ವಿಷಯಕ್ಕೆ ಹೋಗು

ಎ. ಆರ್. ವಾಸುದೇವಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅತ್ತಿಂಗನಾಲ್ ರಾಮರಾವ್ ವಾಸುದೇವಮೂರ್ತಿ
ಚಿತ್ರ:Arvasudev.jpg
ಡಾ.ಎ. ರ್. ವಾಸುದೇವಮೂರ್ತಿ. ಸುಪ್ರಸಿದ್ಧ ಅಂತಾರಾಷ್ಟ್ರೀಯ ಮಟ್ಟದ ರಸಾಯನ ಶಾಸ್ತ್ರಜ್ಞ, ಅಪ್ರತಿಮ ಸಂಸ್ಕೃತ ಭಾಷಾವಿದ್ವಾಂಸ, ಸಿಲಿಕಾನ್ ತಂತ್ರಜ್ಞಾನ ಜನಕ.
Died೨೦೧೪ ರ ಜನವರಿ ೧೧ ರ ರಂದು, ತಮ್ಮ ೮೮ ನೇ ವಯಸ್ಸಿನಲ್ಲಿ ಮರಣಿಸಿದರು.
Other namesಭಾರತೀಯ
Occupation(s)ಶಿವಮೊಗ್ಗ ಜಿಲ್ಲೆಯ ತರೀಕೆರೆಯ ಶ್ಯಾನುಭೋಗರ ಕುಟುಂಬದಲ್ಲಿ ಜನಿಸಿದರು. ೧೯೨೫ ರಲ್ಲಿ ಬೀರೂರಿನ ಮಾಧ್ಯಮಿಕ ಶಾಲೆ, ಚಿತ್ರದುರ್ಗದಲ್ಲಿ ಪ್ರೌಢಶಾಲೆ, ಬೆಂಗಳೂರಿನಲ್ಲಿ ಕಾಲೇಜ್ ಸಿಕ್ಷಣ.೧೯೪೫ ರಲ್ಲಿ ರಸಾಯನ ಶಾಸ್ತ್ರದಲ್ಲಿ (ಆನರ್ಸ್) ಪದವಿ. ಗಂಧಕದ ಲೋಯರ್ ಆಕ್ಸೈಡ್ ನ ಅಸ್ತಿತ್ವವನ್ನು ನಿರೂಪಿಸುವುದೊಂದಿಗೆ, 'ಡಿ.ಎಸ್.ಸಿ' ಪದವಿ
Known forವಾಸ್ವಿಕ್ ಪುರಸ್ಕಾರ (೧೯೮೧)

ಭಾರತೀಯ ವಿಜ್ಞಾನ ಮಂದಿರದ ಹೆಮ್ಮೆಯ ಗೌರವಾನ್ವಿತ ವಿದ್ಯಾರ್ಥಿ ಪುರಸ್ಕಾರ (೧೯೮೪) ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸರ್.ಎಂ.ವಿ ಪುರಸ್ಕಾರ (೧೯೯೮)

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ. * ಬರೋಡಾ ವಿಶ್ವ ವಿದ್ಯಾಲಯದ ಕೆ.ಜಿ.ನಾಯಕ್ ಸ್ವರ್ಣಪದಕಇಂಡಿಯನ್ ಟ್ರೆಡಿಶನ್ ಆಫ್ ಕೆಮಿಸ್ಟ್ರಿ, ಅಂಡ್ ಕೆಮಿಕಲ್ ಟೆಕ್ನೋಲೊಜಿ,' ಪುಸ್ತಕ ಪ್ರಕಟಣೆ
Website[೧]

ತಮ್ಮ ಪ್ರಿಯ ಗೆಳೆಯರಿಗೆ ಮತ್ತು ವಿದ್ಯಾರ್ಥಿಗಳಿಗೆ ’ಎ.ಆರ್.ವಿ ಎಂದೇ ಹೆಸರಾದ, ಪ್ರೊ.ಎ. ಆರ್. ವಾಸುದೇವಮೂರ್ತಿಯವರು, (ಅತ್ತಿಂಗನಾಲ್ ರಾಮರಾವ್ ವಾಸುದೇವಮೂರ್ತಿಗಳು) ಒಬ್ಬ ಸುಪ್ರಸಿದ್ಧ ಅಂತಾರಾಷ್ಟ್ರೀಯ ಮಟ್ಟದ ರಸಾಯನ ಶಾಸ್ತ್ರಜ್ಞ, ಅಪ್ರತಿಮ ಸಂಸ್ಕೃತ ಭಾಷಾವಿದ್ವಾಂಸ, ಸಿಲಿಕಾನ್ ತಂತ್ರಜ್ಞಾನ ಜನಕ, ಎಂದು ಜನಪ್ರಿಯರಾಗಿದ್ದರು.[]

ಜನನ, ಬಾಲ್ಯ ವಿದ್ಯಾಭ್ಯಾಸ, ವೃತ್ತಿಜೀವನ

[ಬದಲಾಯಿಸಿ]

ಶಿವಮೊಗ್ಗ ಜಿಲ್ಲೆಯ ತರೀಕೆರೆಯ ಶ್ಯಾನುಭೋಗರ ಕುಟುಂಬದಲ್ಲಿ ಜನಿಸಿದರು. ೧೯೨೫ ರಲ್ಲಿ ಬೀರೂರಿನ ಮಾಧ್ಯಮಿಕ ಶಾಲೆಚಿತ್ರದುರ್ಗದಲ್ಲಿ ಪ್ರೌಢಶಾಲೆಯ ಶಿಕ್ಷಣ, ಬೆಂಗಳೂರಿನಲ್ಲಿ ಕಾಲೇಜ್ ವ್ಯಾಸಂಗ ಗಖ್ಳಿಸಿದರು. ಅವರಿಗೆ ರಸಾಯನಶಾಸ್ತ್ರವನ್ನು ಹೇಳಿಕೊಟ್ಟ ಹನುಮಂತಾಚಾರ್ಯರನ್ನು ನೆನೆಯುತ್ತಾರೆ. ೧೯೪೫ ರಲ್ಲಿ ರಸಾಯನ ಶಾಸ್ತ್ರದಲ್ಲಿ (ಆನರ್ಸ್) ಪದವಿ ಗಳಿಸಿದರು. ಆ ವಿಶಯದಲ್ಲಿ ಅವರು ೧೦೦% ಅಂಕಗಳಿಸಿದರು. ಮುಂದೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರೊ.ಬಿ ಸಂಜೀವರಾವ್ ಮಾರ್ಗದರ್ಶನದಲ್ಲಿ ಅಧ್ಯಯನವನ್ನು ಮುಂದುವರೆಸಿದರು. ಗಂಧಕದ ಲೋಯರ್ ಆಕ್ಸೈಡ್ ನ ಅಸ್ತಿತ್ವವನ್ನು ನಿರೂಪಿಸುವುದೊಂದಿಗೆ, 'ಡಿ.ಎಸ್.ಸಿ' ಪದವಿ ಗಳಿಸಿದರು. ಅಲ್ಲಿ ಆಮ್ಲಜನಕದ ಜೊತೆಗೆ ಗಂಧಕದ ಅನುಪಾತ ೨;೧ ಇದೆಯೆಂದು ತೋರಿಸಿದರು. ಈ ಸಿದ್ಧಾಂತವನ್ನು ವಿಶ್ವದ ರಸಾಯನ ಶಾಸ್ತ್ರಜ್ಞರೊಬ್ಬರು, ’ಪಾಲಿ ಸಲ್ಫರ್ ಆಕ್ಸೈಡ್ ನ ಸಿದ್ಧಾಂತ'ವೆಂದು ಹೆಸರಿಸಿದ್ದಾರೆ.[]

ಸಿಲಿಕಾನ್ ಬಗ್ಗೆ

[ಬದಲಾಯಿಸಿ]

ಭದ್ರಾವತಿಯಲ್ಲಿ ಫೆರೊಸಿಲಿಕಾನ್ ಕಾರ್ಖಾನೆಗೆ ಭೇಟಿಯಿತ್ತ ದಿನದಿಂದ ಅವರಿಗೆ ಒಲವು ಬೆಳೆಯಿತು. ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಬಳಕೆಯಲ್ಲಿರುವ ಅರೆವಾಹಕಗಳ ನಿರ್ಮಾಣಕ್ಕೆ ಪರಿಶುದ್ಧ ಸಿಲಿಕಾನ್ ಅಗತ್ಯವಿರುವುದನ್ನು ತಿಳಿದಿದ್ದ ಮೂರ್ತಿ ತಮ್ಮದೇ ಸಂಸ್ಥೆಯ ಭೌತ ವಿಜ್ಞಾನ ವಿಭಾಗದ ಪ್ರಾಧ್ಯಪಕ ಡಾ ಜಿ.ಎನ್ ಜೊತೆಗೂಡಿ ಸಿಲಿಕಾನ್ ಸಂಸ್ಕರಣ ಕಾರ್ಯದಲ್ಲಿ ತೊಡಗಿಕೊಂಡರು. ಫೆರೋಸಿಲಿಕಾನ್ ಕ್ಲೋರಿನ್ ಸೇರಿಸಿದ ಸಿಲಿಕಾನ್ ಟೆಟ್ರಾಕ್ಲೋರೈಡ್. ಅದೊಂದು ಪ್ರಮುಖ ಘಟ್ಟ. ಇದರೊಂದಿಗೆ ಸಿಲಿಕಾನ್ ಜೊತೆ ಪಯಣ ಆರಂಭವಾಯಿತು. []

ಮೆಟ್ಟೂರ್ ಕೆಮಿಕಲ್ ಅಂಡ್ ಇಂಡಸ್ಟ್ರಿಯಲ್ ಕಾರ್ಪೊರೇಷನ್

[ಬದಲಾಯಿಸಿ]

ತಂತ್ರಜ್ಞಾನವನ್ನು ೧೯೬೯ ರಲ್ಲಿ ಬಳಸಲಾಯಿತು.ಇದರೊಂದಿಗೆ ರಾಷ್ಟ್ರದಮೊಟ್ಟಮೊದಲ ಸಿಲಿಕಾನ್ ಉತ್ಪಾದನಾ ಘಟಕ ಮೆಟ್ಟೂರಿನಲ್ಲಿ ಆರಂಭವಾಯಿತು. ಇದರ ಜೊತೆಗೆ ಸೌರ ವಿದ್ಯುತ್ ಫಲಕಗಳು ಸೇರಿದಂತೆ ಅನೇಕ ಮಂಚೂಣಿ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳಲ್ಲಿ ಬಳಸಲ್ಪಡುವ ಸಿಲಿಕಾನ್ ಟೆಟ್ರಾ ಕ್ಲೋರೈಡ್, ಇಥೈಲ್ ಸಿಲಿಕೇಟ್, ಪ್ಹುಮ್ದ್ ಸಿಲಿಕಾ ವೇಫರ್ಸ್, ಗಳನ್ನೂ ಸಂಸ್ಕರಿಸುವ ವಿಧಾನವನ್ನು ಮೆಟ್ಟೂರಿನ ಉದ್ಯಮಕ್ಕೆ ತೋರಿಸಿಕೊಟ್ಟರು. ಮೂರ್ತಿಯವರು ಮೆಟ್ಟೂರ್ ಅಲ್ಯುಮಿನಿಯಂ ಕಾರ್ಖಾನೆ, ಮತ್ತು ಕಾರೈಕುಡಿಯ ಸೆಂಟ್ರಲ್ ಎಲೆಕ್ಟ್ರೋ ಕೆಮಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಜೊತೆಗೂಡಿ ವಿದ್ಯುನ್ಮಾನ ಮತ್ತು ರಕ್ಷಣಾ ರಂಗದಲ್ಲಿ ಬೇಕಾದ ಗ್ಯಾಲಿಯಮ್ ಸಹ ತಯಾರಿಸಿದರು. []

ಭಾರತದ ಪರಮಾಣು ಸ್ಥಾವರಗಳಲ್ಲಿ ಅನಿಲ ಸೋರಿಕೆ

[ಬದಲಾಯಿಸಿ]

ಪರಮಾಣು ಸ್ಥಾವರಗಳಲ್ಲಿ ಅನೇಕ ಬಗೆಯ ಅನಿಲ ಸೋರುವಿಕೆಯ ಸಮಸ್ಯೆ ತಲೆದೋರಿತ್ತು. ಹಲವು ಟನ್ ಗಳಷ್ಟು 'ಈಥೈಲ್ ಸಿಲಿಕೇಟ್' ತರಿಸಿ ಸೋರಿಕೆ ತಡೆಗಟ್ಟಿದರು. ಭಾರಿ ಪ್ರಮಾಣದ ಅನಾಹುತಗಳು ತಪ್ಪಿದವು. ದೇಶಗೊಳಗಿನ ಉತ್ಪನ್ನದಿಂದಲೇ ಸಮಸ್ಯೆಗಳು ಪರಿಹಾರವಾಗಿ ಕೋಟ್ಯಾಂತರ ರೂಪಾಯಿಗಳ ವಿದೇಶಿ ವಿನಿಮಯ ಉಳಿಯಿತು. ಆಗಿನ ಪ್ರಧಾನಿ ರಾಜೀವ್ ಗಾಂಧಿ, ಈ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಪ್ರಶಸ್ತಿ, ಮನ್ನಣೆಗಳು

[ಬದಲಾಯಿಸಿ]

ಭಾರತದ ಸಿಲಿಕಾನ್ ತಂತ್ರಜ್ಞಾನದ ಜನಕರಾಗಿ ವಿಜ್ಞಾನದಿಂದ ಅಧ್ಯಾತ್ಮದವರೆಗೆ ತಮ್ಮ ಓದಿನ ಹಾದಿಯಲ್ಲಿ ಕ್ರಮಿಸಿದ್ದ ಮೂರ್ತಿ.

  • ವಾಸ್ವಿಕ್ ಪುರಸ್ಕಾರ (೧೯೮೧)
  • ಭಾರತೀಯ ವಿಜ್ಞಾನ ಮಂದಿರದ ಹೆಮ್ಮೆಯ ಗೌರವಾನ್ವಿತ ವಿದ್ಯಾರ್ಥಿ ಪುರಸ್ಕಾರ (೧೯೮೪)
  • ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ್ ಮಂಡಳಿಯ ಸರ್.ಎಂ.ವಿ ಪುರಸ್ಕಾರ (೧೯೯೮)
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ಬರೋಡಾ ವಿಶ್ವ ವಿದ್ಯಾಲಯದ ಕೆ.ಜಿ.ನಾಯಕ್ ಸ್ವರ್ಣಪದಕ

ಅತ್ಯುತ್ತಮ ಮಾರ್ಗದರ್ಶಿ

[ಬದಲಾಯಿಸಿ]

ರಸಾಯನ ಶಾಸ್ತ್ರದಲ್ಲಿ ಮೇರುಸಾಧರಲ್ಲಿ ಪ್ರಮುಖರು. ಭಾರತೀಯ ಪ್ರಾಚೀನ ವಿಜ್ಞ್|ಆನ ತಂತ್ರಜ್ಞಾನ-ತತ್ವಶಾಸ್ತ್ರದ ಬಗ್ಗೆಯೂ ಪರಿಣಿತರು. ಈಗಿನ ಜಾಗತಿಕ ವಿಶ್ವದ ಆವಿಷ್ಕಾರಗಳನ್ನು ಭಾರತವು ತನ್ನ ಮೇಲ್ಮೆಗಾಗಿ ಹೇಗೆ ಬಳಸಿಕೊಳ್ಳಬಹುದು ಎನ್ನುವುದನ್ನು ತೋರಿಸಿಕೊಟ್ಟರು. ಭಾರತೀಯ ವಿಜ್ಞಾನಮಂದಿರದ ರಸಾಯನ ವಿಜ್ಞಾನದ ವಿದ್ಯಾರ್ಥಿಯಾಗಿ ಸೇರಿದ ಮೂರ್ತಿ, ಮುಂದೆಅಲ್ಲಿನ ವಿಜ್ಞಾನ ವಿಭಾಗಗಳ ಎಲ್ಲಾ ಸ್ಖಾಖೆಗಳಲ್ಲೂ ಉನ್ನತಹುದ್ದೆಗಳನ್ನೂ ಸಮರ್ಥವಾಗಿ ನಿರ್ವಹಿಸಿ ೧೯೮೬ ರಲ್ಲಿ ನಿವೃತ್ತರಾದರು.[]

ಭಾರತದ ಸಂಸ್ಕೃತಿಯ ಬಗ್ಗೆ ಅಪಾರ ಒಲವು

[ಬದಲಾಯಿಸಿ]

ಅಧ್ಯಯನಗಳ ಆಧಾರಗಳಿಂದ ಪ್ರಸ್ತುತಪಡಿಸುವ ವಿಷಯಗಳು

[ಬದಲಾಯಿಸಿ]

ಭಾರತದ ಸಂಸ್ಕೃತಿಯ ಬಗ್ಗೆ ಅಪಾರ ಗೌರವ. ಪೃಠ್ವಿಯ ಅತ್ಯಂತ ಪುರಾತನ ಮತ್ತು ಶ್ರೀಮಂತ ಸಂಸ್ಕೃತಿಯ ದೇಶಭಾರತ. ಇಲ್ಲಿನ ಜನ ಬದುಕನ್ನು ಕಾಣುವ ಪರಿ ಅನನ್ಯವಾದದ್ದು. ೧೮ ನೆಯ ಶತಮಾನದ ಕೊನೆಯವರೆವಿಗೂ 'ಜಗತ್ತಿನ ಕೈಗಾರಿಕಾ ಕಾರ್ಯಾಗಾರ'ವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿತ್ತು. 'ಕೌಟಿಲ್ಯನ ಅರ್ಥಶಾಸ್ತ್ರ', ಅವರಿಗೆ ಬಲು ಪ್ರಿಯ. ಭಾರತದ ಪೂರ್ವಿಕರು ಕುಂಬಾರಿಕೆ, ಶಸ್ತ್ರಾಸ್ತ ತಯಾರಿಕೆ, ಕೃಷಿ, ಮತ್ತು ತಂತ್ರಜ್ಞಾನ ವಾಸ್ತುಶಾಸ್ತ್ರ, ಮುದ್ರಣಕಾರ್ಯ ವಾಯುಗುಣಶಾಸ್ತ್ರ, ನಗರನಿರ್ಮಾಣಯೊಜನೆಗಳಲ್ಲಿ ಉನ್ನತ ಮಟ್ಟದ ಜ್ಞಾನವನ್ನು ಹೊಂದಿದ್ದರು.

'ಇಂಡಿಯನ್ ಟ್ರೆಡಿಶನ್ ಆಫ್ ಕೆಮಿಸ್ಟ್ರಿ, ಅಂಡ್ ಕೆಮಿಕಲ್ ಟೆಕ್ನೋಲೊಜಿ,' ಪುಸ್ತಕ ಪ್ರಕಟಣೆ

[ಬದಲಾಯಿಸಿ]

ಅಪ್ರತಿಮ ಸಂಸ್ಕೃತ ವಿದ್ವಾಂಸ. ವೇದ, ಉಪನಿಷತ್ತುಗಳ ಅಧ್ಯಯನದಲ್ಲಿಯೂ ಅವರಿಗೆ ತೋಚಿದ್ದು ವಿಜ್ಞಾನ. ರಸಾಯನ ವಿಜ್ಞಾನದ ಭಾರತಿಯ ಪರಂಪರೆಯನ್ನು ಗುರುತಿಸಿದರು. ವಿದ್ವಾಂಸ ಪಿ. ಕೆ. ಮಿಶ್ರರ ಜೊತೆ ಸೇರಿ, ಸಂಪಾದಿಸಿದ 'ಇಂಡಿಯನ್ ಟ್ರೆಡಿಶನ್ ಆಫ್ ಕೆಮಿಸ್ಟ್ರಿ, ಅಂಡ್ ಕೆಮಿಕಲ್ ಟೆಕ್ನೋಲೊಜಿ', ಪುಸ್ತಕವನ್ನು ಬೆಂಗಳೂರಿನ 'ಸಂಸ್ಕ್ರುತ ಭಾರತಿ' ಪ್ರಕಟಿಸಿದೆ. ವಿಜ್ಞಾನವನ್ನು ಕನ್ನಡ, ಇಂಗ್ಲಿಶ್, ಸಂಸ್ಕೃತದಲ್ಲಿ ಸಮರ್ಥವಾಗಿ ಮಂಡಿಸುವ ಪರಿಣತಿ ಅವರದಾಗಿತ್ತು. ಚಿತ್ರ ವಿವರಣೆಗಳ ಸಹಿತ ಭಾರತದ ಲೋಹಶಾಸ್ತ್ರದ ಸುವ್ಯಸ್ಥಿತ ಪರಂಪರೆಯನ್ನು ಆಧಾರ ಸಹಿತ ತಮ್ಮ ಕಮ್ಮಟಗಳಲ್ಲಿ ಮಂಡಿಸುತ್ತಿದ್ದರು.[]

ಸಿಲಿಕಾನ್ ಬಗ್ಗೆ

[ಬದಲಾಯಿಸಿ]

ಮರಳಿನಲ್ಲಿ ಹುದುಗಿರುವ ಅದರ ಅನೇಕ ಖನಿಜ ರೂಪಗಳು ಭೂಮಿಯಲ್ಲಿ ಸಮೃದ್ಧವಾಗಿದೆ. ಇಂಗಾಲದೊಂದಿಗೆ ಆ ಖನಿಜಗಳನ್ನು ಅತ್ಯಧಿಕ ತಾಪಮಾನದಲ್ಲಿ ಕಾಯಿಸಿದಾಗ 'ಸಿಲಿಕಾನ್' ಲಭ್ಯವಾಗುತ್ತದೆ. ಹೀಗೆ ಸಂಸ್ಕ್ರಿಸಿದಾಗ ಸಿಲಿಕಾನ್ ಪುಡಿ, ಅಥವಾ ಹರಳಿನ ರೂಪದಲ್ಲಿ ಪಡೆಯಬಹುದು. []

ವಿದೇಶಗಳಿಂದ ಆಹ್ವಾನಗಳು ಬಂದವು

[ಬದಲಾಯಿಸಿ]

ಪ್ರೊ.ಮೂರ್ತಿ, []ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ,ಹಲವು ಸಂಶೋಧನೆಗಳನ್ನು ಮಾಡಿ ಎಲ್ಲರಿಗೂ ಪರಿಚಿತರಾಗಿದ್ದರು.ವಿದೇಶಗಳಿಂದ ಹಲವು ವಿಶ್ವವಿದ್ಯಾಲಯಗಳಿಂದ ಉನ್ನತ ವ್ಯಾಸಂಗಕ್ಕೆ ಆಹ್ವಾನಗಳು ಬಂದಿದ್ದವು.ಹಾಗ ಯೂರೋಪ್ ಗೆ ೬ ವರ್ಷಗಳ ಅವಧಿಗೆಂದು ಹೋದರು. ಆದರೆ ಕೇವಲ ಒಂದೂವರೆ ವರ್ಷದೊಳಗೇ ಭಾರತಕ್ಕೆ ವಾಪಸ್ಸಾದರು. ವಿದೇಶಗಳಲ್ಲಿ ದೊರೆಯುವ ಅತ್ಯುತ್ತಮ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ಸೂಚಿಸಿದ ಮೂರ್ತಿ,ಕಲಿಯಬೇಕಾದ ವಿಶಯಗಳು ಅಷ್ಟೆನು ಇಲ್ಲವೆಂದು ಮನಗಂಡರು. ಸ್ವಲ್ಪ ಶ್ರಮವಾದರು ತಾಯ್ನಾಡಿನಲ್ಲಿ ಸಂಶೋಧನೆ ನಡೆಸಿ ತೃಪ್ತಿಪಟ್ಟುಕೊಳ್ಳುವುದೇ ಮೇಲು, ಎನ್ನುವ ನಿಲುವನ್ನು ಹೊಂದಿದರು. ಹೀಗಾಗಿ ಅವರ ತಜ್ಞತೆಯ ಲಾಭ ಸ್ವದೇಶಕ್ಕೆ ದೊರೆಯಿತು.ಹಲವು ವಿದೇಶೀ ಸಂಸ್ಥೆಗಳ ಜೊತೆ ಜಂಟಿ ಕಾರ್ಯಾಚರಣೆ,ವಿಶ್ವದಾದ್ಯಂತ ಅವರ ಉಪನ್ಯಾಸಗಳು,ಸಾರ್ವಜನಿಕ ಮತ್ತು ಖಾಸಗೀ ರಂಗದ ಉದ್ಯಮಗಳಿಗೆ ಅವರ ತಜ್ಞತೆಯ ಲಾಭ ದೊರಕಿತು.[]

ಭಾರತದ ಸಿಲಿಕಾನ್ ತಂತ್ರಜ್ಞಾನದ ಜನಕರಾಗಿ, ವಿಜ್ಞಾನದಿಂದ ಅಧ್ಯಾತ್ಮದವರೆಗೆ, ತಮ್ಮ ಓದಿನ ಹಾದಿಯಲ್ಲಿ ಕ್ರಮಿಸಿದ್ದ ಮೂರ್ತಿಯವರು,[[೨]] ೨೦೧೪ ರ ಜನವರಿ ೧೧ ರ ರಂದು, ತಮ್ಮ ೮೮ ನೇ ವಯಸ್ಸಿನಲ್ಲಿ ಮರಣಿಸಿದರು.

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2014-04-04. Retrieved 2014-03-14.
  2. "ಆರ್ಕೈವ್ ನಕಲು". Archived from the original on 2014-02-09. Retrieved 2014-03-14.
  3. "ಆರ್ಕೈವ್ ನಕಲು". Archived from the original on 2012-08-17. Retrieved 2014-03-14.
  4. http://www.nrcresearchpress.com/doi/pdf/10.1139/v63-128
  5. http://stephenknapp.info/greatness_of_ancient_india's_developments.htm
  6. "ಆರ್ಕೈವ್ ನಕಲು". Archived from the original on 2016-03-05. Retrieved 2014-03-14.
  7. http://www.kscst.org.in/awards.html
  8. "ಆರ್ಕೈವ್ ನಕಲು". Archived from the original on 2020-11-06. Retrieved 2014-03-14.
  9. http://www.sciencedirect.com/science/article/pii/S002211390082686X
  • ಕೃಪೆ : 'ಮರೆಯಾದ ಸಿಲಿಕಾನ್ ಕಣಿವೆಯ ಸಂತ,ಪ್ರೊ. ಎ.ಆರ್. ವಾಸುದೇವಮೂರ್ತಿ,'-ನಂ. ನಾಗಲಕ್ಷ್ಮಿ, ತರಂಗ, ಫೆಬ್ರವರಿ, ೨೦೧೪, ಪು.೫೮.