ವಿಷಯಕ್ಕೆ ಹೋಗು

ಎಸ್.ಎನ್.ಹೆಗಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ.ಎಸ್.ಎನ್.ಹೆಗಡೆ ಅವರ ಪರಿಚಯ

[ಬದಲಾಯಿಸಿ]

ಡಾ.ಎಸ್.ಎನ್.ಹೆಗಡೆ[] ಅವರು ಹುಟ್ಟಿದ್ದು ೦೯-೦೧-೧೯೫೦ರಲ್ಲಿ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೋಕಿನ ಗುಡ್ಡೇಕಣ ಗ್ರಾಮದಲ್ಲಿ. ತಂದೆ ನಾರಾಯಣ ಹೆಗಡೆ, ತಾಯಿ ಗಣಪಮ್ಮ. ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಬಿ.ಎಸ್ಸಿ, ಎಂ.ಎಸ್ಸಿ ಮತ್ತು ಪಿಎಚ್.ಡಿ ಪದವಿ ಪಡೆದು ಅಲ್ಲಿಯೇ ಸ್ನಾತಕೋತ್ತರ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿ, ಜನವರಿ ೩೧, ೨೦೧೨ರಂದು ನಿವೃತ್ತರಾಗಿ, ಪ್ರಸ್ತುತ ೨೦೧೩-೧೪ನೇ ಸಾಲಿನಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಯುವರಾಜ ಕಾಲೇಜಿನಲ್ಲಿ ಪರೀಕ್ಷಾ ನಿಯಂತ್ರಣ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜೀವನ/ಸಾಧನೆ

[ಬದಲಾಯಿಸಿ]

ಡಾ.ಎಸ್.ಎನ್.ಹೆಗಡೆ ಅವರು ಕಳೆದ ೩೦ ವರ್ಷಗಳಿಂದ ಕನ್ನಡ ವಿಜ್ಞಾನ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ವಿಜ್ಞಾನವನ್ನು ಜನಪ್ರಿಯ ಗೊಳಿಸುವಲ್ಲಿ ಇವರ ಕೊಡುಗೆ ಅಪಾರ. ಮೂವತ್ತೆರಡು ವರ್ಷಗಳಿಗಿಂತ ಹೆಚ್ಚಿನ ಬೋಧನಾನುಭವ ಹಾಗೂ ಮೂವತ್ತೇಳು ವರ್ಷಗಳಿಗಿಂತ ಅಧಿಕ ಸಂಶೋಧನ[] ಅನುಭವ ಇವರಿಗಿದೆ. ಹದಿನೈದು ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ.[] ಪ್ರಾಣಿಗಳ ವರ್ತನೆಗೆ ಸಂಬಂಧಿಸಿದಂತೆ ಇವರು ಪ್ರತಿಪಾದಿಸಿದ ಬಿಗ್ಗರ್ ಈಸ್ ಬೆಟರ್ ಎಂಬ ನಿಯಮವು ಅಂತರರಾಷ್ಟ್ರೀಯ ಮನ್ನಣೆ ಪಡೆದಿದೆ.

ಪ್ರಕಟಿತ ಸಾಹಿತ್ಯ

[ಬದಲಾಯಿಸಿ]

ಮೈಸೂರು ವಿಶ್ವ ವಿದ್ಯಾನಿಲಯ ಹೊರತಂದ ಕನ್ನಡ ವಿಷಯ ವಿಶ್ವಕೋಶ, ಪ್ರಾಣಿ ವಿಜ್ಞಾನದಲ್ಲಿ ಇದುವರೆಗೆ ಇಪ್ಪತ್ತು ಜನಪ್ರಿಯ ವಿಜ್ಞಾನದ ಕೃತಿಗಳನ್ನು ರಚಿಸಿದ್ದಾರೆ. ಮೈಸೂರು ವಿಶ್ವ ವಿದ್ಯಾನಿಲಯದ ವಿಜ್ಞಾನ ಕರ್ಣಾಟಕದ ಸಂಪಾದಕರಾಗಿ, ಕನ್ನಡ ವಿಶ್ವಕೋಶದ ೧೩ ಮತ್ತು ೧೪ನೇ ಸಂಪುಟಗಳ ಗೌರವ ಸಮಾಲೋಚಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ೧೨೦ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.

ಪ್ರಕಟಿತ ಕೃತಿಗಳು

[ಬದಲಾಯಿಸಿ]
ಕ್ರಮ ಸಂಖ್ಯೆಕೃತಿಯ ಹೆಸರುವರ್ಷಪ್ರಕಾಶನಊರು
ವಂಶದಿಂದ ವಂಶಕ್ಕೆ೧೯೯೮ಮಾನವ ಸಂಪನ್ಮೂಲ ಕೇಂದ್ರಮೈಸೂರು
ಹಾವುಗಳು-ಜೀವನ ಕ್ರಮ ಮತ್ತು ಉಪಯೋಗ೧೯೯೯ವಿಜಯಲಕ್ಷ್ಮೀ ಪ್ರಕಾಶನಮೈಸೂರು
ಜೀವಿಗಳ ವರ್ತನೆ೨೦೦೦ಮಹರ್ಷಿ ಪ್ರಕಾಶನಮೈಸೂರು
ಅನುವಂಶೀಯತೆಯ ಅಧ್ಯಯನ ಒಂದು ಶತಮಾನ೨೦೦೦ವಿಜಯಲಕ್ಷ್ಮೀ ಪ್ರಕಾಶನಮೈಸೂರು
ಜೈವಿಕ ತಂತ್ರಜ್ಞಾನ೨೦೦೦ವಿಜಯಲಕ್ಷ್ಮೀ ಪ್ರಕಾಶನಮೈಸೂರು
ನಿರ್ಲಿಂಗಿ, ಏಕಲಿಂಗಿ ಹಾಗೂ ದ್ವಿಲಿಂಗಿಗಳು೨೦೦೧(ಎರಡನೇ ಮುದ್ರಣ)-ಮಹರ್ಷಿ ಪ್ರಕಾಶನಮೈಸೂರು
ಜೀವವಿಜ್ಞಾನದ ಕೆಲವು ಅನ್ವೇಷಣೆಗಳು೨೦೦೨ವಿಜಯಲಕ್ಷ್ಮೀ ಪ್ರಕಾಶನಮೈಸೂರು
ಕಡಲಕಿನಾರೆಯ ಜೀವ ವೈವಿಧ್ಯ೨೦೦೨ವಿಜಯಲಕ್ಷ್ಮೀ ಪ್ರಕಾಶನಮೈಸೂರು
ಜೀವ ಪ್ರಪಂಚದ ಕೆಲವು ವಿಸ್ಮಯಗಳು೨೦೦೨ಚೇತನ ಪುಸ್ತಕಾಲಯಮೈಸೂರು
೧೦ತದ್ರೂಪಿಗಳು೨೦೦೨ನಾಗಾರ್ಜುನ ಎಂಟರ್ ಪ್ರೈಸಸ್ದಾವಣಗೆರೆ
೧೧ಕೀಟಗಳಲ್ಲಿ ಸಮಾಜ ಜೀವನ೨೦೦೨ಮಹರ್ಷಿ ಪ್ರಕಾಶನಮೈಸೂರು
೧೨ನಾಗರಹಾವೇ, ಹಾವೂಳು ಹೂವೇ೨೦೦೪ದಾಮಿನಿ ಸಾಹಿತ್ಯ ಪ್ರಕಾಶನಬೆಂಗಳೂರು
೧೩ವಿನಾಶದ ಹಾದಿಯಲ್ಲಿರುವ ಸರೀಸೃಪ-ಮೊಸಳೆ೨೦೦೫ವಿಜಯಲಕ್ಷ್ಮೀ ಪ್ರಕಾಶನಮೈಸೂರು
೧೪ಸರೀಸೃಪ ಪ್ರಪಂಚ೨೦೦೫ತಾರಾ ಪ್ರಿಂಟಿಂಗ್ ಅಂಡ್ ಪಬ್ಲಿಕೇಷರ್ಸ್ಮೈಸೂರು
೧೫ಪಕ್ಷಿಗಳ ಜೀವನ೨೦೦೭ಮಹಿಮ ಪ್ರಕಾಶನಮೈಸೂರು
೧೬ಕುಲಾಂತರಿಗಳು೨೦೦೮ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯಮೈಸೂರು
೧೭ಜಿ.ಟಿ.ನಾರಾಯಣರಾವ್೨೦೦೯ಚೇತನ ಬುಕ್ ಹೌಸ್ಮೈಸೂರು
೧೮ವಿಕಾಸವಾದದ ಪ್ರವಾದಿ, ಚಾರ್ಲ್ಸ್ ಡಾರ್ವಿನ್೨೦೦೯ವಿಸ್ಮಯ ಪ್ರಕಾಶನಮೈಸೂರು
೧೯ಆಧುನಿಕ ತಳಿವಿಜ್ಞಾನ೨೦೦೯ಪ್ರಸಾರಾಂಗಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಮೈಸೂರು
೨೦ಕರ್ನಾಟಕ ಪ್ರಾಣಿ ಸಂಪತ್ತು೨೦೧೧ಪ್ರಸಾರಾಂಗಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಮೈಸೂರು
೨೧ಆಲ್ಪ್ರಡ್ ರಸೆಲ್ ವ್ಯಾಲ್ಲೇಸ್ ; ಡಾರ್ವಿನ್ನನ ನೆರಳು೨೦೧೩ಮಹಿಮ ಪ್ರಕಾಶನಮೈಸೂರು
ರಾಜಾರಾಮಣ್ಣ೨೦೧೩ಹೇಮಂತ ಸಾಹಿತ್ಯಬೆಂಗಳೂರು
೨೩ವಿಜ್ಞಾನ ದಿಗ್ಗಜರು(ವಿಜ್ಞಾನಿಗಳ ಜೀವನ ಚರಿತ್ರೆ)೨೦೧೩ಭಾಗೀರಥಿ ಪ್ರಕಾಶನಮೈಸೂರು
೨೪ಮಂಥನ೨೦೧೩ಭಾಗೀರಥೀ ಪ್ರಕಾಶನಮೈಸೂರು

ಸಂಪಾದಿತ ಕೃತಿ

[ಬದಲಾಯಿಸಿ]
  • ಕನ್ನಡ ವಿಷಯ ವಿಶ್ವಕೋಶ-ಪ್ರಾಣಿ ವಿಜ್ಞಾನ - ೨೦೦೬ - ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು (೧೨೦೦ಪುಟಗಳ ಎ-೪ ಗಾತ್ರದ ಈ ಸಂಪುಟವನ್ನು ಕೇವಲ ಹತ್ತು ತಿಂಗಳಲ್ಲಿ ಸಂಪಾದಿಸಲಾಗಿದೆ)

ಪ್ರಶಸ್ತಿ/ಪುರಸ್ಕಾರ

[ಬದಲಾಯಿಸಿ]
  1. ಪ್ಯಾಲಸ್ಟೀನಿಯನ್ ಸ್ಟೂಡೆಂಟ್ಸ್ ಯೂನಿಯನ್ ನ ಬೆಸ್ಟ್ ಟೀಚರ್ಸ್ ಪ್ರಶಸ್ತಿ,
  2. ನ್ಯಾಷನಲ್ ಜಿಯೋಗ್ರಫಿಕ್ ಸೊಸೈಟಿಯ ಗೌರವ ಸದಸ್ಯತ್ವ,
  3. ಸೊಸೈಟಿ ಆಫ್ ಲೈಫ್ ಸೈನ್ಸ್ ನ ಫೇಲೋಶಿಫ್,
  4. ಸರ್.ಸಿ.ವಿ.ರಾಮನ್ ವಿಜ್ಞಾನ ಸಾಹಿತ್ಯ ಪ್ರಶಸ್ತಿ.
  5. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಠ ಲೇಖಕ ಪ್ರಶಸ್ತಿ.
  6. ಪ್ರಾಣಿ ವಿಜ್ಞಾನದ ಕೊಡುಗೆಗಾಗಿ ಜೂವಾಲಾಜಿಕಲ್ ಸೊಸೈಟಿ ಆಫ್ ಇಂಡಿಯಾದಿಂದ ಸನ್ಮಾನ

ಕೃತಿ ನೆರವು

[ಬದಲಾಯಿಸಿ]
  • ಆಲ್ಪ್ರಡ್ ರಸೆಲ್ ವ್ಯಾಲ್ಲೇಸ್ ;ಡಾರ್ವಿನ್ನನ ನೆರಳು - ಡಾ.ಎಸ್.ಎನ್.ಹೆಗಡೆ

ಉಲ್ಲೇಖಗಳು

[ಬದಲಾಯಿಸಿ]
  1. ww.kannadaprabha.com/districts/uttara-kannada/ಪ್ರತಿಧ್ವನಿಸಿದ-ಜಿಲ್ಲೆ-ವಿಭಜನೆ-ಸೊಲ್ಲು/184673.html
  2. http://www.justkannada.in/just-mysore-news-mysore-2/
  3. ಸಂಖ್ಯಾಶಾಸ್ತ್ರ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ, ಕನ್ನಡಪ್ರಭ, ೦೩ ಜುಲೈ ೨೦೧೩