ಜೊತೆ ತುಂಬ ಚಿಕ್ಕದು; ಇನ್ನೊಂದು ಜೊತೆ ಉದ್ದ. ಇವು ಭಿನ್ನ ಲಿಂಗಿಗಳು. ಬೆಳೆವಣಿಗೆಯಲ್ಲಿ ರೂಪಪರಿವರ್ತನೆ ಇಲ್ಲ. ಆರ್ಮಡಿಲ್ಲಿಡಿಯಂ ಎಂಬುದು ಸಾಮಾನ್ಯವಾದ ಮರದ ಹೇನು. ಪುರ್ಣ ನೆಲವಾಸಿ. ಕುಡಿಮೀಸೆಗಳು ಚಿಕ್ಕವು. ಶತ್ರುಗಳಿಂದ ರಕ್ಷಿಸಿಕೊಳ್ಳಲು ಚಂಡಿನಂತೆ ಸುರುಳಿ ಸುತ್ತಿಕೊಳ್ಳಬಲ್ಲದು. ಈ ಲಕ್ಷಣ ಪ್ರಧಾನವಾಗಿ ಚಿಪ್ಪಿನಹಂದಿ (ಆರ್ಮಡಿಲ್ಲೊ)ಯಲ್ಲಿ ಕಾಣಬರುವುದರಿಂದಲೇ ಇದಕ್ಕೆ ಈ ಅನ್ವರ್ಥನಾಮ.

ಈ ಉಪಗಣಕ್ಕೆ ಪರತಂತ್ರ ಜೀವನ ನಡೆಸುವ ಹಲವು ಪ್ರಾಣಿಗಳೂ ಸೇರಿವೆ. ಇವುಗಳಲ್ಲಿ ಪರತಂತ್ರ ಜೀವನದ ವಿವಿಧ ಹಂತಗಳನ್ನು ಕಾಣಬಹುದು. ಅಂಗಾಂಗಗಳು ಚೆನ್ನಾಗಿ ಬೆಳೆದ ತಾತ್ಕಾಲಿಕ ಪರತಂತ್ರಜೀವಿಗಳಿಂದ ಹಿಡಿದು ಪ್ರಬುದ್ಧಾವಸ್ಥೆಯಲ್ಲಿ ಕೇವಲ ತತ್ತಿಯ ಕೋಶ ಮಾತ್ರ ಉಳಿದಿರುವ ಪುರ್ಣ ಪರತಂತ್ರಜೀವಿಗಳವರೆಗೂ ಈ ಉಪಗಣದಲ್ಲಿ ನಿದರ್ಶನಗಳು ದೊರೆಯುತ್ತವೆ. ಉದಾ: ಮೀನಿನ ಹೇನು.

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. "Isopoda". WoRMS. World Register of Marine Species. 2014. Retrieved 8 May 2014.
"https://kn.wikipedia.org/w/index.php?title=ಐಸೊಪೋಡ&oldid=1249767" ಇಂದ ಪಡೆಯಲ್ಪಟ್ಟಿದೆ