ಎ. ಎಸ್. ಕೆ ರಾವ್

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಕನ್ನಡ ಭಾಷೆ, ಸಂಸ್ಕೃತಿ, ನಾಟಕ, ನೃತ್ಯಗಳನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾ ಅದರ ಪ್ರಸಾರಕ್ಕಾಗಿ ತಮ್ಮ ಅಮೋಘಸೇವೆಯನ್ನು ಸದ್ದು ಗದ್ದಲವಿಲ್ಲದೆ ಮಾಡುತ್ತಾ ಬಂದು ಯಾರಿಗೂ ಹೇಳದೇ ಕೇಳದೆ ಇಹಲೋಕದ ಯಾತ್ರೆಗೆ ವಿದಾಯ ಹೇಳಿದ 'ಎ.ಎಸ್.ಕೆ.ರಾಯರು', ವಂದ್ಯರು. 'ಕರ್ನಾಟಕ ಸಂಘ', ಮುಂತಾದ ಹತ್ತು-ಹಲವು ಕನ್ನಡ ಸಂಸ್ಥೆಗಳನ್ನು ಅವರು ಹಾಗೂ ಅವರ ಮಿತ್ರರು ಹುಟ್ಟುಹಾಕಿದರು. 'ರಾಯಿಟರ್ ಸುದ್ದಿ ಸಂಸ್ಥೆ'ಯಲ್ಲಿ ಕೆಲಸ ಮಾಡುತ್ತಿದ್ದ 'ರಾವ್', ಕನ್ನಡದ ಚಟುವಟಿಕೆಗಳಿಗೆ ಸದಾ ಸಿದ್ಧರಾಗಿರುತ್ತಿದ್ದರು.