ವಿಷಯಕ್ಕೆ ಹೋಗು

ಎಸ್. ಆರ್. ವಿಶ್ವನಾಥ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಸ್. ಆರ್. ವಿಶ್ವನಾಥ್
ಎಸ್. ಆರ್. ವಿಶ್ವನಾಥ್

ಪ್ರಸಕ್ತ
ಅಧಿಕಾರ ಪ್ರಾರಂಭ 
25 ಮೇ 2008
ಪೂರ್ವಾಧಿಕಾರಿ ಬಿ. ಪ್ರಸನ್ನ ಕುಮಾರ್

ಜನನ (1962-06-20) ೨೦ ಜೂನ್ ೧೯೬೨ (ವಯಸ್ಸು ೬೨)[]
ಸಿಂಗನಾಯಕನಹಳ್ಳಿ[]
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ಜೀವನಸಂಗಾತಿ ವಾಣಿಶ್ರೀ
ವೃತ್ತಿ ರಾಜಕಾರಣಿ

ಸಿಂಗನಾಯಕನಹಳ್ಳಿ ರಾಮಯ್ಯ ವಿಶ್ವನಾಥ್ ಅವರು ಭಾರತೀಯ ರಾಜಕಾರಣಿಯಾಗಿದ್ದು, ಅವರು ೨೫ ಮೇ ೨೦೦೮ ರಿಂದ ಯಲಹಂಕ ಕ್ಷೇತ್ರದ ಪ್ರಸ್ತುತ ಶಾಸಕರಾಗಿದ್ದಾರೆ. ಅವರು ಪ್ರಸ್ತುತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷರಾಗಿದ್ದಾರೆ ಮತ್ತು ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿ.ಟಿ.ಡಿ) ಮಂಡಳಿಯ ಸದಸ್ಯರಾಗಿದ್ದಾರೆ.

ಕುಟುಂಬ ಮತ್ತು ಶಿಕ್ಷಣ

[ಬದಲಾಯಿಸಿ]

ವಿಶ್ವನಾಥರವರು ಕೆ ವಿ ರಾಮಯ್ಯ ಮತ್ತು ಶ್ರೀಮತಿ ಮಲ್ಲಮ್ಮ ರವರ ಕೊನೆಯ ಪುತ್ರರಾಗಿದ್ದು, ರಾಮನಗರದ ಬಿಡದಿಯ ಓರ್ವ ರೈತ ಕುಟುಂಬಕ್ಕೆ ಸೇರಿದ ವಾಣಿಶ್ರೀ ಯವರನ್ನು ವಿವಾಹ ಮಾಡಿಕೊಂಡಿದ್ದಾರೆ. ವಾಣಿಶ್ರೀಯವರು ಎರಡು ಬಾರಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಆಯ್ಕೆಗೊಂಡಿದ್ದು, ತದನಂದರ ಬೆಂಗಳೂರು ನಗರದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಯಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ವಾಣಿಶ್ರೀಯವರು ವಿಶ್ವವಾಣಿ ಫೌಂಡೇಶನ್‌ನ ಅವಿಭಾಜ್ಯ ಅಂಗವಾಗಿದ್ದಾರೆ.

ವಿಶ್ವನಾಥರವರು ಪ್ರತಿಮಿಕ ವಿದ್ಯಬ್ಯಾಸ್ಯವನ್ನು ಸಿಂಗನಾಯಕನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿ, ತಮ್ಮ ಐಟಿಐ ಡಿಪ್ಲೊಮಾವನ್ನು MRJTTI ಸಂಸ್ಥೆಇಂದ ಪಡೆದರು. ಭರತ್ ಅರ್ಥ್ ಮೊವೆರ್ಸ್ ಲಿಮಿಟೆಡ್ (ಬಿ.ಇ.ಎಲ್) ನಲ್ಲಿ ಅಪ್ಪ್ರೆಂಟಿಶಿಪ್ ಮಾಡಿದ್ದು, ಬೆಂಗಳೂರು ಆರ್ಟ್ಸ್ ಕಾಲೇಜುನಿಂದ ಬಿ.ಏ ಪದವಿಯನ್ನು ಪಡೆದಿದ್ದರೆ. ಇವರ ಮಗ, ಅಲೋಕ್ ನ್ಯೂ ಯಾರ್ಕ್ ನ ಕೊಲಂಬಿಯಾ ಯೂನಿವರ್ಸಿಟಿಯ ಸ್ನಾತಕೋತ್ತರ ಪದವಿ ಹೊಂದಿದ್ದಾರೆ ಹಾಗು ಮಗಳಾದ ಅಪೂರ್ವ BMSIT ಯಲ್ಲಿ ವಿದ್ಯಾಭಸ್ಯ ಮಾಡಿದ್ದಾರೆ.

ಆರಂಭಿಕ ಜೀವನ ಮತ್ತು ರಾಜಕೀಯ ವೃತ್ತಿ

[ಬದಲಾಯಿಸಿ]

ವಿಶ್ವನಾಥರವರು, ತಮ್ಮ ರಾಜಕೀಯ ಪ್ರವೇಶೇಕ್ಕೆ, ಕೃಷಿಕರಾಗಿದ್ದ ತಮ್ಮ ತಂದೆಯೇ ಪ್ರೇರೆಣೆಎಂದು ಅಭಿಪ್ರಾಯ ಪಡುತ್ತಾರೆ. ಅವರ ತಂದೆ ಕಾಂಗ್ರೆಸ್ ನಿಷ್ಠಾವಂತರಾಗಿದ್ದರು ಮತ್ತು ಆಗಿನ ಕಾಂಗ್ರೆಸ್ ಸಚಿವ ಬಸವಲಿಂಗಪ್ಪ ಅವರ ಆಪ್ತರಾಗಿದ್ದರು. ಆದಾಗ್ಯೂ, ಅವರು ತುರ್ತು ಸಮಯದಲ್ಲಿ ನಿರಾಶೆಗೊಂಡರು ಮತ್ತು ತಮ್ಮ ಮಗನ ರಾಷ್ಟೀಯ ಸ್ವಯಂಸೇವಕ್ ಸಂಘ (ಆರ್.ಯಸ್.ಯಸ್) ಗೆ ಸೇರುವ ನಿರ್ಧಾರವನ್ನು ಬೆಂಬಲಿಸಿದರು.

ವಿಶ್ವನಾಥ್ ಅವರು ೧೯೭೯ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಯಸ್.ಯಸ್) ಗೆ ಮುಖ್ಯ ಶಿಕ್ಷಕರಾಗಿ ಸೇರಿದರು ಮತ್ತು ೧೯೮೦ರಲ್ಲಿ  ತಾಲೂಕ ಕಾರ್ಯವಾಹಾಕ್ ಆದರು. ೧೯೮೫ರಲ್ಲಿ ಹಿಂದೂಸ್ತಾನ್ ಅಕ್ಕಿರೊನೋಟಿಕ್ಸ್ ಲಿಮಿಟೆಡ್ (ಹೆಚ್.ಎ.ಎಲ್)ನಲ್ಲಿ ವಿಮಾನ ನಿಯಂತ್ರಣ ತಂತ್ರಜ್ಞರಾಗಿ ಕೆಲಸ ನಿರ್ವಹಿಸಿದರು.

೧೯೮೮ರಲ್ಲಿ ವಿಶ್ವನಾಥ್ ರಾಷ್ಟೀಯ ಸ್ವಯಂಸೇವನ್ ಸಂಘದ ಜಿಲ್ಲಾ ಶರೀರಿಕ್ ಪ್ರಮುಖ್ ಎಂದು ನೇಮಗೊಂಡರು. ೧೯೯೦ರ ರಾಮ್ ರಥ್ ಯಾತ್ರಾ, ರಾಮ ಜ್ಯೋತಿ ಹಾಗು ರಾಮ ಪಾದುಕೆ ಮೆರವಣಿಗೆಗಳಲ್ಲಿ ತಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡರು.

೧೯೮೯ದ ೧೯೯೧ರವರೆಗೆ ಬೆಂಗಳೂರು ಜಿಲ್ಲೆ ಹಿಂದೂ ಜಾಗರಣ ವೇದಿಕೆಯ ಸಂಚಾಲಕರಾಗಿದ್ದರು.

೧೯೯೧ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿ, ೧೯೯೨ರಿಂದ ೧೯೯೪ರವರೆಗೆ ಭ.ಜ.ಪ ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದರು.

೧೯೯೪ರಲ್ಲಿ ಹುಬ್ಬಳ್ಳಿಯ ಈದ್ಗಹ್ ಮೈದಾನದ ವಿವಾದಿತ ಭೂಮಿಯಲ್ಲಿ ನಡೆದ ರಾಷ್ಟ್ರಧ್ವಜಾರೋಹಣ ಸಮಾರಂಭದಲ್ಲಿ ಉಮಾ ಭಾರತಿ ಮತ್ತು ಬಿ. ಎಸ್. ಯೆಡಿಯೂರಪ್ಪರವರೊಂದಿಗೆ ಭಾಗವಹಿಸಿದ್ದರು. ಅಂದಿನ ಮುಖ್ಯ ಮಂತ್ರಿಗಳಾಗಿದ್ದ ಶ್ರೀ. ವೀರಪ್ಪ ಮೊಯಿಲಿರವರು ಕರ್ಫ್ಯೂ ವಿಧಿಸಿ ಭ.ಜ.ಪ ಮತ್ತು ಸಂಘ ಪರಿವಾರದ ಸದಸ್ಯರ ಮೇಲೆ   ಗುಂಡು ಹಾರಿಸುವಂತೆ ಆದೇಶಿಸಿದ್ದರು. ಇದರಿಂದ ಹಲವಾರು ಗಾಯಗೊಂಡರು ಮತ್ತು ಕೆಲವರ ಪ್ರಾಣಹಾನಿಯೂ ಆಯಿತು.

೧೯೯೫ ರಿಂದ ೧೯೯೭ ರವರೆಗೆ ಭ.ಜ.ಪ. ದ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿಯಾಗಿದ್ದರು. ೧೯೯೫ ರ  ಜಿಲ್ಲಾ ಪಂಚಾಯತ್ ಚುನಾವಣೆಯೆಲ್ಲಿ ಹೆಸರಘಟ್ಟದಿಂದ ಸ್ಪರ್ದಿಸಿ ಕೇವಲ ೧೮ ಮತಗಲ್ಲಿಂದ ಸೋತಿದ್ದರು.

೨೦೦೦ರಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆ ಗೆದ್ದು, ಬೆಂಗಳೂರು ಜಿಲ್ಲೆಯಿಂದ ಗೆದ್ದ ಏಕೈಕ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದರು.

ವಿಶ್ವನಾಥರವರು ೨೦೦೭ರಲ್ಲಿ ಹಿಂದೂಸ್ತಾನ್ ಅಕ್ಕಿರೊನೋಟಿಕ್ಸ್ ಲಿಮಿಟೆಡ್ (ಹೆಚ್.ಎ.ಎಲ್) ನ ಒಕ್ಕೂಟದ ಅಧ್ಯಕ್ಷರಾಗಿ ಬೆಂಗಳೂರಿನಲ್ಲಿ ಸಾರ್ವಜನಿಕ ವಲಯದ ಕಾರ್ಖಾನೆಗಳ ಅಖಿಲ ಭಾರತ ಮುಖ್ಯ ಸಂಚಾಲಕರು ಹಾಗು ಜಾಯಿಂಟ್ ಆಕ್ಷನ್ ಫ್ರಂಟ್ ನ ಸದಸ್ಯರಾಗಿ ಆಯ್ಕೆಗೊಂಡರು. ಸಿಟಿಜನ್ ಮ್ಯಾಟರ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ 'ಹಿಸ್ಟರಿ ಆಫ್ ಏವಿಯೇಷನ್' ಎಂಬ ಲೇಖನ ಓದುತ್ತ, ಜಾಗ್ವರ್ ನಮ್ಮ ಕಾಲದಲ್ಲೇ ಸೇರ್ಪಡೆಯಾಗಿದ್ದು ಎಂದು ನೆನಪಿಸಿಕೊಳ್ಳುತ್ತಾರೆ.

೨೦೦೮ರಲ್ಲಿ ಯೆಲಹಂಕ ವಿಧಾನಸಭಾ ಕ್ಷೇತ್ರವನ್ನು ಜನರಲ್ ಕ್ಷೇತ್ರವಾಗಿ ವರ್ಗಿಕರಣ ಮಾಡಲಿಯಿತು ಮತ್ತು ಅಲ್ಲಿಂದ ವಿಶ್ವನಾಥ್ ಅವರ ಶಾಸಕಾಂಗ ಸಭೆಯ ಸದಸ್ಯರಾಗಿ ಪ್ರಯಾಣ ಪ್ರಾರಂಭವಾಯಿತು. ಈ ವರೆಗೂ ಯೆಲಹಂಕ ಕಾಂಗ್ರೆಸ್ ಪಕ್ಷದ ಒಂದು ಪ್ರಮುಖ ಭದ್ರಕೋಟೆ ಎನ್ನಲಾಗುತ್ತಿತ್ತು. ಇವರು ಅದೇ ವರ್ಷದಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ (ಕೆ.ಎಸ್.ಎಸ್.ಐ.ಡಿ.ಸಿ) ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

೨೦೦೯ರಲ್ಲಿ 'ಅರ್ಕಾವತಿ ಉಳಿಸಿ' ಪಾದಯಾತ್ರೆಯನ್ನು ನಂದಿ ಬೆಟ್ಟದಿಂದ ತಿಪ್ಪಗೊಂಡನಹಳ್ಳಿ ಯವರಗೆ, ಜನರಲ್ಲಿ ಕೆರೆಗಳು ಮತ್ತು ಜಲಮೂಲಗಳ ಪುನಶ್ಚೇತನ ಜಾಗೃತಿ ಮೂಡಿಸಿವೆ ನಿಟ್ಟಿನಲ್ಲಿ ಹಮ್ಮಿಕೊಂಡು ಅಂದಿನ ಸರ್ಕಾರದ ಗಮನ ಸೆಳೆದಿದ್ದರು. ಪರಿಣಾಮವಾಗಿ, ಸರ್ಕಾರದಿಂದ ರು. ೨೫ ಕೋಟಿಗಳ ಅನುದಾನವು ಬಿಡುಗಡೆ ಮಾಡಲಾಗಿ, ಹಲವಾರು ಜಲಮೂಲಗಳ ಪುನಶ್ಚೇತನ ಯಶಸ್ವಿಯಾಗಿ ಮಾಡಲಾಯಿತು.

ಎಸ್.ಆರ್. ವಿಶ್ವನಾಥ್ ಯೆಲಹಂಕ ಕ್ಷೇತ್ರದಿಂದ ಸತತವಾಗಿ ೩ ಬಾರಿ ವಿಧಾನಸಭೆಯ ಸದಸ್ಯರಾಗಿದ್ದು, ೨೦೦೮ರ ಚುನಾವಣೆಯಲ್ಲಿ ೪೪,೫೦೩ ಮತಗಳ ಬಹುಮತದಿಂದ ಆಯ್ಕೆಯಾಗಿದ್ದಾರೆ.

ಇವರದು ಸರಳ ದಿನಚರಿ. ಬೆಳೆಗ್ಗೆ ೦೬ಕ್ಕೆ ವ್ಯಾಯಾಮ ಹಾಗು ತೋಟದ ಕೆಲಸದಿಂದ ಶುರು ಮಾಡಿ, ನಂತರದಲ್ಲಿ ೧೦ ಗಂಟೆಯವರಗೆ ಜನತಾ ದರ್ಶನವನ್ನು ತಮ್ಮ ಸಿಂಗನಾಯಕನಹಳ್ಳಿಯ ಗೃಹಕಚೇರಿಯಲ್ಲಿ ಕೈಗೊಳ್ಳುತ್ತಾರೆ. ಆ ನಂತರ ತಮ್ಮ ಕ್ಷೇತ್ರಕ್ಕೆ ಭೇಟಿ ಕೊಟ್ಟು ನೆಡೆಯಿತ್ತುರುವ ಕಾಮಗಾರಿಗಳು ಮತ್ತು ಯೋಜನೆಗಳ ಪರಿಶೀಲನೆ ನೆಡೆಸುತ್ತಾರೆ. ಇವರು ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಹೊಂದಿದ್ದು, ೨೦೧೮ರ ಚುನಾವಣಾಗೆ ಬೆಂಗಳೂರು ಪೊಲಿಟಿಕಲ್ ಆಕ್ಷನ್ ಸಮಿತಿ (ಬಿ. ಪ್ಯಾಕ್) ರವರಿಂದ ಅನುಮೋದನೆ ಪಡೆದಿದ್ದರು.

ಎಸ್. ಆರ್. ವಿಶ್ವನಾಥರವರು ಭ.ಜ.ಪ. ದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗು ರಾಮನಗರದ ಜಿಲ್ಲಾ ಉಸ್ತುವಾರಿ ನೋಡಿಕೊಳ್ಳುತ್ತಾರೆ. ೨೦೧೯ರ ಲೋಕಸಭೆ ಚುನಾವಣೆಯ ವೇಳೆ, ಚಿಕ್ಕಬಳ್ಳಾಪುರದ ಕ್ಷೇತ್ರದ ಸಂಚಾಲಕ್ ಆಗಿ ಕಾರ್ಯ ನಿರ್ವಹಿಸಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ೮ ವಿಧಾನಸಭೆ ಕ್ಷೇತ್ರಗಳ ಪೈಕಿ ಯಲಹಂಕ ಭ.ಜ.ಪ ಶಾಸಕರಿರುವ ಏಕೈಕ ಕ್ಷೇತ್ರವಾಗಿದ್ದರೂ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಶ್ರೀ. ವೀರಪ್ಪ ಮೊಯ್ಲಿ ವಿರುದ್ಧ ಭ.ಜ.ಪ ಅಭ್ಯರ್ಥಿಯ ಗೆಲುವನ್ನು ಖಚಿತಪಡಿಸಿದರು. ತಮ್ಮ ಸ್ವಕ್ಷೇತ್ರವಾದ ಯಲಹಂಕ ವಿಧಾನಸಭಾ ಕ್ಷೇತ್ರವೊಂದರಲ್ಲೇ ೭೫,೦೦೦ ಕ್ಕೂ ಹೆಚ್ಚು ಮತಗಳ ಮುನ್ನಡೆ ಸಾಧಿಸಲಾಯಿತು.