ವಿಷಯಕ್ಕೆ ಹೋಗು

ಏರ್‌ ಫೋರ್ಸ್‌ ಒನ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Air Force One
SAM 28000, one of the two VC-25s used as Air Force One, above Mount Rushmore

ಏರ್‌ ಫೋರ್ಸ್‌ ಒನ್‌ ಎಂಬುದು, ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಷ್ಟ್ರಾಧ್ಯಕ್ಷರು ಪ್ರಯಾಣಿಸುವ ಯಾವುದೇ ಅಮೆರಿಕಾ ಸಂಯುಕ್ತ ಸಂಸ್ಥಾನ ಏರ್‌ ಫೋರ್ಸ್‌ ವಿಮಾನದ ಅಧಿಕೃತ ವಾಯುಯಾನ ಸಂಚಾರ ನಿಯಂತ್ರಣಾ ಕರೆಯ ಸಂಕೇತವಾಗಿದೆ.[] 1990ರಿಂದಲೂ, ಈ ರಾಷ್ಟ್ರಾಧ್ಯಕ್ಷರ ತಂಡ (ದಳ)ದಲ್ಲಿ, ವಿಶಿಷ್ಟವಾಗಿ ವಿನ್ಯಾಸವಾಗಿರುವ, ಬಹುಮಟ್ಟಿಗೆ 'ಹೇಳಿ-ಮಾಡಿಸಿದಂತಹ', 28000 ಮತ್ತು 29000ರ ಕ್ರಮಸಂಖ್ಯೆ ಹೊತ್ತ, ಏರ್‌ ಫೋರ್ಸ್‌ ಅಂಕಿತ VC-25A ಹೊಂದಿರುವ ಬೋಯಿಂಗ್‌ 747-200B ಸರಣಿಯ ಎರಡು ವಿಮಾನಗಳಿವೆ. ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಷ್ಟ್ರಾಧ್ಯಕ್ಷರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಮಾತ್ರ ಈ ವಿಮಾನಗಳು 'ಏರ್‌ ಫೋರ್ಸ್‌ ಒನ್‌' ಸಂಕೇತವನ್ನು ಹೊಂದಿದ್ದರೆ, ರಾಷ್ಟ್ರಾಧ್ಯಕ್ಷರಿಗಾಗಿಯೇ U.S. ಏರ್‌ ಫೊರ್ಸ್‌ (U.S. ವಾಯುಸೇನೆ) ಎರಡು ವಿಮಾನಗಳಲ್ಲಿ ಒಂದನ್ನು ಸಾಮಾನ್ಯವಾಗಿ ಬಳಸಿ ನಿರ್ವಹಣಾ ಕಾರ್ಯ ನಡೆಸುತ್ತದೆ. ಅಥವಾ ರಾಷ್ಟ್ರಾಧ್ಯಕ್ಷರು ಬಳಸುವ ಹೆಚ್ಚುವರಿ ವಾಯುಸೇನೆ ವಿಮಾನವೂ ಆಗಿರಬಹುದು.[]

ಏರ್‌ ಫೋರ್ಸ್‌ ಒನ್‌ ಎಂಬುದು ಅಮೆರಿಕಾ ರಾಷ್ಟ್ರಾಧ್ಯಕ್ಷರ ಮತ್ತು ಅವರ ಅಧಿಕಾರದ ಪ್ರಮುಖ ಸಂಕೇತವಾಗಿದೆ.[] ಈ ವಿಮಾನವು ವಿಶ್ವದ ಖ್ಯಾತ ವಿಮಾನಗಳಲ್ಲೊಂದು ಹಾಗೂ ಅತಿ ಹೆಚ್ಚು ಪ್ರಮಾಣದಲ್ಲಿ ಛಾಯಾಚಿತ್ರಣಕ್ಕೊಳಗಾಗುವ ವಿಮಾನವಾಗಿದೆ.[]

ಇತಿಹಾಸ

[ಬದಲಾಯಿಸಿ]

11 ಅಕ್ಟೋಬರ್‌ 1910ರಂದು, ಥಿಯೊಡೊರ್‌ ರೂಸ್ವೆಲ್ಟ್‌ ವಿಮಾನದಲ್ಲಿ ಪ್ರಯಾಣಿಸುವ ಮೊದಲ U.S. ರಾಷ್ಟ್ರಾಧ್ಯಕ್ಷರಾದರು. ಆದರೂ, ಆರಂಭಿಕ ರೈಟ್‌ ಫ್ಲೈಯರ್‌ ಮಾದರಿಯ ವಿಮಾನದಲ್ಲಿ (ಮಿಸ್ಸೂರಿಸೇಂಟ್‌ ಲ್ಯೂಯಿಸ್‌ ಹತ್ತಿರದ) ಕಿನ್ಲಾಕ್‌ ಫೀಲ್ಡ್‌ನಿಂದ ಪ್ರಯಾಣಿಸಿದ ಸಮಯದಲ್ಲಿ ಅವರು ಆಗಲೇ ತಮ್ಮ ಹುದ್ದೆ ತೊರೆದಿದ್ದರು. ಅವರ ನಂತರ ಬಂದ ವಿಲಿಯಮ್‌ ಹೊವಾರ್ಡ್‌ ಟಾಫ್ಟ್‌ US ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಈ ಐತಿಹಾಸಿಕ ವಿಮಾನ ಯಾನವು ಅಲ್ಲಿಯ ಗ್ರಾಮಾಂತರ ಸಂತೆಯಲ್ಲಿ ಕೆಲ ಕ್ಷಣ ಆಕಾಶದಲ್ಲಿ ಹಾರಿತ್ತಷ್ಟೆ. ಆದರೂ ಸಹ, ಇದು ರಾಷ್ಟ್ರಾಧ್ಯಕ್ಷರ ವಿಮಾನ ಯಾನಕ್ಕೆ ನಾಂದಿಯಾಯಿತು.[]

ಎರಡನೆಯ ವಿಶ್ವಸಮರದ ಮುಂಚೆ, ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಷ್ಟ್ರಾಧ್ಯಕ್ಷರು ದೇಶದಾಚೆಗಿನ ಮತ್ತು ದೇಶಾಂತರ ವಿಮಾನಾ ಯಾನ ನಡೆಸಿದ್ದು ಬಹಳ ವಿರಳವಾಗಿತ್ತು. ನಿಸ್ತಂತು ದೂರಸಂವಹನ ಮತ್ತು ವೇಗದ ಸಾರಿಗೆ ವ್ಯವಸ್ಥೆಯ ಕೊರತೆಯ ಕಾರಣ ಹೆಚ್ಚು ದೂರದ ಪ್ರಯಾಣ ಅಸಾಧ್ಯವಾಗುತ್ತಿತ್ತು. ಇದು ಬಹಳಷ್ಟು ಸಮಯ ತೆಗೆದುಕೊಳ್ಳುತ್ತಿತ್ತು; ಜೊತೆಗೆ, ವಾಷಿಂಗ್ಟನ್‌, D.C.ಯಲ್ಲಿ ನಡೆಯುವ ಘಟನೆಗಳಿಂದ ರಾಷ್ಟ್ರಾಧ್ಯಕ್ಷರನ್ನು ಪ್ರತ್ಯೇಕಿಸಲಾಗುವ ಪರಿಸ್ಥಿತಿಯೊದಗುತ್ತಿತ್ತು. 1930ರ ದಶಕದ ಅಪರಾರ್ಧದಲ್ಲಿ, ಡಗ್ಲಸ್‌ DC-3ರಂತಹ ವಿಮಾನಗಳು ತಯಾರಾದ ನಂತರ, ವಿಮಾನ ಯಾನವೂ ಸಾರಿಗೆಯ ಒಂದು ರೀತಿಯೆಂದು ಅಮೆರಿಕನ್‌ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪರಿಗಣಿಸಲಾರಂಭಿಸಿದರು. ಇಡಿಯಾಗಿ ಲೋಹದಿಂದ ತಯಾರಿಸಲಾದ ವಿಮಾನ, ಹೆಚ್ಚಿನ ಕ್ಷಮತೆಯುಳ್ಳ ಇಂಜಿನ್‌ಗಳು ಮತ್ತು ಸಂಚಾಲನೆ ಬೆಂಬಲಿಸಲು ನೂತನ ರೇಡಿಯೊ ಉಪಕರಣಗಳು ಲಭ್ಯವಿರುವ ಕಾರಣ ವಾಣಿಜ್ಯರೂಪದ ವಿಮಾನಯಾನವು ಇನ್ನಷ್ಟು ಸುರಕ್ಷಿತ ಮತ್ತು ಅನುಕೂಲಕರವಾಗಿಸಿದೆ. ಜೀವವಿಮೆ ಉದ್ದಿಮೆಗಳು ವಿಮಾನ ಚಾಲಕರಿಗೆ (ಪೈಲಟ್‌) ದುಬಾರಿ ದರಗಳಲ್ಲಿ ವಿಮಾ ಪಾಲಿಸಿ ನೀಡಲಾರಂಭಿಸಿದರು. ದೀರ್ಘಾವಧಿಯ ಪ್ರಯಾಣಕ್ಕಾಗಿ ಹಲವು ವಾಣಿಜ್ಯ ಪ್ರಯಾಣಿಕರು ಮತ್ತು ಸರ್ಕಾರಿ ಅಧಿಕಾರಿಗಳು ರೈಲಿನ ಬದಲು ವಿಮಾನಗಳಲ್ಲಿ ಸಂಚರಿಸಲಾರಂಭಿಸಿದರು.

ಫ್ರ್ಯಾಂಕ್ಲಿನ್‌ ಡಿ. ರೂಸ್ವೆಲ್ಟ್‌ ಅಧಿಕಾರಾವಧಿಯಲ್ಲಿರುವಾಗ ವಿಮಾನ ಪ್ರಯಾಣ ನಡೆಸಿದ ಮೊದಲ ಅಮೆರಿಕಾಧ್ಯಕ್ಷರಾಗಿದ್ದರು. ಎರಡನೆಯ ವಿಶ್ವಸಮರದ ಸಮಯ, 1943ರಲ್ಲಿ ಮೊರೊಕೊದಲ್ಲಿ ನಡೆದ ಕ್ಯಾಸಾ ಬ್ಲಾಂಕಾ ಸಮ್ಮೇಳನದಲ್ಲಿ ಭಾಗವಹಿಸಲು, ಫ್ರ್ಯಾಂಕ್ಲಿನ್‌ ರೂಸ್ವೆಲ್ಟ್‌ ಪ್ಯಾನ್‌-ಆಮ್ ಸಿಬ್ಬಂದಿಯುಳ್ಳ ಡಿಕ್ಸೀ ಕ್ಲಿಪರ್‌ ಎಂಬ ಬೋಯಿಂಗ್‌ 314 'ಫ್ಲೈಯಿಂಗ್ ಬೋಟ್‌(ಹಾರುವ ದೋಣಿ)'ನಲ್ಲಿ ಪ್ರಯಾಣಿಸಿದರು. ಈ ವಿಮಾನ ಯಾನವು ಮೂರು ಚರಣಗಳಲ್ಲಿ 5,500 ಮೈಲ್‌ ದೂರ ಕ್ರಮಿಸಿತ್ತು.[]

ಅಟ್ಲಾಂಟಿಕ್‌ ಸಾಗರದ ಸಮರದುದ್ದಕ್ಕೂ ಜರ್ಮನ್‌ ಜಲಾಂತರ್ಗಾಮಿಗಳಿಂದ ಅಪಾಯಗಳು ಸಂಭವಿಸುತ್ತಿದ ಕಾರಣ ಅಟ್ಲಾಂಟಿಕ್‌ ಸಾಗರದ ಮೇಲೆ ವಿಮಾನಯಾನವೇ ಸೂಕ್ತವೆನಿಸುತ್ತಿತ್ತು.[]

'ದಿ ಸೇಕ್ರಿಡ್‌ ಕೌ' ಎನ್ನಲಾದ ರಾಷ್ಟ್ರಾಧ್ಯಕ್ಷ ಫ್ರ್ಯಾಂಕ್ಲಿನ್‌ ಡಿ. ರೂಸ್ವೆಲ್ಟ್‌ರ C-54 ಸ್ಕೈಮಾಸ್ಟರ್‌ ಏರ್ಕ್ರಾಫ್ಟ್‌.

ರಾಷ್ಟ್ರಾಧ್ಯಕ್ಷರನ್ನು ಒಯ್ಯಲು ವಾಣಿಜ್ಯ ವಿಮಾನಗಳನ್ನು ಅವಲಂಬಿಸುವುದು ಅಷ್ಟೂ ಸೂಕ್ತವಲ್ಲವೆಂದು ಮನಗಂಡ USAAF ಅಧಿಕಾರಿಗಳು, ಒಂದು ಸೇನಾ ವಿಮಾನವನ್ನು ಪರಿವರ್ತಿಸಿ, ಸೇನೆಯ ಸರ್ವೋನ್ನತ ಅಧಿಕಾರಿಗಳ ವಿಶೇಷ ಅಗತ್ಯತೆಗಳಿಗೆ ಹೊಂದಿಸಿಕೊಡಲು ಆದೇಶ ಹೊರಡಿಸಿದರು.[] ರಾಷ್ಟ್ರಾಧ್ಯಕ್ಷರಿಗೇ ವಿಶಿಷ್ಟವಾಗಿ ಕಾದಿರಿಸಿದ ಮೊದಲ ವಿಮಾನವು C-87A VIP ಸಾರಿಗೆ ವಿಮಾನವಾಗಿತ್ತು. 41-24159 ಸಂಖ್ಯೆ ಹೊತ್ತ ವಿಮಾನವನ್ನು ರಾಷ್ಟ್ರಾಧ್ಯಕ್ಷೀಯ VIP ಸಾರಿಗೆಗಾಗಿ 1943ರಲ್ಲಿ ಪುನರ್ರಚಿಸಲಾಯಿತು. ದೇಶಾಧ್ಯಕ್ಷ ಫ್ರ್ಯಾಂಕ್ಲಿನ್‌ ಡಿ. ರೂಸ್ವೆಲ್ಟ್‌ರನ್ನು ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಒಯ್ಯುವ ಈ ವಿಮಾನವನ್ನು Guess Where II ಎಂದು ಮರುನಾಮಕರಣ ಮಾಡಲಾಯಿತು.[] ಒಂದು ವೇಳೆ ಇದು ಸ್ವೀಕಾರವಾದಲ್ಲಿ, ರಾಷ್ಟ್ರಾಧ್ಯಕ್ಷರ ಸೇವೆಗೆ ಬಳಸಲಾಗುವ ಮೊದಲ ವಿಮಾನವಾಗುತ್ತಿತ್ತು, ಅರ್ಥಾತ್‌ ಮೊದಲ ಏರ್‌ ಫೋರ್ಸ್‌ ಒನ್‌ ಆಗುತ್ತಿತ್ತು. ಆದರೂ, ಸೇವಾವಧಿಯಲ್ಲಿ C-87ರ ಬಹಳ ವಿವಾದಾತ್ಮಕ ಸುರಕ್ಷಾ ವಿಚಾರಗಳನ್ನು ಪರಿಗಣಿಸಿದ ಸಿಕ್ರೆಟ್‌ ಸರ್ವಿಸ್‌ ಅಧಿಕಾರಿಗಳು, Guess Where II ರಾಷ್ಟ್ರಾಧ್ಯಕ್ಷರನ್ನು ಒಯ್ಯಲು ಅನುಮತಿ ನಿರಾಕರಿಸಿದರು.[] ನಂತರ, ಈ ವಿಮಾನವನ್ನು ರೂಸ್ವೆಲ್ಟ್‌ ಸರ್ಕಾರದ ವರಿಷ್ಠ ಸದಸ್ಯರನ್ನು ವಿವಿಧ ಸ್ಥಳಗಳಿಗೆ ಒಯ್ಯಲು ಬಳಸಲಾಯಿತು. ಮಾರ್ಚ್ 1944ರಂದು, Guess Where II ಎಲೀನರ್‌ ರೂಸ್ವೆಲ್ಟ್‌ರನ್ನು ಲ್ಯಾಟೀನ್‌ ಅಮೆರಿಕಾ ದೇಶದ ಸೌಹಾರ್ದ ಯಾತ್ರೆಯ ಮೇರೆಗೆ ಒಯ್ದಿತ್ತು. 1945ರಲ್ಲಿ C-87 ವಿಮಾನ ಬಳಕೆಯನ್ನು ನಿಷೇಧಿಸಲಾಯಿತು.[]

ನಂತರ, ಸಿಕ್ರೆಟ್‌ ಸರ್ವಿಸ್‌ ಅಧಿಕಾರಿಗಳು ರಾಷ್ಟ್ರಾಧ್ಯಕ್ಷೀಯ ಪ್ರಯಾಣಕ್ಕಾಗಿ ಡಗ್ಲಸ್‌ C-54 ಸ್ಕೈಮಾಸ್ಟರ್‌ ವಿಮಾನದ ಮರುವಿನ್ಯಾಸ ಮಾಡಿಸಿದರು. ಸೇಕ್ರೆಡ್‌ ಕೌ ಎಂಬ ಅಡ್ಡಹೆಸರನ್ನು ಹೊತ್ತ ಈ VC-54C ವಿಮಾನವು ಶಯ್ಯಾಗಾರ ವ್ಯವಸ್ಥೆ, ರೇಡಿಯೊ ದೂರವಾಣಿ ಹಾಗೂ, ಗಾಲಿಕುರ್ಚಿಯಲ್ಲಿ ಕುಳಿತಿದ್ದ ರೂಸ್ವೆಲ್ಟ್‌ರನ್ನು ಎತ್ತಿ ಒಳಗೊಯ್ಯಲು ಒಳಸೆಳೆಯಬಲ್ಲ ಲಿಫ್ಟ್‌ ವ್ಯವಸ್ಥೆ ಸಹ ಇತ್ತು. ಬದಲಾವಣೆಯ ನಂತರ ರಾಷ್ಟ್ರಾಧ್ಯಕ್ಷ ರೂಸ್ವೆಲ್ಟ್‌ ಕೇವಲ ಒಂದು ಬಾರಿ ಈ ವಿಮಾನನ್ನು, ಫೆಬ್ರವರಿ 1945ರಲ್ಲಿ ನಡೆದ ಯಾಲ್ಟಾ ಸಮ್ಮೇಳನಕ್ಕೆ ಹೋಗಲು ಬಳಸಿದರು.[][not specific enough to verify]

ಮುಖ್ಯವಾಗಿ ರಾಷ್ಟ್ರಾಧ್ಯಕ್ಷ ಟ್ರೂಮನ್‌ರಿಂದ ಬಳಸಲಾಗುತ್ತಿದ್ದ 'ದಿ ಇಂಡಿಪೆಂಡೆನ್ಸ್‌'

1945ರ ವಸಂತಕಾಲದಲ್ಲಿ ರೂಸ್ವೆಲ್ಟ್‌ ನಿಧನರಾದ ನಂತರ ಉಪ-ರಾಷ್ಟ್ರಾಧ್ಯಕ್ಷ ಹ್ಯಾರಿ ಎಸ್‌. ಟ್ರೂಮನ್‌ ರಾಷ್ಟ್ರಾಧ್ಯಕ್ಷರಾದರು. U.S. ಏರ್‌ ಫೊರ್ಸ್ ಸೃಷ್ಟಿಸಿದ ಶಾಸನವಾದ 1947ರ ರಾಷ್ಟ್ರೀಯ ಸುರಕ್ಷಾ ಕಾಯಿದೆಗೆ VC-54C ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಹ್ಯಾರಿ ಟ್ರೂಮನ್‌ ಸಹಿ ಹಾಕಿದ್ದರು.[] 1947ರಲ್ಲಿ ಅವರು VC-54C ವಿಮಾನದ ಬದಲಿಗೆ, ಪರಿವರ್ತಿತವಾದ C-118 ಲಿಫ್ಟ್‌ಮಾಸ್ಟರ್‌ ವಿಮಾನವನ್ನು ಬಳಸಲಾರಂಭಿಸಿದರು. ಅವರು ಅದಕ್ಕೆ ಇಂಡಿಪೆಂಡೆನ್ಸ್‌ ಎಂದು ನಾಮಕರಣ ಮಾಡಿದರು (ಮಿಸ್ಸೂರಿಯಲ್ಲಿರುವ ತಮ್ಮ ಸ್ವಸ್ಥಳದ ಹೆಸರೂ ಇದಾಗಿತ್ತು). ಏರ್‌ ಫೋರ್ಸ್‌ ಒನ್‌ ಆದ ಮೊದಲ ವಿಮಾನವಿದು. ಇದರ ನಾಸಿಕಭಾಗದಲ್ಲಿ ಬೋಳು ಹದ್ದಿನ ತಲೆಯ ಚಿತ್ರವನ್ನು ಬಿಡಿಸಲಾಗಿತ್ತು.

ಡ್ವೈಟ್‌ ಡಿ. ಐಸೆನ್ಹೊವರ್‌ ರಾಷ್ಟ್ರಾಧ್ಯಕ್ಷರಾಗಿದ್ದಾಗ, ಭದ್ರತಾ ಉದ್ದೇಶಗಳಿಗಾಗಿ ದೇಶಾಧ್ಯಕ್ಷರ ಕರೆ ಸಂಕೇತ ರೂಪಿಸಲಾಯಿತು. ಇಸವಿ 1953ರಲ್ಲಿ ನಡೆದ ಘಟನೆಯಲ್ಲಿ ಈಸ್ಟರ್ನ್‌ ಏರ್ಲೈನ್ಸ್‌ ವಾಣಿಜ್ಯ ವಾಯುಯಾನ (8610) ವಿಮಾನವು, ರಾಷ್ಟ್ರಾಧ್ಯಕ್ಷರು ಪ್ರಯಾಣಿಸುತ್ತಿದ್ದ ಏರ್‌ ಫೋರ್ಸ್‌ 8610 ವಿಮಾನದ ಕರೆ ಸಂಕೇತವನ್ನೇ ಹೊಂದಿತ್ತು. ಎರಡೂ ವಿಮಾನಗಳು ಒಂದೇ ವಾಯುಪಥ ಪ್ರವೇಶಿಸಿದವು. ಈ ಘಟನೆಯ ನಂತರ, 'ಏರ್‌‌ ಫೋರ್ಸ್‌ ಒನ್‌' ಎಂಬ ವಿಶಿಷ್ಟ ಸಂಕೇತವನ್ನು ರಾಷ್ಟ್ರಾಧ್ಯಕ್ಷರ ವಿಮಾನಕ್ಕೆ ನೀಡಲಾಯಿತು.

ರಾಷ್ಟ್ರಾಧ್ಯಕ್ಷ ಐಸೆನ್ಹೊವರ್‌ ಬಳಸುತ್ತಿದ್ದ ಕೊಲಂಬೀನ್‌ III.

ಐಸೆನ್ಹೊವರ್‌ ಇನ್ನೂ ನಾಲ್ಕು ಲಾಕ್‌ಹೀಡ್‌ C-121 ಕಾನ್ಸ್ಟೆಲೇಷನ್ಸ್‌ (VC-121E) ಪ್ರೊಪೆಲರ್‌ಗಳುಳ್ಳ ವಿಮಾನಗಳನ್ನು ರಾಷ್ಟ್ರಾಧ್ಯಕ್ಷರ ಸೇವೆಗಾಗಿ ಪರಿಚಯಿಸಿದರು. ಅವರು ನೆಲೆಸಿದ ರಾಜ್ಯ ಕೊಲೊರೆಡೊದ ಅಧಿಕೃತ ಲಾಂಛನ ಕೊಲಂಬೀನ್‌ ಹೂವಿನ ಹೆಸರನ್ನು ಆಧರಿಸಿ, ಮ್ಯಾಮೀ ಐಸೆನ್ಹೊವರ್‌ ಈ ವಿಮಾನಗಳಿಗೆ ಕೊಲಂಬೀನ್‌ II ಮತ್ತು ಕೊಲಂಬೀನ್‌ III ಹೆಸರಿಟ್ಟರು. ಈ ವಿಮಾನಗಳ ಪಡೆಗೆ ಎರಡು ಏರೊ ಕಮ್ಯಾಂಡರ್‌ಗಳನ್ನು ನೇಮಿಸಲಾಯಿತು. ಇವು ಏರ್‌ ಫೋರ್ಸ್‌ ಒನ್‌ನಲ್ಲಿ ಹಾರಿದ ಅತ್ಯಂತ ಚಿಕ್ಕ ವಿಮಾನಗಳೆಂದು ಹೆಸರಾದವು. ವಿಮಾನದಿಂದ-ಭೂಮಿಗೆ ದೂರವಾಣಿ ಹಾಗೂ ವಿಮಾನದಿಂದ ಭೂಮಿಗೆ ಟೆಲಿಟೈಪ್‌ ಯಂತ್ರವನ್ನು ಅಳವಡಿಸುವುದರ ಮೂಲಕ, ರಾಷ್ಟ್ರಾಧ್ಯಕ್ಷ ಐಸೆನ್ಹೊವರ್‌ ಏರ್‌‌ ಫೋರ್ಸ್‌ ಒನ್‌ನ ತಂತ್ರಜ್ಞಾನವನ್ನು ಮೇಲ್ದರ್ಜೆಗೆ ಏರಿಸಿದರು. 1958ರಲ್ಲಿ ಐಸೆನ್ಹೊವರ್‌ರ ರಾಷ್ಟ್ರಾಧ್ಯಕ್ಷ ಅವಧಿಯ ಅಂತ್ಯ ಸಮೀಪಿಸುತ್ತಿದ್ದಂತೆಯೇ, ಏರ್ ಫೋರ್ಸ್‌ ಮೂರು ಬೋಯಿಂಗ್‌ 707 ಜೆಟ್‌ಗಳನ್ನು (VC-137ಗಳು ಗೊತ್ತುಪಡಿಸಲಾದ SAM 970, 971 ಮತ್ತು 972) ರೂಪದಲ್ಲಿ ಸೇರಿಸಿಕೊಂಡಿತು. ದಿನಾಂಕ 3 ಡಿಸೆಂಬರ್‌ 1959ರಿಂದ 22 ಡಿಸೆಂಬರ್‌ 1959ರವರೆಗೆ ತಾವು 'ಫ್ಲೈಟ್‌ ಟು ಪೀಸ್‌' ಎಂಬ ಸೌಹಾರ್ದ ಪ್ರವಾಸ ನಡೆಸಿದ ಐಸೆನ್ಹೋವರ್‌ VC-137 ಬಳಸುವ ಮೊದಲ ರಾಷ್ಟ್ರಾಧ್ಯಕ್ಷರಾದರು. 19 ದಿನಗಳ ಪ್ರವಾಸದಲ್ಲಿ 22,000 miles (35,000 km) ಅವರು 11 ಏಷ್ಯನ್‌ ದೇಶಗಳಿಗೆ ಭೇಟಿ ನೀಡಿದರು. ಅವರು ಕೊಲಂಬೀನ್‌ ವಿಮಾನದಲ್ಲಿ ನಡೆಸುವ ಪ್ರಯಾಣದ ಎರಡರಷ್ಟು ವೇಗದಲ್ಲಿ ಪ್ರಯಾಣಿಸಿದ್ದರು.

ಬೋಯಿಂಗ್‌ 707 ವಿಮಾನಗಳು

[ಬದಲಾಯಿಸಿ]
ರಾಷ್ಟ್ರಾಧ್ಯಕ್ಷರಾದ ಕೆನ್ನೆಡಿಯಿಂದ ಕ್ಲಿಂಟನ್‌ ವರೆಗೆ ಸೇವೆ ಸಲ್ಲಿಸಿದ ಬೋಯಿಂಗ್‌ 707 (SAM 26000).

ಜಾನ್‌ ಎಫ್‌. ಕೆನ್ನೆಡಿ ಕೆನಡಾ, ಫ್ರ್ಯಾನ್ಸ್‌, ಆಸ್ಟ್ರಿಯಾ ಮತ್ತು ಯುನೈಟೆಡ್‌ ಕಿಂಗ್ಡಮ್‌ ಪ್ರವಾಸಗಳಿಗೆ ಐಸೆನ್ಹೊವರ್‌ ಕಾಲದ ವಿಮಾನಗಳನ್ನು ಬಳಸಿದ್ದರಾದರೂ, ಅಕ್ಟೊಬರ್‌ 1962ರಲ್ಲಿ ಅವರ ಸರ್ಕಾರವು C-137 ಸ್ಟ್ರೆಟೊಲೈನರ್‌ ಎಂಬ ಪರಿವರ್ತಿತ ದೂರ-ಶ್ರೇಣಿಯ 707-ಸ್ಪೆಷಲ್‌ ಏರ್‌ ಮಿಷನ್‌ (SAM) 26000 ವಿಮಾನವನ್ನು ಖರೀದಿಸಿತು.

ಏರ್‌ ಫೋರ್ಸ್‌ ತಮ್ಮದೇ ರಾಷ್ಟ್ರಾಧ್ಯಕ್ಷೀಯ ವಿಶಿಷ್ಟ ವಿನ್ಯಾಸದತ್ತ ಯತ್ನಿಸಿತ್ತು: ಕೆಂಪು ಮತ್ತು ಲೋಹದ ಸ್ವರ್ಣ ಬಣ್ಣ ಹೊಂದಿದ್ದು, ರಾಷ್ಟ್ರದ ಹೆಸರನ್ನು ದಪ್ಪ ಅಕ್ಷರಗಳಲ್ಲಿ ನಮೂದಿಸಲಾಗಿದೆ. ಈ ವಿಮಾನವು ತೀರಾ ರಾಜೋಚಿತವಾಗಿದೆಯೆಂದು ಜಾನ್‌ ಕೆನ್ನೆಡಿ ಭಾವಿಸಿದರು. ತಮ್ಮ ಪತ್ನಿ ಜ್ಯಾಕಿಲೀನ್‌ ಕೆನ್ನೆಡಿ ಸಲಹೆಯ ಮೇರೆಗೆ, ಜಾನ್‌ ಕೆನ್ನೆಡಿ ಫ್ರೆಂಚ್‌-ಸಂಜಾತ ಅಮೆರಿಕನ್‌ ಕೈಗಾರಿಕಾ ವಿನ್ಯಾಸಗಾರ ರೇಮಂಡ್‌ ಲೊವಿಯವರನ್ನು ಸಂಪರ್ಕಿಸಿ, VC-137 ಜೆಟ್ ವಿಮಾನದ ಒಳಭಾಗಕ್ಕೆ ಹೊಸ ರೀತಿಯ ವಿನ್ಯಾಸದಲ್ಲಿ ನೆರವಾಗಲು ಕೋರಿದರು.[] ಲೊವಿ ರಾಷ್ಟ್ರಾಧ್ಯಕ್ಷರೊಂದಿಗೆ ಮಾತುಕತೆ ನಡೆಸಿದರು. ಈ ಯೋಜನೆಯಲ್ಲಿ ಅವರ ಆರಂಭಿಕ ಸಂಶೋಧನೆಯು ನ್ಯಾಷನಲ್‌ ಆರ್ಕೈವ್ಸ್‌ನತ್ತ ಒಯ್ಯಿತು. ಇಲ್ಲಿ ಅವರು ಅಮೆರಿಕಾ ಸಂಯುಕ್ತ ಸಂಸ್ಥಾನ ಸ್ವಾತಂತ್ರ್ಯದ ಘೋಷಣೆಯ ಅಚ್ಚಾದ ಪ್ರತಿಯನ್ನು ನೋಡಿದರು. ಇದರಲ್ಲಿ ರಾಷ್ಟ್ರದ ಹೆಸರಲ್ಲಿನ ಅಕ್ಷರಗಳನ್ನು ಕ್ಯಾಸ್ಲಾನ್‌ ಎಂಬ ಅಕ್ಷರ ಶೈಲಿಯಲ್ಲಿ, ತುಸು ದೂರದಲ್ಲಿರುವಂತೆ ನಮೂದಿಸಲಾಗಿದೆ. ಅವರು ವಿಮಾನದ ಕೆಳಬದಿಯಲ್ಲಿನ ಅಲ್ಯುಮಿನಿಯಮ್‌ ಚೌಕಟ್ಟನ್ನು ಮೆರಗುಗೊಳಿಸಿದರು. ನೀಲಿ ಬಣ್ಣದ ಎರಡು ರೀತಿಗಳನ್ನು ಬಳಸಿದರು: ದೇಶದ ಆರಂಭಿಕ ದಿನಗಳನ್ನು ನಿರೂಪಿಸುವ ಸ್ಲೇಟ್‌-ಬ್ಲೂ ಬಣ್ಣ ಹಾಗೂ, ವರ್ತಮಾನ ಮತ್ತು ಭವಿಷ್ಯವನ್ನು ನಿರುಪಿಸುವಂತಹ ಹಸಿರುನೀಲಿ ಬಣ್ಣವನ್ನು ಬಳಸಿದರು. ವಿಮಾನದ ನಾಸಿಕದ ಬಳಿ ಎರಡೂ ಬದಿಗಳಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಷ್ಟ್ರಾಧ್ಯಕ್ಷರ ಮುದ್ರೆಯನ್ನು ಅಳವಡಿಸಲಾಯಿತು. ವಿಮಾನದ ಬಾಲದ ಮೇಲೆ ದೊಡ್ಡದಾದ ಅಮೆರಿಕನ್‌ ಧ್ವಜ ಬಿಡಿಸಲಾಯಿತು. ವಿಮಾನದ ಎರಡೂ ಬದಿಗಳಲ್ಲಿ ಇಂಗ್ಲಿಷ್‌ನಲ್ಲಿ ದಪ್ಪ ಅಕ್ಷರಗಳಲ್ಲಿ 'ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಅಮೆರಿಕಾ' ಎಂದು ನಮೂದಿಸಲಾಗಿದೆ. ಲೊವಿಯವರ ಈ ವಿನ್ಯಾಸವು ಕೂಡಲೇ ರಾಷ್ಟ್ರಾಧ್ಯಕ್ಷರು ಮತ್ತು ಪತ್ರಿಕೆಯವರಿಂದ ವ್ಯಾಪಕ ಪ್ರಶಂಸೆ ಗಿಟ್ಟಿಸಿತು. 1990ರಲ್ಲಿ ರಾಷ್ಟ್ರಾಧ್ಯಕ್ಷರ ಸೇವೆಗೆ ಆಗಮಿಸಿದ ಇನ್ನೂ ದೊಡ್ಡದಾದ VC-25ಗೆ VC-137ರ ಗುರುತು-ಚಿಹ್ನೆಗಳನ್ನೇ ಅಳವಡಿಸಿಕೊಳ್ಳಲಾಯಿತು.[೧೦]

ಏರ್‌ ಫೋರ್ಸ್‌ ಒನ್‌ SAM 27000 ಆಗಿ, ರಾಷ್ಟ್ರಾಧ್ಯಕ್ಷರುಗಳಾದ ನಿಕ್ಸನ್‌ರಿಂದ ಹಿಡಿದು ಜಾರ್ಜ್‌ ಡಬ್ಲ್ಯು ಬುಷ್ ವರೆಗೆ ಸೇವೆ ಸೆಲ್ಲಿಸಿದ ಬೋಯಿಂಗ್‌ 707 SAM 27000 ನಿಕ್ಸನ್‌ರಿಂದ ರೀಗನ್‌ರ ವರೆಗೂ ಪ್ರಮುಖ ವಿಮಾನವಾಗಿತ್ತು.

SAM 26000 1962ರಿಂದ 1998ರ ತನಕ ಸೇವೆಯಲ್ಲಿತ್ತು. ಜಾನ್‌ ಕೆನ್ನೆಡಿಯಿಂದ ಹಿಡಿದು ಬಿಲ್‌ ಕ್ಲಿಂಟನ್‌ರ ವರೆಗೂ ಹಲವು ರಾಷ್ಟ್ರಾಧ್ಯಕ್ಷರಿಗಾಗಿ ಸೇವೆಯಲ್ಲಿತ್ತು. ದಿನಾಂಕ 22 ನವೆಂಬರ್‌ 1963ರಂದು SAM 26000 ವಿಮಾನವು ರಾಷ್ಟ್ರಾಧ್ಯಕ್ಷ ಕೆನ್ನೆಡಿಯವರನ್ನು ಟೆಕ್ಸಸ್‌ನ ಡಲ್ಲಾಸ್‌ ನಗರಕ್ಕೆ ಒಯ್ದಿತ್ತು. ಡಲ್ಲಾಸ್‌ನ ಲವ್ಫೀಲ್ಡ್‌ನಲ್ಲಿ ರಾಷ್ಟ್ರಾಧ್ಯಕ್ಷ ಮತ್ತು ಶ್ರೀಮತಿ ಕೆನ್ನೆಡಿ ತಮ್ಮ ಹಿತೈಷಿಗಳ ಸ್ವಾಗತ ಸ್ವೀಕರಿಸುತ್ತಿದ್ದಾಗ ಈ ವಿಮಾನವು ಹಿನ್ನೆಲೆಯಲ್ಲಿ ಕಂಡುಬಂದಿತ್ತು. ಅದೇ ಅಪರಾಹ್ನ, ಜಾನ್‌ ಕೆನ್ನೆಡಿ ಹತ್ಯೆಗೀಡಾದರು, ದೇಶದ ಉಪಾಧ್ಯಕ್ಷ ಲಿಂಡನ್‌ ಜಾನ್ಸನ್‌ ಅಧ್ಯಕ್ಷರಾಗಿ, SAM 26000 ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗಲೇ ಪ್ರಮಾಣ ವಚನ ಸ್ವೀಕರಿಸಿದರು. ಲಿಂಡನ್‌ ಜಾನ್ಸನ್‌ರ ಕೋರಿಕೆಯ ಮೇರೆಗೆ, ಜಾನ್‌ ಕೆನ್ನೆಡಿಯ ಶವವನ್ನು ಇದೇ ವಿಮಾನದಲ್ಲಿ ವಾಷಿಂಗ್ಟನ್‌ಗೆ ಒಯ್ಯಲಾಯಿತು. ಅರ್ಲಿಂಗ್ಟನ್‌ ನ್ಯಾಷನಲ್‌ ಸಿಮೆಟರಿಯಲ್ಲಿ ಜಾನ್‌ ಕೆನ್ನೆಡಿ ಅಂತ್ಯಸಂಸ್ಕಾರದ ನಂತರ ದಫನಗೊಳಿಸುವ ಕ್ಷಣಗಳಲ್ಲಿ ಈ ವಿಮಾನವು 50 ಪೈಟರ್‌ ಜೆಟ್‌ಗಳನ್ನು ಹಿಂಬಾಲಿಸಿ ಹಾರಿಹೋಯಿತು. ಒಂದು ದಶಕದ ನಂತರ, ಇದು ಲಿಂಡನ್‌ ಜಾನ್ಸನ್‌ರ ಶವವನ್ನು ಸರ್ಕಾರಿ ಗೌರವ ಮರ್ಯಾದೆ ಸಹಿತ ಅಂತ್ಯಸಂಸ್ಕಾರಕ್ಕಾಗಿ ವಾಷಿಂಗ್ಟನ್‌ಗೆ ತಂದು ಮತ್ತು ಅಲ್ಲಿಂದ ಟೆಕ್ಸಸ್‌ಗೆ ಒಯ್ದಿತ್ತು. ಮಾಜಿ ರಾಷ್ಟ್ರಾಧ್ಯಕ್ಷರನ್ನು ತಮ್ಮ ಹೊಲದಲ್ಲಿ ದಫನಗೊಳಿಸುತ್ತಿದ್ದಾಗ, SAM 26000 ವಿಮಾನದ ಮಾಜಿ ಪೈಲಟ್‌ ಒಬ್ಬರು ಇದೇ ಸಂದರ್ಭದಲಿ ಧ್ವಜವನ್ನು ಲೇಡಿ ಬರ್ಡ್‌ ಜಾನ್ಸನ್‌ರಿಗೆ ಒಪ್ಪಿಸಿದರು.

1972ರಲ್ಲಿ SAM 26000 ವಿಮಾನದ ಸ್ಥಾನದಲ್ಲಿ ಸ್ಪೆಷಲ್‌ ಏರ್‌ ಮಿಷನ್‌ 27000 ಎಂಬ ಇನ್ನೊಂದು VC-137 ವಿಮಾನವು ಆಗಮಿಸಿತು. ಆದರೂ, SAM 26000 ವಿಮಾನವನ್ನು ಆಪತ್ಕಾಲಕ್ಕಾಗಿ ಕಾಯ್ದಿಡಲಾಗಿತ್ತು. ಅಂತಿಮವಾಗಿ ಈ ವಿಮಾನವನ್ನು 1998ರಲ್ಲಿ ನಿವೃತ್ತಗೊಳಿಸಲಾಯಿತು. ಅಮೆರಿಕಾ ಸಂಯುಕ್ತ ಸಂಸ್ಥಾನ ಏರ್‌ ಫೋರ್ಸ್‌ನ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ SAM 26000 ವಿಮಾನವನ್ನು ಪ್ರದರ್ಶನಕ್ಕಿಡಲಾಗಿದೆ.

ರಿಚರ್ಡ್‌ ನಿಕ್ಸನ್‌ SAM 27000 ವಿಮಾನವನ್ನು ಬಳಸುವ ಮೊದಲ ರಾಷ್ಟ್ರಾಧ್ಯಕ್ಷರಾಗಿದ್ದರು. ಈ ಹೊಸ ವಿಮಾನವು ಪ್ರತಿಯೊಬ್ಬ ದೇಶಾಧ್ಯಕ್ಷರ ಸೇವೆಯಲ್ಲಿತ್ತು. ಆನಂತರ 1990ರಲ್ಲಿ ಇದರ ಸ್ಥಾನದಲ್ಲಿ SAM 28000 ಮತ್ತು 29000 ಎಂಬ ಎರಡು VC-25 ವಿಮಾನಗಳನ್ನು ಬಳಸಲಾಯಿತು. ಅವರು ತಮ್ಮ ರಾಜೀನಾಮೆ ಸಲ್ಲಿಸುವ ಇಂಗಿತವನ್ನು ವ್ಯಕ್ತಪಡಿಸಿದ ನಂತರ ರಿಚರ್ಡ್‌ ನಿಕ್ಸನ್‌ ಕ್ಯಾಲಿಫೊರ್ನಿಯಾಗೆ ತೆರಳಲು SAM 27000 ವಿಮಾನ ಹತ್ತಿದರು. ಗೆರಾಲ್ಡ್‌ ಫೊರ್ಡ್‌ ರಾಷ್ಟ್ರಾಧ್ಯಕ್ಷರಾದ ಬಳಿಕ, ನಿಕ್ಸನ್‌ ಪ್ರಯಾಣಿಸುತ್ತಿದ್ದ ವಿಮಾನವ ಮಿಸ್ಸೂರಿ ಮೇಲೆ ಸಂಚರಿಸುತ್ತಿರುವಾಗ, ಈ ವಿಮಾನದ ಕರೆ ಸಂಕೇತವು ಏರ್‌ ಫೋರ್ಸ್‌ ಒನ್‌ನಿಂದ SAM 27000ಗೆ ಪರಿವರ್ತಿತವಾಯಿತು.

ಇಸವಿ 2001ರಲ್ಲಿ ರಾಷ್ಟ್ರಾಧ್ಯಕ್ಷ ಜಾರ್ಜ್‌ ಡಬ್ಲ್ಯು ಬುಷ್‌ SAM 27000 ವಿಮಾನವನ್ನು ನಿವೃತ್ತಗೊಳಿಸಿದರು. ಈ ವಿಮಾನವನ್ನು ಕ್ಯಾಲಿಫೊರ್ನಿಯಾದ ಸ್ಯಾನ್‌ ಬರ್ನಾರ್ಡಿನೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾರಿಸಲಾಯಿತು. ಅಲ್ಲಿ ಈ ವಿಮಾನವನ್ನು ಸಣ್ಣ ಭಾಗಗಳನ್ನಾಗಿ ಬಿಡಿಸಿ, ಸಿಮಿ ವ್ಯಾಲಿಯಲ್ಲಿರುವ ರೊನಾಲ್ಡ್‌ ರೀಗನ್‌ ಪ್ರೆಸಿಡೆಂಷ್ಯಲ್‌ ಲೈಬ್ರೆರಿಗೆ ಒಯ್ದು, ಪುನಃ ಜೋಡಿಸಿ ಪ್ರದರ್ಶನಕ್ಕಿಡಲಾಗಿದೆ.

ಬೋಯಿಂಗ್‌ 747 ವಿಮಾನಗಳು

[ಬದಲಾಯಿಸಿ]

ರೊನಾಲ್ಡ್‌ ರೀಗನ್‌ ರಾಷ್ಟ್ರಾಧ್ಯಕ್ಷತೆಯ ಎರಡು ಅವಧಿಗಳಲ್ಲಿ ಏರ್‌ ಫೋರ್ಸ್‌ ಒನ್‌ರಲ್ಲಿ ಯಾವುದೇ ಪ್ರಮುಖ ಬದಲಾವಣೆಗಳು ಕಂಡುಬರದಿದ್ದರೂ, ಪ್ರಸ್ತುತ ಬೋಯಿಂಗ್‌ 747 ಮಾದರಿಯ ವಿಮಾನಗಳ ತಯಾರಿಕೆಯು ಇವರ ಅಧ್ಯಕ್ಷತೆಯ ಅವಧಿಯಲ್ಲಿ ಆರಂಭವಾಯಿತು. ವಿಶಾಲ ರಚನೆಯುಳ್ಳ, ಕನಿಷ್ಠ ಪಕ್ಷ ಮೂರು ಇಂಜಿನ್‌ಗಳು ಮತ್ತು 6000 ಮೈಲ್‌ಗಳ ಅನ್‌-ರಿಫ್ಯುಯೆಲ್‌ ಶ್ರೇಣಿ ಕ್ಷಮತೆ ಹೊಂದಿರುವ ಎರಡು ವಿಮಾನಗಳಿಗಾಗಿ 1985ರಲ್ಲಿ USAF ಒಂದು 'ರಿಕ್ವೆಸ್ಟ್‌ ಫಾರ್‌ ಪ್ರೊಪೊಸಲ್‌' ಕಳುಹಿಸಿತು. 747 ಮಾದರಿಯ ವಿಮಾನವನ್ನು ನಿರ್ಮಿಸುತ್ತಿದ್ದ ಬೋಯಿಂಗ್‌ ಹಾಗೂ DC-10 ವಿಮಾನ ತಯಾರಕ ಮೆಕ್‌ಡನೆಲ್‌ ಡೊಗ್ಲಸ್‌ ತಮ್ಮ ಪ್ರೊಪೊಸಲ್‌ಗಳನ್ನು ಸಲ್ಲಿಸಿದರು. ಅಂತಿಮವಾಗಿ ಬೋಯಿಂಗ್‌ ಸಂಸ್ಥೆ ಆಯ್ಕೆಯಾಯಿತು. ರೀಗನ್‌ ಸರ್ಕಾರವು ಎರಡು ತದ್ರೂಪೀ ಬೋಯಿಂಗ್‌ 747 ವಿಮಾನಗಳನ್ನು ಖರೀದಿಸಲು ಸಮ್ಮತಿಸಿತು. ರೀಗನ್‌ ಬಳಸುತ್ತಿದ್ದ ಹಳೆಯ ಬೋಯಿಂಗ್‌ 707 ವಿಮಾನಗಳ ಬದಲಿಗೆ ಈ 747 ವಿಮಾನಗಳ ಅಗತ್ಯವಿತ್ತು.[೧೧] ಮೊದಲ ಪ್ರಜೆ ನ್ಯಾನ್ಸಿ ರೀಗನ್‌ ವಿಮಾನದ ಆಂತರಿಕ ವಿನ್ಯಾಸ ರಚಿಸಿದರು. ಅಮೆರಿಕನ್‌ ಸೌತ್‌ವೆಸ್ಟ್‌ ನೆನಪು ಮಾಡುವಂತಹ ವಿನ್ಯಾಸಗಳನ್ನು ಅವರು ಬಳಸಿದರು.[೧೧] ಜಾರ್ಜ್‌ ಹೆಚ್‌. ಡಬ್ಲ್ಯೂ ಬುಷ್‌ ಅಮೆರಿಕಾ ರಾಷ್ಟ್ರಾಧ್ಯಕ್ಷರಾಗಿದ್ದಾಗ, ಮೊದಲ ವಿಮಾನವನ್ನು 1990ರಲ್ಲಿ ನೀಡಲಾಯಿತು. ವಿಮಾನವನ್ನು ಇಲೆಕ್ಟ್ರೊಮ್ಯಾಗ್ನೆಟಿಕ್‌ ಪಲ್ಸ್‌ (ವಿದ್ಯುತ್ಕಾಂತೀಯ ಕಂಪನ) ದಿಂದ ರಕ್ಷಿಸಲು ಹೆಚ್ಚುವರಿ ಕಾಮಗಾರಿಯ ಅಗತ್ಯವಿತ್ತು. ಇದರಿಂದಾಗಿ ವಿಮಾನಗಳನ್ನು ತೆಗೆದುಕೊಳ್ಳುವುದರಲ್ಲಿ ವಿಳಂಬವಾಗಿತ್ತು.

VC-25 ವಿಮಾನದಲ್ಲಿ ಸುರಕ್ಷಿತ ಮತ್ತು ಅಸುರಕ್ಷಿತ ದೂರವಾಣಿ ಹಾಗೂ ಕಂಪ್ಯೂಟರ್‌ ಸಂವಹನಾ ವ್ಯವಸ್ಥೆಗಳಿವೆ. ಒಂದು ವೇಳೆ ಅಮೆರಿಕಾ ಸಂಯುಕ್ತ ಸಂಸ್ಥಾನ ದೇಶದ ಮೇಲೆ ಆಕ್ರಮಣ ನಡೆದಲ್ಲಿ, ಅಮೆರಿಕಾ ರಾಷ್ಟ್ರಾಧ್ಯಕ್ಷರು ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗಲೇ ಇವನ್ನು ಬಳಸಿ ತಮ್ಮ ಕಾರ್ಯ ನಿರ್ವಹಿಸಬಹುದಾಗಿದೆ.

ದಿನಾಂಕ 1 ಮಾರ್ಚ್‌ 2006ರಂದು ಆಫ್ಘಾನಿಸ್ತಾನ್‌ದ ಬಾಗ್ರಾಮ್‌ ಏರ್‌ ಬೇಸ್‌ನಲ್ಲಿ ನಡೆಯುತ್ತಿರುವ ರಾಷ್ಟ್ರಾಧ್ಯಕ್ಷ ಜಾರ್ಜ್‌ ಡಬ್ಲ್ಯು ಮತ್ತು ಪ್ರಥಮ ಮಹಿಳೆ ಲಾರಾ ಬುಷ್‌. ಏರ್ ಫೋರ್ಸ್‌ ಒನ್‌ ವಿಮಾನವನ್ನು ಹಿನ್ನೆಲೆಯಲ್ಲಿ ಕಾಣಬಹುದು.

ಮೇರಿಲೆಂಡ್‌ಆಂಡ್ರ್ಯೂಸ್‌ ಏರ್‌ ಫೋರ್ಸ್‌ ಬೇಸ್‌ನಲ್ಲಿರುವ 89ನೆಯ ಏರ್‌ಲಿಪ್ಟ್‌ ವಿಂಗ್‌ ರಾಷ್ಟ್ರಾಧ್ಯಕ್ಷೀಯ ವಿಮಾನ ಪಡೆಯ ನಿರ್ವಹಣಾ ಜವಾಬ್ದಾರಿ ಹೊತ್ತಿದೆ.

ಅಮೆರಿಕಾ ಸಂಯುಕ್ತ ಸಂಸ್ಥಾನ ಮೇಲೆ ಹಾರಿಹೋಗುವ ಸಮಯ ಏರ್‌ ಫೋರ್ಸ್‌ ಒನ್‌ ಸಾಮಾನ್ಯವಾಗಿ ಸೇನಾ (ಯುದ್ಧ) ವಿಮಾನವನ್ನು ಹೊಂದಿರುವುದಿಲ್ಲ. ಆದರೂ ಇಂತಹ ಪ್ರಸಂಗವು ಸಂಭವಿಸಿದ್ದುಂಟು. ಜೂನ್‌ 1974ರಲ್ಲಿ, ಅಮೆರಿಕಾ ರಾಷ್ಟ್ರಾಧ್ಯಕ್ಷ ರಿಚರ್ಡ್‌ ನಿಕ್ಸನ್‌ ಸಿರಿಯಾ ದೇಶದ ಪ್ರವಾಸ ಹೋಗುತ್ತಿದ್ದಾಗ, ಸಿರಿಯನ್ ಯುದ್ಧ ವಿಮಾನಗಳು ಏರ್ ಫೋರ್ಸ್‌ ಒನ್‌ನೊಂದಿಗೆ ಬೆಂಗಾವಲಾಗಿ ಜತೆಗೂಡಿದವು. ಆದರೆ, ಏರ್‌ ಫೋರ್ಸ್‌ ಒನ್ ಸಿಬ್ಬಂದಿಗೆ ಈ ವಿಚಾರ ಮೊದಲೇ ತಿಳಿದಿರಲಿಲ್ಲದ ಕಾರಣ, ಈ ಸಮಯದಲ್ಲಿ ಧುಮುಕುವಿಕೆಯೂ ಸೇರಿ, ಸಿರಿಯನ್‌ ಯುದ್ಧವಿಮಾನಗಳಿಂದ ತಪ್ಪಿಸಿಕೊಳ್ಳುವ ಯತ್ನ ನಡೆಸಲಾಯಿತು.[೧೨]

ದಿನಾಂಕ 11 ಸೆಪ್ಟೆಂಬರ್‌ 2001ರಂದು ನಡೆದ ಆತಂಕವಾದಿ ಹಲ್ಲೆಯ ಸಮಯ ಏರ್‌ ಫೋರ್ಸ್‌ ಒನ್‌ ವಿಮಾನದಲ್ಲಿ ನಡೆದ ಅತ್ಯಂತ ರೋಮಾಂಚಕಾರಿ ಪ್ರಸಂಗ ನಡೆಯಿತು. ನ್ಯೂಯಾರ್ಕ್‌ ನಗರದ ವರ್ಲ್ಡ್‌ ಟ್ರೇಡ್‌ ಸೆಂಟರ್‌ ಸೌತ್‌ ಟವರ್‌ಗೆ ಒತ್ತೆಯಾದ ವಿಮಾನ ಢಿಕ್ಕಿ ಹೊಡೆದಾಗ, ಫ್ಲಾರಿಡಾದ ಸಾರಾಸೊಟಾದಲ್ಲಿ ಎಮ್ಮಾ ಇ. ಬುಕರ್‌ ಎಲಿಮೆಂಟರಿ ಸ್ಕೂಲ್‌ನಲ್ಲಿ ರಾಷ್ಟ್ರಾಧ್ಯಕ್ಷ ಜಾರ್ಜ್‌ ಡಬ್ಲ್ಯೂ ಬುಷ್‌ರ ಪಯಣವನ್ನು ಅರ್ಧಕ್ಕೆ ಮೊಟಕುಗೊಳಿಸಲ. ಅವರು ಸಾರಾಸೊಟಾ-ಬ್ರ್ಯಾಡೆಂಟನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲೂಯಿಸಿಯಾನಾದ ಬಾರ್ಕ್ಸ್‌ಡೇಲ್‌ ಏರ್‌ ಫೋರ್ಸ್‌ ಬೇಸ್‌ ವರೆಗೂ VC-25 ವಿಮಾನದಲ್ಲಿ ಪ್ರಯಾಣಿಸಿ, ಆನಂತರ ನೆಬ್ರಾಸ್ಕಾದಲ್ಲಿರುವ ಆಫುಟ್‌ ಏರ್‌ ಫೋರ್ಸ್‌ ಬೇಸ್‌ಗೆ ಪ್ರಯಾಣಿಸಿ ಅಲ್ಲಿಂದ ವಾಷಿಂಗ್ಟನ್‌ಗೆ ಮರಳಿದರು. ಮಾರನೆಯ ದಿನ, ಶ್ವೇತ ಭವನ ಮತ್ತು ನ್ಯಾಯಾಂಗ ಇಲಾಖೆ ವಿವರಿಸಿದ ಪ್ರಕಾರ, 'ಶ್ವೇತ ಭವನ ಮತ್ತು ಏರ್‌ ಫೋರ್ಸ್‌ ಒನ್‌ ಸಹ ಹಲ್ಲೆಗೊಳಗಾಗುವ ಅಪಾಯದ ಕುರಿತು ವಿಶೇಷ ಮತ್ತು ನಂಬಲಾರ್ಹ ಮಾಹಿತಿಯಿತ್ತು, ಹಾಗಾಗಿ ರಾಷ್ಟ್ರಾಧ್ಯಕ್ಷ ಜಾರ್ಜ್‌ ಡಬ್ಲ್ಯು ಬುಷ್‌ ಈ ರೀತಿ ಮಾಡಿದ್ದರು.' [೧೩] ಆನಂತರ, ಶ್ವೇತ ಭವನವು, ಏರ್‌ ಫೋರ್ಸ್‌ ಒನ್‌ ವಿರುದ್ಧದ ಈ ಬೆದರಿಕೆಯ ಯಾವ ಕುರುಹನ್ನು ಖಚಿತಪಡಿಸಲಾಗಲಿಲ್ಲ. ವಿಸ್ತೃತ ತನಿಖೆ ನಡೆಸಿದಾಗ, ಸಮರ್ಪಕ ಸಂವಹನದ ಅಭಾವದಿಂದಾಗಿ ಈ ರೀತಿಯ ಹೇಳಿಕೆ ಬಂದದ್ದು ಸಾಬೀತಾಗಿತ್ತು.[೧೪]

ದಿನಾಂಕ 3 ಏಪ್ರಿಲ್‌ 2009ರಂದು ಸಭಾ ಕೊಠಡಿಯಲ್ಲಿ ಸಿಬ್ಬಂದಿಯೊಂದಿಗೆ ರಾಷ್ಟ್ರಾಧ್ಯಕ್ಷ ಬರಾಕ್‌ ಒಬಾಮ.

ತಮ್ಮ ಆಡಳಿತದ ಎರಡನೆಯ ಅವಧಿ ಮುಗಿಯುತ್ತಾ ಬಂದಾಗ, ಜಾರ್ಜ್‌ ಡಬ್ಲ್ಯೂ ಬುಷ್‌ರನ್ನು ಟೆಕ್ಸಸ್‌ಗೆ ಒಯ್ಯಲು ಒಂದು VC-25 ವಿಮಾನವನ್ನು ಬಳಸಲಾಗಿತ್ತು. ಈ ವಿಮಾನಕ್ಕೆ ಸ್ಪೆಷಲ್‌ ಏರ್‌ ಮಿಷನ್‌ 28000 ಎನ್ನಲಾಗಿತ್ತು, ಏಕೆಂದರೆ, ಇದು ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಷ್ಟ್ರಾಧ್ಯಕ್ಷರನ್ನು ಒಯ್ಯುತ್ತಿರಲಿಲ್ಲ.

ದಿನಾಂಕ 27 ಏಪ್ರಿಲ್‌ 2009ರಂದು, ಛಾಯಾಚಿತ್ರಣ ಮತ್ತು ತರಬೇತಿ ಕಸರತ್ತು ನಡೆಸಲು ನ್ಯೂಯಾರ್ಕ್‌ ನಗರದ ಮೇಲೆ ಬಹಳ ಕೆಳಗಿನ ಮಟ್ಟದಲ್ಲಿ ಹಾರುತ್ತಿದ್ದ VC-25 ವಿಮಾನವು ಹಲವು ನಾಗರೀಕರ ಗಾಬರಿಗೆ ಕಾರಣವಾಯಿತು.[೧೫] ಛಾಯಾಚಿತ್ರಣದ ಘಟನೆಯ ಕಾರಣ, ಶ್ವೇತ ಭವನದ ಸೇನಾ ಕಾರ್ಯಾಲಯದ ನಿರ್ದೇಶಕರು ರಾಜೀನಾಮೆ ನೀಡಿದ್ದಾಯಿತು.

VC-25A ವಿಮಾನಗಳನ್ನು ಬದಲಾಯಿಸುವ ನಿರೀಕ್ಷೆಯಿದೆ, ಏಕೆಂದರೆ ಅವನ್ನು ಮಿತವ್ಯಯವಾಗಿ, ಸುಲಭವಾಗಿ ನಿರ್ವಹಿಸುವುದು ದುಸ್ತರವಾಗಿದೆ. ಬೋಯಿಂಗ್‌ 747-8 ಹಾಗೂ EADS ಏರ್ಬಸ್‌ A380 ಸೇರಿದಂತೆ ಬದಲೀ ವಿಮಾನಗಳನ್ನು ಈ ಗುಂಪಿಗೆ ಸೇರಿಸಿಕೊಳ್ಳುವ ಸಾಧ್ಯತೆಯನ್ನು USAF ಏರ್‌ ಮೊಬಿಲಿಟಿ ಕಮ್ಯಾಂಡ್‌ ಪರಿಶೀಲಿಸುತ್ತಿದೆ.[೧೬]

ಮುಂಬರುವ 2017ರ ಆರಂಭದಲ್ಲಿ ಸೇವೆಗೆ ಬಳಸಿಕೊಳ್ಳುವಂತೆ ಬದಲಿ ವಿಮಾನಗಳಿಗಾಗಿ ಹೊಸ ಅಗತ್ಯತೆಯನ್ನು USAF ಏರ್‌ ಮೆಟಿರಿಯಲ್‌ ಕಮ್ಯಾಂಡ್‌ ದಿನಾಂಕ 7 ಜನವರಿ 2009ರಂದು ಹೊರಡಿಸಿತು.[೧೭] ತಾವು ಈ ಯೋಜನೆಗೆ ತಮ್ಮ ಬಿಡ್‌ ಸಲ್ಲಿಸುವುದಿಲ್ಲವೆಂದು EADS 28 ಜನವರಿ 2009ರಂದು ಹೇಳಿಕೆ ನೀಡಿತು. ಇದರಿಂದಾಗಿ ಬೋಯಿಂಗ್‌ ಏಕೈಕ ಬಿಡ್ಡರ್‌ ಆಗಿ, ಬೋಯಿಂಗ್‌ 747-8 ಅಥವಾ ಬೋಯಿಂಗ್‌ 787 ಮಾದರಿಯ ವಿಮಾನವನ್ನು ಪ್ರಸ್ತಾಪಿಸುವುದಿತ್ತು.[೧೮]

ಇತರೆ ರಾಷ್ಟ್ರಾಧ್ಯಕ್ಷೀಯ ವಿಮಾನಗಳು

[ಬದಲಾಯಿಸಿ]
ಏರ್ ಫೋರ್ಸ್‌ ಒನ್‌, ಪ್ರೆಸಿಡೆನ್ಷಿಯಲ್‌ ಸ್ಟೇಟ್‌ ಕಾರ್‌ ಮತ್ತು ಸೀಕ್ರೆಟ್‌ ಸರ್ವಿಸ್‌ ಏಜೆಂಟ್ಸ್‌ [೧೯]

U.S. ರಾಷ್ಟ್ರಾಧ್ಯಕ್ಷರು ಪ್ರಯಾಣಿಸುವ ನಾಗರಿಕ ವಿಮಾನಕ್ಕೆ ಎಕ್ಸಿಕ್ಯೂಟಿವ್‌ ಒನ್‌ ಎಂದು ಹೆಸರಿಸಿ ವಿಮಾನ ಚಾಲನೆ ಮಾಡಿದ ಏಕೈಕ ವಿಮಾನ ಯಾನ ಉದ್ದಿಮೆ ಯುನೈಟೆಡ್‌ ಏರ್ಲೈನ್ಸ್‌.

ದಿನಾಂಕ 26 ಡಿಸೆಂಬರ್‌ 1973ರಂದು ಮಾಜಿ ರಾಷ್ಟ್ರಾಧ್ಯಕ್ಷ ರಿಚರ್ಡ್‌ ನಿಕ್ಸನ್‌ ಒಬ್ಬ ಪ್ರಯಾಣಿಕರಾಗಿ ವಾಷಿಂಗ್ಟನ್‌ ಡಲ್ಸ್‌ ವಿಮಾನದಲ್ಲಿ ಲಾಸ್‌ ಏಂಜೆಲೀಸ್‌ ಅಂತಾರಾಷ್ಟ್ರೀಯ ಯಾನಕ್ಕಾಗಿ ಪ್ರಯಾಣಿಸಿದರು.

ಎಂದಿನಂತೆ ಬೋಯಿಂಗ್‌ 707 ಏರ್‌ ಫೋರ್ಸ್‌ ವಿಮಾನದಲ್ಲಿ ಪ್ರಯಾಣಿಸದೆ ಇಂಧನ ಉಳಿತಾಯ ಮಾಡಲು ಈ ರೀತಿ ಮಾಡಲಾಯಿತು; ಎಂದು ನಿಕ್ಸನ್‌ ಸಿಬ್ಬಂದಿ ವಿವರಿಸಿದರು.[೨೦]

ದಿನಾಂಕ 8 ಮಾರ್ಚ್‌ 2000ರಂದು ರಾಷ್ಟ್ರಾಧ್ಯಕ್ಷ ಬಿಲ್‌ ಕ್ಲಿಂಟನ್‌ ಯಾವುದೇ ಗುರುತು ಹೊಂದಿರದ ಗಲ್ಫ್‌ಸ್ಟ್ರೀಮ್‌ III ವಿಮಾನದಲ್ಲಿ ಪಾಕಿಸ್ತಾನಕ್ಕೆ ಪ್ರಯಾಣಿಸಿದರು. ಕೆಲವು ನಿಮಿಷಗಳ ನಂತರ, 'ಏರ್‌ ಫೋರ್ಸ್‌ ಒನ್‌' ಎಂಬ ಕರೆ ಸಂಕೇತ ಹೊತ್ತ ಇನ್ನೊಂದು ವಿಮಾನವು ಇದೇ ಮಾರ್ಗದಲ್ಲಿ ಹಾದುಹೋಯಿತು.[೨೧][೨೨][೨೩] ಈ ದಿಕ್‌ ಪರಿವರ್ತನೆ ಬಗ್ಗೆ ಹಲವು U.S. ಪತ್ರಿಕೆಗಳಲ್ಲಿ ವರದಿಗಳಾದವು.

ಇತರೆ ದೇಶಗಳ ಮುಖ್ಯಸ್ಥರೂ ಸಹ ಅವರಿಗಾಗಿಯೇ ವಿಮಾನಗಳನ್ನು ಕಾಯ್ದಿರಿಸಿಕೊಂಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ, ಇದನ್ನು ನೋಡಿ: ರಾಷ್ಟ್ರಗಳ ಮತ್ತು ಸರ್ಕಾರದ ಮುಖ್ಯಸ್ಥರ ವಿಮಾನ ಯಾನಗಳು

ಪ್ರದರ್ಶಿಸಲಾದ ಏರ್‌ ಫೋರ್ಸ್‌ ಒನ್‌ ವಿಮಾನ

[ಬದಲಾಯಿಸಿ]
2005ರಲ್ಲಿ, ಏರ್‌ ಫೋರ್ಸ್‌ ಒನ್‌ SAM 27000 ವಿಮಾನವನ್ನು ವೀಕ್ಷಿಸುತ್ತಿರುವ ರಾಷ್ಟ್ರಾಧ್ಯಕ್ಷ ಜಾರ್ಜ್‌ ಡಬ್ಲ್ಯು ಬುಷ್‌, ಪ್ರಥಮ ಮಹಿಳೆ ಲಾರಾ ಬುಷ್‌ ಮತ್ತು ಮಾಜಿ ಪ್ರಥಮ ಮಹಿಳೆ ನ್ಯಾನ್ಸಿ ರೀಗನ್‌. ಈ ವಿಮಾನವು 1972ರಿಂದ 2001ರ ವರೆಗೂ ಏಳು ರಾಷ್ಟ್ರಾಧ್ಯಕ್ಷರನ್ನು ಹೊತ್ತೊಯ್ದಿತ್ತು. ಇಂದು ಈ ವಿಮಾನವು ರೊನಾಲ್ಡ್‌ ರೀಗನ್‌ ಪ್ರೆಸಿಡೆನ್ಷಿಯಲ್‌ ಲೈಬ್ರರಿಯಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಏರ್‌ ಫೋರ್ಸ್‌ ಒನ್‌ (ಸೇಕ್ರೆಡ್‌ ಕೌ , ಇಂಡಿಪೆಂಡೆನ್ಸ್‌ , ಕೊಲಂಬೀನ್‌ III , SAM 26000, ಇತರೆ ಸಣ್ಣ ರಾಷ್ಟ್ರಾಧ್ಯಕ್ಷೀಯ ವಿಮಾನಗಳು ಸೇರಿದಂತೆ ಹಲವು ದೇಶಾಧ್ಯಕ್ಷೀಯ ವಿಮಾನಗಳು ಮುಂಚೆ ಏರ್ ಫೋರ್ಸ್‌ ಒನ್‌ ಆಗಿ ಸೇವೆ ಸಲ್ಲಿಸಿವೆ. ಇವುಗಳನ್ನು ಒಹಾಯೊಡೇಟನ್‌ ಬಳಿ ರೈಟ್‌-ಪ್ಯಾಟರ್ಸನ್‌ AFBನಲ್ಲಿರುವ ಅಮೆರಿಕಾ ಸಂಯುಕ್ತ ಸಂಸ್ಥಾನ ಏರ್‌ ಫೋರ್ಸ್‌ನ ರಾಷ್ಟ್ರೀಯ ಸಂಗ್ರಹಾಲಯದ ರಾಷ್ಟ್ರಾಧ್ಯಕ್ಷೀಯ ವಿಮಾನತಾಣ, ಹಾಗೂ ವಾಷಿಂಗ್ಟನ್‌ಸಿಯೆಟ್ಲ್‌ನಲ್ಲಿರುವ ಮ್ಯುಸಿಯಮ್‌ ಆಫ್‌ ಫ್ಲೈಟ್‌ನಲ್ಲಿ (ಮುಂಚೆ VC-137B SAM 970) ನೋಡಬಹುದಾಗಿದೆ. ರಿಚರ್‌ ನಿಕ್ಸನ್‌ರ ಕಾಲದಿಂದ ಹಿಡಿದು ಜ್ಯಾರ್ಜ್‌ ಹೆಚ್‌. ಡಬ್ಲ್ಯೂ ಬುಷ್‌ರ ವರೆಗೂ ಏರ್‌ ಫೋರ್ಸ್‌ ಒನ್‌ ಆಗಿ ಸೇವೆ ಸಲ್ಲಿಸಿದ ಬೋಯಿಂಗ್‌ 707 ವಿಮಾನವು (SAM 27000) ಕ್ಯಾಲಿಫೊರ್ನಿಯಾಸಿಮಿ ವ್ಯಾಲಿಯಲ್ಲಿರುವ ರೊನಾಲ್ಡ್‌ ರೀಗನ್‌ ರಾಷ್ಟ್ರಾಧ್ಯಕ್ಷೀಯ ಗ್ರಂಥಾಲಯದಲ್ಲಿ ಪ್ರದರ್ಶನಕ್ಕಿಡಲಾಗಿದೆ. ಗ್ರಂಥಾಲಯದ ಏರ್‌ ಫೋರ್ಸ್‌ ಒನ್‌ ಪೆವಿಲಿಯನ್‌ನ್ನು 24 ಅಕ್ಟೋಬರ್‌ 2005ರಂದು ಸಾರ್ವಜನಿಕರಿಗೆ ಮುಕ್ತಗೊಳಿಸಲಾಯಿತು.

ಜಾನ್‌ ಎಫ್‌. ಕೆನ್ನೆಡಿ ಬಳಸುತ್ತಿದ್ದ VC-118A ಲಿಫ್ಟ್‌ಮಾಸ್ಟರ್‌ ವಿಮಾನವು ಅರಿಜೋನಾದ ಟಕ್ಸನ್‌ನಲ್ಲಿರುವ ಪಿಮಾ ಏರ್‌ ಅಂಡ್‌ ಸ್ಪೇಸ್‌ ಮ್ಯೂಸಿಯಮ್‌ನಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಪ್ರಮುಖ ರಾಷ್ಟ್ರಾಧ್ಯಕ್ಷೀಯ ಪೈಲಟ್‌ಗಳ ಸಾದಿಲ್ವಾರಪಟ್ಟಿ.

[ಬದಲಾಯಿಸಿ]

ಲೆಫ್ಟಿನೆಂಟ್‌. ಕರ್ನಲ್‌. ಹೆನ್ರಿ ಟಿ. ಮಯರ್ಸ್‌:[೨೪]

  • ರಾಷ್ಟ್ರಾಧ್ಯಕ್ಷ ಫ್ರಾಂಕ್ಲಿನ್‌ ರೂಸ್ವೆಲ್ಟ್‌: ಜೂನ್‌ 1944-ಏಪ್ರಿಲ್‌ 1945
  • ರಾಷ್ಟ್ರಾಧ್ಯಕ್ಷ ಹ್ಯಾರಿ ಟ್ರೂಮನ್‌: ಏಪ್ರಿಲ್‌ 1945-ಜನವರಿ 1948

ಕರ್ನಲ್‌. ಫ್ರಾನ್ಸಿಸ್‌ ಡಬ್ಲ್ಯೂ ವಿಲಿಯಮ್ಸ್‌:[೨೪]

  • ರಾಷ್ಟ್ರಾಧ್ಯಕ್ಷ ಹ್ಯಾರಿ ಟ್ರೂಮನ್‌: ಜನವರಿ 1948 - ಜನವರಿ 1953

ಕರ್ನಲ್‌. ವಿಲಿಯಮ್‌ ಜಿ. ಡ್ರೇಪರ್‌:[೨೪]

  • ರಾಷ್ಟ್ರಾಧ್ಯಕ್ಷ ಡ್ವೈಟ್‌ ಐಸೆನ್ಹೊವರ್‌: ಜನವರಿ 1953-ಜನವರಿ 1961

ಕರ್ನಲ್‌ ಜೇಮ್ಸ್‌ ಸ್ವಿಂಡಾಲ್‌:[೨೪]

  • ರಾಷ್ಟ್ರಾಧ್ಯಕ್ಷ ಜಾನ್‌ ಎಫ್‌ ಕೆನ್ನೆಡಿ: ಜನವರಿ 1961-ನವೆಂಬರ್‌ 1963
  • ರಾಷ್ಟ್ರಾಧ್ಯಕ್ಷ ಲಿಂಡನ್‌ ಜಾನ್ಸನ್‌: ನವೆಂಬರ್‌ 1963-ಜುಲೈ 1965

ಕರ್ನಲ್‌ ಜೇಮ್ಸ್‌ ವಿ. ಕ್ರಾಸ್‌:[೨೪]

  • ರಾಷ್ಟ್ರಾಧ್ಯಕ್ಷ ಲಿಂಡನ್‌ ಜಾನ್ಸನ್‌: ಜುಲೈ 1965-ಮೇ 1968

ಲೆಫ್ಟಿನೆಂಟ್‌ ಕರ್ನಲ್‌ ಪಾಲ್‌ ಥಾರ್ನ್‌ಹಿಲ್‌:[೨೪]

  • ರಾಷ್ಟ್ರಾಧ್ಯಕ್ಷ ಲಿಂಡನ್‌ ಜಾನ್ಸನ್‌: ಮೇ 1968-ಜನವರಿ 1969

ಕರ್ನಲ್‌ ರಾಲ್ಫ್‌ ಡಿ. ಆಲ್ಬರ್ಟಜೀ:[೨೪]

  • ರಾಷ್ಟ್ರಾಧ್ಯಕ್ಷ ರಿಚರ್ಡ್‌ ನಿಕ್ಸನ್‌: ಜನವರಿ 1969-ಆಗಸ್ಟ್‌ 1974

ಕರ್ನಲ್‌ ಲೆಸ್ಟರ್‌ ಸಿ. ಮ್ಯಾಕ್ಲೆಲೆಂಡ್‌:[೨೪]

  • ರಾಷ್ಟ್ರಾಧ್ಯಕ್ಷ ಗೆರಾಲ್ಡ್‌ ಫೊರ್ಡ್‌: ಆಗಸ್ಟ್‌ 1974-ಜನವರಿ 1977
  • ರಾಷ್ಟ್ರಾಧ್ಯಕ್ಷ ಜಿಮ್ಮಿ ಕಾರ್ಟರ್‌: ಜನವರಿ 1977-ಏಪ್ರಿಲ್ 1980

ಕರ್ನಲ್‌ ರಾಬರ್ಟ್‌ ಇ. ರಡ್ಡಿಕ್‌:[೨೪]

  • ರಾಷ್ಟ್ರಾಧ್ಯಕ್ಷ ಜಿಮ್ಮಿ ಕಾರ್ಟರ್‌: ಏಪ್ರಿಲ್‌ 1980-ಜನವರಿ 1981
  • ರಾಷ್ಟ್ರಾಧ್ಯಕ್ಷ ರೊನಾಲ್ಡ್‌ ರೀಗನ್‌: ಜನವರಿ 1981-ಜನವರಿ 1989

ಕರ್ನಲ್‌ ರಾಬರ್ಟ್‌ ಡಿ. “ಡ್ಯಾನಿ” ಬಾರ್‌:[೨೪]

  • ರಾಷ್ಟ್ರಾಧ್ಯಕ್ಷ ಜಾರ್ಜ್‌ ಎಚ್‌. ಡಬ್ಲ್ಯೂ. ಬುಷ್‌: ಜನವರಿ 1989-ಜನವರಿ 1993.
  • ರಾಷ್ಟ್ರಾಧ್ಯಕ್ಷ ಬಿಲ್‌ ಕ್ಲಿಂಟನ್‌: ಜನವರಿ 1993-ಜನವರಿ 1997

ಕರ್ನಲ್‌ ಮಾರ್ಕ್‌ ಎಸ್‌. ಡಾನೆಲಿ:[೨೫]

  • ರಾಷ್ಟ್ರಾಧ್ಯಕ್ಷ ಬಿಲ್‌ ಕ್ಲಿಂಟನ್‌: ಜನವರಿ 1997-ಜನವರಿ 2001
  • ರಾಷ್ಟ್ರಾಧ್ಯಕ್ಷ ಜಾರ್ಜ್‌ ಡಬ್ಲ್ಯು ಬುಷ್‌: ಜನವರಿ 2001-ಜೂನ್‌ 2001

ಕರ್ನಲ್‌ ಮಾರ್ಕ್‌ ಡಬ್ಲ್ಯೂ. ಟಿಲ್ಮನ್‌:[೨೫]

  • ರಾಷ್ಟ್ರಾಧ್ಯಕ್ಷ ಜಾರ್ಜ್‌ ಡಬ್ಲ್ಯೂ. ಬುಷ್‌: ಜೂನ್‌ 2001-ಜನವರಿ 2009

ಕರ್ನಲ್‌ ಸ್ಕಾಟ್‌ ಟರ್ನರ್‌:[೨೬]

  • ರಾಷ್ಟ್ರಾಧ್ಯಕ್ಷ ಬರಾಕ್‌ ಒಬಾಮ: ಜನವರಿ 2009–ಇಂದಿನವರೆಗೆ

ಇವನ್ನೂ ಗಮನಿಸಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
ಟಿಪ್ಪಣಿಗಳು
  1. ಆರ್ಡರ್‌ 7110.65R (ಏರ್‌ ಟ್ರಾಫಿಕ್‌ ಕಂಟ್ರೋಲ್‌) ಫೆಡೆರಲ್‌ ಏವಿಯೇಷನ್‌ ಅಡ್ಮಿನಿಸ್ಟ್ರೇಷನ್‌ 14 March 2007. ದಿನಾಂಕ 11 ಆಗಸ್ಟ್‌ 2007ರಂದು ಪರಿಷ್ಕರಿಸಲಾಗಿದೆ.
  2. ಬಾಸ್ಮನ್‌, ಜೂಲೀ. "ಪಾಲಿಟಿಕ್ಸ್‌ ಕ್ಯಾನ್‌ ವೇಟ್‌: ದಿ ಪ್ರೆಸಿಡೆಂಟ್‌ ಹ್ಯಾಸ್‌ ಎ ಡೇಟ್‌." ದಿ ನ್ಯೂಯಾರ್ಕ್‌ ಟೈಮ್ಸ್‌ , 18 ಮೇ 2002. ದಿನಾಂಕ 17 ಜೂನ್‌ 2006ರಲ್ಲಿ ಮರು ಸಂಪಾದಿತ
  3. ೩.೦ ೩.೧ ವಾಲ್ಷ್‌ 2003.
  4. ವ್ಯಾಲೇಸ್‌, ಕ್ರಿಸ್‌ (ನಿರೂಪಕ). "ಎಬೋರ್ಡ್‌ ಏರ್‌ ಫೋರ್ಸ್‌ ಒನ್‌." Fox News , November 24, 2008. ದಿನಾಂಕ 10 ನವೆಂಬರ್‌ 2008ರಂದು ಮರುಪಡೆಯಲಾಯಿತು.
  5. ಹಾರ್ಡೆಸ್ಟಿ 2003, ಪಿಪಿ. 31–32.
  6. ಹಾರ್ಡೆಸ್ಟಿ 2003, ಪಿ. 38.
  7. ಹಾರ್ಡೆಸ್ಟಿ 2003, ಪಿ. 39.
  8. ೮.೦ ೮.೧ ೮.೨ "ಫ್ಯಾಕ್ಟ್‌ಷೀಟ್‌: ಡೊಗ್ಲಸ್‌ VC-54C SACRED COW". ನ್ಯಾಷನಲ್‌ ಮ್ಯೂಸಿಯಮ್‌ ಆಫ್‌ US ಏರ್‌ ಫೋರ್ಸ್‌. ದಿನಾಂಕ 23 ಅಕ್ಟೋಬರ್‌ 2008ರಂದು ಪುನರ್ಸಂಪಾದಿಸಲಾಗಿದೆ.
  9. ೯.೦ ೯.೧ ೯.೨ ಡಾರ್‌‌ 2002, ಪಿ. l34.
  10. ಹಾರ್ಡೆಸ್ಟಿ 2003, ಪಿ. 70.
  11. ೧೧.೦ ೧೧.೧ ವಿಲಿಯಮ್ಸ್‌, ರುಡಿ. "ರೀಗನ್‌ ಮೇಕ್ಸ್‌ ಫಸ್ಟ್‌, ಲಾಸ್ಟ್‌ ಫ್ಲೈಟ್‌ ಇನ ಜೆಟ್‌ ಹಿ ಆರ್ಡರ್ಡ್‌." ಅಮೆರಿಕಾ ಸಂಯುಕ್ತ ಸಂಸ್ಥಾನ ರಕ್ಷಣಾ ಇಲಾಖೆ . 25 ಜೂನ್‌ 2004. ದಿನಾಂಕ 17 ಜೂನ್‌ 2006ರಲ್ಲಿ ಪುನರ್ಸಂಪಾದಿತ.
  12. "ವಾಷಿಂಗ್ಟನ್‌ ಪೋಸ್ಟ್‌ ಆನ್ಲೈನ್‌ ಕಾನ್ವರ್ಸೇಷನ್‌ ವಿತ್‌ ಕೆನೆತ್‌ ವಾಲ್ಷ್‌ ಆನ್‌ ಹಿಸ್‌ ಏರ್‌ ಫೋರ್ಸ್‌ ಒನ್: ಎ ಹಿಸ್ಟರಿ ಆಫ್‌ ದಿ ಪ್ರೆಸಿಡೆಂಟ್ಸ್‌ ಅಂಡ್‌ ದೇರ್‌ ಪ್ಲೇನ್ಸ್‌ ". washingtonpost.com , 22 ಮೇ 2002. ದಿನಾಂಕ 23 ಅಕ್ಟೋಬರ್‌ 2008ರಂದು ಪುನಸಂಪಾದಿಸಲಾಯಿತು.
  13. "ಪ್ರೆಸ್‌ ಬ್ರೀಫಿಂಗ್‌ ಬೈ ಆರಿ ಫ್ಲೇಷರ್‌." ವೈಟ್‌ ಹೌಸ್‌ ನ್ಯೂಸ್‌ ರಿಲೀಸಸ್‌ , ಸೆಪ್ಟೆಂಬರ್‌ 2001. 23 ಅಕ್ಟೋಬರ್ 2008ರಂದು ಪುನಸಂಪಾದಿಸಲಾಗಿದೆ.
  14. ಅಲೆನ್‌, ಮೈಕ್‌. "ವೈಟ್‌ ಹೌಸ್‌ ಡ್ರಾಪ್ಸ್‌ ಕ್ಲೇಮ್‌ ಆಫ್‌ ಥ್ರೆಟ್‌ ಟು ಬುಷ್‌." ದಿ ವಾಷಿಂಗ್ಟನ್‌ ಪೋಸ್ಟ್‌ , ಪಿ. A08, 27 ಸೆಪ್ಟೆಂಬರ್‌ 2001. ದಿನಾಂಕ 15 ಫೆಬ್ರವರಿ 2007ರಂದು ಮರುಸಂಪಾದಿಸಲಾಯಿತು.
  15. ರಾವ್‌, ಮೈಥಿಲಿ ಅಂಡ್‌ ಎಡ್‌ ಹೆನ್ರಿ. " 'ಫ್ಯೂರಿಯಸ್‌' ಒಬಾಮ ಆರ್ಡರ್ಸ್ ರಿವ್ಯೂ ಆಫ್‌ NY ಪ್ಲೇನ್‌ ಫ್ಲೈಯೊವರ್‌." cnn.com , 28 ಏಪ್ರಿಲ್‌ 2009. ದಿನಾಂಕ 23 ಅಕ್ಟೋಬರ್‌ 2008ರಂದು ಪುನ:ಸಂಪಾದಿಸಲಾಯಿತು.
  16. ಟ್ರಿಂಬಲ್‌, ಸ್ಟೀಫನ್‌. "US ಕನ್ಸಿಡರ್ಸ್‌ ಏರ್ಬಸ್‌ A380 ಆಸ್‌ ಏರ್‌ ಫೋರ್ಸ್‌ ಒನ್‌ ಅಂಡ್‌ ಪೊಟೆನ್ಷಿಯಲಿ ಎ C-5 ರಿಪ್ಲೇಸ್ಮೆಂಟ್‌." Archived 2007-10-18 ವೇಬ್ಯಾಕ್ ಮೆಷಿನ್ ನಲ್ಲಿ. ಫ್ಲೈಟ್‌ ಗ್ಲೋಬಲ್‌ , 17 ಅಕ್ಟೋಬರ್‌ 2007. ದಿನಾಂಕ 17 June 2006ರಂದು ಮರು ಸಂಪಾದಿತ
  17. ಹೊರೀನ್‌, ಡೇನಿಯಲ್‌. "USAF ಪ್ರೆಸಿಡೆನ್ಷಿಯಲ್‌ ಏರ್ಕ್ರಾಫ್ಟ್‌ ರಿಕ್ಯಾಪಿಟಲೈಸೇಷನ್‌ (PAR) ಪ್ರೊಗ್ರಾಮ್‌." USAF ಮೆಟಿರಿಯಲ್‌ ಕಮ್ಯಾಂಡ್‌ , 7 ಜನವರಿ 2007. ದಿನಾಂಕ 8 ಜನವರಿ 2009ರಂದು ಪುನರ್ಸಂಪಾದಿಸಿದ್ದು.
  18. ಬಟ್ಲರ್‌, ಆಮಿ. "ಬೋಯಿಂಗ್‌ ಒನ್ಲಿ ಕಂಟೆಂಡರ್‌ ಫಾರ್‌ ನ್ಯೂ ಏರ್‌ ಫೋರ್ಸ್‌ ಒನ್‌". Archived 2011-12-19 ವೇಬ್ಯಾಕ್ ಮೆಷಿನ್ ನಲ್ಲಿ. AviationWeek.com , 28 ಜನವರಿ 2009. ದಿನಾಂಕ 17 ಜೂನ್‌ 2006ರಂದು ಮರುಸಂಪಾದಿತ
  19. [31]
  20. ಮಡ್‌, ರೊಜರ್‌ ಅಂಡ್‌ ರಿಚರ್ಡ್‌ ವ್ಯಾಗ್ನರ್‌. ವ್ಯಾಂಡರ್ಬಿಲ್ಟ್‌ ಟೆಲಿವಿಷನ್‌ ನ್ಯೂಸ್ ಆರ್ಕೈವ್‌ "ಪ್ರೆಸಿಡೆಂಟ್‌ / ಕಮರ್ಷಿಯಲ್‌ ಏರ್ಲೈನ್‌ ಫ್ಲೈಟ್‌." CBS ನ್ಯೂಸ್‌ , 27 ಡಿಸೆಂಬರ್‌ 1973. ದಿನಾಂಕ 17 ಜೂನ್‌ 2006ರಂದು ಮರುಸಂಪಾದಿತ.
  21. ಸ್ಯಾಮನ್‌, ಬಿಲ್‌. "ಕ್ಲಿಂಟನ್‌ ಯುಸಸ್‌ ಡಿಕಾಯ್‌ ಫ್ಲೈಟ್‌ ಫಾರ್‌ ಸೆಕ್ಯುರಿಟಿ." ವಾಷಿಂಗ್ಟನ್‌ ಟೈಮ್ಸ್‌ , 26 ಮಾರ್ಚ್‌ 2000. ಪಿ. C.1.
  22. ಹನಿಫಾ, ಅಜೀಜ್‌. "ಪ್ಲೇಯಿಂಗ್‌ ಹೈಡ್‌-ಅಂಡ್‌-ಸೀಕ್‌ ಆನ್‌ ಟ್ರಿಪ್‌ ಟು ಇಸ್ಲಾಮಾಬಾದ್‌." ಇಂಡಿಯಾ ಅಬ್ರಾಡ್‌ . ನ್ಯೂ ಯಾರ್ಕ್‌: 31 ಮಾರ್ಚ್‌ 2000, ವಾಲ್ಯೂಮ್‌ XXX, ಇಷ್ಯೂ 27, ಪಿ. 22.
  23. "ಕ್ಲಿಂಟನ್ಸ್‌ ಟ್ರಿಪ್‌ ಟು ಏಷ್ಯಾ ಕಾಸ್ಟ್‌ ಅಟ್‌ ಲೀಸ್ಟ್‌ $50 ಮಿಲಿಯನ್‌." ಮಿಲ್ವಾಕೀ ಜರ್ನಲ್‌ ಸೆಂಟಿನೆಲ್‌ , 9 ಏಪ್ರಿಲ್‌ 2000, ಪಿ. 175 A.
  24. ೨೪.೦೦ ೨೪.೦೧ ೨೪.೦೨ ೨೪.೦೩ ೨೪.೦೪ ೨೪.೦೫ ೨೪.೦೬ ೨೪.೦೭ ೨೪.೦೮ ೨೪.೦೯ ಲಾಂಗ್‌, ಮೇಜರ್‌ ಟಿಮೊತಿ ಎ., USAF. "ದಿ ಡಿಪ್ಲೊಮ್ಯಾಟಿಕ್‌ ಡ್ರಾಯಿಂಗ್‌ ಪವರ್‌ ಆಫ್‌ ಏರ್‌ ಫೋರ್ಸ್‌ ಒನ್‌ ಅಂಡ್ ಇಟ್ಸ್‌ ಎಫೆಕ್ಟ್‌ ಆನ್‌ ದಿ ಟ್ಯಾಕ್ಟಿಕಲ್‌ ಅಂಡ್‌ ಸ್ಟ್ರಾಟೆಗಿಕ್‌ ಲೆವೆಲ್ಸ್‌ ಆಫ್‌ ಡಿಪ್ಲೊಮೆಸಿ. (ರಿಸರ್ಚ್‌ ರಿಪೋರ್ಟ್‌)" ಮ್ಯಾಕ್ಸ್‌ವೆಲ್‌ AFB, ಅಲಾಬಾಮಾ: ಏರ್‌ ಯುನಿವರ್ಸಿಟಿ , ಏಪ್ರಿಲ್‌ 2008.
  25. ೨೫.೦ ೨೫.೧ ಡಾರ್‌ 2002
  26. "ಏರ್‌ ಫೋರ್ಸ್‌ ಒನ್‌ ಪೈಲಟ್‌ ಸೆಟ್‌ ಫಾರ್‌ ಫೈನಲ್‌ ಮಿಷನ್‌." ಏರ್‌ ಫೋರ್ಸ್‌ ಟೈಮ್ಸ್‌ ಸ್ಟಾಫ್‌ ರಿಪೋರ್ಟ್‌, 19 ಜನವರಿ 2009.
ಗ್ರಂಥಸೂಚಿ
  • ಅಬ್ಬಾಟ್‌ ಜೇಮ್ಸ್‌ ಎ. ಮತ್ತು ಎಲೇನ್‌ ಎಂ. ರೈಸ್‌. ಡಿಸೈನಿಂಗ್‌ ಕ್ಯಾಮೆಲಾಟ್‌: ದಿ ಕೆನ್ನೆಡಿ ವೈಟ್‌ ಹೌಸ್‌ ರಿಸ್ಟೊರೇಷನ್‌ . ನ್ಯೂ ಯಾರ್ಕ್‌: ವಾನ್‌ ನಾಸ್ಟ್ರಾಂಡ್‌ ರೀನ್ಹೋಲ್ಡ್‌, 1998. ISBN 0-442-02532-7.
  • ಆಲ್ಬರ್ಟ್ರಾಜೀ, ರಾಲ್ಫ್‌ ಮತ್ತು ಜೆರಾಲ್ಡ್‌ ಎಫ್‌. ಟರ್ಹಾರ್ಸ್ಟ್‌. ಫ್ಲೈಯಿಂಗ್‌ ವೈಟ್‌ ಹೌಸ್‌: ದಿ ಸ್ಟೊರಿ ಆಫ್‌ ಏರ್‌ ಫೋರ್ಸ್‌ ಒನ್‌ . ನ್ಯೂ ಯಾರ್ಕ್‌: ಕವಾರ್ಡ್‌, ಮೆಕ್ಯಾನ್‌ ಮತ್ತು ಜಿಯೊಹೆಗನ್‌, 1979. ISBN 0-698-10930-9.
  • ಬ್ರಾನ್‌, ಡೇವಿಡ್‌. "Q&A: U.S. ಪ್ರೆಸಿಡೆನ್ಷಿಯಲ್‌ ಜೆಟ್‌ ಏರ್‌ ಫೋರ್ಸ್‌ ಒನ್‌." ನ್ಯಾಷನಲ್‌ ಜಿಯೊಗ್ರಾಫಿಕ್‌ ನ್ಯೂಸ್‌ , 29 ಮೇ 2003.
  • ಡಾರ್‌, ರಾಬರ್ಟ್‌ ಎಫ್‌. ಏರ್‌ ಫೋರ್ಸ್‌ ಒನ್‌ . ಸೇಂಟ್‌ ಪಾಲ್‌, ಮಿನೆಸೊಟಾ: ಮೊಟಾರ್ಬುಕ್ಸ್‌ ಇಂಟರ್ನ್ಯಾಷನಲ್‌, 2002. ISBN 0-7603-1055-6.
  • ಹಾರ್ಡೆಸ್ಟಿ, ವಾನ್‌. ಏರ್‌ ಫೋರ್ಸ್‌ ಒನ್‌: ದಿ ಏರ್ಕ್ರಾಫ್ಟ್‌ ದಟ್‌ ಷೇಪ್ಡ್‌ ದಿ ಮಾಡರ್ನ್‌ ಪ್ರೆಸಿಡೆನ್ಸಿ . ಚಾನ್ಹಾಸೆನ್‌, ಮಿನೆಸೊಟಾ: ನಾರ್ತ್‌ವರ್ಡ್‌ ಪ್ರೆಸ್‌, 2003. ISBN 1-55971-894-3.
  • ಹ್ಯಾರಿಸ್‌, ಟಾಮ್‌. "ಹೌ ಏರ್‌ ಫೋರ್ಸ್‌ ಒನ್‌ ವರ್ಕ್ಸ್‌." HowStuffWorks.com . ದಿನಾಂಕ 10 ಅಕ್ಟೋಬರ‍್ 2008ರಂದು ಪರಿಷ್ಕರಿಸಲಾಗಿದೆ.
  • ವಾಲ್ಷ್‌, ಕೆನೆತ್‌ ಟಿ. ಏರ್‌ ಫೋರ್ಸ್‌ ಒನ್‌: ಎ ಹಿಸ್ಟರಿ ಆಫ್‌ ದಿ ಪ್ರೆಸಿಡೆಂಟ್ಸ್‌ ಅಂಡ್‌ ದೇರ್‌ ಪ್ಲೇನ್ಸ್‌‌ . ನ್ಯೂಯಾರ್ಕ್‌: ಹೈಪಿರಿಯಾನ್‌, 2003. ISBN 1-4013-0004-9.

ಹೊರಗಿನ ಕೊಂಡಿಗಳು

[ಬದಲಾಯಿಸಿ]