ಐಶ್ವರ್ಯ ಆರ್ ಧನುಷ್
ಐಶ್ವರ್ಯ ರಜನಿಕಾಂತ್ ಧನುಷ್ (ಜನನ: ಜನವರಿ ೧ ೧೯೮೨ ) ಭಾರತದ ಚಲನಚಿತ್ರ ನಿರ್ದೇಶಕಿ. ಇವರು ಖ್ಯಾತ ನಟ ರಜನಿಕಾಂತ್ ರ ಹಿರಿಯ ಮಗಳು. ತಮ್ಮ ಪತಿ ಧನುಷ್ ನಟಿಸಿದ 3 (೨೦೧೨) ಚಿತ್ರದ ಮೂಲಕ ನಿರ್ದೇಶಕಿಯಾಗಿ ಪಾದಾರ್ಪಣೆಯನ್ನು ಮಾಡಿದರು. ಇವರು ಕೆಲವೊಮ್ಮೆ ಹಿನ್ನೆಲೆ ಗಾಯನವನ್ನು ಮಾಡಿದ್ದಾರೆ.
ಆಗಸ್ಟ್ ೨೦೧೬ ರಲ್ಲಿ, ಐಶ್ವರ್ಯ ಯುಎನ್ ವುಮೆನ್ ಸಂಸ್ಥೆಗೆ ಭಾರತದ ಸದ್ಭಾವನೆಯ ರಾಯಭಾರಿ ಆಯ್ಕೆಯಾದರು.ಆದರೆ ಅವರ ನೃತ್ಯ ಪ್ರದರ್ಶನ ಶೀಘ್ರದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಟೀಕೆಗೆ ಗುರಿಯಾಯಿತು.[ಸೂಕ್ತ ಉಲ್ಲೇಖನ ಬೇಕು] ಶಾಸ್ತ್ರೀಯ ನೃತ್ಯ ಪ್ರದರ್ಶನದ ಮೇಲೆ ನಿಷೇಧ ಹೇರಿದ್ದಾರೆ ಎಂಬ ಕಥೆಗಳನ್ನು ಪ್ರಮುಖ ಪತ್ರಿಕೆಗಳು ಪ್ರಕಟಿಸಿದ್ದವು. ಕೆಲವರು ಡಿಎಂಕೆ ಆಡಳಿತದ ಅವಧಿಯಲ್ಲಿ ನೀಡಲಾಗಿದ್ದ ಕಲೈಮಾಮಣಿ ಪ್ರಶಸ್ತಿಯನ್ನು ನಿಜವಾಗಿಯೂ ಅವರ ಪ್ರತಿಭೆಯನ್ನು ನೋಡಿಯೇ ಕೊಟ್ಟರೆ ಎಂದು ಪ್ರಶ್ನಿಸಿದರು.[ಸೂಕ್ತ ಉಲ್ಲೇಖನ ಬೇಕು]
ವೈಯಕ್ತಿಕ ಜೀವನ
[ಬದಲಾಯಿಸಿ]ಐಶ್ವರ್ಯ ನಟ ರಜನಿಕಾಂತ್ ಮತ್ತು ಲತಾ ರಂಗಾಚಾರಿಯವರ ಮಗಳಾಗಿ ಜನಿಸಿದರು.[೧] ಇವರ ಕಿರಿಯ ಸಹೋದರಿ ಸೌಂದರ್ಯರವರು ಕೂಡ ತಮಿಳು ಚಿತ್ರರಂಗದಲ್ಲಿ ವೃತ್ತಿ ನಿರತರಾಗಿದ್ದಾರೆ .[೨] ಐಶ್ವರ್ಯರವರು ಚಿತ್ರನಟ ಧನುಷ್ರನ್ನು ಮದುವೆಯಾಗಿದ್ದಾರೆ.,[೩] ಇವರಿಗೆ ಇಬ್ಬರು ಗಂಡು ಮಕ್ಕಳು, ಯಾತ್ರ (ಜನನ ೨೦೦೬) ಮತ್ತು ಲಿಂಗ (ಜನನ ೨೦೧೦).[೪][೫]
ಇವರು ಸ್ಟಾರ್ ವಿಜಯ್ ನೃತ್ಯ ಸ್ಪರ್ಧೆ ಜೋಡಿ ನಂ ೧ ರ ಮೂರನೆ ಆವೃತ್ತಿಯಲ್ಲಿ ನಟರಾದ ಸಂಗೀತಾ ಮತ್ತು ಜೀವ ಜೊತೆಗೆ ತೀರ್ಪುಗಾರರಾಗಿದ್ದರು .[೬] ಇವರು ಸಿಲಂಬರಸನ್ ರ ಜೋತೆ ವಿಷಲ್ ಚಿತ್ರಕ್ಕಾಗಿ ಹಾಡಿದ ಹಾಡಿನ ಮೂಲಕ ಹಿನ್ನೆಲೆ ಗಾಯಕಿಯಾದರು ನಂತರ ಆಯಿರತ್ತಿಲ್ ಒರುವನ್ ಚಿತ್ರದ " ಉನ್ ಮೇಲ ಆಸದಾನ್" ಹಾಡನ್ನು ಹಾಡಿದರು, ಇವರು ಈ ಚಿತ್ರಕ್ಕೆ ಸಹಾಯಕ ನಿರ್ದೇಶಕಿಯಾಗಿಯು ಕೆಲಸ ಮಾಡಿದ್ದರು.
ಆಗಸ್ಟ್ ೨೦೧೧ ರಲ್ಲಿ ಐಶ್ವರ್ಯರವರು ತಮ್ಮ ಪತಿ ಮತ್ತು ಶ್ರುತಿ ಹಾಸನ್ ರನ್ನು ೩ ಶೀರ್ಷಿಕೆಯಲ್ಲಿ ತಮ್ಮ ಮೊದಲ ಚಲನಚಿತ್ರ ನಿರ್ದೇಶಿಸುವುದಾಗಿ ಪ್ರಕಟಿಸಿದರು, ಮತ್ತು ಧನುಷ್ ರವರು ಇದು ತಾವು ತಮ್ಮ ಪತ್ನಿಯ ನಿರ್ದೇಶನದಲ್ಲಿ ನಟಿಸುತ್ತಿರುವ ಏಕೈಕ ಚಿತ್ರ ಎಂದು ಖಚಿತಪಡಿಸಿದರು.[೭]ತಮ್ಮ ಸಂಬಂಧಿ ಅನಿರುದ್ಧ್ ರವಿಚಂದರ್ ಸಂಯೋಜಿಸಿದ ಚಿತ್ರದ " ವೈ ದಿಸ್ ಕೊಲವೆರಿ ಡಿ" ಹಾಡು ವೈರಲ್ ಆದ ನಂತರ ಚಿತ್ರ ಬಿಡುಗಡೆಗೂ ಮುನ್ನವೇ ಬಹಳಸ್ಟು ನಿರೀಕ್ಷೆ ಮೂಡಿಸಿತು . ಮೇಕಿಂಗ್ ವಿಡಿಯೋದಲ್ಲಿ ಪ್ರಮುಖ ನಟರು ಮತ್ತು ಸಂಯೋಜಕರೊಂದಿಗೆ ಕಾಣಿಸಿಕೊಂಡರು.ಜುಲೈ ೨೦೧೫ ರಲ್ಲಿ, ಐಶ್ವರ್ಯ ಅವರ "ಟೆನ್ ಎನ್ಟರ್ಟೆನ್ಮೆಂಟ್" ಬ್ಯಾನರ್ನಡಿಯಲ್ಲಿ ಮೂಲ ವಿಷಯಗಳು ಮತ್ತು ಮಹತ್ವಾಕಾಂಕ್ಷಿ ಚಿತ್ರನಿರ್ಮಾಪಕರ ಕಿರುಚಿತ್ರಗಳನ್ನು ಉತ್ತೇಜಿಸಲು ಯೂ ಟ್ಯೂಬ್ ಚಾನಲ್ ಆರಂಭಿಸುವುದಾಗಿ ಘೋಷಿಸಿದರು.[೮]
ಡಿಸೆಂಬರ್ ೨೦೧೬ ರಲ್ಲಿ, ಐಶ್ವರ್ಯ ಆರ್ ಧನುಷ್ "ಸ್ಟಾಂಡಿಂಗ್ ಆನ್ ಏನ್ ಆಫಲ್ ಬಾಕ್ಸ್: ದಿ ಸ್ಟೋರಿ ಆಫ್ ಅ ಗರ್ಲ್ ಅಮಾಂಗ್ ದಿ ಸ್ಟಾರ್ಸ್" ಎಂಬ ತಮ್ಮ ಆತ್ಮಚರಿತ್ರೆಯನ್ನು ಬಿಡುಗಡೆ ಮಾಡಿದರು.[೯] ಈ ಪುಸ್ತಕದಲ್ಲಿ , ಐಶ್ವರ್ಯ ಸ್ಟಾರ್ ನ ಮಗಳಾಗಿರುವ ತಮ್ಮ ಕಥೆಯನ್ನು, ತಮ್ಮ ವೃತ್ತಿ ಆಯ್ಕೆ, ತಮ್ಮ ಮದುವೆ ಮತ್ತು ಈ ಯುಗದಲ್ಲಿ ಮಹಿಳೆಯಾಗಿರುವುದರ ಬಗ್ಗೆ ಹೇಳಿದ್ದಾರೆ. ಓದುಗರಿಗೆ ರಜನಿಕಾಂತ್ ರ ಮಗಳಾಗಿ ತಮ್ಮ ಜೀವನದ ಬಗ್ಗೆ ಆಳವಾಗಿ ಬರೆದ್ದಿದ್ದಾರೆ. ಧನುಷ್ ರೊಂದಿಗೆ ಪ್ರೀತಿ ಮತ್ತು ಮಕ್ಕಳನ್ನು ಬೆಳೆಸುವ ಬಗ್ಗೆ ಅತ್ಯದ್ಭುತವಾಗಿ ಪ್ರಸ್ತಾಪಿಸಿದ್ದಾರೆ,
ಪ್ರಶಸ್ತಿಗಳು
[ಬದಲಾಯಿಸಿ]ಐಶ್ವರ್ಯ ತಮ್ಮ ನೃತ್ಯಕ್ಕಾಗಿ ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿ ಪಡೆದರು.[ಸಾಕ್ಷ್ಯಾಧಾರ ಬೇಕಾಗಿದೆ] ೨೦೧೨ ರಲ್ಲಿ ಅವರು JFA ಮಹಿಳಾ ಸಾಧಕರ ಅವಾರ್ಡ್ಸ್ನಲ್ಲಿ ವರ್ಷದ ವಾರ್ತಾ-ವಿಷಯಕ ಪ್ರಶಸ್ತಿ ಪಡೆದರು.
ಟೀಕೆಗಳು
[ಬದಲಾಯಿಸಿ]ಇವರು ಅಂತಾರಾಷ್ಟ್ರೀಯ ಮಹಿಳಾ ದಿನದಂದು ವಿಶ್ವಸಂಸ್ಥೆಯ ಕಾರ್ಯಾಲಯದಲ್ಲಿ ಭರತನಾಟ್ಯ ಪ್ರದರ್ಶನ ಮಾಡಿದರು.ಆದರೆ ಇವರ ನೃತ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ವೃತ್ತಿಪರ ಭರತನಾಟ್ಯ ನೃತ್ಯಗಾರರಲ್ಲಿ ಅನೇಕ ಟೀಕೆಗಳನ್ನು ಪಡೆಯಿತು.[೧೦] [೧೧] .[೧೨]
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]ನಿರ್ದೆಶಕಿಯಾಗಿ
[ಬದಲಾಯಿಸಿ]ವರ್ಷ | ಚಿತ್ರ | ಭಾಷೆ |
|
---|---|---|---|
೨೦೧೨ |
೩ |
ತಮಿಳು | ನಾಮನಿರ್ದೇಶನ-ಅತ್ಯುತ್ತಮ ಆರಂಭಿಕ ನಿರ್ದೇಶಕ SIIMA ಪ್ರಶಸ್ತಿ |
೨೦೧೫ |
ವಯ್ ರಾಜಾ ವಯ್ | ತಮಿಳು | |
೨೦೧೭ | ಮರಿಯಪ್ಪನ್ | ತಮಿಳು ಇಂಗ್ಲೀಷ್ |
ಉಲ್ಲೇಖಗಳು
[ಬದಲಾಯಿಸಿ]- ↑ "70 persons get Kalaimamani awards". The Hindu. 2009-02-25. Archived from the original on 2011-01-30. Retrieved 2009-04-19.
- ↑ Muthalaly, Susan (2005-07-01). "Silken choices to color your hair". The Hindu. Archived from the original on 2005-07-18. Retrieved 2009-04-19.
- ↑ "It is an all women drive". The Hindu. 2008-08-05. Archived from the original on 2008-08-08. Retrieved 2009-04-19.
- ↑ "Rajinikanth turns grandpa". The Hindu. 2006-10-12. Archived from the original on 2007-02-17. Retrieved 2009-04-19.
- ↑ @dhanushkraja (2010-06-20). "Dhanush shares happy about his second child" (Tweet) – via Twitter.
- ↑ "Serials". The Hindu. 2008-09-26. Archived from the original on 2008-09-27. Retrieved 2009-04-19.
- ↑ Shankar (2011-12-03). "3 is my first and last movie under her Aishwarya's direction - Dhanush | 'மனைவி ஐஸ்வர்யா இயக்கத்தில் நான் நடிக்கும் முதலும் கடைசியுமான படம் '3'! - தனுஷ் - Oneindia Tamil". Tamil.oneindia.in. Archived from the original on 2012-01-07. Retrieved 2012-01-01.
- ↑ "Aishwarya Dhanush to launch YouTube channel". Archived from the original on 2015-10-01. Retrieved 2017-04-15.
- ↑ "Standing on An Apple Box: The Story of A Girl Among the Stars" by Aishwarya R. Dhanush
- ↑ "Aishwaryaa Dhanush's 'pathetic' Bharatnatyam performance at UN draws criticism". Indian Express.
- ↑ "Rajinikanth's Daughter Aishwaryaa Dhanush's Bharatanatyam Performance At UN Criticized". NDTV.
- ↑ "Anita Ratnam slams Aishwaryaa Dhanush's Bharatnatyam!". Times of India.