ಏಂಜೆಲಿಕ್ ಕರ್ಬರ್ (ಬ್ರೆಮನ್ ನಲ್ಲಿ 18 ಜನವರಿ 1988 ರಂದು ಜನನ) ಜರ್ಮನ್ ವೃತ್ತಿಪರ ಟೆನಿಸ್ ಆಟಗಾರ್ತಿ[೧]. 2003 ರಲ್ಲಿ ಕರ್ಬರ್ ತನ್ನ ವೃತ್ತಿಪರ ಕ್ರೀಡೆಯಲ್ಲಿ ಹೆಸರು ಮಾಡಿದ್ದರೂ, ಅವಳ/ಅವರ ಚೊಚ್ಚಲ 2011 ರ ಯು.ಎಸ್. ಓಪನ್ ಟೆನ್ನಿಸ್ ಸ್ಪರ್ದೆಯಲ್ಲಿ ಉಪಾಂತ್ಯ ಪಂದ್ಯವನ್ನು ತಲುಪಿದ ಮೇಲೆ ಪ್ರಸಿದ್ಧಿಗೆ ಬಂದರು. ಆ ಸಮಯದಲ್ಲಿ ಅವರು ವಿಶ್ವದ ಸ್ರೇಣಿಯಲ್ಲಿ ಸ್ಥಾನವನ್ನು 92 ನೇ ಸ್ಥಾನವನ್ನು ಪಡೆದಿದ್ದರು.. ಫೆಬ್ರವರಿ 1, 2016 ರಂದು ವೃತ್ತಿಜೀವನದಲ್ಲಿ ವಿಶ್ವದ 2 ನೆಯ ಉನ್ನತ ಶ್ರೇಣಿಯನ್ನು ಸಾಧಿಸಿದ ಹೆಚ್ಚು ಶ್ರೇಯಾಂಕಿತ ಜರ್ಮನ್ ಆಟಗಾರ್ತಿಯಾದರು. ಡಬ್ಲುಟಿಎ ಟೂರ್ನಮೆಂಟಿನಲ್ಲಿ ಅವರು ಎಡಗೈ ಆಟಗಾರರು; ತಮ್ಮ ಆಕ್ರಮಣಕಾರಿ ಪ್ರತಿ ಹೊಡೆತದ ಆಟ ಮತ್ತು ಎಡಗೈ ಹೊಡೆತಗಳಿಗೆ ಹೆಸರುವಾಸಿಯಾಗಿದ್ದಾರೆ, ಕರ್ಬರ್ ಎಂಟು ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಮತ್ತು ಡಬ್ಲುಟಿ ಟೂರ್ ಸ್ಪರ್ಧೆಗಳಲ್ಲಿ ಒಂದು ವಿಶೇಷ ಶೀರ್ಷಿಕೆ, ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು 2016 ಆಸ್ಟ್ರೇಲಿಯನ್ ಓಪನ್`ನಲ್ಲಿ ಪಡೆದುದು. ಅವರು ಪ್ಯಾರಿಸ್ (ಒಳಾಂಗಣ), ಚಾರ್ಲ್ಸ್ಟನ್, ಸ್ಟಟ್ಗಾರ್ಟ್, ಬರ್ಮಿಂಗ್ಹ್ಯಾಮ್ ಮತ್ತು ಸ್ಟ್ಯಾನ್ಫೋರ್ಡ್ ಪ್ರೀಮಿಯರ್ ಮಟ್ಟದ ತಮ್ಮ ಪಂದ್ಯಾವಳಿಗಳಲ್ಲಿ ಇನ್ನೂ ಐದು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅಷ್ಟೇ ಅಲ್ಲದೆ, ಅವರು ವೃತ್ತಿಜೀವನದಲ್ಲಿ ಆಕೆ ಹನ್ನೊಂದು ಸಿಂಗಲ್ಸ್ ಮತ್ತು ಐಟಿಎಫ್ ಪ್ರವಾಸ ಮೂರು ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.[೨]
2017ರ ಏಪ್ರಿಲ್ಗೆ ಕೆರ್ಬರ್ 7,335 ಪಾಯಿಂಟ್ಸ್ ಹೊಂದಿದ್ದು ಮೊದಲ ಸ್ಥಾನ ಭದ್ರಪಡಿಸಿ ಕೊಂಡಿದ್ದಾರೆ. ಅಮೆರಿಕಾದ ಸೆರೆನಾ ವಿಲಿಯಮ್ಸ್ ಎರಡನೇ ಸ್ಥಾನದಲ್ಲಿದ್ದಾರೆ. ಬಲಗೈ ಆಟಗಾರ್ತಿ ಸೆರೆನಾ ಅವರು ಈ ಮೊದಲು ಅಗ್ರ ಪಟ್ಟ ಹೊಂದಿದ್ದರು. ಗಾಯಗೊಂಡಿರುವ ಕಾರಣ ಅವರು ಹಿಂದಿನ ಕೆಲ ಪ್ರಮುಖ ಟೂರ್ನಿಗಳಲ್ಲಿ ಆಡಿರಲಿಲ್ಲ.
ಬ್ರಿಟನ್ನ ಆ್ಯಂಡಿ ಮರ್ರೆ ಮತ್ತು ಜರ್ಮನಿಯ ಏಂಜಲಿಕ್ ಕೆರ್ಬರ್ ಅವರು ಕ್ರಮವಾಗಿ ಪುರುಷರ ವೃತ್ತಿಪರ ಟೆನಿಸ್ ಸಂಸ್ಥೆ (ಎಟಿಪಿ) ಮತ್ತು ಮಹಿಳಾ ಟೆನಿಸ್ ಸಂಸ್ಥೆ (ಡಬ್ಲ್ಯುಟಿಎ) ಸೋಮವಾರ ಬಿಡುಗಡೆ ಮಾಡಿರುವ ಸಿಂಗಲ್ಸ್ ವಿಭಾಗದ ನೂತನ ವಿಶ್ವ ಕ್ರಮಾಂಕ ಪಟ್ಟಿ ಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಮರ್ರೆ ಅವರ ಖಾತೆಯಲ್ಲಿ 11,600 ಪಾಯಿಂಟ್ಸ್ ಇದ್ದು ಅವರು ಎರಡನೇ ಸ್ಥಾನದಲ್ಲಿರುವ ಸರ್ಬಿಯಾದ ನೊವಾಕ್ ಜೊಕೊವಿಚ್ (7905) ಅವರಿಗಿಂತ 3695 ಪಾಯಿಂಟ್ಸ್ ಹೆಚ್ಚು ಹೊಂದಿದ್ದಾರೆ.[೧]
ಏಂಜೆಲಿಕ್ ಕರ್ಬರ್` ಬ್ರೆಮೆನ್`ನಲ್ಲಿ ಜನಿಸಿದರು ರವರ ತಂದೆ ಪೋಲಿಷ್ [1] ಸ್ಲೊವೊಮಿರ್ ಕರ್ಬರ್ ಮತ್ತು ತಾಯಿ ಜರ್ಮನ್ [1] ಬೀಅಟಾ (ಪೋಲಿಷ್ ಉದ್ಯಮಿ ಜನುಸ್ಜ್` ನ ಮಗಳು) [2] ಕರ್ಬರ್`ಗೆ ಒಬ್ಬ ತಂಗಿ ಜೆಸ್ಸಿಕಾ ಇದ್ದಾಳೆ. ಕರ್ಬರ್ ಮೂರು ವರ್ಷದ ವಯಸ್ಸಿನಿಂದಲೇ ಟೆನಿಸ್ ಆಡಲು ಪ್ರಾರಂಭಿಸಿದರು. ಮತ್ತು ಅಂತಿಮವಾಗಿ ಕಿರಿಯರ ತಂಡ ಸೇರಿದರು. ಅವಳು/ರು ವಸವಿದ್ದ ಪುಜ್ಜಿಕೊವೊದಲಿ ಅಜ್ಜ ಜನುಸ್ಜ್ ಅವರು ಇವಳಿಗಾಗಿ ಅಲ್ಲಿ ಟೆನಿಸ್ ‘ಅಕಾಡೆಮಿ ಎಂಜಿ ್ಲ ಆರಂಬಿಸಿದ.. [3] ಅವರು ಜರ್ಮನಿ ಮತ್ತು ಇತರ ಕಡೆಗಳಲ್ಲಿ ಯುರೋಪ್ನಲ್ಲಿ ಅನೇಕ ಕಡೆ ಟೆನ್ನಿಸ್`ಮ್ಯಾಚಿನಲ್ಲಿ ಆಡಿದರು ಆದರೆ 2003 ರಲ್ಲಿ ಮಾತ್ರಾ ಜೂನಿಯರ್ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಯಿತು., ಆ 15 ರ ವಯಸ್ಸಿನ ಸಮಯದಲ್ಲಿ ಅವಳು ವೃತ್ತಿಪರ ಕ್ರೀಡಾಪಟು ಆಗಿದ್ದಳು. ಕರ್ಬರ್ ಜರ್ಮನ್, ಪೋಲಿಶ್ ಮತ್ತು ಇಂಗ್ಲೀಷ್ ಮಾತನಾಡುತ್ತಿದ್ದಳು.. [4] [5]
2016:ಆಸ್ಟ್ರೇಲಿಯನ್ ಓಪೆನ್ ವುಮನ್ ಸಿಂಗಲ್ಸ್ ಫೈನಲ್ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ.
ಕರ್ಬರ್ ಅವರು, ಬ್ರಿಸ್ಬೇನ್ ಇಂಟರ್ನ್ಯಾಷನಲ್ಸ್` ನಿಂದ ವರ್ಷ ಆರಂಭಿಸಿದರು ವಿಕ್ಟೋರಿಯಾ ಅಜರೆಂಕಾ ಸಣ್ಣ ಬಂದ ಅಂತಿಮ ತಲುಪಲು ಕ್ಯಮಿಲಾ ಗಿಯೋರ್ಗಿರೊಂದಿಗಿನ ಮ್ಯಾಡಿಸನ್ ಬ್ರೇಂಗ್ಲೇ, ಅನಸ್ತಾಸಿಯಾ, ಮತ್ತು ಕಾರ್ಲಾ ಸುವಾರೆಜ್ ನವರ್ರೊ ಅವರನ್ನು ಸೋಲಿಸಿದರು.. ಸಿಡ್ನಿಯಲ್ಲಿ ಆರಂಭಿಕ ಸುತ್ತಿನಲ್ಲಿ ಎಲಿನಾ ಸ್ವಿಟೋಲಿನಾ ರನ್ನು ಸೋಲಿಸಿದ ನಂತರ, ಅವರು ಗ್ಯಾಸ್ಟ್ರೊ ಕರುಳಿನ ಅನಾರೋಗ್ಯದಿಂದ ಆಟದಿಂದ ಹಿಂತೆಗೆದುಕೊಂಡರು. ಕರ್ಬರ್ ಆಸ್ಟ್ರೇಲಿಯನ್ ಓಪನ್ ನಲ್ಲಿ 7 ನೇ ಶ್ರೇಣಿಯವರು. ಮತ್ತು ಮೊದಲ ಸುತ್ತಿನಲ್ಲಿ ಮಿಸಾಕಿ ಡೊಯಿ ಯನ್ನು ಸೋಲಿಸಿ, ಪಂದ್ಯದದಲ್ಲಿ ಒಂದು ಅಂಕ ಕೆಳಗೆ ಇದ್ದರು.. ನಂತರ ಅಲೆಕ್ಸಾಂಡ್ರಾ, ಬ್ರೆಂಗ್ಲೇ ಮತ್ತು ದೇಶಬಾಂಧವರಾದ ಅನ್ನಿಕಾ ಬೆಕ್ ಮೇಲೆ ನೇರ ಸೆಟ್ ಗೆಲುವು ಪಡೆದು -ಈ ತ್ರಿವಳಿ ಪ್ರಕ್ರಿಯೆಯಲ್ಲಿ ಮೆಲ್ಬರ್ನ್ನ ತನ್ನ ಮೊದಲ ಕ್ವಾರ್ಟರ್ ಫೈನಲ್`ತಲುಪಿದರು. ಕ್ವಾರ್ಟರ್ ಫೈನಲ್ನಲ್ಲಿ, ತನ್ನ ಮೂರನೇ ಗ್ರ್ಯಾಂಡ್ ಸ್ಲಾಮ್ ಸೆಮಿಫೈನಲ್ ನತ್ತ ನೇರ ಸೆಟ್ಗಳಲ್ಲಿ, ಬೆಲರೂಸಿಯನ್ ವಿರುದ್ಧ ತನ್ನ ಮೊದಲ ಜಯ ಪಡೆದರು, ಅಲ್ಲಿ ಅಜರೆಂಕಾ ರನ್ನು ಸೋಲಿಸುವ ಮೂಲಕ ತನ್ನ ಬ್ರಿಸ್ಬೇನ್ ನಷ್ಟವನ್ನು ತುಂಬಿದರು. ಸೆಮಿ ಫೈನಲ್ಸ್ ನಲ್ಲಿ, ಕರ್ಬರ್ ಜೊಹಾನ ಕೊಂಟಾರನ್ನು ನೇರ ಸೆಟ್ಗಳಲ್ಲಿ ಸೋಲಿಸಿ, ತನ್ನ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಅಂತಿಮ ಸುತ್ತು ತಲುಪಿದರು. ಅವರು ತಮ್ಮ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗಳಿಸಿಲು, ಎದುರಿಸಿದ ಹಾಲಿ ಚಾಂಪಿಯನ್ ಮತ್ತು ವಿಶ್ವದ ನಂ 1 ಸೆರೆನಾ ವಿಲಿಯಮ್ಸ್` ರನ್ನು ಸೋಲಿಸಿದರು.[6]
ಕರ್ಬರ್ ರವರ ಮುಂದಿನ ನಿಗದಿತ ಪಂದ್ಯಾವಳಿ ದುಬೈ ಟೆನಿಸ್ ಚಾಂಪಿಯನ್ಷಿಪ್.[೭][೯]
ಎರಡು ತಿಂಗಳ ಹಿಂದೆಯಷ್ಟೆ ಆಸ್ಟ್ರೇಲಿಯಾ ಓಪನ್ ಟೂರ್ನಿ ಫೈನಲ್ನಲ್ಲಿ ಕೆರ್ಬರ್ ಸೆರೆನಾ ವಿಲಿಯಂಮ್ಸ್ರನ್ನು ಸೋಲಿಸಿದ್ದರು. ಆ ಪಂದ್ಯದಲ್ಲಿ ಗೆದ್ದಿದ್ದ ಜರ್ಮನಿಯ ಏಂಜೆಲಿಕ್ ಕೆರ್ಬರ್ ಅವರನ್ನು ಶನಿವಾರ ವಿಂಬಲ್ಡನ್ ಫೈನಲ್ನಲ್ಲಿ ಸೆರೆನಾ ಮಣಿಸಿದರು. ವಿಜಯ ಸಾಧಿಸಿದ ಸೆರೆನಾ ಸೆಂಟರ್ ಕೋರ್ಟ್ನಲ್ಲಿ ಅಂಗಾತವಾಗಿ ಬಿದ್ದು ಸಂಭ್ರಮ ವ್ಯಕ್ತಪಡಿಸಿದರು. ಕೆಲ ಕ್ಷಣಗಳ ನಂತರ ಎದ್ದು ನಿಂತು ಅಭಿಮಾನಿಗಳತ್ತ ಕೈಬೀಸಿದರು. ಎದುರಾಳಿ ಕೆರ್ಬರ್ ಅವರನ್ನು ಬಿಗಿದಪ್ಪಿಕೊಂಡರು.
ಅಮೆರಿಕದ 34 ವರ್ಷದ ಆಟಗಾರ್ತಿ ಸೆರೆನಾ ನಡೆದಿದ್ದ 81 ನಿಮಿಷಗಳ ಹಣಾಹಣಿಯಲ್ಲಿ 7–5, 6–3ರಲ್ಲಿ ಏಂಜೆಲಿಕ್ ವಿರುದ್ಧ ಜಯಿಸಿದರು. ಸೆರೆನಾ ಅವರ ಬಲಶಾಲಿ ಸರ್ವ್ಗಳನ್ನು ಮೊದಲ ಸೆಟ್ನಲ್ಲಿ ಕೆರ್ಬರ್ ದಿಟ್ಟತನದಿಂದ ಎದುರಿಸಿದ್ದರು. ಈ ಸೆಟ್ನಲ್ಲಿ ಹೆಚ್ಚುಕಮ್ಮಿ ಸಮಬಲದ ಹೋರಾಟ ನಡೆಯಿತು. ಆದರೆ ಟೈಬ್ರೇಕರ್ನಲ್ಲಿ ಸೆರೆನಾ ತಪ್ಪು ಮಾಡಲಿಲ್ಲ. ನಿಖರ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು. ಸೆಟ್ ಅನ್ನು ತಮ್ಮದಾಗಿಸಿಕೊಂಡರು. ನಂತರ ಎರಡನೇ ಸೆಟ್ನಲ್ಲಿ 34 ವರ್ಷದ ಸೆರೆನಾ ಆರಂಭದಿಂದಲೇ ವೇಗದ ಆಟಕ್ಕೆ ಒತ್ತು ನೀಡಿದರು. ಅವರು ಹಾಕಿದ ಡ್ರಾಪ್ಗಳ ಅಂದಾಜು ಸಿಗದೇ ಕೆರ್ಬರ್ ಹತಾಶರಾದರು. ಸೆರೆನಾ ಮಾಡಿದ ನಿಖರ ಸರ್ವ್ಗಳಿಗೆ ಉತ್ತರ ಕೊಡುವಲ್ಲಿಯೂ ಎಡವಿದರು
ಇದರಿಂದಾಗಿ ಕೆರ್ಬರ್ ಅವರಿಗೆ ಮೂರು ಅಂಕಗಳನ್ನು ಗಳಿಸಲು ಮಾತ್ರ ಸಾಧ್ಯವಾಯಿತು. ಪಂದ್ಯದಲ್ಲಿ ಒಟ್ಟು 13 ಏಸ್ ಸಿಡಿಸಿದ ಸೆರೆನಾ, 39 ವಿನ್ನರ್ಗಳನ್ನು ಹೊಡೆದು ವಿಜೃಂಭಿಸಿದರು. ನಾಲ್ಕನೇ ಶ್ರೇಯಾಂಕದ ಕೆರ್ಬರ್ ಸೆಮಿಫೈನಲ್ನಲ್ಲಿ ವೀನಸ್ ವಿಲಿಯಮ್ಸ್ ಅವರನ್ನು ಸೋಲಿಸಿದ್ದರು.[೨]