ಎಸ್. ನಂಬಿ ನಾರಾಯಣನ್

ವಿಕಿಪೀಡಿಯ ಇಂದ
(ಎಸ್.ನಂಬಿ ನಾರಾಯಣನ್ ಇಂದ ಪುನರ್ನಿರ್ದೇಶಿತ)
Jump to navigation Jump to search

ನಂಬಿ ನಾರಾಯಣನ್ ಮತ್ತು ಜಿ.ಎಸ್.ಎಲ್.ವಿ ಕ್ರಯೋಜನಿಕ್`ಇಂಜನ್`ರಾಕೆಟ್`[ಬದಲಾಯಿಸಿ]

 • ನಂಬಿ ನಾರಾಯಣನ್ ಇಸ್ರೋದ ಪ್ರತಿಭಾವಂತ ವಿಜ್ಞಾನಿ;
ಜನವರಿ 5,2014 ರಂದು ಸಂಪೂರ್ಣ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಅಳವಡಿಸಿದ್ದ ಜಿಎಸ್‌ಎಲ್‌ವಿ – ಡಿ5 ಶ್ರೀಹರಿ ಕೋಟಾದಿಂದ ಗಗನಕ್ಕೆ ಜಿಗಿದಾಗ . ತಿರುವನಂತಪುರದ ಮಲೆಯಾಳಿ ಟಿವಿ ಚಾನೆಲ್ ಒಂದರ ಸ್ಟುಡಿಯೊದಲ್ಲಿ ಕುಳಿತಿದ್ದ ವೃದ್ಧ ಎಸ್.ನಂಬಿ ನಾರಾಯಣನ್ ಕಣ್ಣಲ್ಲಿ ಆನಂದಬಾಷ್ಪ.
ಮಂಗಳ ಗ್ರಹ ಯಾನಕ್ಕೆ ಕಳಿಸಿದ ರಾಕೆಟ್` ಕ್ರಯೋಜನಿಕ್ ಎಂಜಿನ್` ತಂತ್ರಜ್ಞಾನ ರೂಪಿಸಿದ ವಿಜ್ಞಾನಿ ನಂಬಿ ನಾರಾಯಣನ್`
ಇಸ್ರೊ ಕ್ರಯೋಜೆನಿಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ಹಿನ್ನೆಲೆಯಲ್ಲಿ ಆ ವೃದ್ಧರ ದೀರ್ಘ ಪರಿಶ್ರಮ, ಕಠೋರ ತಪಸ್ಸು ಇತ್ತು. 71 ರ ಆ ವಯೋವೃದ್ಧರೇ ಎಸ್.ನಂಬಿ ನಾರಾಯಣನ್. ಭಾರತದ ಶ್ರೇಷ್ಠ ಬಾಹ್ಯಾಕಾಶ ವಿಜ್ಞಾನಿಗಳ ಸಾಲಿನಲ್ಲಿ --ಇವರ ಹೆಸರನ್ನು ಸೇರಿಸಬೇಕು . ಆ ಅತ್ಯಂತ ಮಹತ್ವದ ಯೋಜನೆಯ ರೂವಾರಿಯಾಗಿದ್ದವರು ಇದೇ ನಾರಾಯಣನ್. ರಾಕೆಟ್‌ಗಳಲ್ಲಿ ದ್ರವ ಇಂಧನ ಹಾಗೂ ಕ್ರಯೋಜೆನಿಕ್ ತಂತ್ರಜ್ಞಾನ ಅಳವಡಿಸಿಕೊಂಡಿರುವುದರಿಂದ ಏನು ಲಾಭವಾಗಲಿದೆ ಎಂಬುದನ್ನು ಅವರು 70 ರ ದಶಕದಲ್ಲೇ ಅರಿತಿದ್ದರು. ಇಷ್ಟಕ್ಕೂ ಪಿಎಸ್‌ಎಲ್‌ವಿ ರಾಕೆಟ್‌ನಲ್ಲಿ ಬಳಸುವ :`ವಿಕಾಸ್ ಎಂಜಿನ್’ ವಿನ್ಯಾಸಗೊಳಿಸಿದವರೂ ಕೂಡ ಇದೇ ನಂಬಿ ನಾರಾಯಣನ್. ಜಿಎಸ್‌ಎಲ್‌ವಿ ರಾಕೆಟ್ ನಿಜವಾಗಿ 13 ವರ್ಷಗಳ ಹಿಂದೆಯೇ ನಭಕ್ಕೆ ಜಿಗಿದು ದಾಖಲೆ ಬರೆಯಬೇಕಾಗಿತ್ತು.
ಶ್ರೀಹರಿಕೋಟಾದ ಸತೀಶ ಧವನ್ ಸ್ಪೇಸ್ ಕೇಂದ್ರ ದಿಂದ ನಭಕ್ಕೆ ಹಾರಿದ ಜಿ.ಎಸ್.ಎಲ್.ಡಿ-5 1982 ಕೆ.ಜಿ.ಯ ಕೃತಕ ಉಪಗ್ರಹವನ್ನು ಇದುವರೆಗೆ ಭಾರತದ ಉಗ್ರಹಗಳು ಏರದ ಎತ್ತರದ ಪಥಕ್ಕೆ ತಲುಪಿಸುತ್ತದೆ. ಈ ರಾಕೆಟ್ ಸಂಪೂರ‍್ಣ ದೇಶೀಯ ತಂತ್ರ ಜ್ಞಾನದ್ದು . ಇದು ಎರಡು ಟನ್ ಭಾರವನ್ನು ಹೊತ್ತುಒಯ್ಯಬಲ್ಲದ್ದು -ಯು.ಎಸ್.ಎ; ರಷ್ಯಾ; ಜಪಾನ್; ಚೀನಾ; ಪ್ರಾನ್ಸ್.; ನಂತರ ಭಾರತವು ಜಗತ್ತಿನ ಆರನೆಯ ವಿಶೇಷ ತಂತ್ರ ಜ್ಞಾನವುಳ್ಳ ರಾಷ್ಟ್ರವಾಗಿದೆ. ಈ ಉಡಾವಣೆಯ ಯಶಸ್ಸು ಈಗಿನ ಯುವ ಇಸ್ರೋ ವಿಜ್ಞಾನಿಗಳು ಮತ್ತು ಈ ಹಿಂದೆ ಶ್ರಮಿಸಿದ ವಿಜ್ಙಾನಿಗಳಿಗೆ ಸಲ್ಲುತ್ತದೆ ಎಂದು ಇಸ್ರೋ ಛೇರ‍್ಮನ್‘ ಕೆ ಬಾಲಕೃಷ್ಣನ್ ಹೇಳಿದರು. (Isro chairman K Radhakrishnan. --TOI -6-1-2014
ಕ್ರಯೋಜನಿಕ್ ರಾಕೆಟ್ ತಂತ್ರಜ್ಞಾನದಲಿ ಅತಿಯಾಗಿ ತಂಪಾಗಿಸಿದ ದ್ರವ ಇಂಧನ ಬಳಸಲಾಉತ್ತದೆ. ಅದು ಮೈನಸ್ ೧೮೩/183ಡಿಗ್ರಿ ಸೆಲ್ಸಿಯಸ್ ತಂಪಾಗಿಸಿರುವ ಆಮ್ಲ ಜನಕ ಮತ್ತು ಮೈನಸ್ ೨೫೩/253 ಡಿಗ್ರಿ ಸೆಲ್ಸಿಯಸ್ ತಂಪಾಗಿಸಿರುವ ಜಲಜನಕದ ಇಂಧನ . ಇದು ಭಾರಿತೂಕದ ಉಪಕರಣಗಳನ್ನು ಬಾಹ್ಯಾಕಾಶಕ್ಕೆ ತಳ್ಳುವುದಕ್ಕೆ ಅಗತ್ಯವಾದ ಅಪಾರ ಪ್ರಮಾಣದ ಶಕ್ತಿಯುಳ್ಳದ್ದು. ಘನ ಇಂಧನ ಉಪಯೋಗಿಸುವ ರಾಕೆಟ್‘ ಗೆ ಹೋಲಿಸಿದರೆ ಈ ಕ್ರಯೋಜನಿಕ್ ರಾಕೆಟ್ ತಂತ್ರಜ್ಞಾನ ಬಹಳ ಸಂಕೀರ್ಣವುಳ್ಳದ್ದು . ಈ ತಂತ್ರಜ್ಞಾನ ಭಾರತಕ್ಕೆ ದಕ್ಕದಂತೆ ಮಾಡಲು ಯು.ಎಸ್.ಎ. ರಷ್ಯಾದ ಮೇಲೆ ವಿಪರೀತ ಒತ್ತಡ ಹೇರಿತ್ತು. ಅದಕ್ಕಾಗಿ ಅದ್ಭುತ ಪ್ರತಿಭೆಯ ವಿಜ್ಞಾನಿ ನಂಬಿ ನಾರಾಯಣನ್ ಇದನ್ನು -ಜಿಎಸ್,ಎಲ್,ವಿ ಯನ್ನು ರಾಕೆಟ್` ಸಾಧಿಸಲು ಬಿಡಬಾರದೆನ್ನವ ಉದ್ದೇಶದಿಂದ ಅವರನ್ನು ಇಸ್ರೋದಿಂದ ಹೊರಹಾಕಲು ವಿದೇಶದ ಕುತಂತ್ರವೇ ಎಂಬುದು ಎಲ್ಲರ ಅನುಮಾನ. ಹಿಂದೆ ಅಣು ಬಾಂಬ್ ತಯಾರಿಕೆಯ ತಂತ್ರಜ್ಞಾನ ರೂಪಿಸಿದ ಇಸ್ರೋದ ಎರಡು ಶ್ರೇಷ್ಠ ವಿಜ್ನಾನಿಗಳು ನಿಗೂಢವಾಗಿ ಸಾವನ್ನಪ್ಪಿದ್ದರು. . ಇದನ್ನು ನಂಬಿಯವರು ಜ್ಞಾಪಿಸುತ್ತಾರೆ.

ವಿಜ್ಞಾನಿಗಳ ಬಂಧನ[ಬದಲಾಯಿಸಿ]

ಸ್ವದೇಶೀ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಸಿದ್ಧವಾಗಬೇಕೆನ್ನುವಷ್ಟರಲ್ಲಿ 1994 ರಲ್ಲಿ ದೊಡ್ಡದೊಂದು ಆಘಾತವೇ ನಡೆದು ಹೋಯಿತು. ಕ್ರಯೋಜೆನಿಕ್ ತಂತ್ರಜ್ಞಾನ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದ ಹಿರಿಯ ವಿಜ್ಞಾನಿ ನಂಬಿ ನಾರಾಯಣನ್ ಆ ತಂತ್ರಜ್ಞಾನವನ್ನು ಶತ್ರು ದೇಶಗಳಿಗೆ ಮಾರಾಟ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ ಎಂಬ ಬಲವಾದ ಆರೋಪ ಕೇಳಿಬಂತು. ಕೇರಳದ ಪೊಲೀಸರು ಇಸ್ರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ವಿಜ್ಞಾನಿ ನಂಬಿ ನಾರಾಯಣನ್ (೫೨ ವರ್ಷ), ಇನ್ನೊಬ್ಬ ವಿಜ್ಞಾನಿ ಶಶಿ ಕುಮಾರ್ ಮತ್ತೆ ಇಬ್ಬರು ಸಿಬ್ಬಂದಿಗಳನ್ನು ಬಂಧಿಸಿದರು. 50 ದಿವಸಗಳ ಕಾಲ ನಂಬಿಯವರನ್ನು ಜೈಲಿನಲ್ಲಿಡಲಾಯಿತು. ವಿಪರೀತ ಹಿಂಸೆನೀಡಲಾಯಿತು. ಕ್ರಯೋಜೆನಿಕ್ ಯೋಜನೆ, ಜಿಎಸ್‌ಎಲ್‌ವಿ, ಪಿಎಸ್‌ಎಲ್‌ವಿ ರಾಕೆಟ್ ಅಭಿವೃದ್ಧಿ ಸೇರಿದಂತೆ ಇಸ್ರೊದ (ಭಾರತೀಯ ಬಾಹ್ಯಾಕಾಶ ಸಂಸ್ಥೆ) ಹತ್ತಾರು ಯೋಜನೆಗಳೂ ನೆನೆಗುದಿಗೆ ಬಿದ್ದವು. ಇಸ್ರೊ ವಿಜ್ಞಾನಿಗಳ ನೈತಿಕ ಸ್ಥೈರ್ಯವೇ ಉಡುಗಿ ಹೋಯಿತು. ಕ್ರಯೋಜೆನಿಕ್ ಯೋಜನೆ ಹೀದೆ ಬಿತ್ತು.
ಬಂಧನದಲ್ಲಿದ್ದ ನಂಬಿಯವರ ಬಾಯಿ ಬಿಡಿಸಲು ಅವರಿಗೆ ಮಾನಸಿಕ ಹಾಗೂ ಶಾರೀರಿಕ ಹಿಂಸೆ ನೀಡಲಾಗಿತ್ತು. ನಂಬಿಯವರ ಮೇಲೆ ಕೇರಳ ಪೊಲೀಸರಿಗೆ ಅನುಮಾನ ಬರಲು ಕಾರಣ – ಇಸ್ರೊಗೆ ಆಗಾಗ ಭೇಟಿ ನೀಡುತ್ತಿದ್ದ ಹಾಗೂ ವೀಸಾ ಅವಧಿ ಮುಗಿದ ಮೇಲೂ ಭಾರತದಲ್ಲೇ ಇದ್ದ ಮಾಲ್ಡೀವ್ಸ್‌ನ ಮರಿಯಂ ರಷೀದಾ ಮತ್ತು ಫೌಜಿಯಾ ಹಸನ್ ಅವರನ್ನು ಬಂಧಿಸಿದಾಗ ಅವರ ಬಳಿ ಇದ್ದ ಡೈರಿಯಲ್ಲಿ ನಂಬಿಯವರ ದೂರವಾಣಿ ಸಂಖ್ಯೆ ನಮೂದಾಗಿದ್ದು. ಬಂಧಿತ ರಷೀದಾ ಮತ್ತು ಫೌಜಿಯಾ ಬಳಿ ಕೇವಲ ನಂಬಿಯವರ ದೂರವಾಣಿ ಸಂಖ್ಯೆ ಇತ್ತು, ಎಂಬ ಏಕೈಕ ಕಾರಣಕ್ಕೆ ಇಸ್ರೊಗೆ ಸಂಬಂಧಿಸಿದ ಕೆಲವು ರಹಸ್ಯ ಮಾಹಿತಿಗಳೂ ಅವರ ಬಳಿ ಇದ್ದವು, ಕ್ರಯೋಜೆನಿಕ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಗಳು ಸೋರಿಕೆಯಾಗಿವೆ ಎಂದೆಲ್ಲ ಪೊಲೀಸರು ಆರೋಪಿಸಿದರು.

ಸಿ.ಬಿ.ಐ. ತನಿಖೆ[ಬದಲಾಯಿಸಿ]

ಭಾರತದ ಸುಪ್ರತಿಷ್ಠಿತ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ. ಅಂತಹ ಸಂಸ್ಥೆಯೊಂದರ ಹಿರಿಯ ವಿಜ್ಞಾನಿಯ ಮೇಲೆರಗಿದ ಆರೋಪವನ್ನು ಕೇವಲ ಬೇಹುಗಾರಿಕಾ ದಳದ ತನಿಖೆಯಿಂದ ಬಗೆಹರಿಸಲಾಗದು ಎಂದು ಈ ಪ್ರಕರಣವನ್ನು ಸಿಬಿಐಗೆ ಅನಂತರ ಹಸ್ತಾಂತರಿಸಲಾಯಿತು. ಸಿಬಿಐ ತನಿಖೆಯಲ್ಲಿ ನಂಬಿಯವರ ಮೇಲಿನ ಆರೋಪಗಳು ಸಂಪೂರ್ಣ ಕಪೋಲಕಲ್ಪಿತ ಎಂದು ಕಂಡುಬಂತು. ಇದಾದಮೇಲೆ ಈ ಪ್ರಕರಣ ಸುಪ್ರೀಂಕೋರ್ಟಿನ ಮೆಟ್ಟಿಲನ್ನೂ ಹತ್ತಿತು. ಆದರೆ 1998 ರಲ್ಲಿ ಸುಪ್ರೀಂಕೋರ್ಟ್ ಈ ಪ್ರಕರಣವನ್ನೇ ವಜಾಗೊಳಿಸಿ ತೀರ್ಪು ನೀಡಿತು. ಆ ಬಳಿಕ ರಾಷ್ಟ್ರೀಯ ಮಾನವ ಹಕ್ಕು ಆಯೋಗ ನಂಬಿ ನಾರಾಯಣನ್ ಅವರ ವೃತ್ತಿ ಜೀವನಕ್ಕೆ ಅನ್ಯಾಯವಾಗಿ ಕಲ್ಲು ಹಾಕಿದ್ದಕ್ಕಾಗಿ ಕೇರಳ ಸರ್ಕಾರಕ್ಕೆ ಛೀಮಾರಿ ಹಾಕಿ ಪರಿಹಾರ ನೀಡುವಂತೆ ಆದೇಶ ನೀಡಿತು. ಕೇರಳ ಸರ್ಕಾರ ನಂಬಿಯವರಿಗೆ 10 ಲಕ್ಷ ರೂ. ಪರಿಹಾರ ಕೊಡುವಂತೆ ಕೇರಳ ಹೈಕೋರ್ಟ್ ಇದೇ ಸಂದರ್ಭದಲ್ಲಿ ಸೂಚಿಸಿತು. ಐಬಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆಯೂ ಅದು ಹೇಳಿತ್ತು. ಅಲ್ಲಿಗೆ ನಂಬಿ ನಾರಾಯಣನ್ ನಿರ್ದೋಷಿ ಎಂಬುದು ಸಂಪೂರ್ಣ ಸಾಬೀತಾಗಿತ್ತು..ಆದರೆ ನಂಬಿಯವರ ಜೀವನ, ಉಳಿದ ಹದಿಮೂರು ವರ್ಷದ ಇಸ್ರೋ ಸೇವೆ ಹಾಳಾಯಿತು.
ಮಂಗಲ ಗ್ರಹದ ಕಡೆ ಹೊರಟ ಜಿ.ಎಸ್.ಎಲ್.ವಿ ಜಿಯೋ ಸಿಂಕ್ರೋನಸ್ ಸ್ಯಾಟಲಯಟ್`ಲಾಚ್ ವೆಹಿಕಲ್.-2೦೦೦ ಕೆಜಿ ಬಾರದ ಕೃತಕ ಉಪಗ್ರಹ (telecommunication satellite)ಹೊತ್ತ ರಾಕೆಟ್,GSLV-D5 ಹೊರಟ ಸಮಯ 4.18pm ದಿ.5-1-2014-ಶ್ರಿಹರಿಕೋಟಾದಿಂದ ಹೊರಟಿದೆ.ಒಂಭತ್ತು ತೀಗಳ ಪಯಣ.--Jul 12, 2014 : ಇಂದಿನಿಂದ ಸರಿಯಾಗಿ 75 ದಿನದಲ್ಲಿ ಇಸ್ರೋದ ಬಹುನಿರೀಕ್ಷಿತ ಅಂತರಿಕ್ಷ ನೌಕೆ ಮಂಗಳಯಾನ-ಮಂಗಳನ ಅಂಗಳದಲ್ಲಿ ಇಳಿಯಲಿದೆ

ಕ್ರಯೋಜೆನಿಕ್ ತಂತ್ರಜ್ಞಾನ ಮಹತ್ವ ಯುಎಸ್ಎ -ತಡೆ[ಬದಲಾಯಿಸಿ]

ಕ್ರಯೋಜೆನಿಕ್ ತಂತ್ರಜ್ಞಾನ ಪೂರೈಕೆಗೆ ಭಾರತ ಅವಲಂಬಿಸಿದ್ದು ರಷ್ಯಾ, ಅಮೆರಿಕದಂತಹ ಅಭಿವೃದ್ಧಿ ಹೊಂದಿದ ದೇಶಗಳನ್ನು. ಕ್ರಯೋಜೆನಿಕ್ ತಂತ್ರಜ್ಞಾನ ಪೂರೈಕೆಗೆ ಹಿಂದಿನ ಸೋವಿಯತ್ ಒಕ್ಕೂಟದ (ಯುಎಸ್‌ಎಸ್‌ಆರ್) ಜೊತೆ ಭಾರತ ಒಪ್ಪಂದ ಮಾಡಿಕೊಂಡಿತ್ತು. ಆದರೆ ಸೋವಿಯತ್ ಒಕ್ಕೂಟದ ಪತನದ ನಂತರ ಆ ಒಪ್ಪಂದ ಜಾರಿಗೆ ಬರದಂತೆ ಅಮೆರಿಕ ರಷ್ಯಾದ ಮೇಲೆ ಒತ್ತಡ ಹೇರಿತು. ಅಣ್ವಸ್ತ್ರಗಳನ್ನು ಹೊಂದಿದ ಭಾರತ ತನ್ನ ಖಂಡಾಂತರ ಕ್ಷಿಪಣಿಗಳಿಗೆ ಕ್ರಯೋಜೆನಿಕ್ ಎಂಜಿನ್ ಬಳಸಬಹುದೆಂಬ ಭೀತಿ ಅಮೆರಿಕೆಗೆ-----. ಹೀಗಾಗಿ ಕ್ರಯೋಜೆನಿಕ್ ತಂತ್ರಜ್ಞಾನ ದೊರಕದೆ ಇಸ್ರೋ ಚಿಂತೆಗೀಡಾಗಿ-ಪರದಾಡಿದ್ದು ಅಷ್ಟಿಷ್ಟಲ್ಲ. ಆದರೆ 2 ದಶಕಗಳ (೨೦ವರ್ಷ) ಸತತ ಪರಿಶ್ರಮ, ಪ್ರಯೋಗಗಳ ಫಲವಾಗಿ ಆ ತಂತ್ರಜ್ಞಾನವನ್ನು ಭಾರತವೇ ಈಗ ಸ್ವತಂತ್ರವಾಗಿ ಅಭಿವೃದ್ಧಿಪಡಿಸಿದೆ. ಬಹುಶಃ ನಂಬಿ ನಾರಾಯಣನ್ ಅವರನ್ನು ಬೇಹುಗಾರಿಕೆ ಆರೋಪದ ಮೇಲೆ ಬಂಧಿಸದೇ ಇದ್ದಿದ್ದರೆ ಇಸ್ರೋ ಈಗಿನ ಸಾಧನೆಯನ್ನು ಇನ್ನೂ ಹತ್ತು ವರ್ಷ ಮುಂಚೆಯೇ ಸಾಧಿಸಬಹುದಿತ್ತು.
ಭಾರತ ಉಪಗ್ರಹಗಳನ್ನು ಉಡಾವಣೆ ಮಾಡಲು ಇದುವರೆಗೆ ಅವಲಂಬಿಸಿದ್ದು ಪಿಎಸ್‌ಎಲ್‌ವಿ ರಾಕೆಟ್‌ಗಳನ್ನು. ಆದರೆ ಇದರಿಂದ ಅತಿ ಹೆಚ್ಚು ತೂಕದ ಉಪಗ್ರಹಗಳನ್ನು ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ಹೆಚ್ಚಿನ ಭಾರದ ಉಪಗ್ರಹಗಳನ್ನು ಕಳುಹಿಸಲು 500 ಕೋಟಿ ರೂ. ಹಣ ತೆತ್ತು ವಿದೇಶಿ ರಾಕೆಟ್‌ಗಳ ನೆರವು ಪಡೆಯಬೇಕಾಗಿತ್ತು. ಆದರೀಗ ಕ್ರಯೋಜೆನಿಕ್ ತಂತ್ರಜ್ಞಾನದಿಂದಾಗಿ ;ಇನ್ನು ಮುಂದೆ 2000 ದಿಂದ 4000 ಟನ್ ತೂಕದ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಬಹುದಾಗಿದೆ.[೧]

ಷಡ್ಯಂತ್ರದ ರೂವಾರಿಗಳು[ಬದಲಾಯಿಸಿ]

ನಂಬಿ ನಾರಾಯಣನ್ ಬಂಧನ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದು ಐಬಿಯ ಮುಖ್ಯಸ್ಥರಾಗಿದ್ದ ಆರ್.ಬಿ.ಶ್ರೀಕುಮಾರ್. ಈತ ಅದಕ್ಕೂ ಮುನ್ನ ಗುಜರಾತಿನ ಡಿಜಿಪಿಯಾಗಿದ್ದರು. ಗೋಧ್ರೋತ್ತರ ಗಲಭೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಪಾತ್ರ ಇತ್ತೆಂದು ಆರೋಪಿಸಿದವರಲ್ಲಿ ಅವರೂ ಒಬ್ಬರು. ನಂಬಿ ನಾರಾಯಣನ್ ಅವರನ್ನು ಬೇಹುಗಾರಿಕಾ ಬಲೆಗೆ ಬೀಳಿಸಲು ಕುಮಾರ್ ಜೊತೆ `ಶ್ರಮಿಸಿದ’ ಇನ್ನೊಬ್ಬರೆಂದರೆ ಐಬಿಯ ಜಂಟಿ ನಿರ್ದೇಶಕ ಮ್ಯಾಥ್ಯೂ ಜಾನ್. ರಾಷ್ಟ್ರೀಯ ಮಾನವಹಕ್ಕು ಆಯೋಗಕ್ಕೆ 1999 ರಲ್ಲಿ ಸಲ್ಲಿಸಿದ ಪರಿಹಾರ ಕುರಿತ ಅರ್ಜಿಯಲ್ಲಿ ನಂಬಿ ನಾರಾಯಣನ್ ಇವರಿಬ್ಬರ ಹೆಸರನ್ನೂ ಉಲ್ಲೇಖಿಸಿದ್ದಾರೆ. ಸಿಬಿಐ ಕೂಡ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಶಿಫಾರಸಿನಲ್ಲಿ ಈ ಇಬ್ಬರು ಐಬಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಷರಾ ಬರೆದಿತ್ತು
ಭಾರತ ತನ್ನದೇ ಆದ ಕ್ರಯೋಜೆನಿಕ್ ತಂತ್ರಜ್ಞಾನ ಅಭಿವೃದ್ಧಿಪಡಿಸಬಾರದೆಂದೇ ಅಮೆರಿಕ ರಷ್ಯಾದ ಮೇಲೆ ಒತ್ತಡ ಹೇರಿತ್ತು. ಇಸ್ರೊ ವಿಜ್ಞಾನಿಗಳ ನೈತಿಕ ಸ್ಥೈರ್ಯವನ್ನು ಉಡುಗಿಸಲೆಂದೇ ಬೇಹುಗಾರಿಕಾ ಪ್ರಕರಣವನ್ನು ಸೃಷ್ಟಿಸಲಾಯಿತು ಎಂದು ನಂಬಿ ನಾರಾಯಣನ್ ದುಃಖದಿಂದ ಹೇಳುತ್ತಾರೆ.
ನಂಬಿ ನಾರಾಯಣನ್ ಅವರ ಪರಿಶ್ರಮದಿಂದಾಗಿ ಭಾರತ ಈಗ ಕ್ರಯೋಜೆನಿಕ್ ತಂತ್ರಜ್ಞಾನದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಿರುವುದು ಹೆಗ್ಗಳಿಕೆಯ ವಿಚಾರ.ಅಣು ಬಾಂಬನ್ನು ದೂರ ಸಾಗಿಸಲು ಈ ತಂತ್ರ ಜ್ಞಾನ ಅಗತ್ಯ. ಆದರೆ ಈ ತಂತ್ರಜ್ಞಾನವನ್ನು ಉತ್ತಮ ಉದ್ದೇಶಗಳಿಗೆ ಹೇಗೆ ಬಳಸಬಹುದು ಎಂಬುದನ್ನು ಭಾರತ ಈಗ ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ. ಅಷ್ಟೇ ಅಲ್ಲ, ಕಡಿಮೆ ವೆಚ್ಚದಲ್ಲಿ ಅದನ್ನು ಹೇಗೆ ಸಾಧಿಸಬಹುದು ಎಂಬುದಕ್ಕೂ ಭಾರತವೇ ಈಗ ಮೇಲ್ಪಂಕ್ತಿ. ಬಲಿಷ್ಠ ದೇಶಗಳ ತಂತ್ರಜ್ಞಾನದ ಏಕಸ್ವಾಮ್ಯವನ್ನು ಭಾರತ ಮುರಿದಿರುವುದಂತೂ ನಿಜ. ಹೇರಳವಾದ ವಿದೇಶೀ ವಿನಿಮಯದ ಉಳಿತಾಯವೂ ಅಗಿದೆ. ಬೇರೆ ದೇಶಗಳ ಉಪಗ್ರಹ ಉಡಾವಣೆ ಮಾಡುವುದರಿಂದ ವಿದೇಶೀ ಹಣದ ಸಂಪಾದನೆಯೂ ಆಗುವುದು.

ಭಾರತದ ಹೆಮ್ಮೆಯ ವಿಜ್ಞಾನಿ[ಬದಲಾಯಿಸಿ]

ವಿಕ್ರಂ ಸಾರಾಭಾಯ್, ಸತೀಶ್ ಧವನ್ ಹಾಗೂ ಯು.ಆರ್.ರಾವ್ ಅವರಂಥ ಶ್ರೇಷ್ಠ ವಿಜ್ಞಾನಿಗಳ ಸಾಲಿನಲ್ಲಿ ನಿಲ್ಲಬಹುದಾದ ನಂಬಿ ನಾರಾಯಣನ್ ಈಗ ಈ ಕ್ರಯೋಜೆನಿಕ್ ತಂತ್ರಜ್ಞಾನದ ಯಶಸ್ವಿ ಉಡಾವಣೆಯಿಂದ ಸಂತಸಗೊಂಡರೂ ತಮ್ಮ ಅಮೂಲ್ಯ ಜೀವನದ ಸದುಪಯೋಗ ಹಾಳಾದುದನ್ನು ನೆನೆದು ದುಃಖಿಸುತ್ತಾರೆ.[೨]

ಕೇರಳ ಸರ್ಕಾರದಿಂದ ಪರಿಹಾರ[ಬದಲಾಯಿಸಿ]

 • ಎಲ್ಲ ಆರೋಪಗಳನ್ನು ಹಿಂದಕ್ಕೆ ಪಡೆದು, ಮಾಡಿದ ತಪ್ಪು ಒಪ್ಪಿಕೊಂಡು,ಕೇರಳ ಸಚಿವ ಸಂಪುಟ ಇಸ್ರೊ ವಿಜ್ಞಾನಿ ನಂಬಿ ನಾರಾಯಣನ್ ಅವರಿಗೆ 1.3 ಕೋಟಿ ರೂಪಾಯಿ ಪರಿಹಾರ ನೀಡಲು 2019 ಡಿ.27ರಂದು ತಾತ್ವಿಕ ಒಪ್ಪಿಗೆ ನೀಡಿತು. ಆ ಮೂಲಕ ಈ ಶತಮಾನ ಶುರುವಾಗುವ ಮೊದಲು ಆರಂಭವಾದ ಅನ್ಯಾಯದ ಆಪಾದನೆಗೆ ೨೦ ಮುಗಿಯುವ ಮೊದಲು ಮುಕ್ತಾಯಕ್ಕೆ ಒಪ್ಪಿದೆ. ನಾರಯಣನ್ ಮೇಲೆ ನಂಬಿಕೆದ್ರೋಹಿ, ದೇಶದ್ರೋಹಿ ಎಂಬೆಲ್ಲಾ ಆಪಾದನೆಗಳ ವಿರುದ್ಧ ನ್ಯಾಯಕ್ಕಾಗಿ ಹೋರಾಡಿದ ವಿಜ್ಞಾನಿಗೆ ಪರಿಹಾರದ ಮೊತ್ತಕ್ಕಿಂತಲೂ ತನ್ನ ಮೇಲೆ ಸಲ್ಲದ ಆರೋಪ ಹೊರಿಸಿದ ಸರ್ಕಾರ ತಪ್ಪು ಒಪ್ಪಕೊಂಡಿರುವುದು ನೆಮ್ಮದಿ ತಂದಿರಬಹುದು.
 • ನಂಬಿ ನಾರಾಯಣನ್ ಅವರ ಆತ್ಮಚರಿತ್ರೆಯ ಹೆಸರು ‘ಓರ್ಮಗಳುಡೆ ಭ್ರಮಣಪಥಂ’ (ನೆನಪಿನ ಸುರುಳಿ). 23ನೇ ಅಕ್ಟೋಬರ್ 2017ರಲ್ಲಿ ಬಿಡುಗಡೆಯಾಗಿದ್ದು, ಈ ಪುಸ್ತಕದಲ್ಲಿ ನಾರಾಯಣನ್ ತಮ್ಮ ಬದುಕು ಸಾಗಿ ಬಂದ ಹಾದಿಯ ಜೊತೆಜೊತೆಗೆ ದೇಶದ ಹಿತ ಬಯಸಿದ ವಿಜ್ಞಾನಿಯೊಬ್ಬ ಎದುರಿಸಿದ ಸಂದಿಗ್ಧ–ಸಂಕಷ್ಟಗಳನ್ನೂ ವಿವರಿಸಿದ್ದಾರೆ. ಅವರ ಬದುಕನ್ನೇ ಆಧರಿಸಿದ ಬಯೊಪಿಕ್ ‘ರಾಕೆಟರಿ – ದಿ ನಂಬಿ ಎಫೆಕ್ಟ್’ ತೆರೆಗೆ ಬರುವ ಸಿದ್ಧತೆಯಲ್ಲಿದೆ. ಈ ವಿಜ್ಞಾನಿ ಪ್ರತಿಭೆ–ಪರಿಶ್ರಮದಿಂದ ದೇಶದಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ವೇಗವರ್ಧಕವಾಗಿ ಕೆಲಸ ಮಾಡಿದ ಸಾಧಕ.[೩]
 • ಕೇರಳ ಸರ್ಕಾರವು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ ಅವರಿಗೆ ರೂ.1.3 ಕೋಟಿ ಪರಿಹಾರ ನೀಡಿದೆ. [೪]

ನೋಡಿ[ಬದಲಾಯಿಸಿ]

ಹೆಚ್ಚಿನ ಓದಿಗೆ[ಬದಲಾಯಿಸಿ]

+ಪೊಲೀಸರ ವಿರುದ್ಧ ಹರಿಹಾಯ್ದ ಸುಪ್ರೀಂ ಕೋರ್ಟ್‌ ಮಾಜಿ ವಿಜ್ಞಾನಿಗೆ ರೂ. 50 ಲಕ್ಷ ಪರಿಹಾರ ನೀಡುವಂತೆ ‘ಸುಪ್ರೀಂ’ ನಿರ್ದೇಶನ;ಪಿಟಿಐ;14 ಸೆಪ್ಟೆಂಬರ್ 2018,

ಆಧಾರ[ಬದಲಾಯಿಸಿ]

 • ೧.ಟೈಮ್ಸ ಆಪ್ಇಂಡಿಯಾ ೬-೧-೨೦೧೪
 • ೨. ಪ್ರಜಾವಾಣಿ -೬-೧-೨೦೧೪ ಮತ್ತು ೧೫-೧-೨೦೧೪
 • ಸುದ್ದಿ/ನ್ಯೂಸ್ :೧೩ -೨೦-೧-೨೦೧೪ [೧]
 • ೧.ವಿಜಯ ಕರ್ನಾಟಕ-[೨]
 • [೩]

ಉಲ್ಲೇಖ[ಬದಲಾಯಿಸಿ]

 1. Memories of a ‘spy’ who won- Framed scientist vindicated on milestone-eve
 2. indigenous-cryogenic-article-on-nambi-narayanan/
 3. ಒಮ್ಮೆ ದೇಶದ್ರೋಹದ ಆರೋಪ, ಮತ್ತೊಮ್ಮೆ ಪದ್ಮ ಪುರಸ್ಕಾರ: ಇದು ‘ನಂಬಿ’ ಬದುಕಿನ ವಿವರ;ಡಿ.ಎಂ. ಘನಶ್ಯಾಮ; d: 21 ಜನವರಿ 2020
 4. ಇಸ್ರೊ ಮಾಜಿ ವಿಜ್ಞಾನಿಗೆ ರೂ.1.3 ಕೋಟಿ ಪರಿಹಾರ;ಪ್ರಜಾವಾಣಿ;d: 11 ಆಗಸ್ಟ್ 2020,