ವಿಷಯಕ್ಕೆ ಹೋಗು

ಐರಿಸೈನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಐರಿಸೈನಿ
Iresine herbstii
Scientific classification e
Unrecognized taxon (fix): Iresine
Species

See text.

Synonyms[೨]

ಟೆಂಪ್ಲೇಟು:Genus list

ಐರಿಸೈನಿ: ಅಮರಾಂತೇಸಿ ಕುಟುಂಬಕ್ಕೆ ಸೇರಿದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಪ್ರಭೇದಗಳನ್ನೊಳಗೊಂಡ ಒಂದು ಅಲಂಕಾರದ ಸಸ್ಯಜಾತಿ..[೨][೧]

ಸಸ್ಯ ಲಕ್ಷಣ[ಬದಲಾಯಿಸಿ]

ಹೂ ಮತ್ತು ಬೀಜಗಳ ಮೇಲೆ ಮೃದುವಾದ ರೋಮದ ಹೊದಿಕೆಯಿದೆ. ದಳದಂತೆ ಮಾರ್ಪಟ್ಟ ಇದರ ಎಲೆಗಳು (ಪೆಟಲಾಯ್ಡ್‌) ಆಕರ್ಷಣೀಯ ಬಣ್ಣಗಳ ರಮಣೀಯತೆಯನ್ನು ಪ್ರದರ್ಶಿಸುವುದರಿಂದ ಇವು ಉದ್ಯಾನ ಸಸ್ಯಗಳಾಗಿ ಪ್ರಾಮುಖ್ಯ ಪಡೆದಿವೆ. ಇವನ್ನು ಎಲೆಸಸ್ಯ, ಮಡಿಸಸ್ಯ ಮತ್ತು ಪೊದೆಸಸ್ಯಗಳನ್ನಾಗಿ ಬೆಳೆಸುತ್ತಾರೆ. ಇವುಗಳಲ್ಲಿ ಅನೇಕವು ಅಮೆರಿಕದ ಉಷ್ಣ ಮತ್ತು ಸಮಶೀತೋಷ್ಣವಲಯಗಳ ಮೂಲವಾಸಿಗಳು.

ಐರಿಸೈನಿ ಜಾತಿಯ ಸಸ್ಯಗಳು ನೇರವಾಗಿ ಬೆಳೆಯುವ ದೀರ್ಘಕಾಲದ ಪರ್ಣಸಸಿಗಳು; ಇವುಗಳಲ್ಲಿ ಕುಳ್ಳಾದ ಪೊದೆಗಳು; ಇನ್ನು ಕೆಲವು ಹತ್ತುವ ಬಳ್ಳಿಗಳು; ತೊಟ್ಟಿರುವ ಇದರ ಎಲೆಗಳು ಅಭಿಮುಖಪತ್ರ ಜೋಡಣೆ ಹೊಂದಿವೆ. ಎಲೆಗಳ ಅಂಚು ಗರಗಸದ ಹಲ್ಲಿನಂತಿದೆ; ತುದಿ ಮೊನಚಾಗಿದೆ. ಕಂಕುಳ ತುದಿಯಲ್ಲಿರುವ ಹೂಗೊಂಚಲು ಚೂಪುತುದಿಯದು (ಸ್ಪೈಕ್ ಮಾದರಿ); ಏಕಲಿಂಗ ಮತ್ತು ದ್ವಿಲಿಂಗ ಪುಷ್ಪಗಳೆರಡೂ ಇವೆ. ತೊಟ್ಟಿನ ಮೇಲೆ ಉಪಪುಷ್ಪಪತ್ರಗಳೂ ಪುಷ್ಪಪತ್ರಗಳೂ ಇವೆ; ಪುಷ್ಪಪತ್ರಗಳು ತಳದಲ್ಲಿ ಕೂಡಿದ್ದು ಐದು ಭಾಗಗಳನ್ನು ಒಳಗೊಂಡಿವೆ. ಕೇಸರಗಳು ತಳದಲ್ಲಿ ಕೂಡಿಕೊಂಡಿದ್ದು ಮೇಲ್ಭಾಗದಲ್ಲಿ ಬಿಡಿಬಿಡಿಯಾಗಿವೆ. ಶಲಾಕಾಗ್ರ ಎರಡು ಮೂರು ಭಾಗಗಳಾಗಿವೆ. ಹಣ್ಣು ಒಡೆಯದ ಮಾದರಿಯದು; ಬೀಜ ಒಂದೇ.

ಸಸ್ಯ ಅಭಿವೃದ್ಧಿ[ಬದಲಾಯಿಸಿ]

ಕಾಂಡದ ತುಂಡುಗಳಿಂದ ಈ ಸಸ್ಯವನ್ನು ವೃದ್ಧಿಮಾಡಬಹುದು. ಹೇನು ಮತ್ತು ನುಸಿ ಹತ್ತುವುದು ಸಾಮಾನ್ಯವಾದ್ದರಿಂದ ಫಾಲಿಡಾಲ್ ಅಥವಾ ಥೀಮೇಟನ್ನು ಬಳಸಬೇಕಾಗುತ್ತದೆ. ಮತ್ತಾವ ತೀವ್ರ ರೀತಿಯ ರೋಗಗಳೂ ಇದಕ್ಕೆ ಅಂಟವು.

ಪ್ರಮುಖ ಪ್ರಭೇದಗಳು[ಬದಲಾಯಿಸಿ]

ಐರಿಸೈನಿ ಹರ್ಬ್ಸ್ಟ್‌ : ಲಂಡನ್ನಿನಲ್ಲಿರುವ ಹೆಸರಾಂತ ಕ್ಯೂ ತೋಟದ ಸಸ್ಯವೃದ್ಧಿಗಾರ ಹರ್ಬ್ಸ್ಟ್‌ ಎಂಬುವನ ಜ್ಞಾಪಕಾರ್ಥವಾಗಿ ಈ ಪ್ರಭೇದಕ್ಕೆ ಈ ಹೆಸರು. ಎಲೆ ಕರನೆಯಾಕಾರದಲ್ಲಿದೆ. ತುದಿ ತಗ್ಗು, ಕೆಂಪುನಾಳಗಳು ಕಮಾನಿನ ಆಕಾರದಲ್ಲಿ ಹರಡಿವೆ. ಹೂ ಹಳದಿ, ತೊಟ್ಟು ಉದ್ದ, ಗಾತ್ರ ಅಲ್ಪ, ಗೊಂಚಲು ಮಿಶ್ರ ಮಾದರಿಯದು.

ಐರಿಸೈನಿ ಲಿಂಡನೈ : ಎಕ್ವಡಾರ್ ದೇಶದಲ್ಲಿದ್ದ ಜೆ.ಲಿಂಡನ್ ಎಂಬ ಸಸ್ಯವಿಜ್ಞಾನಿಯ ಜ್ಞಾಪಕಾರ್ಥವಾಗಿ ಈ ಪ್ರಭೇದಕ್ಕೆ ಈ ಹೆಸರು. ಈ ಜಾತಿಯ ಕಾಂಡ ಮತ್ತು ಎಲೆ ಗುಲಾಬಿ ಬಣ್ಣವಾಗಿದ್ದು ಎಲೆ ಕರನೆಯಾಕಾರ ಅಥವಾ ಭರ್ಜಿಯಾಕಾರವಾಗಿರುತ್ತದೆ. ಎಲೆಯ ತುದಿ ಮೊನಚು. ನಾಳಗಳು ಪ್ರಮುಖವಾಗಿ ಹರಡಿಕೊಂಡಿದ್ದು ಆಕರ್ಷಣೀಯವಾಗಿ ಕಾಣುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ "Genus: Iresine P. Browne". Germplasm Resources Information Network. United States Department of Agriculture. 2007-10-05. Archived from the original on 2011-06-05. Retrieved 2010-02-24.
  2. ೨.೦ ೨.೧ "Iresine P.Browne". Plants of the World Online. Royal Botanic Gardens, Kew. Retrieved 2022-04-10.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಐರಿಸೈನಿ&oldid=1230184" ಇಂದ ಪಡೆಯಲ್ಪಟ್ಟಿದೆ