ಐತಿಹಾಸಿಕ ಮರಿಯಾಪುರ

ವಿಕಿಪೀಡಿಯ ಇಂದ
Jump to navigation Jump to search


ಮುನ್ನುಡಿ[ಬದಲಾಯಿಸಿ]

ಒಂದು ಊರಿನ ಅಥವಾ ಒಂದು ಸಂಸ್ಥೆಯ ಶತಮಾನೋತ್ಸವ ಅತ್ಯಂತ ಮಹತ್ವ ಪೂರ್ಣ ಘಟನೆ. ಜ್ಯೂಬಿಲಿ ಅಂದರೆ ರಜತ ಮಹೋತ್ಸ್ಸವವನ್ನಾಗಲಿ ,ಸ್ವರ್ಣ ಮಹೋತ್ಸವವನ್ನಾಗಲಿ ಆಚರಿಸಿದವರು ಜನರಿಗೆ ಮಾಡಿದಂಥ ಮಹತ್ಕಾರ್ಯಗಳನ್ನು ದೇವರೇ ಯೆಹೂದ್ಯರಿಗೆ ಆಜ್ಞಾಪಿಸಿದರು. ಅಲ್ಲದೆ ಜನತೆಯು ಅನುಭವಿಸುವಂಥ ಧಾರ್ಮಿಕ ಮತ್ತು ಸಾಮಾಜಿಕ ಸೌಲಭ್ಯಗಳನ್ನು ಕುರಿತು ಮೆಲುಕು ಹಾಕುವುದಕ್ಕು ತಮ್ಮ ಪೂರ್ವಿಕರ ಪರಿಸ್ಥಿತಿಯನ್ನು ಅರಿತುಕೊಂಡು ಪ್ರಸ್ತುತ ಕಾಲದಲ್ಲಿ ಊರಿಗೂ ತಮಗೂ ದೊರಕಿದ್ದ ಅಪಾರ ಕೊಡುಗೆಗಳಿಗಾಗಿ ದೇವರನ್ನು ಸ್ತುತಿಸಿ ಕೊಂಡಾಡುವುದು ಪ್ರತಿಯೊಬ್ಬರ ಕರ್ತವ್ಯವೇ ಸರಿ. ಮರಿಯಾಪುರ ಗ್ರಾಮ ಪ್ರಾರಂಭವಾದದ್ದು ೧೮೭೦ ರಲ್ಲಿ. ಬರಗಾಲದಿಂದಲೂ ಪ್ಲೇಗ್ನನಿಂದಲೂ ಸಾವಿರಾರು ಜನರು ಹಳೆಯ ಮೈಸೂರು ಸಂಸ್ಥಾನದಲ್ಲಿ ಅಸುನೀಗಿದಾಗ ಅನಾಥರಾದ ಅವರ ಸುಮಾರು ೬೦೦ ಬಾಲಕರನ್ನು ವಿವಿಧ ಪ್ರದೇಶಗಳಿಂದ ಇಲ್ಲಿಗೆ ತಂದು ವಂ. ಸ್ವಾಮಿ ಫಿಲಿಪ್ ಸಿಜೋನ್ (ಎಂ. ಇ. ಪಿ.) ಅವರು ಸಾಕಿದರು . ಮಕ್ಕಳು ವಯಸ್ಸಿಗೆ ಬಂದಾಗ ಕಾನ್ವೆಂಟ್ ಗಳಲ್ಲಿದ್ದ ಅನಾಥ ಹೆಣ್ಣು ಮಕ್ಕಳನ್ನು ತಂದು ಮದುವೆ ಮಾಡಿಸಿ , ಸರ್ಕಾರವು ಕೊಟ್ಟಿದ್ದ ಜಮೀನನ್ನು ವಿತರಣೆ ಮಾಡಿಕೊಟ್ಟರು. ದೇವಾಲಯವನ್ನು ಒಂದು ಪ್ರಾಥಮಿಕ ಶಾಲೆಯನ್ನ್ನೂ ಪ್ರಾರಂಭಿಸಿದರು. ಹೀಗೆ ಪ್ರಾರಂಭವಾದ ಊರು ಇಂದಿನ ಭವ್ಯ ಮಟ್ಟಕ್ಕೆ ಏರಿದೆ. ಅಂತೆಯೇ ಮಕ್ಕಳಿಗೆ ಸೂಕ್ತವಾದ ಶಿಕ್ಷಣ ನೀಡಲು ಮತ್ತು ಜನರಿಗೆ ಆಸ್ಪ ತ್ರೆಯ ಸೌಕರ್ಯಗಳನ್ನು ಒದಗಿಸಿಕೊಡಲು ಹೋಲಿ ಫ್ಯ್ಯಾಮಿಲಿ ಕಾನ್ವೆಂಟ್ ಪ್ರಾರಂಭವಾಯಿತು. ಸಾವಿರಾರು ಮಕ್ಕಳಿಗೆ ವಿಧ್ಯ್ಯಾ ಭ್ಯಾಸವನ್ನು ನೀಡಿ ಊರಿನ ಹಾಗೂ ಸುತ್ತಮುತ್ತ ಸಾಮಾಜಿಕ ಕಾರ್ಯಗಳನ್ನು ಸಹ ಕೈಗೊಂಡಿದೆ.

ಮರಿಯಾಪುರ ಆದಿ ಕುರಿತು ಒಂದು ವರದಿ[ಬದಲಾಯಿಸಿ]

ಕರ್ನಾಟಕದಲ್ಲಿ ಕ್ರೈಸ್ಥ ಧರ್ಮ ಆರಂಭವಾದದ್ದು ಆನೇಕಲ್ ನಲ್ಲಿ , ಅದೂ ಕ್ರಿ. ಶ. ೧೪೦೦ ರಲ್ಲಿ. ಅಲ್ಲಿಗೆ ತಂದವರು ಡೊಮಿನಿಕನ್ ಸಭೆಗುರುಗಳು- ಎಂಭ ಹೇಳಿಕೆಗಳು ಎಷ್ಟೋ ದಿನಗಳಿಂದ ಪ್ರಚಾರದಲ್ಲಿವೆ. ಆದರೆ ಅವುಗಳನ್ನು ದೃಢೀಕರಿಸುವ ಮಾಹಿತಿಗಳು ಇನ್ನೂ ಸಿಕ್ಕಬೇಕಾಗಿವೆ . ೧೬೪೮ ರಿಂದ ಇಟಾಲಿಯಮನ್ ಹಾಗೂ ಪೋರ್ಚುಗೀಸ್ ಜೆಸುಯಿಟ್ ಗುರುಗಳು ಕ್ರೈಸ್ಥ ಧರ್ಮವನ್ನು ಶ್ರೀರಂಗಪಟ್ಟಣ , ಕೊಳ್ಳೇಗಾಲ , ಕನಕಪುರ ಮುಂತಾದ ತಾಲ್ಲೂಕುಗಳಲ್ಲಿ ಹರಡಿದರೆಂಬುದಕ್ಕೆ ಸಾಕಷ್ಟು ಅಧಿಕೃತ ಪುರಾವೆಗಳು ದೊರಕಿವೆ. ಅಂತೆಯೇ ೧೭೦೨ ರಿಂದ ಫ್ರೆಂಚ್ ಜೆಸುಯಿಟರು ಮುಳುಬಾಗಿಲು ತಾಲ್ಲೂಕಿನ ಗೋಕುಂಟೆ ,ದೇವನಹಳ್ಳಿ , ಚಿಕ್ಕಬಳ್ಳಾಪುರ ,ಶಿಡ್ಲಘಟ್ಟ ಎಂಬ ತಾಲ್ಲೂಕುಗಳಲ್ಲಿ ಧರ್ಮಪ್ರಚಾರ ಕೈಗೊಂಡಿದ್ದರು ಎಂಬುದಕ್ಕೂ ಅಪಾರ ಆಧಾರ ಪತ್ರಗಳು ಸಿಕ್ಕಿವೆ. ಆದರೆ ೧೮೦೦ ರಿಂದ ೧೯೪೩ರ ವರೆಗೆ ಇಲ್ಲಿ ಕ್ರೈಸ್ಥರ ಆಧ್ಯಾತ್ಮಿಕ ಪರಿಪಾಲನೆಯನ್ನು ಕೈಗೊಂಡಿದ್ದ ಎಂ. ಇ. ಪಿ.ಎಂಬ ಹೊರನಾಡಿನ ಮತ್ತೊಂದು ಫ್ರೆಂಚ್ ಸಭೆಗುರುಗಳು ಅಂಥ ಚರಿತ್ರಾಗಾರರಾಗಿರಲಿಲ್ಲ. ಇಂಗ್ಲೀಷಾಗಲಿ, ಕನ್ನಡವಾಗಲಿ ಅವರಿಗೆ ಅಷ್ಟಾಗಿ ತಿಳಿದಿರಲಿಲ್ಲ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪ್ರವೀಣರಾಗಿದ್ದ ಅವರು ಶಿಕ್ಷಣಾ ಕ್ಷೇತ್ರದತ್ತ ಅಷ್ಟು ಗಮನ ಹರಿಸಲಿಲ್ಲ. ಅವರು ಬಿಟ್ಟುಹೋಗಿರುವ ಅಲ್ಪಸ್ವಲ್ಪ ಚಾರಿತ್ರಿಕ ತುಣುಕುಗಳು ಕೂಡ ಇನ್ನೂ ಫ್ರೆಂಚ್ ಭಾಷೆಯಲ್ಲೆ ಉಳಿದು ಬಿಟ್ಟಿವೆ.ಫ್ರೆಂಚ್ ಗುರುಗಳ ಕಾಲದಲ್ಲಿ ಅಂದರೆ ೧೮೮೦ ರಲ್ಲಿ, ಆರಂಭಗೊಂಡ ಮರಿಯಾಪುರ ಕುರಿತಾದ ಈ ಕೆಳಕಂಡ ಪುಟ್ಟ ವರದಿಯೂ ಫ್ರೆಂಚ್ ಭಾಷೆಯಲ್ಲೆ ಇಲ್ಲಿಯವರೆಗೂ ಇತ್ತು.

ಕ್ರಿ. ಶ. ೧೪೦೦ ರಲ್ಲಿ ಮೈಸೂರು ಸಂಸ್ಥಾನದಲ್ಲಿನ ಒಂದು ಗ್ರಾಮಾಂತರ ಪ್ರದೇಶದಲ್ಲಿ ಒಂದು ಹೊಸ ಊರನ್ನು ಕಟ್ಟಬೇಕೆಂಬ ಯೋಜನೆ ಮೂಡಿತು. ಇದೇ ಮರಿಯಾಪುರ ಗ್ರಾಮ. ಮೈಸೂರಿನಿಂದ ಅನೇಕ ಅನಾಥ ಮಕ್ಕಳನ್ನು ಇಲ್ಲಿಗೆ ಕಳುಹಿಸಲಾಯಿತು. ಈ ಮಕ್ಕಳು ತಾಯಿ ತಂದೆಯರನ್ನು ಕಳೆದುಕೊಂಡಿದ್ದರಿಂದ ತೀರಾ ಪರಿತಾಪಕರ ಸ್ಥಿತಿಯಲ್ಲಿದ್ದರು. ಹೀಗೆ ಅನಾಥ ಮಕ್ಕಳಿಗಾಗಿ ಕೆಲವು ನಿಲಯಗಳನ್ನು ಶಿಲ್ವೇಪುರದಲ್ಲಿ ಮತ್ತು ಹೊಸೂರು ಗ್ರಾಮಗಳಲ್ಲಿ ನಿರ್ಮಿಸಲಾಗಿತ್ತು. ಆದರೆ ಈ ಊರುಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದರಿಂದ ಸ್ಥಳವಕಾಶ ಕಡಿಮೆಯಾಯಿತು.ಅಲ್ಲದೆ ಅಲ್ಲಿ ವಾಯುಗುಣವು ಸಹ ಅಷ್ಟು ಚೆನ್ನಾಗಿರಲಿಲ್ಲ. ಹೀಗಾಗಿ ಇನ್ನೊಂದು ಸ್ಥಳವನ್ನು ಅವರು ಆರಿಸಿಕೊಂಡು ಹೋದಾಗ ಸೋಮನಹಳ್ಳಿಯ ಪಕ್ಕದಲ್ಲಿರುವ ತಟ್ಟಗುಪ್ಪೆ ಸಿಕ್ಕಿತು. ತಟ್ಟಗುಪ್ಪೆ ಒಂದು ಚಿಕ್ಕ ಗ್ರಾಮವಾಗಿತ್ತು. ಬರಗಾಲ ಮತ್ತು ಪಿಡುಗಿನ ನಿಮಿತ್ತ ಅದು ನಿರ್ಜನಪ್ರದೇಶ ವಾಗುವುದರಲ್ಲಿತ್ತು ಆದರೆ ಕಾಡುಗಳು ದಟ್ಟವಾಗಿದ್ದವು. ಸರ್ಕಾರದಿಂದ ಈ ಕಾಡು ಪ್ರದೇಶವನ್ನು ಉಚಿತವಾಗಿ ತೆಗೆದುಕೊಂಡು ಒಂದು ಹೊಸ ಗ್ರಾಮವನ್ನು ನಿರ್ಮಿಸಲಾಯಿತು. ಇದೇ ಮರಿಯಾಪುರ ಗ್ರಾಮ. ಮರಿಯಾಪುರದ ಜತೆಗೆ ಮಾರಿಕೊಪ್ಪಲು , ಅರಳಂದ ಎಂಬ ಗ್ರಾಮಗಳು ಉದ್ಬವಿಸಿದವು.

ವಂ.ಸ್ವಾಮಿ ಸಿಜೋನ್ ರವರ ಮಾರ್ಗದರ್ಶನದಲ್ಲಿ ವ್ಯವಸಾಯ ಮಾಡಲು ಯುವಕರನ್ನು ಬಳಸಲಾಯಿತು.ಬಡತನವನ್ನು ನಿವಾರಿಸಲು ಈ ಕಸುಬು ಅವಶ್ಯಕವಾಗಿತ್ತು. ಇಲ್ಲಿಗೆ ಮೈಸೂರು, ಕೊಯಮತ್ತೂರು ಮುಂತಾದ ಸ್ಥಳಗಳಿಂದ ಬಡ ಮಕ್ಕಳು ಬಂದು ಸೇರಿಕೊಂಡರು. ಹವಾಗುಣ ಬಲು ಚೆನ್ನಾಗಿತ್ತು. ಎಲ್ಲಾ ದೃಷ್ಟಿ ಗಳಿಂದ ಪರಿಸರ ಹಿತಕರವಾಗಿ ಮಕ್ಕಳ ಏಳಿಗೆಗೆ ಇದು ಸೂಕ್ತ ಸ್ಥಳವೆಂದು ಎಲ್ಲರಿಗೂ ಸ್ಪಷ್ಟವಾಯಿತು. ಮರಿಯಾಪುರದಂತಹ ಮುಖ್ಯ ವಿಚಾರಣೇಯ ಬಗ್ಗೆ ಇಷ್ಟೇಯಿಷ್ಟು ವಿವರವನ್ನು ಬಿಟ್ಟುಹೊಗಿರುವ ಈ ಫ್ರೆಂಚ್ ಗುರುಗಳು ತಾವು ದುಡಿದ ಎಲ್ಲಾ ಊರುಕೇರಿಗಳಲ್ಲಿ ಭವ್ಯವಾದ ದೊಡ್ದ ದೊಡ್ಡ ದೇವಸ್ಥಾನಗಳನ್ನು , ಗುರುನಿಲಯಗಳನ್ನು ಕಟ್ಟಿರುವುದು ಮೆಚ್ಚ ತಕ್ಕ ಕಾರ್ಯ.ಬೆಂಗಳೂರಿನ ಸೆಂಟ್ ಫ್ರಾನ್ಸಿಸ್ ಕ್ಸೇವಿಯರ್ ಪ್ರಧಾನಾಲಯ, ಸೆಂಟ್ ಮೇರಿಸ್ ಬೆಸಿಲಿಕಾ,ಮೈಸೂರಿನ ಸೆಂಟ್ ಫಿಲೋಮಿನಾಚ ಚರ್ಚ್ ಈ ಮುಂತಾದ ಕ್ರೈಸ್ಥ ದೇವಸ್ಥಾನಗಳನ್ನು ಅವರ ಖ್ಯಾತ ಕಲಾಕೃತಿಗಳಾಗಿ ಮೆರೆಯುತ್ತಿವೆ. ಅಂತೆಯೇ ಮರಿಯಾಪುರದ ಈ ಭವ್ಯ ದೇವಾಲಯ ಆ ಗುರುಗಳ ಗುಣಗಾನ ಮಾಡುತ್ತಾ ನಿಂತಿದೆ.

ಮರಿಯಾಪುರದ ಇತಿಹಾಸ[ಬದಲಾಯಿಸಿ]

ಮರಿಯಾಪುರ ಸ್ಥಾಪಕ ವಂ. ಸ್ವಾಮಿ ಫಿಲಿಪ್ ಸಿಜೋನ್ ಫ್ರಾನ್ಸ್ ದೇಶದವರು. ಗುರು ದೀಕ್ಷೆಯ ನಂತರ ಒಂದು ಧರ್ಮಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು.ಜನವರಿ ೧೮೮೭ ರಲ್ಲಿ "ಪ್ಯಾರಿಸ್ ಫಾರಿನ್ ಮಿಷನ್" (ಎಂ. ಇ. ಪಿ.) ಸಂಸ್ಥೆಯ ೩೦ ಗುರುಗಳು ಕನ್ನಡ ನಾಡಿಗೆ ಕಾಲಿಟ್ಟು ಕನ್ನಡ ಕಲಿಯಲು ಪ್ರಾರಂಬಿಸಿದರು.ಧರ್ಮಾಧ್ಯಕ್ಷರ ನಿಲಯದಲ್ಲಿ ಊಳಿಗದಲ್ಲಿದ್ದ ಜನರೊಂದಿಗೆ ೬ ತಿಂಗಳ ಕಾಲ ತಮ್ಮ ಕನ್ನಡ ಭಾಷೆಯನ್ನು ಪ್ರಯೋಗಿಸಿದರು. ನಂತರದಲ್ಲಿ ಸಿಜೋನ್, ತೆಸಿಯರ್, ಹಾಗೂ ರಾಯಪ್ಪ ಗುರುಗಳಿಗೆ ಶಿವಮೊಗ್ಗದ ಯೇಸುವಿನ ಪವಿತ್ರ ಹೃದಯದ ದೇವಾಲಯದಲ್ಲಿ ದುಡಿಯುವ ಅವಕಾಶ ದೊರಕಿತು.ಸ್ವಾಮಿ ತೆಸಿಯರ್ ಯೇಸುವಿನ ಪವಿತ್ರ ಹೃದಯದ ದೇವಾಲಯದ ಧರ್ಮಗುರುಗಳಾದರೆ ಇನ್ನಿಬ್ಬರು ಗುರುಗಳು ಶಿವಮೊಗ್ಗದಿಂದ ಒಂದೂವರೆ ಮೈಲಿ ದೂರದ ಹೊಸೂರು ಗ್ರಾಮದಲ್ಲಿ ಒಂದು ಅನಾಥಾಶ್ರಮ ನಿರ್ಮಿಸಿ ಬರಗಾಲದಲ್ಲಿ ತಾಯಿ ತಂದೆಯರನ್ನು ಕಳೆದುಕೊಂಡ ಅನಾಥರಿಗೆ ಪೋಷಕರಾದರು.ಅಲ್ಲಿಂದ ಒಂದು ಮೈಲಿ ದೂರದ ಮತ್ತೊಂದು ಅನಾಥಾಶ್ರಮದಲ್ಲಿ ಸಿಸ್ಟರ್ ಗಳು ಹೆಣ್ಣು ಮಕ್ಕಳಿಗೆ ಆಶ್ರಯ ನೀಡಿದ್ದರು. ಮೈಸೂರು ಮಹಾರಾಜ ಚಾಮರಾಜೇಂದ್ರ ಒಡೆಯರ್ ರವರಿಂದ ಸುಮಾರು ೪೦೦ ಎಕರೆ ಭೂಮಿ ಅನಾಥ ಮಕ್ಕಳ ಪೋಷಣೆಗೆಂದು ಉಚಿತವಾಗಿ ಸಿಕ್ಕಿತು.

ಅನಾಥಾಶ್ರಮ ಪ್ರಾರಂಭದ ಎರಡನೇ ವರ್ಷದ ಜೂನ್- ಜುಲೈ ತಿಂಗಳಲ್ಲಿ ಮಳೆ ಧಾರಾಕಾರವಾಗಿ ಸುರಿದು ಮಲೇರಿಯಾ ಕಾಣಿಸಿಕೊಂಡಿತು. ದೊಡ್ಡ ಪಟ್ಟಣಗಳಿಂದ ಬಂದ ಔಷಧಿಗಳೂ ಸಾವನ್ನು ತಡೆಯಲಾಗಲಿಲ್ಲ. ಪ್ರತಿ ದಿನ ಮಕ್ಕಳ ಕಳೇಬರಹಗಳು ಸ್ಮಶಾನದತ್ತ ಸಾಗುತ್ತಲೇ ಇದ್ದವು. ಅಧಿಕ ಮಳೆಯಿಂದ ಭೂಮಿ ಜೌಗು ಹಿಡಿದಿತ್ತು . ಈ ನೀರಿನ ಸೇವನೆಯಿಂದ ಕಾಯಿಲೆ ಉಲ್ಬಣವಾಗುತ್ತಿತ್ತು. ಕಂಗಾಲಾದ ಗುರುಗಳು ಪರಿಸ್ಥಿತಿಯನ್ನು ವಿವರಿಸಿ ಧರ್ಮಾಧ್ಯಕ್ಷರಿಗೆ ಪತ್ರ ಬರೆದರು. ಮಕ್ಕಳನ್ನು ಶಿಲ್ವೇಪುರಕ್ಕೆ ಸ್ಥಳಾಂತರಿಸಲು ಧರ್ಮಾಧ್ಯಕ್ಷರು ಆದೇಶ ನೀಡಿದರು. ಮಕ್ಕಳನ್ನು ಹೊತ್ತ ಗಾಡಿಗಳು, ದನ, ಕರು, ಎಮ್ಮೆ ಮುಂತಾದ ಪ್ರಾಣಿಗಳು ಕೆಲ ದಿನಗಳ ಪ್ರಯಣದ ನಂತರ ಶಿಲ್ವೇಪುರದ ಅನಾಥಾಶ್ರಮವನ್ನು ಸೇರಿಕೊಂಡವು. ಮೂರು ಗುರುಗಳ ಸೇವೆ ಶಿವಮೊಗ್ಗದಲ್ಲೇ ಮುಂದುವರೆಯಿತು.ಮೂರು ವರ್ಷಗಳ ನಂತರ ಸ್ವಾಮಿ ತೆಸಿಯರ್ ಧರ್ಮಾಧ್ಯಕ್ಷರ ನಿಲಯದಲ್ಲಿ ಖಜಾನೆ ಕೆಲಸಕ್ಕೆ , ಸ್ವಾಮಿ ರಾಯಪ್ಪ ಚಿಕ್ಕಬಳ್ಳಾಪುರದ ಧರ್ಮಕೇಂದ್ರಕ್ಕೆ ಹಾಗೂ .ಸ್ವಾಮಿ ಸಿಜೋನ್ ಅನಾಥರ ಸೇವೆಗೆಂದು ಶಿಲ್ವೇಪುರಕ್ಕೆ ವರ್ಗಾಯಿಸಲ್ಪಟ್ಟರು.ಸ್ವಾಮಿ ಫಿಲಿಪ್ ಸಿಜೋನ್ ೪ ವರ್ಷಗಳ ಕಾಲ ಶಿಲ್ವೇಪುರದಲ್ಲಿ ಹಸುಮಕ್ಕಳನ್ನು ಅಕ್ಕರೆಯಿಂದ ಸಾಕಿ ಧರ್ಮಾಧ್ಯಕ್ಷರ ನಿಲಯ ಸೇರಿಕೊಂಡರು.ಸ್ವಾಮಿ ಗೊರೇನ್ ಅವರು ಶಿಲ್ವೇಪುರದ ಅನಾಥಾಶ್ರಮದ ಜವಾಬ್ದಾರಿಯನ್ನು ವಹಿಸಿಕೊಂಡು ೨ ಮೈಲಿ ದೂರದ ಹೊಲಗದ್ದೆ, ತೋಟ, ಕೆರೆ ಒಳಗೊಂಡ ಜೋಡಿಗ್ರಾಮವನ್ನು ೪೦೦೦೦ರೂ. ಗಳಿಗೆ ಕೊಳ್ಳುವ ಪ್ರಯತ್ನದಲ್ಲಿದ್ದರು.

ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿರುವ ಸೋಮನಹಳ್ಳಿಯು ಸ್ವಾಮಿ ಜೋಸೆಫ್ ಅವರ ಧರ್ಮಕೇಂದ್ರ ವಾಗಿತ್ತು. ಗುರುಗಳ ಅಗತ್ಯ ವಸ್ತುಗಳನ್ನು ತರಲು ಸೋಮನಹಳ್ಳಿಯ ಕುರುಬರ ಯಜಮಾನ ಪಾಪಣ್ಣ ತಾತನು ಆಗಾಗ ಕಾಲು ನಡಿಗೆಯಲ್ಲಿ ಧರ್ಮಾಧ್ಯಕ್ಷರ ಮನೆಗೆ ಹೋಗಿಬರುವುದು ರೂಢಿಯಾಗಿತ್ತು.ಶಿಲ್ವೇಪುರದಲ್ಲಿ ಗುರುಗಳು ಜಮೀನು ಖರೀಧಿಸುವ ವಿಚಾರ ಇವರ ಕಿವಿಗೆ ಬಿದ್ದಿತು. ತಾತನ ತಲೆ ಲೆಕ್ಕ ಹಾಕುವುದಕ್ಕೆ ಶುರು ಮಾಡಿತು." ಸೋಮನಹಳ್ಳಿಗೆ ಒಂದು ಮೈಲಿ ದೂರದ ತಟ್ಟಗುಪ್ಪೆ ಹಾಗೂ ಮತ್ತೆರಡು ಗ್ರಾಮಗಳು ಬರಗಾಲದಿಂದ ನಿರ್ಜನ ವಾಗಿವೆ. ವ್ಯವಸಾಯಕ್ಕೆ ಭಾರಿಕೆರೆ ಮತ್ತು ಸಾವಿರಾರು ಎಕರೆ ಫಲವತ್ತಾದ ಹೊಲಗದ್ದೆಗಳೂ ಇವೆ. ದನಕರುಗಳಿಗೆ ಹುಲ್ಲುಗಾವಲು ಇದೆ. ಮನೆಕಟ್ಟಲು ಸಮೀಪದ ಕಾಡಲ್ಲಿ ಮರಮುಟ್ಟುಗಳೂ ಯಥೇಚ್ಛವಾಗಿವೆ. ಈ ಸವಲತ್ತುಗಳು ಉಚಿತವಾಗಿ ಸಿಗುವಾಗ ೪೦೦೦೦ರೂ. ಕೊಟ್ಟು ಜಮೀನು ಏಕೆ ಕೊಳ್ಳುತ್ತಾರೆ " ಎಂಬ ಮುಗ್ಧ ಪ್ರಶ್ನೆಗೆ ಉತ್ತರ ಸಿಗಲಿಲ್ಲ . ಸಂದರ್ಭ ಬಂದಾಗ ತನ್ನ ವಾದವನ್ನು ತಾತನು ಧರ್ಮಾಧ್ಯಕ್ಷರ ಮುಂದಿಟ್ಟು, ಖಜಾನೆ ಸ್ವಾಮಿಯವರು ಕೊಟ್ಟ ವಸ್ತುಗಳನ್ನು ಬಿರಿದು ಪೆಟ್ಟಿಗೆಯಲ್ಲಿಟ್ಟು ಹುರಿಯಿಂದ ಬಿಗಿದು ತಲೆಯ ಮೇಲೇರಿಸಿಕೊಂಡು ಸೋಮನಹಳ್ಳಿ ಕಡೆ ಹೊರಟನು. ಅದುವರೆಗೆ ತಿಳಿಯಾಗಿದ್ದ ಧರ್ಮಾಧ್ಯಕ್ಷರ ತಲೆಯು ತಾತನ ವಾದದಿಂದ ಕಾವೇರಿತು. ಮುದುಕನ ಮಾತು ಸತ್ಯವಾದರೆ ಹಣವೂ ಉಳಿಯುತ್ತದೆ ಎನಿಸಿತ್ತು ಅವರಿಗೆ. ತಕ್ಷಣ ಸೋಮನಹಳ್ಳಿಯ ಗುರುಗಳಿಗೆ ಕಾಗದ ಬರೆದು ವಿಷಯ ಖಚಿತ ಪಡಿಸಿಕೊಂಡರು.

ಬರಗಾಲ[ಬದಲಾಯಿಸಿ]

೧೮೭೫,೭೬,೭೭,೭೮ ರಲ್ಲಿ ಕಠಿಣ ಬರಗಾಲ ಹಾಗೂ ಪ್ಲೇಗ್ ಪಿಡುಗಿನಿಂದ ಹಳೆಯ ಮೈಸೂರು ಸಂಸ್ಥಾನದಲ್ಲಿ ಸಾವಿರಾರು ಜನ ಅಸು ನೀಗಿದ್ದರು. ಅವರ ಮಕ್ಕಳು ಬೀದಿ ಪಾಲಾಗಿದ್ದರು . ಇಂಥ ಅನಾಥರಿಗೆ ಬೆಂಗಳೂರಿನಲ್ಲಿ ಸರ್ಕಾರವು ೫ ಅನ್ನದ ಛತ್ರಗಳನ್ನು ಏರ್ಪಡಿಸಿತ್ತು. ಬರ್ಮಾ, ಸಿಂಗಾಪುರ್ ಮುಂತಾದ ಕಡೆಗಳಿಂದ ಬರುತಿದ್ದ ಅಕ್ಕಿ ನುಚ್ಚು ಛತ್ರಗಳಲ್ಲಿದ್ದ ೫-೬ ಸಾವಿರ ಅನಾಥರ ಅನ್ನವಾಗಿತ್ತು. ಅನಾಥರಿಗೆ ಅನ್ನಕೊಟ್ಟು ಬೆಳೆಸಿ ಅವರ ಕಾಲುಗಳ ಮೇಲೆ ಅವರೇ ನಿಲ್ಲುವಂತೆ ಮಾಡಲು ಸರ್ಕಾರಕ್ಕೆ ಸಾಧ್ಯವೇ? ಅನಾಥರ ಜವಾಬ್ಧಾರಿಯನ್ನು ಸಂಸ್ಥೆಗಳು ವಹಿಸಿಕೊಂಡಲ್ಲಿ ಭೂಮಿ, ತಲೆಗಿಷ್ಟು ಹಣಕೊಟ್ಟು ಸಂದಿಗ್ಧ ಪರಿಸ್ಥಿತಿಯಿಂದ ಬಚಾವಾಗಬೇಕೆಂಬುದೇ ಸರ್ಕಾರಿ ಅಧಿಕಾರಿಗಳ ಒಮ್ಮತವಾಗಿತ್ತು. ಅದೃಷ್ಟವಶಾತ್ ಕೆಲವು ಸಂಸ್ಥೆಗಳು ಮುಂದೆ ಬಂದವು.ಅವಗಳಲ್ಲಿ ಮುಖ್ಯವಾದುದು ರೋಮನ್ ಕ್ಯಾಥೊಲಿಕ್ ಮಿಷನ್. ಧರ್ಮಾಧ್ಯಕ್ಷರು ೧೬೫೦ ಮಕ್ಕಳನ್ನು ಸ್ವೀಕರಿಸಿ ಮೈಸೂರು, ಶಿವಮೊಗ್ಗ, ಶೆಟ್ಟಿಹಳ್ಳಿ, ದೊರೆಸಾನಿಪಾಳ್ಯ, ಶಿಲ್ವೇಪುರ, ಕಸಗಟ್ಪಪುರ ಮುಂತಾದ ಎಡೆಗಳಿಗೆ ಸಾಗಿಸಿದರು.ಸೋಮನಹಳ್ಳಿ ಸಮೀಪದ ತಟ್ಟಗುಪ್ಪೆ, ವಡ್ಡರಪಾಳ್ಯ ಮತ್ತು ಆಳಕ ಬೆಳಲು ಎಂಬ ನಿರ್ಜನ ಹಾಳು ಗ್ರಾಮಗಳ ಮಧ್ಯೆ ಅನಾಥಾಶ್ರಮ ಸ್ಥಾಪಿಸಲು ಸ್ವಾಮಿ ಸಿಜೋನ್ ಮುಂದಾದರು. ೧೬೮ ಮಕ್ಕಳ ಜೊತೆಗೆ ವ್ಯವಸಾಯ ಉಪಕರಣಗಳನ್ನು ಹೊತ್ತ ಎತ್ತಿನ ಗಾಡಿಗಳು ಯಡಿಯೂರು ಮಾರ್ಗವಾಗಿ ರಾತ್ರಿ ಪ್ರಯಾಣ ಮಾಡಿ ಬೆಳಿಗ್ಗೆ ೧೦ಕ್ಕೆ ಸೋಮನಹಳ್ಳಿಯ ಸಂತ ಫ್ರಾನ್ಸಿಸ್ ಕ್ಸೇವಿಯರ್