ಐದನೇ ಪೀಳಿಗೆಯ/ತಲೆಮಾರಿನ ಗಣಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಐದನೇ ಪೀಳಿಗೆ/ತಲೆಮಾರಿನ ‌ಗಣಕ ವ್ಯವಸ್ಥೆಗಳ ಯೋಜನೆ ಯು (FGCS) ಜಪಾನ್‌‌‌'ನ ಅಂತರರಾಷ್ಟ್ರೀಯ ವಾಣಿಜ್ಯ ಮತ್ತು ಉದ್ಯಮ ಸಚಿವಾಲಯವು ಭಾರೀ ಪ್ರಮಾಣದ ಸಮಾಂತರ ಸಂಸ್ಕರಣಗಳ ಮೂಲಕ ಭಾರೀ ಗಣನೆಗಳನ್ನು/ಲೆಕ್ಕಾಚಾರಗಳನ್ನು ಮಾಡಬೇಕಾಗಿರುವ "ಐದನೇ ಪೀಳಿಗೆ/ತಲೆಮಾರಿನ ‌ಗಣಕ"ವನ್ನು (ನೋಡಿ ಗಣಕೀಯ/ಗಣಕಕಾರ್ಯ ಯಂತ್ರಾಂಶದ ಇತಿಹಾಸ) ಸೃಷ್ಟಿಸಲು 1982ರಲ್ಲಿ ಕೈಗೊಂಡ ಉಪಕ್ರಮವಾಗಿದೆ. ಇದು ಜಪಾನ್‌ನಲ್ಲಿ 1980ರ ದಶಕದಲ್ಲಿ ನಡೆಸಲಾದ ಭಾರೀ ಸರ್ಕಾರೀ/ಔದ್ಯಮಿಕ ಸಂಶೋಧನಾ ಯೋಜನೆಯೊಂದರ ಕಾರ್ಯಯೋಜಿತ ಫಲಿತಾಂಶವಾಗಬೇಕಿತ್ತು. ಬೃಹತ್‌/ಮಹತ್‌‌ಗಣಕದ -ರೀತಿಯ ಕಾರ್ಯನಿರ್ವಹಣೆಯನ್ನು ಹೊಂದಿದ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಭವಿಷ್ಯದ ಅಭಿವೃದ್ಧಿಗೆ ಪೂರಕವಾದಂತಹಾ ತಳಹದಿಯನ್ನು ಕಟ್ಟುವ "ಯುಗಪ್ರವರ್ತಕ ‌ಗಣಕ"ವೊಂದನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿತ್ತು[೧]. ಐದನೇ ಪೀಳಿಗೆ/ತಲೆಮಾರು ಎಂಬ ಪದವನ್ನು ಪ್ರಸ್ತುತ ಗಣಕಗಳ ಸಾಮರ್ಥ್ಯವನ್ನು ಮೀರಿದ ಜಿಗಿತವನ್ನು ಸೂಚಿಸಲು ಬಳಸಲಾಗಿತ್ತು. ನಿರ್ವಾತ ಕೊಳವೆಗಳನ್ನು ಬಳಸುತ್ತಿದ್ದ ‌ಗಣಕಗಳನ್ನು ಮೊದಲ ಪೀಳಿಗೆ/ತಲೆಮಾರಿನವೆಂದು ಕರೆಯುತ್ತಿದ್ದರು; ಟ್ರಾನ್ಸಿಸ್ಟರ್‌‌ಗಳು ಮತ್ತು ಡಯೋಡ್‌ಗಳನ್ನು ಬಳಸುತ್ತಿದ್ದ ‌ಗಣಕಗಳನ್ನು ಎರಡನೆಯವೆಂದು ; ಸಮಗ್ರ ಮಂಡಲ/ಇಂಟೆಗ್ರೇಟೆಡ್‌‌ ಸರ್ಕ್ಯೂಟ್‌ಗಳನ್ನು ಹೊಂದಿದ್ದವನ್ನು ಮೂರನೆಯದೆಂದು; ಮತ್ತು ಸೂಕ್ಷ್ಮಸಂಸ್ಕಾರಕ‌ಗಳನ್ನು ನಾಲ್ಕನೆಯ ತಲೆಮಾರಿನದೆಂದು ಕರೆಯುತ್ತಿದ್ದರು. ಹಿಂದಿನ ‌ಗಣಕ ಪೀಳಿಗೆ/ತಲೆಮಾರುಗಳು ಒಂದೇ CPUವಿನಲ್ಲಿ ಹೆಚ್ಚಿನ ಸಂಖ್ಯೆಯ ತಾರ್ಕಿಕ ಘಟಕಗಳನ್ನು ತುಂಬಿಸುವುದರಲ್ಲಿ ಗಮನ ಕೇಂದ್ರೀಕರಿಸಿದ್ದರೆ, ಐದನೇ ಪೀಳಿಗೆ/ತಲೆಮಾರಿನಲ್ಲಿ ಆ ಸಮಯದಲ್ಲಿ ವ್ಯಾಪಕವಾದ ಭಾವನೆಯಂತೆ ಹೆಚ್ಚಿನ ಕಾರ್ಯನಿರ್ವಹಣೆಗಾಗಿ ಭಾರೀ ಸಂಖ್ಯೆಯ CPUಗಳನ್ನು ಒಟ್ಟುಗೂಡಿಸುವ ವ್ಯವಸ್ಥೆಯನ್ನು ಹೊಂದಬೇಕಿತ್ತು. ಯೋಜನೆಯು ಉದ್ದೇಶವು ಹತ್ತು ವರ್ಷಗಳ ಅವಧಿಯಲ್ಲಿ ‌ಗಣಕವನ್ನು ತಯಾರಿಸುವುದಾಗಿತ್ತು, ಆ ಅವಧಿಯ ನಂತರ ಅದನ್ನು ಮುಕ್ತಾಯಗೊಂಡಿದೆ ಎಂದು ಪರಿಗಣಿಸಿ, ನವೀನ ಆರನೇ ಪೀಳಿಗೆ/ತಲೆಮಾರಿನ ಯೋಜನೆಗೆ ಹೂಡಿಕೆಯು ಆರಂಭವಾಯಿತು. ಇದರ ಫಲಿತಾಂಶದ ಬಗೆಗಿನ ಅಭಿಪ್ರಾಯಗಳು ವಿಭಜಿತವಾಗಿದ್ದವು: ಒಂದೋ ಇದು ವಿಫಲವಾಗಿದೆ ಇಲ್ಲವೇ ಇದು ಈ ಕಾಲಮಾನಕ್ಕಿಂತಲೂ ಮುಂದುವರೆದದ್ದು ಎಂಬ ಭಾವನೆಯಿತ್ತು.

ಇತಿಹಾಸ[ಬದಲಾಯಿಸಿ]

1960ರ ದಶಕದ ಉತ್ತರಭಾಗ ಹಾಗೂ '70ರ ದಶಕದ ಆದಿಯಲ್ಲಿ, ಗಣಕ ಯಂತ್ರಾಂಶಗಳ "ಪೀಳಿಗೆ/ತಲೆಮಾರುಗಳ" ಬಗ್ಗೆ ಬಹು ದೊಡ್ಡ ಚರ್ಚೆಯೆದ್ದಿತ್ತು — ಸಾಧಾರಣವಾಗಿ ಇದನ್ನು "ಮೂರು ಪೀಳಿಗೆ/ತಲೆಮಾರುಗಳಾಗಿ" ಪರಿಗಣಿಸಲಾಗಿತ್ತು.

  1. ಮೊದಲನೆಯ ಪೀಳಿಗೆ/ತಲೆಮಾರು : ನಿರ್ವಾತ ಕೊಳವೆಗಳನ್ನು ಹೊಂದಿದ್ದವು. ಕಾಲ : 1940ರ ದಶಕದ ಮಧ್ಯಭಾಗ. ನಿರ್ವಾತ ಕೊಳವೆಗಳ ಜೋಡಿಸಬಲ್ಲ ಘಟಕಗಳ ವ್ಯವಸ್ಥೆಯಲ್ಲಿ IBM ಕಂಪೆನಿಯು ಪ್ರವರ್ತಕ ಸಂಸ್ಥೆಯೆನಿಸಿಕೊಂಡಿತು. IBM 650 ಗಣಕವು ಮೊದಲ-ಪೀಳಿಗೆ/ತಲೆಮಾರಿನ ‌ಗಣಕವಾಗಿತ್ತು.
  2. ಎರಡನೆಯ ಪೀಳಿಗೆ/ತಲೆಮಾರು : ಟ್ರಾನ್ಸಿಸ್ಟರ್‌‌ಗಳನ್ನು ಹೊಂದಿದ್ದವು. ಕಾಲ : 1956. ಕಿರಿದಾಗಿಸುವಿಕೆಯ ಯುಗವು ಆರಂಭವಾಗಿತ್ತು. ಟ್ರಾನ್ಸಿಸ್ಟರ್‌‌ಗಳು ನಿರ್ವಾತ ಕೊಳವೆಗಳಿಗಿಂತ ಸಾಕಷ್ಟು ಸಣ್ಣದಾಗಿದ್ದವಲ್ಲದೇ, ಕಡಿಮೆ ವಿದ್ಯುತ್‌ ಅಗತ್ಯದೊಂದಿಗೆ ಕಡಿಮೆ ಉಷ್ಣವನ್ನು ಬಿಡುಗಡೆ ಮಾಡುತ್ತಿದ್ದವು. ಪೃಥಕ್‌/ವಿಚ್ಛಿನ್ನ ಟ್ರಾನ್ಸಿಸ್ಟರ್‌‌ಗಳನ್ನು ಹಿಂಭಾಗದಲ್ಲಿರುವ ಅಚ್ಚುತಗಡಿನಿಂದ-ರೂಪಿಸಲ್ಪಟ್ಟ ಸಂಪರ್ಕಪಟ್ಟಿಗಳ ಮೂಲಕ ಪರಸ್ಪರ ಸಂಪರ್ಕವನ್ನು ಸಾಧಿಸಿರುವ ಮಂಡಲ ಪಟ್ಟಿಗಳಿಗೆ ಮೆದು ಬೆಸುಗೆ ಹಾಕಿರಲಾಗಿರುತ್ತಿತ್ತು. IBM 7090 ಗಣಕವು ಎರಡನೆಯ -ಪೀಳಿಗೆ/ತಲೆಮಾರಿನ ‌ಗಣಕವಾಗಿತ್ತು.
  3. ಮೂರನೇ ಪೀಳಿಗೆ/ತಲೆಮಾರು : ಸಮಗ್ರ ಮಂಡಲ/ಇಂಟೆಗ್ರೇಟೆಡ್‌‌ ಸರ್ಕ್ಯೂಟ್‌ಗಳಿಂದ (ಅನೇಕ ಟ್ರಾನ್ಸಿಸ್ಟರ್‌‌ಗಳನ್ನೊಳಗೊಂಡ ಸಿಲಿಕಾನ್‌ ಫಲಕ/ಬಿಲ್ಲೆಗಳು) ಕೂಡಿದ್ದವು. ಕಾಲ : 1964. IBM 360/91 ಗಣಕದಲ್ಲಿ ಬಳಸಿದ್ದ ಪ್ರತಿ ಫಲಕ/ಬಿಲ್ಲೆಗೆ 20ಕ್ಕೂ ಹೆಚ್ಚಿನ ಟ್ರಾನ್ಸಿಸ್ಟರ್‌‌ಗಳನ್ನು ಮೂಡಿಸಿದ ಸಿರಾಮಿಕ್‌‌ ತಲಾಧಾರದ ಮೇಲೆ ಸಿಲಿಕಾನ್‌ನ ಪದರಗಳನ್ನು ಪೇರಿಸಿ ನಿರ್ಮಿಸಿದ್ದ ACPX ಘಟಕ ಇದಕ್ಕೆ ಪ್ರವರ್ತನಾತ್ಮಕ ಉದಾಹರಣೆಯಾಗಿದೆ; ಮಂಡಲ ಫಲಕವೊಂದರಲ್ಲಿ ಇಂತಹಾ ಬಿಲ್ಲೆಗಳನ್ನು ಹುದುಗಿಸಿ ಕಂಡುಕೇಳರಿಯದ ತಾರ್ಕಿಕ ಘಟಕಗಳ ಸಾಂದ್ರತೆಯನ್ನು ಮೂಡಿಸಬಹುದಾಗಿತ್ತು. IBM 360/91 ಗಣಕವು ಇಂತಹಾ ಮಿಶ್ರ ಎರಡನೆಯ ಹಾಗೂ ಮೂರನೆಯ-ಪೀಳಿಗೆ/ತಲೆಮಾರಿನ ‌ಗಣಕವಾಗಿತ್ತು.

ಹೊರಗಿಡಲಾದುದೆಂದರೆ ಲೋಹದ ಹಲ್ಲುಚಕ್ರಗಳ ಮೇಲೆ ಆಧಾರಿತವಾದ "ಸೊನ್ನೆ -ಪೀಳಿಗೆ/ತಲೆಮಾರಿನ " ‌ಗಣಕ (IBM 407ನಂತಹಾ) ಅಥವಾ ಯಾಂತ್ರಿಕ ರಿಲೇಗಳ ಮೇಲೆ ಆಧಾರಿತವಾದವು (ಮಾರ್ಕ್‌‌‌‌ Iನಂತಹಾ) ಮತ್ತು ಮೂರನೇ-ಪೀಳಿಗೆ/ತಲೆಮಾರಿನ ನಂತರದ ಅವಧಿಯ ಬೃಹತ್‌ ಪ್ರಮಾಣದ ಸಮಗ್ರ ಮಂಡಲ/ವೆರಿ ಲಾರ್ಜ್‌‌ ಸ್ಕೇಲ್‌ ಇಂಟೆಗ್ರೇಟೆಡ್‌ (VLSI) ಸರ್ಕ್ಯೂಟ್ಸ್‌‌ಗಳ ಮೇಲೆ ಆಧಾರಿತವಾದ ಗಣಕಗಳು. ಇದಕ್ಕೆ ಸಮಾಂತರವಾಗಿ ತಂತ್ರಾಂಶಗಳದ್ದೂ ಪೀಳಿಗೆ/ತಲೆಮಾರುಗಳಿದ್ದವು:

  1. ಮೊದಲ ಪೀಳಿಗೆ/ತಲೆಮಾರು : ಯಂತ್ರ ಭಾಷೆ.
  2. ಎರಡನೆಯ ಪೀಳಿಗೆ/ತಲೆಮಾರು : ಅಸೆಂಬ್ಲಿ ಭಾಷೆ.
  3. ಮೂರನೆಯ ಪೀಳಿಗೆ/ತಲೆಮಾರು : C, COBOL ಮತ್ತು FORTRANಗಳಂತಹಾ ಸಂರಚನಾತ್ಮಕ ಪ್ರೋಗ್ರಾಮಿಂಗ್‌ ಭಾಷೆಗಳು.
  4. ನಾಲ್ಕನೆಯ ಪೀಳಿಗೆ/ತಲೆಮಾರು : SQL (ದತ್ತಸಂಚಯದ ಬಳಕೆಗಾಗಿರುವ) ಮತ್ತು TeX (ಪಠ್ಯ ಸ್ವರೂಪಣೆಗೆ) ಭಾಷೆಗಳ ತರಹದ ಕ್ಷೇತ್ರ-ನಿರ್ದಿಷ್ಟ ಭಾಷೆಗಳು

ಹಿನ್ನೆಲೆ ಹಾಗೂ ವಿನ್ಯಾಸ ತತ್ವ[ಬದಲಾಯಿಸಿ]

1980ರ ದಶಕದವರೆಗಿನ ಈ ವಿವಿಧ ಪೀಳಿಗೆ/ತಲೆಮಾರುಗಳುದ್ದಕ್ಕೂ ಗಣಕೀಯ ಕಾರ್ಯರಂಗದಲ್ಲಿ U.S. ಮತ್ತು ಬ್ರಿಟಿಷ್‌ ನಿರ್ದೇಶನಗಳನ್ನು ಯಶಸ್ವಿಯಾಗಿ ಪಾಲಿಸುತ್ತಾ ‌ಗಣಕಗಳನ್ನು ನಿರ್ಮಿಸುತ್ತಾ ಜಪಾನ್‌‌‌ ಬಹುತೇಕ ಅನುಯಾಯಿ ಪಾತ್ರವನ್ನು ವಹಿಸುತ್ತಾ ಸಾಗಿತು. ಯಶಸ್ವಿ ನಾಯಕನನ್ನು ಹಿಂಬಾಲಿಸುವ ಪದ್ಧತಿಯನ್ನು ಮುರಿಯಲು ನಿರ್ಧರಿಸಿದ ಅಂತರರಾಷ್ಟ್ರೀಯ ವಾಣಿಜ್ಯ ಮತ್ತು ಉದ್ಯಮ ಸಚಿವಾಲಯವು (MITI) 1970ರ ದಶಕದ ಮಧ್ಯದಲ್ಲಿ ಸಣ್ಣ ಮಟ್ಟದಲ್ಲಿ ಗಣಕೀಯ ಕಾರ್ಯರಂಗದ ಭವಿಷ್ಯತ್ತಿನ ಸಾಧ್ಯತೆಗಳ ಬಗ್ಗೆ ಗಮನ ಹರಿಸಲು ಪ್ರಾರಂಭಿಸಿತು. ಜಪಾನ್‌‌‌ನ ಮಾಹಿತಿ ಸಂಸ್ಕರಣ ಅಭಿವೃದ್ಧಿ ಕೇಂದ್ರಕ್ಕೆ (JIPDEC) ಈ ಬಗ್ಗೆ ಭವಿಷ್ಯದ ಅನೇಕ ಸ್ಪಷ್ಟ ರೂಪರೇಖೆಗಳನ್ನು ನಿರ್ದಿಷ್ಟಪಡಿಸಲು ಸೂಚಿಸಿದ್ದಲ್ಲದೇ 1979ರಲ್ಲಿ ಉದ್ಯಮ ಮತ್ತು ಶೈಕ್ಷಣಿಕ ಕ್ಷೇತ್ರಗಳೊಂದಿಗೆ ಸೇರಿ ಮತ್ತಷ್ಟು ಗಹನವಾದ ಅಧ್ಯಯನಗಳನ್ನು ಕೈಗೊಳ್ಳಲು ಮೂರು-ವರ್ಷಗಳ ಗುತ್ತಿಗೆ ನೀಡಿತು. "ಐದನೇ-ಪೀಳಿಗೆ/ತಲೆಮಾರಿನ ‌ಗಣಕ" ಎಂಬ ಪದದ ಬಳಕೆಯು ಈ ಅವಧಿಯ ವೇಳೆಯಲ್ಲಿಯೇ ಆರಂಭವಾದುದು. ಉಕ್ಕಿನ ಉದ್ಯಮದ ಸುಧಾರಣೆಯಲ್ಲಿ, ತೈಲದ ಭಾರೀಸಂಗ್ರಹಾಗಾರ/ಸೂಪರ್‌ಟ್ಯಾಂಕರ್‌, ವಾಹನೋದ್ಯಮ, ವಿದ್ಯುನ್ಮಾನ ಗ್ರಾಹಕೋದ್ಯಮ, ಮತ್ತು ‌ಗಣಕ ಸ್ಮರಣೆಯಂತಹಾ ಕ್ಷೇತ್ರಗಳಲ್ಲಿ 1970ರ ದಶಕದವರೆಗೆ MITI ಮಾರ್ಗದರ್ಶನಗಳು ಯಶಸ್ಸು ಕಂಡಿದ್ದವು. ಭವಿಷ್ಯವು ಮಾಹಿತಿ ತಂತ್ರಜ್ಞಾನದ ಮೇಲೆ ಆಧಾರಿತವಾಗಿರುತ್ತದೆ ಎಂದು MITI ನಿರ್ಧರಿಸಿತು. ಆದಾಗ್ಯೂ ಜಪಾನೀ ಭಾಷೆಯು, ಲಿಖಿತ ಹಾಗೂ ಉಚ್ಚಾರಣೆಯ ಎರಡೂ ರೂಪಗಳಲ್ಲಿ ‌ಗಣಕಗಳಲ್ಲಿ ಪ್ರಮುಖ ಅಡೆತಡೆಗಳನ್ನು ಹಿಂದೆಯೂ ಒಡ್ಡಿತ್ತು ಹಾಗೂ ಈಗಲೂ ಒಡ್ಡುತ್ತಲಿದೆ. ಈ ಅಡೆತಡೆಗಳನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿರಲಿಲ್ಲ. ಆದ್ದರಿಂದ ತಮಗೆ ಸಹಾಯವನ್ನು ಮಾಡಲು MITI ಸಮ್ಮೇಳನವೊಂದನ್ನು ಆಯೋಜಿಸಿ ವಿಶ್ವದಾದ್ಯಂತದ ಜನರನ್ನು ಆಹ್ವಾನಿಸಿತು. ಈ ಆರಂಭಿಕ ಯೋಜನೆಯಲ್ಲಿ ಪ್ರಾಥಮಿಕವಾಗಿ ಗಮನ ಹರಿಸಬೇಕಿದ್ದ ಕ್ಷೇತ್ರಗಳು ಕೆಳಕಂಡಂತಿದ್ದವು :

  • ಅಭಿಜ್ಞಾನ ಸಂಸ್ಕರಣೆಗಾಗಿ ನಿಗಮನಾತ್ಮಕ ‌ಗಣಕ ತಂತ್ರಜ್ಞಾನಗಳ ಅಭಿವೃದ್ಧಿ
  • ಭಾರೀ ಸಾಮರ್ಥ್ಯದ ದತ್ತಸಂಚಯಗಳು ಮತ್ತು ಅಭಿಜ್ಞಾನ ಸಂಚಯಗಳನ್ನು ಸಂಸ್ಕರಿಸಲು ಬೇಕಾದ ಗಣಕ ತಂತ್ರಜ್ಞಾನಗಳ ಅಭಿವೃದ್ಧಿ
  • ಭಾರೀ ಕಾರ್ಯಸಾಮರ್ಥ್ಯದ ಗಣಕಯಂತ್ರಗಳ ನಿರ್ಮಾಣ
  • ವಿಸ್ತೃತ ಕಾರ್ಯಸಾಧಕ ‌ಗಣಕ ತಂತ್ರಜ್ಞಾನಗಳು
  • ವೈಜ್ಞಾನಿಕ ಗಣನೆ/ಲೆಕ್ಕಾಚಾರಗಳನ್ನು ಮಾಡಲು ಬೃಹತ್‌/ಮಹತ್‌‌-‌ಗಣಕಗಳು

ದತ್ತವನ್ನು ನಿರೂಪಿಸಲಿಕ್ಕೆ ಮತ್ತು ಪಡೆಯಲಿಕ್ಕೆ ತಾರ್ಕಿಕ ಪ್ರೋಗ್ರಾಮಿಂಗ್‌ ಭಾಷೆಯನ್ನು ಬಳಸಿಕೊಳ್ಳುವಂತಹಾ ಈ ಯೋಜನೆಯಲ್ಲಿ ಭಾರೀ ದತ್ತಸಂಚಯಗಳ (ಸಾಂಪ್ರದಾಯಿಕ ಕಡತನಿರ್ವಹಣಾ ವ್ಯವಸ್ಥೆಗೆ ಬದಲಾಗಿ) ಮಾಹಿತಿಯ ಮೇಲೆ ಆಧಾರಿತವಾದ ಸಮಾಂತರಿತ ಸಂಸ್ಕರಣಾ ‌ಗಣಕವನ್ನು ಕಲ್ಪಿಸಿಕೊಳ್ಳಲಾಗಿತ್ತು. ಪ್ರತಿ ಸೆಕೆಂಡಿಗೆ ಸಾಧ್ಯವಿರುವ ತಾರ್ಕಿಕ ನಿಗಮನಗಳ ಸಂಖ್ಯೆ ಯನ್ನು ಸೂಚಿಸುವ LIPSನ ಮಾನಕದಲ್ಲಿ 100Mನಿಂದ 1G LIPSಗಳವರೆಗಿನ ಕಾರ್ಯಸಾಮರ್ಥ್ಯವನ್ನು ನೀಡಬಲ್ಲ ಮಾದರಿ ಗಣಕವನ್ನು ರೂಪಿಸಲು ರೂಪರೇಖೆ ಹಾಕಿಕೊಂಡರು. ಆ ಸಮಯದಲ್ಲಿ ಪ್ರಾತಿನಿಧಿಕ ಕಾರ್ಯಕೇಂದ್ರಗಳು ಸುಮಾರು 100k LIPSಗಳಷ್ಟು ಸಾಮರ್ಥ್ಯವನ್ನು ಮಾತ್ರವೇ ಹೊಂದಿದ್ದವು. ಅವರು ಈ ಗಣಕವನ್ನು ಸಿದ್ಧಪಡಿಸಲು ಆರಂಭಿಕ R&Dಗೆ 3 ವರ್ಷಗಳು, ವಿವಿಧ ಉಪವ್ಯವಸ್ಥೆಗಳನ್ನು ಸಿದ್ಧಪಡಿಸಲು 4 ವರ್ಷಗಳು ಹಾಗೂ ಅಂತಿಮ 3 ವರ್ಷಗಳಲ್ಲಿ ಕಾರ್ಯನಿರ್ವಹಿಸಬಲ್ಲ ಸಂಪೂರ್ಣ ಮಾದರಿ ಗಣಕವ್ಯವಸ್ಥೆಯನ್ನು ರೂಪಿಸುವಂತೆ ಹತ್ತು ವರ್ಷಗಳ ಅವಧಿಯ ಕಾರ್ಯಯೋಜನೆಯ ಪ್ರಸ್ತಾಪವನ್ನಿಟ್ಟರು. ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸರ್ಕಾರವು 1982ರಲ್ಲಿ ನಿರ್ಧರಿಸಿತಲ್ಲದೇ, ಇನ್‌‌ಸ್ಟಿಟ್ಯೂಟ್‌‌ ಫಾರ್‌‌ ನ್ಯೂ ಜನರೇಷನ್‌ ಕಂಪ್ಯೂಟರ್‌ ಟೆಕ್ನಾಲಜಿ (ICOT) ಎಂಬ ಸಂಸ್ಥೆಯನ್ನು ವಿವಿಧ ಜಪಾನೀ ‌ಗಣಕ ಕಂಪೆನಿಗಳ ಜಂಟಿ ಹೂಡಿಕೆಯ ಸಹಾಯದಿಂದ ಸ್ಥಾಪಿಸಿತು.

ಕಾರ್ಯಗತಗೊಳಿಸುವಿಕೆ (ಅನುಷ್ಠಾನ)[ಬದಲಾಯಿಸಿ]

ಭವಿಷ್ಯದ ಎಲ್ಲಾ ಕಾರ್ಯಸಾಮರ್ಥ್ಯ ವೃದ್ಧಿಗಳಿಗೆ ಸಮಾಂತರಿತ ಗಣಕಕಾರ್ಯರಂಗವೇ ಸಮರ್ಥವೆಂಬ ನಂಬಿಕೆ ಎಷ್ಟು ಬೇರುಬಿಟ್ಟಿತ್ತೆಂದರೆ ಐದನೇ-ಪೀಳಿಗೆ/ತಲೆಮಾರು ಯೋಜನೆಯ ವಿಷಯಕ್ಕೆ ‌ಗಣಕ ಕ್ಷೇತ್ರದಲ್ಲಿ ಭಾರೀ ಆತಂಕ ವ್ಯಕ್ತವಾಯಿತು. 1970ರ ದಶಕದ ಅವಧಿಯಲ್ಲಿ ವಿದ್ಯುನ್ಮಾನ ಗ್ರಾಹಕೋದ್ಯಮ ಕ್ಷೇತ್ರದಲ್ಲಿ ಜಪಾನೀಯರು ಮುನ್ನಡೆ ಸಾಧಿಸಿದ್ದು ಹಾಗೂ ಅಷ್ಟೇ ಸ್ಪಷ್ಟವಾಗಿ 1980ರ ದಶಕದಲ್ಲಿ ವಾಹನೋದ್ಯಮದಲ್ಲಿ ಅದನ್ನು ಪುನರಾವರ್ತಿಸಿದ್ದನ್ನು ನೋಡಿದ ಮೇಲೆ 1980ರ ದಶಕದ ಅವಧಿಯಲ್ಲಿ ಜಪಾನೀಯರ ಅಪರಾಜಯತೆಯ ಬಗ್ಗೆ ಪ್ರಸಿದ್ಧರಾಗಿದ್ದರು. ಸ್ಟ್ರಾಟೆಜಿಕ್‌ ಕಂಪ್ಯೂಟಿಂಗ್‌ ಇನಿಷಿಯೇಟಿವ್‌‌ ಮತ್ತು ಮೈಕ್ರೋಎಲೆಕ್ಟ್ರಾನಿಕ್ಸ್‌‌ ಅಂಡ್‌ ಕಂಪ್ಯೂಟರ್‌ ಟೆಕ್ನಾಲಜಿ ಕಾರ್ಪೋರೇಷನ್‌ (MCC) ಎಂಬ ಹೆಸರುಗಳಿಂದ USನಲ್ಲಿ, ಆಲ್ವೆ ಎಂದು UKನಲ್ಲಿ ಹಾಗೂ ಯುರೋಪಿಯನ್‌ ಸ್ಟ್ರಾಟೆಜಿಕ್‌ ಪ್ರೋಗ್ರಾಮ್‌‌ ಆಫ್‌ ಇನ್‌ ರಿಸರ್ಚ್‌ ಇನ್‌ ಇನ್‌ಫರ್ಮೇಷನ್‌ ಟೆಕ್ನಾಲಜಿ (ESPRIT) ಎಂಬುದಾಗಿ ಯೂರೋಪ್‌ನಲ್ಲಿ, ಅಷ್ಟೇ ಅಲ್ಲದೇ ಬ್ರಿಟನ್‌ನ ICL, ಫ್ರಾನ್ಸ್‌ನ ಬುಲ್‌‌ ಮತ್ತು ಜರ್ಮನಿಯ ಸೀಮೆನ್ಸ್‌‌ಗಳ ಸಹಯೋಗದಲ್ಲಿ ಮ್ಯೂನಿಚ್‌ನಲ್ಲಿ ECRC (ಯುರೋಪಿಯನ್‌ ಕಂಪ್ಯೂಟರ್‌ ರಿಸರ್ಚ್‌ ಸೆಂಟರ್‌) ಎಂದು ಸಮಾಂತರಿತ ಯೋಜನೆಗಳನ್ನು ಶೀಘ್ರದಲ್ಲೇ ಸಿದ್ಧಪಡಿಸಲಾಯಿತು. ಅಂತಿಮವಾಗಿ ಐದು ಕಾರ್ಯನಿರ್ವಹಿಸಬಲ್ಲ ಸಮಾಂತರಿತ ನಿಗಮನಾತ್ಮಕ ಗಣಕಗಳನ್ನು (PIM) ಉತ್ಪಾದಿಸಲಾಯಿತು: ಅವುಗಳೆಂದರೆ PIM/m, PIM/p, PIM/i, PIM/k, PIM/c. ಸಮಾಂತರಿತ ದತ್ತಸಂಚಯ ನಿರ್ವಹಣಾ ವ್ಯವಸ್ಥೆಯಾದ ಕಪ್ಪಾ, HELIC-II ಎಂಬ ನ್ಯಾಯಿಕ ತರ್ಕ ವ್ಯವಸ್ಥೆ ಮತ್ತು MGTP ಎಂಬ ಸ್ವಯಂಚಾಲಿತ ಪ್ರಮೇಯ ಪ್ರಾಮಾಣ್ಯಕ, ಅಷ್ಟೇ ಅಲ್ಲದೇ ಜೈವಿಕ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನ್ವಯಗಳೂ ಸೇರಿದಂತೆ ಇಂತಹಾ ಗಣಕಗಳ ಮೇಲೆ ಕಾರ್ಯನಿರ್ವಹಿಸಬಲ್ಲ ತಂತ್ರಾಂಶಗಳನ್ನು ಕೂಡಾ ಈ ಯೋಜನೆಯು ನಿರ್ಮಿಸಿತ್ತು.

ವಿಫಲತೆ[ಬದಲಾಯಿಸಿ]

ಲಿಸ್ಪ್‌‌ ಗಣಕಯಂತ್ರ ಕಂಪೆನಿಗಳು ಮತ್ತು ಥಿಂಕಿಂಗ್‌ ಮೆಷೀನ್‌ ಕಂಪೆನಿಗಳ ಅಪಯಶಸ್ಸಿನವೇ ಕಾರಣಗಳು FGCS ಯೋಜನೆಯು ಕೂಡಾ ವಾಣಿಜ್ಯಿಕವಾಗಿ ಯಶಸ್ಸನ್ನು ಕಾಣದಿರುವುದರಲ್ಲಿ ಪಾತ್ರ ವಹಿಸಿದವು. ಸಾಧಾರಣ ವೈಶಿಷ್ಟ್ಯತೆಯ ಯಂತ್ರಾಂಶಗಳೇ (ಉದಾಹರಣೆಗೆ, Sun/ಸನ್‌ ವರ್ಕ್‌ಸ್ಟೇಷನ್‌ಗಳು ಮತ್ತು ಇಂಟೆಲ್‌‌/Intel x86 ಗಣಕಯಂತ್ರಗಳು) ಅಧಿಕಮಟ್ಟದ ಸಮಾಂತರಿತ ‌ಗಣಕ ಸಂರಚನೆಯನ್ನು ವೇಗದಲ್ಲಿ ಅಂತಿಮವಾಗಿ ಹಿಂದಿಕ್ಕಿದವು. ಭರವಸೆದಾಯಕ ಜಪಾನೀ ಸಂಶೋಧಕರ ನವೀನ ಪೀಳಿಗೆ/ತಲೆಮಾರನ್ನು ಸಾದರಪಡಿಸಲು ಈ ಯೋಜನೆಯು ವಿಫಲವಾಯಿತು. ಆದರೆ MITI ಸಂಸ್ಥೆಯು ಬೃಹತ್‌-ಪ್ರಮಾಣದ ‌ಗಣಕ ಸಂಶೋಧನಾ ಯೋಜನೆಗಳಿಗೆ ಧನಸಹಾಯ ನೀಡುವುದನ್ನು FGCS ಯೋಜನೆಯ ನಂತರ ನಿಲ್ಲಿಸಿತು, ಆಗ FGCS ಯೋಜನೆಯ ಕಾರಣವಾಗಿ ಮೂಡಿಬಂದಿದ್ದ ಸಂಶೋಧನಾ ಭರಾಟೆ/ತೀವ್ರತೆಯು ಕಣ್ಮರೆಯಾಯಿತು. ಆದಾಗ್ಯೂ MITI/ICOT ಜೋಡಿಯು ಆರನೇ ಪೀಳಿಗೆ/ತಲೆಮಾರು ಯೋಜನೆಯನ್ನು 1990ರ ದಶಕದಲ್ಲಿ ಉಪಕ್ರಮಿಸಿತು. ಸಮಾಂತರಿತ ‌ಗಣಕ ಸಂರಚನೆ ಹಾಗೂ ತಾರ್ಕಿಕತೆಯನ್ನು ಮಾಹಿತಿಯ ಬಿಂಬವನ್ನಾಗಿ ಮತ್ತು AI ಅನ್ವಯಗಳಿಗೆ ಸಮಸ್ಯೆ ನಿವಾರಣಾ ಭಾಷೆಯನ್ನಾಗಿ ಬಳಸುವುದರ ನಡುವೆ ಸೇತುವೆಯನ್ನಾಗಿ ಸಹವರ್ತಿ ನಿಗಮನಾತ್ಮಕ ಪ್ರೊಗ್ರಾಮಿಂಗ್‌ ಭಾಷೆಯೊಂದನ್ನು ಆಯ್ಕೆ ಮಾಡುವುದು ಪ್ರಧಾನ ಸವಾಲಾಗಿತ್ತು. ಈ ಅಗತ್ಯವನ್ನು ಎಂದಿಗೂ ಸಂಪೂರ್ಣವಾಗಿ ಪೂರೈಸಲಾಗಲಿಲ್ಲ; ಅನೇಕ ಭಾಷೆಗಳನ್ನು ಅಭಿವೃದ್ಧಿಪಡಿಸಲಾಗಿದ್ದರೂ, ಪ್ರತಿಯೊಂದರಲ್ಲೂ ಅದರದೇ ಆದ ಮಿತಿಗಳಿದ್ದವು. ಸಹವರ್ತಿ ನಿರ್ಬಂಧಸಹಿತ ನಿಗಮನಾತ್ಮಕ ಪ್ರೋಗ್ರಾಮಿಂಗ್‌ನ ಬದ್ಧತೆಯ ಆಯ್ಕೆ ಸೌಲಭ್ಯವು ನಿರ್ದಿಷ್ಟವಾಗಿ ಭಾಷೆಗಳ ನಿಗಮನಾತ್ಮಕ ಶಬ್ದಾರ್ಥ ನಿಯಮಗಳೊಂದಿಗೆ ವೈರುಧ್ಯವನ್ನು ಹೊಂದಿರುತ್ತಿತ್ತು.[೨] 1980ರ ದಶಕದಲ್ಲಿ ಚಾಲ್ತಿಯಲ್ಲಿದ್ದ CPU ಕಾರ್ಯಸಾಮರ್ಥ್ಯಗಳ ಬಗ್ಗೆ ಪರಿಣತರು ಗ್ರಹಿಸಿದ್ದ "ಸುಸ್ಪಷ್ಟ" ನಿರ್ಬಂಧದ ಹಂತಗಳನ್ನು ತ್ವರಿತವಾಗಿಯೇ ಮೀರಿಸಿದ್ದು ಮತ್ತೊಂದು ಸಮಸ್ಯೆಯಾಯಿತಲ್ಲದೇ ಸಮಾಂತರಿತ ಗಣಕೀಯ/ಗಣಕಕಾರ್ಯದ ಮಹತ್ವವು ತ್ವರಿತವಾಗಿ ಒಂದು ಕಾಲದಲ್ಲಿ ಕೆಲವೇ ಮಹತ್ವದ ಸಂದರ್ಭಗಳಲ್ಲಿ ಮಾತ್ರವೇ ಬಳಕೆಯಲ್ಲಿರುವ ಮಟ್ಟಕ್ಕೆ ಇಳಿಯಿತು. ಯೋಜನೆಯ ಕಾರ್ಯಾವಧಿಯಲ್ಲಿ ಅನೇಕ ಏರುತ್ತ ಹೋಗುವ ಸಾಮರ್ಥ್ಯದ ವರ್ಕ್‌ಸ್ಟೇಷನ್‌ ಗಣಕಗಳನ್ನು ವಿನ್ಯಾಸಗೊಳಿಸಿ ನಿರ್ಮಿಸಲಾಯಿತಾದರೂ, ವಾಣಿಜ್ಯಿಕವಾಗಿ ಲಭ್ಯವಿರುವ "ವೈಶಿಷ್ಟ್ಯರಹಿತ" ಗಣಕಗಳು ಅವುಗಳನ್ನು ಶೀಘ್ರದಲ್ಲೇ ಮೀರಿಸಿದ್ದವು. ತಂತ್ರಜ್ಞಾನದ ವಿರುದ್ಧ ದಿಕ್ಕಿನಲ್ಲಿ ಕಾರ್ಯನಿರ್ವಹಿಸುವುದು ಕೂಡಾ ಯೋಜನೆಯು ಸಮಸ್ಯೆಗಳನ್ನು ಎದುರಿಸಲು ಕಾರಣವಾಯಿತು. ಆಪಲ್‌/Apple ‌ಗಣಕಸಂಸ್ಥೆಯು GUIಅನ್ನು ಜನಸಾಮಾನ್ಯರಿಗೆ ಅದರ ಕಾರ್ಯಾವಧಿಯಲ್ಲಿ ಪರಿಚಯಿಸಿತು; ಅಂತರ್ಜಾಲವು ಸ್ಥಳೀಯವಾಗಿ ಶೇಖರಿಸಿಡುತ್ತಿದ್ದ ದತ್ತಸಂಚಯಗಳನ್ನು ವಿಸ್ತೃತ ದತ್ತಸಂಚಯಗಳನ್ನಾಗಿಸಿತು; ಮತ್ತು ಇನ್ನೂ ಸರಳವಾಗಿದ್ದ ಸಂಶೋಧನಾ ಯೋಜನೆಗಳು ದತ್ತ ಸಂಗ್ರಹೀಕರಣ ಕ್ಷೇತ್ರದಲ್ಲಿ ಅದಕ್ಕಿಂತ ಮಿಗಿಲಾದ ಕಾರ್ಯಪ್ರವೃತ್ತ ಫಲಿತಾಂಶಗಳನ್ನು ನೀಡಿದ್ದವು.[ಸಾಕ್ಷ್ಯಾಧಾರ ಬೇಕಾಗಿದೆ] ಇಷ್ಟೇ ಅಲ್ಲದೇ ಯೋಜನೆಯು ನಿಗಮನಾತ್ಮಕ ಪ್ರೋಗ್ರಾಮಿಂಗ್‌ಗಳು ಉಂಟುಮಾಡುವ ಭರವಸೆಯನ್ನು ಬದ್ಧತೆಯ ಆಯ್ಕೆಯ ಸೌಲಭ್ಯದ ಬಳಕೆಯು ಬಹುತೇಕ ಅಲ್ಲಗಳೆಯುತ್ತವೆ ಎಂದು ಕಂಡುಕೊಂಡಿತು. ಯೋಜನೆಯು 50 ಶತಕೋಟಿ ಯೆನ್‌ (ಸುಮಾರು US $400 ದಶಲಕ್ಷ 1992ರ ವಿನಿಮಯ ದರಗಳಲ್ಲಿ)ಗಳಿಗೂ ಹೆಚ್ಚಿನ ಮೊತ್ತವನ್ನು ಹತ್ತು ವರ್ಷಗಳ ಅವಧಿಯ ಕೊನೆಯಲ್ಲಿ ವ್ಯಯ ಮಾಡಿತ್ತಲ್ಲದೇ ತನ್ನ ಗುರಿಗಳನ್ನು ಸಾಧಿಸದೇ ಕೊನೆಗೊಂಡಿತು. ಸಾಮಾನ್ಯ ಗಣಕಗಳೇ ವರ್ಕ್‌‌ಸ್ಟೇಷನ್‌ಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದು ಮಾತ್ರವಲ್ಲದೇ ಅದಕ್ಕೂ ಮೀರಿದ ಕಾರ್ಯಕ್ಷಮತೆಗಳನ್ನು ನೀಡುತ್ತಿರುವದರಿಂದ ವರ್ಕ್‌‌ಸ್ಟೇಷನ್‌ಗಳು ಮಾರುಕಟ್ಟೆಯಲ್ಲಿ ಯಾವುದೇ ರೀತಿಯ ಆಕರ್ಷಣೆಯನ್ನು ಹೊಂದಲು ಸಾಧ್ಯವಾಗಲಿಲ್ಲ. ಈ ಪರಿಸ್ಥಿತಿಯು ಲಿಸ್ಪ್‌‌ ಗಣಕಯಂತ್ರಗಳ ಮಾರುಕಟ್ಟೆಗಳ ಪರಿಸ್ಥಿತಿಗೆ ಸಮಾಂತರವಾಗಿದ್ದು, ಅದರ ವಿಷಯದಲ್ಲಿ CLIPSನಂತಹಾ ನಿಯಮಾಧಾರಿತ ವ್ಯವಸ್ಥೆಗಳು ಸಾಧಾರಣ ‌ಗಣಕಗಳಲ್ಲಿ ಕೂಡಾ ಕಾರ್ಯನಿರ್ವಹಿಸಲು ಸಾಧ್ಯವಿದ್ದು, ತುಟ್ಟಿಯಾದಂತಹಾ ಲಿಸ್ಪ್‌ ಗಣಕಗಳನ್ನು ಅನಗತ್ಯವನ್ನಾಗಿಸಿದೆ.[೩] ಯೋಜನೆಯನ್ನು ವಿಫಲತೆಯೆಂದು ಪರಿಭಾವಿಸುವ ಸಾಧ್ಯತೆಯ ಹೊರತಾಗಿಯೂ ಭಾರೀ ಅಭಿಜ್ಞಾನ ಸಂಚಯಗಳ ಮೇಲೆ ಆಧಾರಿತವಾಗಿದ್ದ ನಿಗಮನಾತ್ಮಕ ಪ್ರೋಗ್ರಾಮಿಂಗ್‌ಗಳಂತಹಾ ಐದನೇ-ಪೀಳಿಗೆ/ತಲೆಮಾರು ಯೋಜನೆಯಲ್ಲಿ ಕಲ್ಪಿತವಾದ ಅನೇಕವನ್ನು ಪ್ರಸ್ತುತ ತಂತ್ರಜ್ಞಾನಗಳಲ್ಲಿ ಮರು-ವ್ಯಾಖ್ಯಾನಿತಗೊಳಿಸಲಾಗುತ್ತಿದೆ. ಸಮಾಂತರಿತ ಗಣಕಕಾರ್ಯರಂಗ ಗಳ ಅನೇಕ ವೈಶಿಷ್ಟ್ಯರೂಪಿಗಳು ಶೀಘ್ರವೃದ್ಧಿ ಕಾಣುತ್ತಿದ್ದರೂ ಕನಿಷ್ಟ ಹಂತದಲ್ಲಿ ಬಹು-ತಿರುಳಿನ/ಮಲ್ಟಿ-ಕೋರ್‌‌ ಸಂರಚನೆಗಳು ಮತ್ತು ಗರಿಷ್ಟ ಹಂತದಲ್ಲಿ ಭಾರೀ ಪ್ರಮಾಣದ ಸಮಾಂತರಿತ ಸಂಸ್ಕರಣೆಗಳು ಬಳಸುತ್ತಿದ್ದರೂ ವೆಬ್‌ ಆಂಟಾಲಜಿ ಲಾಂಗ್ವೇಜ್‌ (OWL) ಭಾಷೆಯು ನಿಗಮನ-ಆಧಾರಿತ ಅಭಿಜ್ಞಾನ ಸಂಚಯಗಳ ವ್ಯವಸ್ಥೆಗಳ ಅನೇಕ ಪದರಗಳನ್ನು ಹೊಂದಿರುವ ಅನೇಕ ರೂಪಗಳನ್ನು ಬಳಸುತ್ತದೆ.

ಘಟನಾವಳಿ[ಬದಲಾಯಿಸಿ]

  • 1982: FGCS ಯೋಜನೆಯು ಆರಂಭಗೊಂಡಿತಲ್ಲದೇ $450,000,000ರಷ್ಟು ಮೌಲ್ಯದ ಔದ್ಯಮಿಕ ಧನಸಹಾಯ ಮತ್ತು ಅಷ್ಟೇ ಮೊತ್ತದ ಸರ್ಕಾರಿ ಸಹಾಯವನ್ನು ಪಡೆದುಕೊಳ್ಳುತ್ತದೆ.
  • 1985: ಪರ್ಸನಲ್‌ ಸೀಕ್ವೆನ್ಷಿಯಲ್‌ ಇನ್‌ಫರೆನ್ಸ್‌ ಮೆಷೀನ್ ‌ (PSI) ಎಂಬ ಪ್ರಥಮ FGCS ಯಂತ್ರಾಂಶವನ್ನು ಹಾಗೂ ಸೀಕ್ವೆನ್ಚುಯಲ್‌ ಇನ್‌‌ಫರೆನ್ಸ್‌‌ ಮೆಷೀನ್‌ ಪ್ರೋಗ್ರಾಮಿಂಗ್‌‌ ಆಪರೇಟಿಂಗ್‌ ಸಿಸ್ಟಂ (SIMPOS) ಎಂಬ ಕಾರ್ಯಾಚರಣಾ ವ್ಯವಸ್ಥೆಯ ಪ್ರಥಮ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು. ಆಬ್ಜೆಕ್ಟ್‌ ಓರಿಯೆಂಟೆಡ್‌‌/ವಸ್ತು-ಅಭಿಮುಖವಾದ ಪ್ರೋಗ್ರಾಮಿಂಗ್‌ ಸೌಲಭ್ಯವುಳ್ಳ ಒಂದು ಸಹವರ್ತಿ ಪ್ರೋಲಾಗ್‌-ರೂಪಾಂತರವಾದ ಕರ್ನಲ್‌ ಲಾಂಗ್ವೇಜ್‌ 0 (KL0)ಅನ್ನು ಬಳಸಿ SIMPOS ಕಾರ್ಯಾಚರಣಾ ವ್ಯವಸ್ಥೆಯನ್ನು ರಚಿಸಲಾಗಿತ್ತು.
  • 1987: ಪ್ಯಾರಲೆಲ್‌ ಇನ್‌ಫರೆನ್ಸ್‌‌ ಮೆಷೀನ್‌ (PIM) ಎಂದು ಕರೆಯಲಾದ ವಾಸ್ತವವಾಗಿ ಸಮಾಂತರಿತ ಯಂತ್ರಾಂಶದ ಮಾದರಿಯನ್ನು ಅನೇಕ PSI:ಗಳನ್ನು ಜಾಲದಲ್ಲಿ ಸಂಪರ್ಕಿಸಿ ಸಿದ್ಧಪಡಿಸಲಾಗಿತ್ತು. ಈ ಯೋಜನೆಯು ಮತ್ತೂ 5 ವರ್ಷಗಳಿಗೆ ಬೇಕಾದ ಧನಸಹಾಯವನ್ನು ಪಡೆಯುತ್ತದೆ. "ಫ್ಲಾಟ್‌ GDC" (ಫ್ಲಾಟ್‌ ಗಾರ್ಡೆಡ್‌‌ ಡೆಫನಿಟಿವ್‌‌ ಕ್ಲಾಸಸ್‌‌)ವನ್ನು ಬಹುಮಟ್ಟಿಗೆ ಹೋಲುವ ಕರ್ನಲ್‌ ಭಾಷೆಯಾದ ಕರ್ನಲ್‌ ಲಾಂಗ್ವೇಜ್‌ 1 (KL1)ನ ನವೀನ ಆವೃತ್ತಿಯನ್ನು ಪ್ರೋಲಾಗ್‌ನಲ್ಲಿನ ಬೆಳವಣಿಗೆಗಳಿಂದ ಪ್ರೇರಿತವಾಗಿ ರಚಿಸಲಾಯಿತು. KL1ಅನ್ನು ಬಳಸಿ ರಚಿಸಿದ ಕಾರ್ಯಾಚರಣಾ ವ್ಯವಸ್ಥೆಯನ್ನು ಪ್ಯಾರಲೆಲ್‌‌ ಇನ್‌ಫರೆನ್ಸ್‌ ಮೆಷೀನ್‌ ಆಪರೇಟಿಂಗ್‌ ಸಿಸ್ಟಮ್‌ ಅಥವಾ PIMOS ಎಂದು ಮರುನಾಮಕರಣ ಮಾಡಲಾಯಿತು.

ಟಿಪ್ಪಣಿಗಳು[ಬದಲಾಯಿಸಿ]

  1. ಕಝುಹಿರೋ ಫ್ಯೂಚಿ, ರೀವಿಸಿಟಿಂಗ್‌ ಒರಿಜಿನಲ್‌ ಫಿಲಾಸಫಿ ಆಫ್‌ ಫಿಫ್ತ್‌‌‌ ಜನರೇಷನ್‌ ‌ಕಂಪ್ಯೂಟರ್‌ ಸಿಸ್ಟಮ್ಸ್‌ ಪ್ರಾಜೆಕ್ಟ್‌, FGCS 1984, pp. 1-2
  2. ಕಾರ್ಲ್‌ ಹೆವಿಟ್‌ ಮಿಡಲ್‌ ಹಿಸ್ಟರಿ ಆಫ್‌ ಲಾಜಿಕ್‌ ಪ್ರೋಗ್ರಾಮಿಂಗ್‌ : ರೆಸೊಲ್ಯೂಷನ್‌, ಪ್ಲಾನರ್‌, ಪ್ರೋಲಾಗ್‌ ಅಂಡ್‌ ದ ಜಪಾನೀಸ್‌‌ ಫಿಫ್ತ್‌‌‌ ಜನರೇಷನ್‌ ಪ್ರಾಜೆಕ್ಟ್‌‌ ArXiv 2009.
  3. ಅವಾಯ್ಡಿಂಗ್‌ ಅನದರ್‌ AI ವಿಂಟರ್‌, ಜೇಮ್ಸ್‌ ಹೆಂಡ್ಲರ್‌, IEEE ಇಂಟೆಲಿಜೆಂಟ್‌ ಸಿಸ್ಟಮ್ಸ್‌‌ (ಮಾರ್ಚ್‌/ಏಪ್ರಿಲ್‌ 2008 (Vol. 23, No. 2) pp. 2-4

ಬಾಹ್ಯ ಕೊಂಡಿಗಳು[ಬದಲಾಯಿಸಿ]